The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.
Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 6.1 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಸಣ್ಣ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ವಿವರಗಳಿಗಾಗಿ Technical Notes ಅನ್ನು ನೋಡಿ.
ಸಾಂಪ್ರದಾಯಿಕವಾಗಿ, ಲಿನಕ್ಸಿನಲ್ಲಿ ಜಾಲಬಂಧ ಸಾಧನಗಳನ್ನು eth[X] ಶೈಲಿಯಲ್ಲಿ ಹೆಸರಿಸಲಾಗುತ್ತಿತ್ತು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಈ ಹೆಸರುಗಳು ಚಾಸಿಸ್‌ನ ಮೇಲೆ ಇರುವ ಲೇಬಲ್‌ನೊಂದಿಗೆ ತಾಳೆಯಾಗುತ್ತಿರಲಿಲ್ಲ. ಹಲವಾರು ಜಾಲಬಂಧ ಅಡಾಫ್ಟರುಗಳನ್ನು ಹೊಂದಿರುವ ಆಧುನಿಕ ಪರಿಚಾರಕ ಪ್ಲಾಟ್‌ಫಾರ್ಮುಗಳಿಗೆ ಈ ಬಗೆಯ ಜಾಲಬಂಧ ಸಂಪರ್ಕಸಾಧನಗಳ ಹೆಸರಿನಲ್ಲಿ ಅನಿಶ್ಚಿತ ಹಾಗು ಅಸಾಮಾನ್ಯ ರೀತಿಯಲ್ಲಿ ಕಾಣಿಸಬಹುದು.
Red Hat Enterprise Linux 6.1 ರಲ್ಲಿ biosdevname ಅನ್ನು ಪರಿಚಯಿಸಲಾಗುತ್ತಿದೆ, ಇದು ಜಾಲಬಂಧ ಸಂಪರ್ಕಸಾಧನಗಳನ್ನು ಹೆಸರಿಸುವ ಒಂದು ಐಚ್ಛಿಕ ಶೈಲಿಯಾಗಿದೆ. biosdevname ಎನ್ನುವುದು ಜಾಲಬಂಧ ಸಂಪರ್ಕಸಾಧನಗಳು ಭೌತಿಕವಾಗಿ ಇರುವ ಸ್ಥಳದ ಆಧಾರದ ಮೇಲೆ ಅವುಗಳಿಗೆ ಹೆಸರನ್ನು ನೀಡುತ್ತದೆ. ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ಕೆಲವು Dell ನ ವ್ಯವಸ್ಥೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲೆಡೆಯೂ biosdevname ಅನ್ನು ಪೂರ್ವನಿಯೋಜಿತವಾಗಿ ಅಶಕ್ತಗೊಳಿಸಲಾಗಿರುತ್ತದೆ.
ಆವೃತ್ತಿ 3.0 ಯ ಯೂನಿವರ್ಸಲ್ ಸೀರಿಯಲ್ ಬಸ್ (USB 3.0) ನ ಅಳವಡಿಕೆಯು ಈಗ Red Hat Enterprise Linux 6.1 ರಲ್ಲಿ ಸಂಪೂರ್ಣ ಬೆಂಬಲಿತ ಸವಲತ್ತಾಗಿದೆ. USB 3.0 ಯ ಬೆಂಬಲವನ್ನು ಈ ಹಿಂದಿನ ಬಿಡುಗಡೆಯಲ್ಲಿ ತಾಂತ್ರಿಕ ಅವಲೋಕನವಾಗಿ ಪರಿಗಣಿಸಲಾಗಿತ್ತು.
CPU ಹಾಗು ಮೆಮೊರಿ-ಹಾಟ್ ಸೇರ್ಪಡಿಕೆ
Nehalem-EX ನಲ್ಲಿ CPUಗಳನ್ನು ಹಾಗು ಮೆಮೊರಿಯನ್ನು ಚಾಲನೆಯಲ್ಲಿಯೆ-ಸೇರಿಸುವಿಕೆಯನ್ನು Red Hat Enterprise Linux 6.1 ರಲ್ಲಿ ಈಗ ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ. ಆದರೆ ಚಾಲನೆಯಲ್ಲಿಯೆ-ಸೇರಿಸುವಿಕೆಯನ್ನು ಯಂತ್ರಾಂಶವೂ ಸಹ ಬೆಂಬಲಿಸಬೇಕು ಎನ್ನುವುದನ್ನು ನೆನಪಿಡಿ. ಯಂತ್ರಾಂಶದಲ್ಲಿ ಚಾಲನೆಯಲ್ಲಿಯೆ-ಸೇರಿಸುವಿಕೆಗೆ ಬೆಂಬಲವಿರದಿದ್ದಲ್ಲಿ CPUಗಳನ್ನು ಅಥವ ಮೆಮೊರಿಯನ್ನು ಚಾಲನೆಯಲ್ಲಿಯೆ-ಸೇರಿಸಿದಲ್ಲಿ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
ಚಾಲಕ ಅಪ್‌ಡೇಟ್‌ಗಳು
Red Hat Enterprise Linux 6.1 ರಲ್ಲಿ ಹಲವಾರು ಚಾಲಕ ಅಪ್‌ಡೇಟ್‌ಗಳನ್ನು ಹೊಂದಿದ್ದು ಇದರಲ್ಲಿ ಕೆಳಗಿನ ಸಾಧನ ಚಾಲಕಗಳ ಅಪ್‌ಡೇಟ್‌ಗಳೂ ಸಹ ಇವೆ:
Intel PRO/1000 ಜಾಲಬಂಧ ಸಾಧನಗಳಿಗಾಗಿನ e1000 ಹಾಗು e1000e ಚಾಲಕಗಳು
Intel Iron Pond ಎತರ್ನೆಟ್ ಚಾಲಕ
Intel Kelsey Peak ವೈರ್ಲೆಸ್ ಚಾಲಕ
Intel SCU ಚಾಲಕ
LSI MegaRAID SAS ನಿಯಂತ್ರಕಗಳಿಗಾಗಿನ megaraid_sas ಚಾಲಕ
LSI Logic ನ SAS-2 ಸಂಕುಲದ ಅಡಾಪ್ಟರುಗಳಿಗಾಗಿನ mpt2sas ಚಾಲಕ
2. ಕರ್ನಲ್
Red Hat Enterprise Linux 6.1 ರಲ್ಲಿ ಲಿನಕ್ಸ್ ಕರ್ನಲ್‌ಗಾಗಿ ಹಾಗು ಅದರ ಸುಧಾರಣೆಗಾಗಿ ನೂರಾರು ದೋಷ ಪರಿಹಾರಗಳನ್ನು ಸೇರಿಸಲಾಗಿದೆ. ಈ ಬಿಡುಗಡೆಯಲ್ಲಿ ಸೇರ್ಪಡಿಸಲಾದ ಪ್ರತಿಯೊಂದು ದೋಷ ಪರಿಹಾರಗಳು ಹಾಗು ಕರ್ನಲ್‌ಗೆ ಮಾಡಲಾದ ಪ್ರತಿಯೊಂದು ಸುಧಾರಣೆಗಳ ಬಗೆಗಿನ ವಿವರಗಳಿಗಾಗಿ, Red Hat Enterprise Linux 6.1 Technical Notes. ನಲ್ಲಿನ ಕರ್ನಲ್ ಅಧ್ಯಾಯವನ್ನು ನೋಡಿ.
ನಿಯಂತ್ರಣ ಗುಂಪುಗಳು(ಕಂಟ್ರೋಲ್ ಗ್ರೂಪ್ಸ್)
ನಿಯಂತ್ರಣ ಗುಂಪುಗಳು ಎನ್ನುವುದು Red Hat Enterprise Linux 6 ರಲ್ಲಿರುವ ಲಿನಕ್ಸ್ ಕರ್ನಲ್‌ನ ಒಂದು ಹೊಸ ಸವಲತ್ತು ಆಗಿರುತ್ತದೆ. ಪ್ರತಿಯೊಂದು ನಿಯಂತ್ರಣ ಗುಂಪು ಎನ್ನುವುದು ವ್ಯವಸ್ಥೆಯ ಯಂತ್ರಾಂಶದೊಂದಿಗಿನ ಸಂವಹನವನ್ನು ಉತ್ತಮಗೊಳಿಸುವ ಉದ್ಧೇಶದಿಂದ ಗುಂಪುಗೂಡಿಸಲಾದ ಕಾರ್ಯಗಳ ಸೆಟ್ ಆಗಿರುತ್ತದೆ. ನಿಯಂತ್ರಣ ಗುಂಪುಗಳನ್ನು ಅವು ಬಳಸುವ ಸಂಪನ್ಮೂಲಗಳ ಮೇಲ್ವಿಚಾರಣೆ ನಡೆಸಲು ನಿಯೋಜಿಸಬಹುದಾಗಿರುತ್ತದೆ. ಜೊತೆಗೆ, ವ್ಯವಸ್ಥೆಯ ನಿರ್ವಾಹಕರು ನಿಯಂತ್ರಣ ಗುಂಪು ಸೌಕರ್ಯವನ್ನು ಬಳಸಿಕೊಂಡು ಮೆಮೊರಿ, CPUಗಳು (ಅಥವ CPUಗಳ ಗುಂಪು), ಜಾಲಬಂಧ, I/O, ಅಥವ ಅನುಸೂಚಕದಂತಹ ವ್ಯವಸ್ಥೆಯ ಸಂಪನ್ಮೂಲಗಳನ್ನು ನಿಯಂತ್ರಣ ಗುಂಪುಗಳು ನಿಲುಕಿಸಿಕೊಳ್ಳುವುದನ್ನು ಅನುಮತಿಸಬಹುದಾಗಿರುತ್ತದೆ ಅಥವ ನಿರಾಕರಿಸಬಹುದಾಗಿರುತ್ತದೆ.
Red Hat Enterprise Linux 6.1 ರಲ್ಲಿ ನಿಯಂತ್ರಣ ಗುಂಪುಗಳಿಗೆ ಹಲವು ಸುಧಾರಣೆಗಳನ್ನು ಹಾಗು ಅಪ್‌ಡೇಟ್‌ಗಳನ್ನು ಹೊಂದಿದೆ, ಅವುಗಳಲ್ಲಿ , ಪ್ರತಿ ಸೆಕೆಂಡಿಗೆ ಇಂತಿಷ್ಟು ಬೈಟ್‌ನ ಆಧಾರದಲ್ಲಿ ಅಥವ ಪ್ರತಿ ಸೆಕೆಂಡಿಗೆ ಇಂತಿಷ್ಟು I/O (IOPS) ಆಧಾರದಲ್ಲಿ ಒಂದು ನಿರ್ದಿಷ್ಟ ಸಾಧನಕ್ಕಾಗಿ ಖಂಡ ಸಾಧನದ ಇನ್‌ಪುಟ್/ಔಟ್‌ಪುಟ್ (I/O) ಅನ್ನು ತಡೆಹಿಡಿಯುವ ಸಾಮರ್ಥ್ಯವೂ ಸಹ ಸೇರಿದೆ.
ಇದಲ್ಲದೆ, ಸರಣೀಕೃತ ವ್ಯವಸ್ಥೆಯ ಖಂಡ ಸಾಧನ ನಿಯಂತ್ರಣ ಗುಂಪುಗಳನ್ನು ರಚಿಸುವ ಹೊಸ ಸಾಮರ್ಥ್ಯವು libvirt ಹಾಗು ಇತರೆ ಬಳಕೆದಾರಸ್ಥಳ ಉಪಕರಣಗಳೊಂದಿಗೆ ಸಂಯೋಜಿಸುವಿಕೆಯನ್ನು ಒದಗಿಸುತ್ತದೆ. ಹೊಸ ಟ್ಯೂನ್ ಮಾಡಬಹುದಾದ ಖಂಡ ಸಾಧನ ನಿಯಂತ್ರಣ ಗುಂಪು group_idle, ಫೇರ್ನೆಸ್ ಅನ್ನು ಉಳಿಸಿಕೊಂಡು ನಿಯಂತ್ರಣ ಗುಂಪುಗಳೊಂದಿಗೆ ಉತ್ತಮ ತ್ರೂಪುಟ್ ಅನ್ನು ಒದಗಿಸುತ್ತದೆ.
Red Hat Enterprise Linux 6.1 ರಲ್ಲಿ ಹೊಸ autogroup ಸವಲತ್ತನ್ನೂ ಸಹ ಪರಿಚಯಿಸಲಾಗಿದ್ದು, ಇದು ಲೇಟೆನ್ಸಿಗಳನ್ನು ಕಡಿಮೆ ಮಾಡುತ್ತದೆ ಹಾಗು ಆ ಮೂಲಕ ಹೆಚ್ಚು CPU ಮೇಲೆ ತೀವ್ರವಾದ ಹೊರೆಯ ಕೆಲಸಗಳಲ್ಲಿ ಹೆಚ್ಚು ಸಂವಾದಾತ್ಮಕ ಕಾರ್ಯಗಳಿಗೆ ಅನುವು ಮಾಡಿಕೊಡುತ್ತದೆ. ಈ cgsnapshot ಉಪಕರಣವು, ಪ್ರಸಕ್ತ ನಿಯಂತ್ರಣ ಗುಂಪು ಸಂರಚನೆಯ ಸ್ನ್ಯಾಪ್‌ಶಾಟ್ ಅನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒದಗಿಸುತ್ತದೆ.
ಹೆಚ್ಚಿನ ಓದಿಗಾಗಿ
Red Hat Enterprise Linux 6 ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿದಲ್ಲಿ ನಿಯಂತ್ರಣ ಗುಂಪುಗಳು ಹಾಗು ಇತರೆ ಸಂಪನ್ಮೂಲ ನಿರ್ವಹಣೆಯ ಸವಲತ್ತುಗಳನ್ನು ವಿವರವಾಗಿ ಚರ್ಚಿಸಲಾಗಿದೆ
ಜಾಲಬಂಧ ಅಪ್‌ಡೇಟ್‌ಗಳು
Red Hat Enterprise Linux 6.1 ರಲ್ಲಿ ರಿಸೀವ್ ಪ್ಯಾಕೆಟ್ ಸ್ಟೀರಿಂಗ್(RPS) ಹಾಗು ರಿಸೀವ್ ಫ್ಲೋ ಸ್ಟೀರಿಂಗ್‌ಗೆ (RFS) ಬೆಂಬಲವನ್ನು ಪರಿಚಯಿಸುತ್ತದೆ. ಒಳಬರುವ ಜಾಲಬಂಧ ಪ್ಯಾಕೆಟ್‌ಗಳನ್ನು ಅನೇಕ CPU ಕೋರುಗಳಲ್ಲಿ ಸಮಾನಾಂತರವಾಗಿ ಸಂಸ್ಕರಿಸಲು ರಿಸೀವ್ ಪ್ಯಾಕೆಟ್ ಸ್ಟೀರಿಂಗ್ ಅನುವು ಮಾಡಿಕೊಡುತ್ತದೆ. ರಿಸೀವ್ ಫ್ಲೋ ಸ್ಟೀರಿಂಗ್ ಒಂದು ನಿರ್ದಿಷ್ಟ ಅನ್ವಯಕ್ಕೆ ಉದ್ದೇಶಿಸಲಾದ ಜಾಲಬಂಧ ದತ್ತಾಂಶವನ್ನು ಸಂಸ್ಕರಿಸಲು ಕನಿಷ್ಟ CPU ಅನ್ನು ಆಯ್ಕೆ ಮಾಡುತ್ತದೆ.
kdump
kdump ಎನ್ನುವುದು ಆಧುನಿಕ ಕುಸಿತ ಬಿಸುಡು ವ್ಯವಸ್ಥೆಯಾಗಿದೆ. ಇದನ್ನು ಶಕ್ತಗೊಳಿಸಿದಲ್ಲಿ, ವ್ಯವಸ್ಥೆಯನ್ನು ಇನ್ನೊಂದು ಕರ್ನಲ್‌ನ ಸನ್ನಿವೇಶದಲ್ಲಿ ಬೂಟ್ ಮಾಡುತ್ತದೆ. ಎರಡನೆ ಕರ್ನಲ್ ಒಂದು ಸಣ್ಣ ಮೊತ್ತದ ಮೆಮೊರಿಯನ್ನು ಕಾದಿರಿಸುತ್ತದೆ, ಹಾಗು ಅದರ ಮುಖ್ಯ ಉದ್ಧೇಶವು ವ್ಯವಸ್ಥೆಯು ಕುಸಿದು ಹೋದಲ್ಲಿ ಕೋರ್ ಡಂಪ್ ಚಿತ್ರಿಕೆಯನ್ನು ಸೆರೆಹಿಡಿದಿಟ್ಟುಕೊಳ್ಳುವುದಾಗಿರುತ್ತದೆ.
Red Hat Enterprise Linux 6.1 ರಲ್ಲಿ ಕರ್ನಲ್ ಸಂದೇಶ ಡಂಪರ್ ಅನ್ನು ಪರಿಚಿಯಿಸಲಾಗುತ್ತಿದೆ, ಕರ್ನಲ್ ಪ್ಯಾನಿಕ್ ಉಂಟಾದಲ್ಲಿ ಇದರ ನೆರವು ಪಡೆಯಲಾಗುತ್ತದೆ. ಕರ್ನಲ್ ಸಂದೇಶ ಡಂಪರ್ ಸರಳವಾದ ಕುಸಿತ ವಿಶ್ಲೇಷಣೆಯನ್ನು ಒದಗಿಸುತ್ತದೆ ಹಾಗು ತರ್ಡ್ ಪಾರ್ಟಿ ಕರ್ನಲ್ ಸಂದೇಶವನ್ನು ಪರ್ಯಾಯ ಗುರಿಗಳಲ್ಲಿ ದಾಖಲಿಸಲು ನೆರವಾಗುತ್ತದೆ.
ಇದಲ್ಲದೆ, crashkernel=auto ನಿಯತಾಂಕ ಸಿಂಟ್ಯಾಕ್ಸನ್ನು ತೆಗೆದು ಹಾಕಲಾಗಿದೆ. ಪೂರ್ವನಿಯೋಜಿತ ನಿಯತಾಂಕ ಸಿಂಟ್ಯಾಕ್ಸ್ ಈಗ crashkernel=:[@offset] ಆಗಿದೆ.
ಕಾರ್ಯನಿರ್ವಹಣೆ ಅಪ್‌ಡೇಟ್‌ಗಳು ಹಾಗು ಸುಧಾರಣೆಗಳು
Red Hat Enterprise Linux 6.1 ರಲ್ಲಿನ ಕರ್ನಲ್ ಈ ಕೆಳಗಿನ ಗಮನಾರ್ಹವಾದ ಕಾರ್ಯನಿರ್ವಹಣಾ ಅಪ್‌ಡೇಟ್‌ಗಳನ್ನು ಒದಗಿಸುತ್ತದೆ:
ಟ್ರಾನ್ಸ್‍ಪರೆಂಟ್ ಹ್ಯೂಜ್ ಪೇಜಸ್‌ಗೆ (THP) ಬೆಂಬಲಕ್ಕಾಗಿನ ಅಪ್‌ಡೇಟ್‌ಗಳು ಹಾಗು ಸುಧಾರಣೆಗಳು
perf_event ಗಾಗಿನ ಅಪ್‌ಡೇಟ್‌ಗಳು, ಇದು ಲಾಕ್ ಸಂದರ್ಭಗಳಲ್ಲಿನ ಉತ್ತಮ ವಿಶ್ಲೇಷಣೆಗಾಗಿ perf lock ಸವಲತ್ತನ್ನು ಸೇರಿಸುತ್ತದೆ.
kprobes ಜಂಪ್ ಆಪ್ಟಿಮೈಸೇಶನ್, ಇದು SystemTapನ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡುತ್ತದೆ ಹಾಗು ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ.
i7300_edac ಹಾಗು i7core_edac ಗೆ ಅಪ್‌ಡೇಟ್ ಮಾಡುತ್ತದೆ, ಇದು Intel 7300 ಚಿಪ್‌ಸೆಟ್ ಅನ್ನು ಬಳಸುವ ಮದರ್ಬೋರ್ಡುಗಳಲ್ಲಿನ ಮೆಮೊರಿ ದೋಷಗಳ ಮೇಲ್ವಿಚಾರಣೆ ನಡೆಸಲು ಬೆಂಬಲವನ್ನು ಒದಗಿಸುತ್ತದೆ.
3. ಗಣಕತೆರೆ
ಗ್ರಾಫಿಕ್ಸ್ ಯಂತ್ರಾಂಶ
Red Hat Enterprise Linux 6.1 ರಲ್ಲಿ ಗ್ರಾಫಿಕ್ಸ್ ಯಂತ್ರಾಂಶಕ್ಕಾಗಿ ಹಲವಾರು ಅಪ್‌ಡೇಟ್‌ಗಳನ್ನು ಸೇರಿಸಲಾಗಿದೆ. Sandy Bridge ಸಂಸ್ಕಾರಕಕ್ಕಾಗಿನ Intel Generation 6 Graphics ಗೆ ಚಾಲಕವನ್ನು ಈ ಬಿಡುಗಡೆಯಲ್ಲಿ ಪರಿಚಯಿಸಲಾಗುತ್ತಿದೆ, ಇದು ಈ ಸಾಧನಗಳಲ್ಲಿ ಸಂಪೂರ್ಣವಾಗಿ ವೇಗವರ್ಧಿತವಾದ 2D ಹಾಗು 3D ಗ್ರಾಫಿಕ್ಸುಗಳನ್ನು ನೀಡುತ್ತದೆ. ಜೊತೆಗೆ, ಈ ಬಿಡುಗಡೆಯು Matrox MGA-G200ER ಗ್ರಾಫಿಕ್ಸ್ ಚಿಪ್‌ಸೆಟ್‌ಗಾಗಿ ಬೆಂಬಲವನ್ನು ಪರಿಚಯಿಸುತ್ತದೆ.
Red Hat Enterprise Linux 6.1 ರಲ್ಲಿ XGI Z9S AND Z11 ಚಿಪ್‌ಸೆಟ್‌ಗಳನ್ನು ಬೆಂಬಲಿಸಲು xorg-x11-drv-xgi ವೀಡಿಯೊ ಚಾಲಕವನ್ನು ಪರಿಚಯಿಸಲಾಗುತ್ತಿದೆ. ಹಳೆಯ XGI ಯಂತ್ರಾಂಶವನ್ನು ಬೆಂಬಲವನ್ನು ಒದಗಿಸುತ್ತಿದ್ದಂತಹ SIS ಚಾಲಕವನ್ನು ಹೊಸ ಯಂತ್ರಾಂಶವನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿಲ್ಲ.
ಕಾರ್ಯ ವ್ಯವಸ್ಥೆಗೆ ಎಕ್ಸ್‌ಟೆಂಡೆಂಡ್ ಡಿಸ್‌ಪ್ಲೇ ಐಡೆಂಟಿಫಿಕೇಶನ್ ಡೇಟ (EDID) ಅನ್ನು ಒದಗಿಸದ ಮಾನಿಟರುಗಳು ಈಗ ಪೂರ್ವನಿಯೋಜಿತವಾಗಿ 1024 x 768 ಪಿಕ್ಸೆಲ್‌ಗಳನ್ನು ಹೊಂದಿರುತ್ತವೆ.
ನೆಟ್‌ವರ್ಕ್ ಮ್ಯಾನೇಜರ್
NetworkManager ಎನ್ನುವುದು ಹಲವು ಬಗೆಯ ಜಾಲಬಂಧ ಸಂಪರ್ಕಗಳನ್ನು ಸಿದ್ಧಗೊಳಿಸಲು, ಸಂರಚಿಸಲು ಹಾಗು ನಿರ್ವಹಿಸಲು ನೆರವಾಗುವ ಒಂದು ಗಣಕತೆರೆ ಉಪಕರಣವಾಗಿದೆ. Red Hat Enterprise Linux 6.1 ರಲ್ಲಿ, Wi-Fi ಪ್ರೊಟೆಕ್ಡೆಡ್ ಎಕ್ಸೆಸ್ (WPA) ಎಂಟರ್ಪ್ರೈಸ್ ಹಾಗು ಇಂಟರ್ನೆಟ್ ಪ್ರೊಟೊಕಾಲ್ ವರ್ಶನ್ 6 (IPv6) ಅನ್ನು ಸಂರಚಿಸುವಿಕೆಯನ್ನು NetworkManager ಉತ್ತಮಗೊಳಿಸುತ್ತದೆ.
ಆಡಿಯೊ
Red Hat Enterprise Linux 6.1 ರಲ್ಲಿ ಅಪ್‌ಡೇಟ್ ಮಾಡಲಾದ ಅಡ್ವಾನ್ಸಡ್ ಲಿನಕ್ಸ್ ಸೌಂಡ್ ಆರ್ಕಿಟೆಕ್ಚರ್ - ಹೈ ಡೆಫಿನೇಶನ್ ಆಡಿಯೊ (ALSA-HDA) ಚಾಲಕಗಳನ್ನು ಒದಗಿಸುತ್ತದೆ.
4. ಶೇಖರಣೆ
ಬಿಂಬಗಳ LVM ಸ್ನ್ಯಾಪ್‌ಶಾಟ್‌ಗಳು
LVM ಸ್ನ್ಯಾಪ್‌ಶಾಟ್ ಸವಲತ್ತು, ಸೇವೆಗೆ ಯಾವುದೆ ತಡೆಯುಂಟು ಮಾಡದೆ ಒಂದು ನಿರ್ದಿಷ್ಟ ಸಮಯದಲ್ಲಿ ತಾರ್ಕಿಕ ಪರಿಮಾಣದ ಬ್ಯಾಕ್ಅಪ್ ಚಿತ್ರಿಕೆಗಳನ್ನು ರಚಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಸ್ನ್ಯಾಪ್‌ಶಾಟ್ ಅನ್ನು ತೆಗೆದುಕೊಂಡ ನಂತರ ಮೂಲ ಡ್ರೈವ್‌ಗೆ ಬದಲಾವಣೆಗಳನ್ನು ಮಾಡಿದಲ್ಲಿ (ಮೂಲ), ಸ್ನ್ಯಾಪ್‌ಶಾಟ್ ಸವಲತ್ತು ಬದಲಾಯಿಸಲಾದ ದತ್ತಾಂಶ ಸ್ಥಳವನ್ನು ಅದು ಬದಲಾಯಿಸುವ ಮೊದಲು ಹೇಗಿತ್ತೊ ಹಾಗೆ ಒಂದು ಪ್ರತಿಯನ್ನು ಮಾಡಿಕೊಳ್ಳುತ್ತದೆ ಇದರಿಂದಾಗಿ ಸಾಧನದ ಸ್ಥಿತಿಯನ್ನು ಮರಳಿ ರಚಿಸಲು ಸಾಧ್ಯವಿರುತ್ತದೆ. Red Hat Enterprise Linux 6.1 ರಲ್ಲಿ ಬಿಂಬ ಮಾಡಲಾದ ತಾರ್ಕಿಕ ಪರಿಮಾಣದ ಸ್ನ್ಯಾಪ್‌ಶಾಟ್ ಅನ್ನು ತೆಗೆದುಕೊಳ್ಳುವ ಸವಲತ್ತಿಗೆ ಸಂಪೂರ್ಣವಾಗಿ ಬೆಂಬಲಿತವಿರುತ್ತದೆ.
ಬಿಂಬಗಳ LVM ಸ್ಟ್ರೈಪ್
ಈಗ LVM ನಲ್ಲಿನ ಒಂದು ತಾರ್ಕಿಕ ಪರಿಮಾಣದಲ್ಲಿ RAID0 (ಪಟ್ಟೆ ಮಾಡುವಿಕೆ) ಹಾಗು RAID1 (ಬಿಂಬಗೊಳಿಕೆ) ಅನ್ನು ಒಗ್ಗೂಡಿಸಲು ಸಾಧ್ಯವಿರುತ್ತದೆ. ಒಂದು ತಾರ್ಕಿಕ ಪರಿಮಾಣವನ್ನು ರಚಿಸುವ ಸಮಯದಲ್ಲಿ ಬಿಂಬಗಳ ಸಂಖ್ಯೆ ('--mirrors X') ಹಾಗು ಪಟ್ಟೆಗಳ ಸಂಖ್ಯೆಯನ್ನು ('--stripes Y') ಸೂಚಿಸುವುದರಿಂದ ಒಂದು ಬಿಂಬ ಸಾಧನವು ನಿರ್ಮಾಣಗೊಂಡು ಅದರ ಒಳಗಿನ ಸಾಧನಗಳು ಪಟ್ಟೆಗಳನ್ನು ಹೊಂದಿರುತ್ತವೆ.
5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ
ಸಿಸ್ಟಮ್ ಸೆಕ್ಯುರಿಟಿ ಸರ್ವಿಸಸ್ ಡೀಮನ್ (SSSD)
ಸಿಸ್ಟಮ್ ಸೆಕ್ಯುರಿಟಿ ಸರ್ವಿಸಸ್ ಡೀಮನ್ (SSSD) ಎನ್ನುವುದು ಗುರುತಿಸುವಿಕೆ ಹಾಗು ದೃಢೀಕರಣದ ಕೇಂದ್ರೀಕೃತ ನಿರ್ವಹಣೆಗಾಗಿ ಕೆಲವು ಸೇವೆಗಳನ್ನು ಅಳವಡಿಸುತ್ತದೆ. ಗುರುತಿಸುವಿಕೆ ಹಾಗು ದೃಢೀಕರಣ ಸೇವೆಗಳನ್ನು ಕೇಂದ್ರೀಕೃತಗೊಳಿಸುವುದರಿಂದ ಗುರುತುಗಳನ್ನು ಸ್ಥಳೀಯವಾಗಿ ಶೇಖರಿಸಿಟ್ಟುಕೊಳ್ಳಲಾಗುತ್ತದೆ, ಇದರಿಂದಾಗಿ ಪರಿಚಾರಕದೊಂದಿಗೆ ಸಂಪರ್ಕವು ಕಡಿದು ಹೋದ ಸಂದರ್ಭದಲ್ಲಿಯೂ ಸಹ ಬಳಕೆದಾರರನ್ನು ಗುರುತಿಸಲು ಸಾಧ್ಯವಿರುತ್ತದೆ. SSSD ಯು ಹಲವು ಬಗೆಯ ಗುರುತಿಸುವಿಕೆ ಹಾಗು ದೃಢೀಕರಣ ಸೇವೆಗಳನ್ನು ಬೆಂಬಲಿಸುತ್ತದೆ, ಅವುಗಳೆಂದರೆ: Red Hat ಡಿರೆಕ್ಟರಿ ಸರ್ವರ್, ಆಕ್ಟೀವ್ ಡಿರೆಕ್ಟರಿ, OpenLDAP, 389, ಕರ್ಬರೋಸ್ ಹಾಗು LDAP. Red Hat Enterprise Linux 6.1 ರಲ್ಲಿನ SSSD ಅನ್ನು ಆವೃತ್ತಿ 1.5 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ಈ ಕೆಳಗಿನ ದೋಷ ಪರಿಹಾರಗಳು ಹಾಗು ಸುಧಾರಣೆಗಳನ್ನು ಒದಗಿಸುತ್ತದೆ:
ನೆಟ್‌ಗ್ರೂಪ್ಸ್ ಬೆಂಬಲ
ಸುಧಾರಿತ ಆನ್‌ಲೈನ್/ಆಫ್‌ಲೈನ್ ಪತ್ತೆಹಚ್ಚುವಿಕೆ
LDAP ನಿಲುಕಣೆ-ನಿಯಂತ್ರಣವನ್ನು ಶಾಡೊ ಹಾಗು authorizedService ಕ್ಕಾಗಿ ಬೆಂಬಲವನ್ನು ಸೇರಿಸುವುದರೊಂದಿಗೆ ಸುಧಾರಿತಗೊಳಿಸಲಾಗಿದೆ
ವಿಭಿನ್ನವಾದ ವಿನ್ಯಾಸಕ್ಕಾಗಿನ ಕ್ಯಾಶಿಂಗ್ ಹಾಗು ಸ್ವಚ್ಛಗೊಳಿಕೆಯಲ್ಲಿ ಸುಧಾರಣೆ
ನಿಯೋಜನಾ ಮಾರ್ಗದರ್ಶಿವು SSSD ಅನ್ನು ಹೇಗೆ ಅನುಸ್ಥಾಪಿಸಬೇಕು ಹಾಗು ಹೇಗೆ ಸಂರಚಿಸಬೇಕು ಎನ್ನುವುದರ ಕುರಿತಾದ ವಿಭಾಗವನ್ನು ಹೊಂದಿದೆ.
IPA
Red Hat Enterprise Linux 6.1 ರಲ್ಲಿ IPA ಅನ್ನು ಒಂದು ತಂತ್ರಜ್ಞಾನ ಅವಲೋಕನವಾಗಿ ಅಳವಡಿಸಲಾಗಿದೆ. IPA ಎನ್ನುವುದು ಒಂದು ಸಂಘಟಿತ ಸುರಕ್ಷತಾ ಮಾಹಿತಿ ನಿರ್ವಹಣಾ ವ್ಯವಸ್ಥೆಯಾಗಿದ್ದು ಇದು Red Hat Enterprise Linux, Red Hat Directory Server, MIT Kerberos, ಹಾಗು NTP ಅನ್ನು ಒಗ್ಗೂಡಿಸುತ್ತದೆ. ಇದು ಜಾಲವೀಕ್ಷಕ ಹಾಗು ಆಜ್ಞಾ-ಸಾಲಿನ ಸಂಪರ್ಕಸಾಧನಗಳನ್ನು ಒದಗಿಸುತ್ತದೆ, ಹಾಗು ಅದರ ಹಲವಾರು ವ್ಯವಸ್ಥಾಪನಾ ಉಪಕರಣಗಳ ನೆರವಿನಿಂದಾಗಿ ವ್ಯವಸ್ಥಾಪಕರು ಕೇಂದ್ರೀಕೃತ ದೃಢೀಕರಣ ಹಾಗು ಗುರುತಿನ ನಿರ್ವಹಣೆಗಾಗಿ ಒಂದು ಅಥವ ಹೆಚ್ಚಿನ ಪರಿಚಾರಕಗಳನ್ನು ಕ್ಷಿಪ್ರವಾಗಿ ಅನುಸ್ಥಾಪಿಸುವಿಕೆ, ಸಿದ್ಧಗೊಳಿಕೆ ಹಾಗು ವ್ಯವಸ್ಥಾಪಿಸುವಿಕೆಯನ್ನು ನಡೆಸಲು ಸಾಧ್ಯವಿರುತ್ತದೆ.
Samba ಎನ್ನುವುದು ಕಾಮನ್ ಇಂಟರ್ನೆಟ್ ಫೈಲ್ ಸಿಸ್ಟಮ್ (CIFS) ಪ್ರೊಟೊಕಾಲ್‌ನ ಒಂದು ಮುಕ್ತ ಆಕರದ ಅಳವಡಿಕೆಯಾಗಿರುತ್ತದೆ. ಇದು Microsoft Windows, Linux, UNIX, ಹಾಗು ಇತರೆ ಕಾರ್ಯವ್ಯವಸ್ಥೆಗಳನ್ನು ಜಾಲಬಂಧದ ಮೂಲಕ ಜೋಡಿಸುವಿಕೆಯಲ್ಲಿ ನೆರವಾಗುತ್ತದೆ, ಇದು Windows-ಆಧರಿತವಾದ ಕಡತ ಹಾಗು ಮುದ್ರಣ ಹಂಚಿಕೆಗಳನ್ನು ನಿಲುಕಿಸಿಕೊಳ್ಳುವುದನ್ನು ಶಕ್ತಗೊಳಿಸುತ್ತದೆ. Red Hat Enterprise Linux 6.1 ರಲ್ಲಿ Samba ಅನ್ನು 3.5.6 ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
Red Hat Enterprise Linux 6.1 ರಲ್ಲಿ Samba ವು ಮೌಂಟ್ ನ ಎಲ್ಲಾ ನಿಲುಕಣೆಗಾಗಿ ಒಂದೇ ಮೌಂಟ್ ಗುರುತುಗಳನ್ನು ಬಳಸುವ ಬದಲಾಗಿ ಬಳಕೆದಾರರು CIFS ಮೌಂಟ್ ಅನ್ನು ನಿಲುಕಿಸಿಕೊಳ್ಳುವಾಗ ತಮ್ಮದೆ ಆದ ಕರ್ಬರೋಸ್ ಗುರುತುಗಳನ್ನು ಬಳಸುವುದನ್ನು ಅನುಮತಿಸುತ್ತದೆ.
FreeRADIUS
FreeRADIUS ಎನ್ನುವುದು ಜಾಲಬಂಧ ದೃಢೀಕರಣ ಡೀಮನ್ ಆಗಿದ್ದು, ಇದು RFC 2865 ರಲ್ಲಿ (ಹಾಗು ಇತರೆಯವುಗಳಲ್ಲಿ) ಸೂಚಿಸಿರುವಂತೆ RADIUS ಪ್ರೊಟೊಕಾಲ್ ಅನ್ನು ಅನ್ವಯಿಸುತ್ತದೆ. ಇದು ನೆಟ್‌ವರ್ಕ್ ಎಕ್ಸೆಸ್ ಸರ್ವರುಗಳು (NAS ಬಾಕ್ಸುಗಳು) ಡಯಲ್-ಅಪ್ ಬಳಕೆದಾರರಿಗಾಗಿ ದೃಢೀಕರಣವನ್ನು ನಿರ್ವಹಿಸುತ್ತದೆ. Red Hat Enterprise Linux 6.1 ರಲ್ಲಿನ FreeRADIUS ಅನ್ನು ಆವೃತ್ತಿ 2.1.10 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
ಕರ್ಬರೋಸ್
ಕರ್ಬರೋಸ್ ಎನ್ನುವುದು ಜಾಲಬಂಧ ದೃಢೀಕರಣ ವ್ಯವಸ್ಥೆಯಾಗಿದ್ದು, ಇದು ಬಳಕೆದಾರರು ಹಾಗು ಗಣಕಗಳು ಒಂದು ನಂಬಿಕಸ್ತ ತರ್ಡ್ ಪಾರ್ಟಿಯಾದ KDC ಯ ನೆರವಿನಿಂದ ಪರಸ್ಪರ ದೃಢೀಕರಿಸಲು ಅನುವು ಮಾಡಿಕೊಡುತ್ತದೆ. Red Hat Enterprise Linux 6.1 ರಲ್ಲಿ, ಕರ್ಬರೋಸ್ ಅನ್ನು (krb5 ಪ್ಯಾಕೇಜಿನಿಂದ ಒದಗಿಸಲಾಗುತ್ತದೆ) ಆವೃತ್ತಿ 1.9 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
6. ಸುರಕ್ಷತೆ
OpenSCAP
OpenSCAP ಎನ್ನುವುದು ಮುಕ್ತ ತಂತ್ರಾಂಶ ಲೈಬ್ರರಿಗಳಾಗಿದ್ದು ಇದು ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಆಂಡ್ ಟೆಕ್ನಾಲಜಿಯ (NIST) ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್ (SCAP) ಮಾನಕಗಳನ್ನು ಬೆಂಬಲಿಸುತ್ತದೆ. OpenSCAP ಈ ಕೆಳಗಿನ SCAP ಘಟಕಗಳನ್ನು ಬೆಂಬಲಿಸುತ್ತದೆ:
ಕಾಮನ್ ವಲ್ನರೆಬಿಲಿಟಿ ಆಂಡ್ ಎಕ್ಸ್‍ಪೋಶರ್ಸ್ (CVE)
ಕಾಮನ್ ಪ್ಲಾಟ್‌ಫಾರ್ಮ್ ಎನ್ಯುಮರೇಶನ್ (CPE)
ಕಾಮನ್ ಕಾನ್ಫಿಗರೇಶನ್ ಎನ್ಯುಮರೇಶನ್ (CCE)
ಕಾಮನ್ ವಲ್ನರೆಬಿಲಿಟಿ ಸ್ಕೋರಿಂಗ್ ಸಿಸ್ಟಮ್ (CVSS)
ಓಪನ್ ವಲ್ನರೆಬಿಲಿಟಿ ಆಂಡ್ ಅಸೆಸ್‌ಮೆಂಟ್ ಲಾಂಗ್ವೇಜ್ (OVAL)
ಇದಲ್ಲದೆ, openSCAP ಪ್ಯಾಕೇಜಿನಲ್ಲಿ ವ್ಯವಸ್ಥೆಯ ಸಂರಚನೆಯ ಕುರಿತಾದ SCAP ವರದಿಗಳನ್ನು ತಯಾರಿಸಲು ಒಂದು ಅನ್ವಯವನ್ನು ಹೊಂದಿರುತ್ತದೆ. openSCAP ಈಗ Red Hat Enterprise Linux 6.1 ರಲ್ಲಿ ಒಂದು ಸಂಪೂರ್ಣವಾಗಿ ಬೆಂಬಲಿತವಾದ ಪ್ಯಾಕೇಜ್ ಆಗಿದೆ.
SPICE ಗಾಗಿ ಸ್ಮಾರ್ಟ್ ಕಾರ್ಡ್ ಬೆಂಬಲ
ಸಿಂಪಲ್ ಪ್ರೊಟೊಕಾಲ್ ಫಾರ್ ಇಂಡಿಪೆಂಡೆಂಟ್ ಕಂಪ್ಯೂಟಿಂಗ್ ಎನ್ವಿರಾನ್ಮೆಂಟ್ (SPICE) ಎನ್ನುವುದು ವರ್ಚುವಲ್ ಪರಿಸರಕ್ಕಾಗಿನ ಒಂದು ದೂರಸ್ಥ ಪ್ರದರ್ಶನ ಪ್ರೊಟೊಕಾಲ್ ಆಗಿದೆ. SPICE ಬಳಕೆದಾರರು ಸ್ಥಳೀಯ ವ್ಯವಸ್ಥೆಯಿಂದ ಅಥವ ಪರಿಚಾರಕಕ್ಕೆ ಜಾಲಬಂಧ ನಿಲುಕಣೆಯನ್ನು ಹೊಂದಿರುವ ಯಾವುದೆ ವ್ಯವಸ್ಥೆಯಿಂದ ವರ್ಚುವಲ್ ಗಣಕತೆರೆಯನ್ನು ನೋಡಲು ಸಾಧ್ಯವಿರುತ್ತದೆ. Red Hat Enterprise Linux 6.1 ರಲ್ಲಿ SPICE ಪ್ರೊಟೊಕಾಲ್ ಮೂಲಕ ಸ್ಮಾರ್ಟ್ ಕಾರ್ಡ್ ಪಾಸ್‌ತ್ರೂಗೆ ಬೆಂಬಲವನ್ನು ಒದಗಿಸುತ್ತದೆ.
ಹೆಚ್ಚಿನ ಓದಿಗಾಗಿ
ಸುರಕ್ಷತೆ ಮಾರ್ಗದರ್ಶಿಯನ್ನು ಸ್ಥಳೀಯ ಹಾಗು ದೂರಸ್ಥ ಒಳನುಸುಳುವಿಕೆ, ದುರ್ಬಳಕೆ ಹಾಗು ದುರ್ನಡತೆಯ ವಿರುದ್ಧ ಕಾರ್ಯಸ್ಥಳಗಳು ಹಾಗು ಪರಿಚಾರಕಗಳನ್ನು ಸುರಕ್ಷಿತಗೊಳಿಸುವ ಪ್ರಕ್ರಿಯೆಗಳು ಹಾಗು ಪದ್ಧತಿಗಳನ್ನು ಬಳಕೆದಾರರು ಹಾಗು ವ್ಯವಸ್ಥಾಪಕರು ತಿಳಿದುಕೊಳ್ಳಲು ನೆರವಾಗುತ್ತದೆ.
7. ಅನುಸ್ಥಾಪನೆ
Emulex 10GbE PCI-E Gen2 ಹಾಗು Chelsio T4 10GbE ಜಾಲಬಂಧ ಅಡಾಪ್ಟರುಗಳಿಗಾಗಿನ ಅನುಸ್ಥಾಪನೆ ಹಾಗು ಬೂಟ್ ಬೆಂಬಲವನ್ನು Red Hat Enterprise Linux 6.1 ಕ್ಕೆ ಸೇರಿಸಲಾಗಿದೆ. ಹೆಚ್ಚುವರಿಯಾಗಿ, UEFI ವ್ಯವಸ್ಥೆಗಳಲ್ಲಿ 4KB ವಿಭಾಗದ ಗಾತ್ರವನ್ನು ಹೊಂದಿರುವ ಪರಿಮಾಣಗಳನ್ನು ಬೂಟ್ ಮಾಡುವುದನ್ನು ಬೆಂಬಲಿಸುವಂತೆ GRUB ಬೂಟ್‌ಲೋಡರ್ ಅನ್ನು ಅಪ್‌ಡೇಟ್ ಮಾಡಲಾಗಿದೆ.
Red Hat Enterprise Linux 6.1 ರಲ್ಲಿನ ಅನುಸ್ಥಾಪಕವು ಬೆಂಬಲವಿರದ ಯಂತ್ರಾಂಶ ಪ್ಲಾಟ್‌ಫಾರ್ಮುಗಳನ್ನು ಗುರುತಿಸುತ್ತದೆ ಹಾಗು ಬಳಕೆದಾರರಿಗೆ ಸೂಚನೆ ನೀಡುತ್ತದೆ. ಅನುಸ್ಥಾಪನೆಯು ಮುಂದುವರೆಯುತ್ತದೆ, ಆದರೆ ಈ ಕೆಳಗಿನ ಸಂದೇಶವನ್ನು ತೋರಿಸಲಾಗುತ್ತದೆ
This hardware (or a combination thereof) is not supported by Red Hat. For more information on supported hardware, please refer to http://www.redhat.com/hardware.
iSCSI ಅಡಾಪ್ಟರುಗಳಿಗಾಗಿನ ಸುಧಾರಿತ ಬೆಂಬಲ
Red Hat Enterprise Linux 6.1 ರಲ್ಲಿ ಅನುಸ್ಥಾಪನೆ ಹಾಗು ಬೂಟ್ ಸಮಯಲದಲ್ಲಿ iSCSI ಅಡಾಪ್ಟರುಗಳಿಗೆ ನೀಡಲಾಗುವ ಬೆಂಬಲವನ್ನು ಸುಧಾರಿಸಲಾಗಿದೆ, ಇದರಲ್ಲಿ ಅನುಸ್ಥಾಪನೆಯ ಸಮಯದಲ್ಲಿ iSCSI ಶೇಖರಣೆಗಾಗಿ ಪ್ರತ್ಯೇಕವಾದ ಲಾಗಿನ್ ವ್ಯವಸ್ಥೆಯನ್ನು ಒದಗಿಸುವುದು ಹಾಗು iSCSI ಅಡಾಪ್ಟರುಗಳಿಗಾಗಿ ಆಂಶಿಕ ಆಫ್‌ಲೋಡ್ ಅನ್ನು ಬೆಂಬಲಿಸುತ್ತದೆ (ಉದಾ. ಎಮ್ಯೂಲೆಕ್ಸ್ ಟೈಗರ್ ಶಾರ್ಕ್ ಅಡಾಪ್ಟರ್).
Red Hat Enterprise Linux 6 ರಲ್ಲಿ iBFT ಯಲ್ಲಿ BIOS iSCSI ನ ಸ್ವಯಂ-ಪತ್ತೆಯ ಸಿದ್ಧತೆಯ ಮೂಲಕ iSCSI ಮೂಲಕ ಅನುಸ್ಥಾಪಿಸುವುದನ್ನು ಬೆಂಬಲಿಸಲಾಗುತ್ತಿತ್ತು. ಆದರೆ, ಅನುಸ್ಥಾಪನೆಯ ನಂತರ iBFT ಸಿದ್ಧತೆಯನ್ನು ಮರಳಿ ಸಂರಚನೆ ಮಾಡುವಿಕೆ ಅಸಾಧ್ಯವಾಗುತ್ತಿತ್ತು. In Red Hat enterprise Linux 6.1 ರಲ್ಲಿ, TCP/IP ಸಿದ್ಧತೆಗಳು ಹಾಗು ಬೂಟ್ ಸಮಯದಲ್ಲಿ iBFT ಸಿದ್ಧತೆಗಳಿಂದ iSCSI ಆರಂಭಕದ ಸಂರಚನೆಯನ್ನು ಡೈನಮಿಕ್ ಆಗಿ ಸಂರಚಿಸಲಾಗಿರುತ್ತದೆ.
8. ಕಂಪೈಲರ್ ಹಾಗು ಉಪಕರಣಗಳು
SystemTap
SystemTap ಎನ್ನುವುದು ಬಳಕೆದಾರರು ಕಾರ್ಯವ್ಯವಸ್ಥೆಯ (ವಿಶೇಷವಾಗಿ, ಕರ್ನಲ್) ಚಟುವಟಿಕೆಗಳನ್ನು ಕೂಲಂಕುಶವಾಗಿ ಅಧ್ಯಯನ ನಡೆಸುವುದನ್ನು ಹಾಗು ಮೇಲ್ವಿಚಾರಣೆ ನಡೆಸುವುದನ್ನು ಅನುಮತಿಸುವ ಒಂದು ಜಾಡನ್ನು ಇರಿಸುವ ಹಾಗು ತನಿಖೆ ನಡೆಸುವ ಉಪಕರಣವಾಗಿದೆ. ಇದು netstat, ps, top, ಹಾಗು iostat ಗಳು ನೀಡುವ ರೀತಿಯಲ್ಲಿಯೆ ಔಟ್‌ಪುಟ್‌ಗಳನ್ನು ಒದಗಿಸುತ್ತದೆ; ಆದರೆ, SystemTap ಅನ್ನು ಸಂಗ್ರಹಿಸಲಾದ ಮಾಹಿತಿಯನ್ನು ಇನ್ನೂ ಹೆಚ್ಚಿನ ಫಿಲ್ಟರಿಂಗ್ ಹಾಗು ವಿಶ್ಲೇಷಣಾ ಆಯ್ಕೆಯನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
Red Hat Enterprise Linux 6.1 ನಲ್ಲಿನ SystemTap ಅನ್ನು ಆವೃತ್ತಿ 1.4 ಕ್ಕೆ ಅಪ್‌ಡೇಟ್ ಮಾಡಲಾಗಿದೆ, ಇದು ಈ ಕೆಳಗಿನದನ್ನು ಒದಗಿಸುತ್ತದೆ:
--remote USER@HOST ನೊಂದಿಗೆ ದೂರಸ್ಥ ಆತಿಥೇಯ ಸ್ಕ್ರಿಪ್ಟಿಂಗ್‌ನ ಆಲ್ಫಾ ಆವೃತ್ತಿ
ನಿಷ್ಕ್ರಿಯವಾದ ಬಳಕೆದಾರ ತನಿಖೆ ಬಿಂದುಗಳಿಗಾಗಿ ಶೂನ್ಯಕ್ಕೆ ಹತ್ತಿರದ ಬೆಲೆಯ ಸೂಕ್ತಗೊಳಿಕೆ
GNU ಪ್ರಾಜೆಕ್ಟ್ ಡೀಬಗ್ಗರ್ (ಸಾಮಾನ್ಯವಾಗಿ GDB ಎಂದು ಕರೆಯಲಾಗುತ್ತದೆ) ಎನ್ನುವುದು C, C++, ಹಾಗು ಇತರೆ ಭಾಷೆಗಳಲ್ಲಿ ಬರೆಯಲಾದ ಪ್ರೊಗ್ರಾಮ್‌ಗಳನ್ನು ಒಂದು ನಿಯಂತ್ರಿತ ವಿಧಾನದಲ್ಲಿ ಕಾರ್ಯಗತಗೊಳಿಸುವ ಮೂಲಕ, ಹಾಗು ನಂತರ ಅವುಗಳ ದತ್ತಾಂಶವನ್ನು ಮುದ್ರಿಸುವ ಮೂಲಕ ದೋಷ ನಿದಾನ ಮಾಡುತ್ತದೆ.Red Hat Enterprise Linux 6.1 ರಲ್ಲಿ GDB ಯನ್ನು ಆವೃತ್ತಿ 7.2 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ಪೈತಾನ್ ಸ್ಕಿಪ್ಟಿಂಗ್ ಸವಲತ್ತು, ಹಾಗು C++ ದೋಷನಿಧಾನ ಸುಧಾರಣೆಯೂ ಸೇರಿದಂತೆ ಹಲವಾರು ದೋಷಪರಿಹಾರಗಳು ಹಾಗು ಸುಧಾರಣೆಗಳನ್ನು ಒದಗಿಸುತ್ತದೆ.
Red Hat Enterprise Linux 6.1 ರಲ್ಲಿ ಪರ್ಫಾಮೆನ್ಸ್ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (PAPI) ಅನ್ನು ಪರಿಚಯಿಸಲಾಗುತ್ತಿದೆ. PAPI ಎನ್ನುವುದು ಆಧುನಿಕ ಮೈಕ್ರೊಪ್ರೊಸೆಸರುಗಳಲ್ಲಿನ ಯಂತ್ರಾಂಶ ಕಾರ್ಯನಿರ್ವಹಣೆ ಕೌಂಟರಿನ ಕ್ರಾಸ್-ಪ್ಲಾಟ್‌ಫಾರ್ಮ್ ಸಂಪರ್ಕಸಾಧನಗಳ ಗುಣನಿಶ್ಚಯವಾಗಿದೆ. ಈ ಕೌಂಟರುಗಳು ಘಟನೆಗಳನ್ನು ಎಣಿಸುವ ಸಣ್ಣ ರಿಜಸ್ಟರುಗಳ ರೂಪದಲ್ಲಿ ಇದ್ದು, ಇದು ಸಂಸ್ಕಾರಕದ ಕಾರ್ಯಕ್ಕೆ ಸಂಬಂಧಿಸಿದ ನಿಶ್ಚಿತ ಸಂಕೇತಗಳು ಕಾಣಿಸುವಿಕೆಯಾಗಿರುತ್ತದೆ. ಈ ಘಟನೆಗಳ ಮೇಲ್ವಿಚಾರಣೆ ನಡೆಸುವುದು ಅನ್ವಯದ ಕಾರ್ಯನಿರ್ವಹಣೆ ಹಾಗು ಟ್ಯೂನಿಂಗ್ ಅನ್ನು ವಿಶ್ಲೇಷಿಸುವಲ್ಲಿ ಇದು ಅನೇಕ ಪ್ರಯೋಜನವನ್ನು ನೀಡುತ್ತದೆ.
OProfile
OProfile ಎನ್ನುವುದು ಲಿನಕ್ಸ್ ವ್ಯವಸ್ಥೆಗಳಿಗಾಗಿನ ವ್ಯವಸ್ಥೆಯಾದ್ಯಂತದ ಪ್ರೊಫೈಲರ್ ಆಗಿರುತ್ತದೆ. ಪ್ರೊಫೈಲಿಂಗ್ ಹಿನ್ನಲೆಯಲ್ಲಿ ಪಾರದರ್ಶಕವಾಗಿ ಚಲಾಯಿಸಲ್ಪಡುತ್ತದೆ ಹಾಗು ಪ್ರೊಫೈಲ್ ದತ್ತಾಂಶವು ಯಾವುದೆ ಸಂದರ್ಭದಲ್ಲಿ ಸಂಗ್ರಹಿಸಬಹುದಾಗಿರುತ್ತದೆ. Red Hat Enterprise Linux 6.1 ರಲ್ಲಿ, OProfile ಅನ್ನು ಆವೃತ್ತಿ 0.9.6-12 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು AMD family 12h/14h/15h ಸಂಸ್ಕಾರಕಗಳು ಹಾಗು Intel Westmere ನಿಶ್ಚಿತ ಸನ್ನಿವೇಶಗಳಿಗೆ ಬೆಂಬಲವನ್ನು ಒದಗಿಸುತ್ತದೆ.
Valgrind
Valgrind ಎನ್ನುವುದು ಅನ್ವಯಗಳನ್ನು ವಿವರವಾಗಿ ಪ್ರೊಫೈಲ್ ಮಾಡಲು ಬಳಸಲಾಗುವ ಕ್ರಿಯಾತ್ಮಕ ವಿಶ್ಲೇಷಣಾ ಉಪಕರಣಗಳನ್ನು ನಿರ್ಮಿಸುವ ಸಾಧನದ ಫ್ರೇಮ್‌ವರ್ಕ್ ಆಗಿದೆ. Valgrind ಅನ್ನು ಹಲವು ಮೆಮೊರಿ ನಿರ್ವಹಣೆ ಹಾಗು ತ್ರೆಡಿಂಗ್ ತೊಂದರೆಗಳನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಲು ಬಳಸಲಾಗುತ್ತದೆ. Valgrind ಸೂಟ್ ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಹೊಸ ಪ್ರೊಫೈಲಿಂಗ್ ಉಪಕರಣಗಳನ್ನು ನಿರ್ಮಿಸಲು ಬೇಕಿರುವ ಉಪಕರಣಗಳನ್ನೂ ಸಹ ಹೊಂದಿದೆ.
Red Hat Enterprise Linux 6.1 ರಲ್ಲಿ Valgrind ಆವೃತ್ತಿ 3.6.0 ಅನ್ನು ಒದಗಿಸಲಾಗುತ್ತದೆ.
GNU ಕಂಪೈಲರ್ ಕಲೆಕ್ಷನ್ (GCC)
GNU ಕಂಪೈಲರ್ ಕಲೆಕ್ಷನ್ (GCC) ನಲ್ಲಿ ಬೇರೆಯವುಗಳೊಂದಿಗೆ, C, C++, ಹಾಗು Java GNU ಕಂಪೈಲರುಗಳು ಮತ್ತು ಸಂಬಂಧಿತವಾದ ಬೆಂಬಲ ಲೈಬ್ರರಿಗಳು ಇರುತ್ತವೆ. Red Hat Enterprise Linux 6 ರಲ್ಲಿ GCC ಯ ಆವೃತ್ತಿ 4.4 ಅನ್ನು ಹೊಂದಿರುತ್ತದೆ, ಇದು ಈ ಕೆಳಗಿನ ಸವಲತ್ತುಗಳನ್ನು ಹಾಗು ವರ್ಧನೆಗಳನ್ನು ಹೊಂದಿರುತ್ತದೆ:
IBM z196 ಹೊಸ ಸೂಚನೆ ಬೆಂಬಲ ಹಾಗು ಸೂಕ್ತಗೊಳಿಕೆ
IBM z10 ಪ್ರಿಫೆಚ್ ಸೂಚನೆ ಬೆಂಬಲ ಹಾಗು ಸೂಕ್ತಗೊಳಿಕೆ
libdfp
Red Hat Enterprise Linux 6.1 ರಲ್ಲಿ libdfp ಲೈಬ್ರರಿಯನ್ನು ಅಪ್‌ಡೇಟ್ ಮಾಡಲಾಗಿದೆ. libdfp ಎನ್ನುವುದು ದಶಾಂಶ ತೇಲುವ ಬಿಂದು ಗಣಿತ ಲೈಬ್ರರಿಯಾಗಿದೆ, ಹಾಗು ಇದು Power ಹಾಗು s390x ಆರ್ಕಿಟೆಕ್ಚರುಗಳಲ್ಲಿ glibc ಗಣಿತ ಕ್ರಿಯೆಗಳಿಗೆ ಪರ್ಯಾಯವಾದ ಮಾರ್ಗವಾಗಿದೆ, ಹಾಗು ಇದು ಪೂರಕ ಚಾನಲ್‌ಗಳಲ್ಲಿ ಲಭ್ಯವಿದೆ.
ಎಕ್ಲಿಪ್ಸ್
ಎಕ್ಲಿಪ್ಸ್ ಎನ್ನುವುದು ವಿಕಸನಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲಿಯೂ ಉಪಕರಣಗಳನ್ನು ಒದಗಿಸುವ ಶಕ್ತಿಯುತವಾದ ವಿಕಸನಾ ಪರಿಸರವಾಗಿದೆ. ಇದನ್ನು ಬಳಕೆಗೆ ಸುಲಭವಾಗಲೆಂದು ಒಂದು ಸಂಪೂರ್ಣವಾಗಿ ಸಂರಚಿಸಬಹುದಾದ ಬಳಕೆದಾರ ಸಂಪರ್ಕಸಾಧನದೊಂದಿಗೆ ಅಳವಡಿಸಲಾಗಿದ್ದು, ಇದು ಹಲವಾರು ಬಗೆಗಳಲ್ಲಿ ವಿಸ್ತರಿಸಬಹುದಾದ ಪ್ಲಗ್ ಮಾಡಲು ಸಾಧ್ಯವಿರುವ ಆರ್ಕಿಟೆಕ್ಚರ್ ಅನ್ನು ಹೊಂದಿದೆ.
Red Hat Enterprise Linux 6.1 ರಲ್ಲಿ ಅಪ್‌ಡೇಟ್ ಮಾಡಲಾದ ಎಕ್ಲಿಪ್ಸ್ ಆವೃತ್ತಿ ಲಭ್ಯವಿದೆ, ಇದು ಈ ಕೆಳಗಿನ ಅಪ್‌ಡೇಟ್‌ಗಳನ್ನು ಹಾಗು ಸುಧಾರಣೆಗಳನ್ನು ಒದಗಿಸುತ್ತದೆ:
Valgrind ಹಾಗು OProfile ಸಂಯೋಜನೆ ಮತ್ತು C ಹಾಗು C++ ನೊಂದಿಗೆ ಕೆಲಸ ಮಾಡಲು ಬೇಕಿರುವ ಉಪಕರಣಗಳೂ ಸೇರಿದಂತೆ ಎಲ್ಲಾ ಪ್ರಮುಖ ಪ್ಲಗ್‌ಇನ್‌ಗಳನ್ನು ಪುನಶ್ಚೇತನಗೊಳಿಸಲಾಗಿದೆ
C, C++ ಹಾಗು Java ಕೋಡ್ ಬೇಸ್‌ಗಳೊಂದಿಗೆ ಕೆಲಸ ಮಾಡುವಾಗ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ
IcedTea
OpenJDK ಗಾಗಿನ ಹೊಸ IcedTea ವೆಬ್ ಓಪನ್ ಸೋರ್ಸ್ ವೆಬ್ ಬ್ರೌಸರ್ ಪ್ಲಗ್‌ಇನ್ ಹಾಗು ವೆಬ್‌ಸ್ಟಾರ್ಟ್ ಅಳವಡಿಕೆ.
ಒಂದು ಜಾಲ ಪುಟದಲ್ಲಿ ಅಡಕಗೊಳಿಸಲಾದ Java ಆಪ್ಲೆಟ್‌ಗಳನ್ನು ಲೋಡ್ ಮಾಡಲು ಫೈರ್ಫಾಕ್ಸಿನಂತರ ವೀಕ್ಷಕಗಳಿಗೆ ಅನುವು ಮಾಡುತ್ತದೆ
JNLP (Java ನೆಟ್‌ವರ್ಕ್ ಲಾಂಚಿಂಗ್ ಪ್ರೊಟೊಕಾಲ್) ಕಡತಗಳನ್ನು ಆರಂಭಿಸಲು ಫ್ರೇಮ್‌ವರ್ಕ್ ಅನ್ನು ಒದಗಿಸುತ್ತದೆ
9. ಕ್ಲಸ್ಟರಿಂಗ್
ಕ್ಲಸ್ಟರುಗಳು ವಿಶ್ವಾಸಾರ್ಹತೆ, ಗಾತ್ರ ಬದಲಾವಣೆಯ ಸಾಮರ್ಥ್ಯ, ಹಾಗು ಸಂದಿಗ್ಧ ಉತ್ಪಾದನಾ ಸೇವೆಗಳಲ್ಲಿ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಅನೇಕ ಗಣಕಗಳನ್ನು (ನೋಡ್‌ಗಳು) ಒಟ್ಟಿಗೆ ಕೆಲಸ ಮಾಡುವ ವ್ಯವಸ್ಥೆಯಾಗಿರುತ್ತದೆ. Red Hat Enterprise Linux 6 ಅನ್ನು ಬಳಸಿಕೊಂಡು ಕಾರ್ಯಕ್ಷಮತೆ, ಅತಿ ಲಭ್ಯತೆ, ಹೊರೆ ಸಮತೋಲನೆ, ಹಾಗು ಕಡತ ಹಂಚಿಕೆ ಮುಂತಾದ ಬದಲಾಗುವ ಅಗತ್ಯತೆಗೆ ಹೊಂದಿಕೊಳ್ಳುವಂತೆ ಹಲವಾರು ಸಂರಚನೆಗಳಲ್ಲಿ ನಿಯೋಜಿಸಬಹುದು.
Red Hat Enterprise Linux 6.1 ನಲ್ಲಿ ಕ್ಲಸ್ಟರಿಂಗ್‌ಗಾಗಿ ಈ ಕೆಳಗಿನ ಪ್ರಮುಖ ಅಪ್‌ಡೇಟ್‌ಗಳು ಲಭ್ಯವಿವೆ
Rgmanager ಈಗ ಸಂದಿಗ್ಧ ಹಾಗು ಸಂದಿಗ್ಧವಲ್ಲದ ಸಂಪನ್ಮೂಲಗಳನ್ನು ಬೆಂಬಲಿಸುತ್ತದೆ.
ವ್ಯವಸ್ಥೆಯ ನಿರ್ವಾಹಕರು ಈಗ ಆಜ್ಞಾ ಸಾಲಿನ ಉಪಕರಣಗಳನ್ನು ಬಳಸಿಕೊಂಡು ಒಂದು ಕ್ಲಸ್ಟರ್ ಅನ್ನು ಸಂರಚಿಸಲು ಹಾಗು ಚಲಾಯಿಸಲು ಸಾಧ್ಯವಿರುತ್ತದೆ. ಈ ಸವಲತ್ತು cluster.conf ಸಂರಚನಾ ಕಡತವನ್ನು ಅಥವ ಚಿತ್ರಾತ್ಮಕ ಸಂರಚನಾ ಉಪಕರಣವಾದ Luci ಅನ್ನು ಕೈಯಾರೆ ಸಂಪಾದಿಸುವುದಕ್ಕೆ ಒಂದು ಪರ್ಯಾಯ ಮಾರ್ಗವಾಗಿದೆ.
Red Hat Enterprise Linux KVM ಆತಿಥೇಯದಲ್ಲಿನ Red Hat Enterprise Linux ಹೈ ಅವೆಲಿಬಿಲಿಟಿ ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ
ಕೇಂದ್ರ ಕ್ಲಸ್ಟರ್ ಡೀಮನ್ ಹಾಗು ಉಪ-ಭಾಗಗಳಿಂದ ವ್ಯಾಪಕವಾದ SNMP ಟ್ರಾಪ್ ಬೆಂಬಲ
ಒಂದು ನೋಡ್ quorum ಅನ್ನು ಕಳೆದುಕೊಂಡಾಗ ತಾನಾಗಿಯೆ ಸ್ವತಃ ಮರಳಿ ಬೂಟ್ ಆಗುವಂತೆ ಹೆಚ್ಚುವರಿ ವಾಚ್‌ಡಾಗ್ ಸೇರ್ಪಡಿಕೆ
ಹೆಚ್ಚಿನ ಓದಿಗಾಗಿ
Cluster Suite Overview ಎಂಬ ದಸ್ತಾವೇಜು Red Hat Enterprise Linux 6 ಕ್ಕಾಗಿನ Red Hat ಕ್ಲಸ್ಟರ್ ಸೂಟ್‌ನ ಅವಲೋಕವನ್ನು ಒದಗಿಸುತ್ತದೆ. ಜೊತೆಗೆ, High Availability Administration ಎನ್ನು ದಸ್ತಾವೇಜು Red Hat Enterprise Linux 6 ಕ್ಕಾಗಿನ Red Hat ಕ್ಲಸ್ಟರ್ ವ್ಯವಸ್ಥೆಗಳನ್ನು ಸಂರಚಿಸುವ ಹಾಗು ನಿರ್ವಹಿಸುವ ಮಾಹಿತಿಯನ್ನು ವಿವರಿಸುತ್ತದೆ.
10. ವರ್ಚುವಲೈಸೇಶನ್
vhost
ಹೊಸ ಆತಿಥೇಯ ಕರ್ನಲ್ ಜಾಲಬಂಧ ಬ್ಯಾಕೆಂಡ್ ಆದಂತಹ vhost ಈಗ Red Hat Enterprise Linux 6.1 ರಲ್ಲಿ ಸಂಪೂರ್ಣವಾಗಿ ಬೆಂಬಲಿತವಾದ ಸವಲತ್ತಾಗಿರುತ್ತದೆ. vhost ಬಳಕೆದಾರಸ್ಥಳದ ಅನ್ವಯಿಸುವಿಕೆಯಲ್ಲಿ ಅತ್ಯುತ್ತಮವಾದ ತ್ರೂಪುಟ್ ಹಾಗು ಲೇಟೆನ್ಸಿ ಅನ್ನು ಒದಗಿಸುತ್ತದೆ.
qcow2
qcow2 ಚಿತ್ರಿಕೆಯ ವಿನ್ಯಾಸವು ಈಗ ಮೆಟಾಡೇಟವನ್ನು ಶೇಖರಿಸಿಡುವುದನ್ನು ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ಹೊರಗಿನ qcow2 ಚಿತ್ರಿಕೆಗಳನ್ನು ಬಳಸಿಕೊಂಡು ಲೈವ್ ಸ್ನ್ಯಾಪ್‌ಶಾಟ್‌ಗಳಿಗೆ ಬೆಂಬಲವನ್ನು ಸೇರಿಸಲಾಗಿದೆ.
ಖಂಡ I/O ಲೇಟೆನ್ಸಿ ಸುಧಾರಣೆಗಳು
ioeventfd ಈಗ ಲಭ್ಯವಿದ್ದು, ಇದು ಖಂಡ I/O ಬಗೆಗೆ ವೇಗವಾದ ಸೂಚನೆಯನ್ನು ಒದಗಿಸುತ್ತದೆ.
ಕರ್ನಲ್ ಸೇಮ್‌ಪೇಜ್ ಮರ್ಜಿಂಗ್ (KSM)
Red Hat Enterprise Linux 6 ರಲ್ಲಿನ KVM ನಲ್ಲಿ ಕರ್ನಲ್ ಸೇಮ್‌ಪೇಜ್ ಮರ್ಜಿಂಗ್ (KSM) ಅನ್ನು ಸೇರಿಸಲಾಗಿದ್ದು, ಇದು KVM ಅತಿಥಿಗಳು ಒಂದೆ ಬಗೆಯ ಮೆಮೊರಿ ಪೇಜ್‌ಗಳನ್ನು ಹಂಚಿಕೊಳ್ಳಲು ನೆರವಾತ್ತದೆ. ಪೇಜ್ ಹಂಚಿಕೆ ಮಾಡುವುದರಿಂದ ಮೆಮೊರಿಯ ನಕಲು ಪ್ರತಿಯನ್ನು ಮಾಡುವಿಕೆಯನ್ನು ಕಡಿಮೆ, ಇದರಿಂದಾಗಿ ಒಂದೆ ಆತಿಥೇಯದಲ್ಲಿ ಹೆಚ್ಚು ಅತಿಥಿ ಕಾರ್ಯವ್ಯವಸ್ಥೆಗಳನ್ನು ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಚಲಾಯಿಸಲು ಅನುವು ಮಾಡಿಕೊಡುತ್ತದೆ.
Red Hat Enterprise Linux 6.1 ರಲ್ಲಿನ KSM ಗೆ Transparent HugePage ಬಗ್ಗೆ ಅರಿವಿರುತ್ತದೆ. KSM ಗೆ ಹ್ಯೂಜ್‌ಪೇಜ್‌ಗಳ ಒಳಗಿರುವ ಸಬ್‌ಪೇಜ್‌ಗಳನ್ನು ಸ್ಕ್ಯಾನ್ ಮಾಡುವ ಹಾಗು ಒಗ್ಗೂಡಿಸುವ ಸಾಧ್ಯತೆ ಇದ್ದಾಗ ಅದನ್ನು ವಿಂಗಡಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಹೆಚ್ಚುವರಿಯಾಗಿ, KSM ಶಕ್ತಗೊಳಿಕೆಯನ್ನು ಈಗ ಪ್ರತಿ-VM ಆಧಾರದಲ್ಲಿ ನಿಯಂತ್ರಿಸುವ ಸಾಧ್ಯತೆ ಇರುತ್ತದೆ.
PCI ಸಾಧನ ನಿಯೋಜನೆ ಸುಧಾರಣೆಗಳು
PCI ಸಂರಚನೆ ಸ್ಥಳದ ನಿಲುಕಣೆಯನ್ನು ಸುಧಾರಿಸಲಾಗಿದ್ದು, ಇದು ಅತಿಥಿ VM ಗಳಿಗಾಗಿ ನಿಯೋಜಿಸಲಾದ ಸಾಧನವಾಗುವಂತೆ ಒಂದು ದೊಡ್ಡ ವ್ಯಾಪ್ತಿಯ PCI ಸಾಧನಗಳನ್ನು ಶಕ್ತಗೊಳಿಸುತ್ತದೆ.
KVMClock ಸುಧಾರಣೆಗಳು
Red Hat Enterprise Linux 6.1 ರಲ್ಲಿ, ಟೈಮ್ ಸ್ಟ್ಯಾಂಪ್ ಕೌಂಟರ್ (TSC) ಮೇಳೈಕೆಯು ಈಗ ಆತಿಥೇಯ ಬೂಟ್ ಆದಾಗ ಅಥವ ಒಂದು ಆತಿಥೇಯ CPU ಅನ್ನು ಹಾಟ್-ಪ್ಲಗ್ ಮಾಡಿದಾಗ ಸ್ವಯಂಚಾಲಿತವಾಗಿ ಪತ್ತೆ ಮಾಡಲು ಸಾಧ್ಯವಿರುತ್ತದೆ. ಹೆಚ್ಚುವರಿಯಾಗಿ, TSC ಮೇಳೈಕೆಯನ್ನು ಒಂದು ಲೈವ್ ವರ್ಗಾವಣೆಯ ನಂತರ ಸರಿಹೊಂದಿಸಲು ಸಾಧ್ಯವಿರುತ್ತದೆ.
QEMU ಮೇಲ್ವಿಚಾರಕ
ಹೆಚ್ಚುವರಿಯಾಗಿ, ಹೊಸ drive_del ಆಜ್ಞೆಯು ಒಂದು ಆತಿಥೇಯದಿಂದ ಖಂಡ ಸಾಧನವನ್ನು ಸುರಕ್ಷಿತವಾಗಿ ತೆಗೆಯಲು libvirt ಅನುವು ಮಾಡಿಕೊಡುತ್ತದೆ.
ಸಾಮಾನ್ಯ ಅಪ್‌ಡೇಟ್‌ಗಳು ಹಾಗು ಸುಧಾರಣೆಗಳು
qemu-kvm ನ ಗರಿಷ್ಟ ರೆಸಲ್ಯೂಶನ್ ಈಗ 2560x1600 ಪಿಕ್ಸೆಲ್‌ಗಳಾಗಿದೆ
Red Hat Enterprise Linux 6.1 ರಲ್ಲಿ ಅನುಕರಿಸಲಾದ (ಎಮ್ಯೂಲೆಟೆಡ್) Intel HDA ಧ್ವನಿ ಕಾರ್ಡುಗಳನ್ನು ಎಲ್ಲಾ ಆತಿಥೇಯಗಳಿಗಾಗಿ ದೊರೆಯುವಂತೆ ಮಾಡುವ ಸಾಮರ್ಥ್ಯವನ್ನು ಸೇರಿಸಲಾಗಿದೆ. ಈ ಅಪ್‌ಡೇಟ್ Windows 7 ನ 64-ಬಿಟ್ ಆವೃತ್ತಿಯನ್ನೂ ಸಹ ಸೇರಿದಂತೆ ಹಲವು ಅತಿಥಿಗಳಿಗಾಗಿ ಸ್ಥಳೀಯ ಧ್ವನಿ ಬೆಂಬಲವನ್ನು ಶಕ್ತಗೊಳಿಸುತ್ತದೆ
QEMU char ಸಾಧನದ ಹರಿವಿನ ನಿಯಂತ್ರಣವನ್ನು ಶಕ್ತಗೊಳಿಸಲಾಗಿದೆ
ಮೆಸೇಜ್ ಸಿಗ್ನಲ್ಡ್ ಇಂಟರಪ್ಟ್ಸ್ (MSI) ಅನ್ನು win-virtio-blk ಚಾಲಕಕ್ಕಾಗಿ ಅನ್ವಯಿಸಲಾಗಿದೆ
ಅತಿಥಿಯ ಬೂಟ್ ಸಾಧನಗಳನ್ನು ಆಯ್ಕೆ ಮಾಡಲು ಅಥವ ಆದ್ಯತೆ ನೀಡಲು ಒಂದು ಹೊಸತಾದ ಶಿಷ್ಟ ಸಂಪರ್ಕಸಾಧನ
ಲೈವ್ ವರ್ಗಾವಣೆಯ ಸಂದರ್ಭದ ಸಮಯದಲ್ಲಿನ ಸ್ಥಿರತೆಯಲ್ಲಿ ಸುಧಾರಣೆಗಳು
QEMU ಬಳಕೆದಾರಸ್ಥಳದ ಸ್ಥಿರತೆ ಪತ್ತೆ
ವರ್ಚುವಲ್ ಡಿಸ್ಕ್ ಆನ್‌ಲೈನ್ ಡೈನಮಿಕ್ ಗಾತ್ರ ಬದಲಾವಣೆ ಸವಲತ್ತು
gpu, pci ಬಸ್ ನಿಯಂತ್ರಕ, isa ಬಸ್ ನಿಯಂತ್ರಕದಂತಹ ಮಹತ್ವದ ಸಾಧನಗಳನ್ನು pci ಹಾಟ್ ಅನ್‌ಪ್ಲಗ್ ಮಾಡುವುದನ್ನು ನಿರ್ಬಂಧಿಸಿ
11. ಎಂಟೈಟಲ್ಮೆಂಟ್
Red Hat ಚಂದಾದಾರ ವ್ಯವಸ್ಥಾಪಕ ಹಾಗು ಎಂಟೈಟಲ್ಮೆಂಟ್ ಪ್ಲಾಟ್‌ಫಾರ್ಮ್
ತಂತ್ರಾಂಶ ಹಾಗು ಮೂಲ ಸೌಕರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಂತ್ರಾಂಶ ಪಟ್ಟಿಯನ್ನು ನಿಭಾಯಿಸುವ ಒಂದು ವ್ಯವಸ್ಥೆಯ ಅಗತ್ಯವಿರುತ್ತದೆ — ಉತ್ಪನ್ನಗಳ ಬಗೆ ಹಾಗು ತಂತ್ರಾಂಶವನ್ನು ಅನುಸ್ಥಾಪಿಸಲಾದ ವ್ಯವಸ್ಥೆಗಳ ಸಂಖ್ಯೆ ಎರಡೂ. Red Hat Enterprise Linux 6.1 ರ ಜೊತೆಗೆ, Red Hat ಒಂದು ಹೊಸ ಎಂಟೈಟಲ್ಮೆಂಟ್ ಪ್ಲಾಟ್‌ಫಾರ್ಮ್ ಎಂಬ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ, ಇದು ಒಂದು ಸಂಸ್ಥೆಗಾಗಿನ ತಂತ್ರಾಂಶ ಎಂಟೈಟಲ್ಮೆಂಟ್ ಹಾಗು ಹೆಚ್ಚು ಪರಿಣಾಮಕಾರಿಯಾದ ಕಂಟೆಂಟ್ ಡೆಲಿವರಿಯ ಸ್ಥೂಲ ಪರಿಚಯವನ್ನು ಒದಗಿಸುತ್ತದೆ. ಸ್ಥಳೀಯ ವ್ಯವಸ್ಥೆಗಳಲ್ಲಿ, ಹೊಸ Red Hat ಚಂದಾದಾರಿಕೆ ವ್ಯವಸ್ಥಾಪಕವು ಸ್ಥಳೀಯ ವ್ಯವಸ್ಥೆಯನ್ನು ಮತ್ತು ಅದಕ್ಕಾಗಿ ನಿಯೋಜಿಸಲಾದ ಚಂದಾದಾರಿಕೆಗಳನ್ನು ನಿರ್ವಹಿಸಲು GUI ಹಾಗು ಆಜ್ಞಾ-ಸಾಲಿನ ಉಪಕರಣಗಳನ್ನು ಒದಗಿಸುತ್ತದೆ. ಚಂದಾದಾರಿಕೆಗಳನ್ನು ನಿಭಾಯಿಸುವ ಒಂದು ಉತ್ತಮ ವಿಧಾನದಿಂದಾಗಿ ನಮ್ಮ ಗ್ರಾಹಕರಿಗೆ ತಮ್ಮ ತಂತ್ರಾಂಶ ಅನುವರ್ತನೆಯನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ ಹಾಗು Red Hat ಉತ್ಪನ್ನಗಳನ್ನು ಅನುಸ್ಥಾಪಿಸಲು ಮತ್ತು ಅಪ್‌ಡೇಟ್ ಮಾಡುವ ಕಾರ್ಯವನ್ನು ಸರಳವಾಗಿಸುತ್ತದೆ.
Red Hat Enterprise Linux 6 ರಲ್ಲಿ ಹೊಸ ಸ್ವಯಂಚಾಲಿತ ದೋಷ ವರದಿ ಮಾಡುವ ಉಪಕರಣವನ್ನು (ABRT) ಪರಿಚಯಿಸಲಾಗುತ್ತಿದೆ. ABRT ಯು ತಂತ್ರಾಂಶಗಳು ಕುಸಿದು ಹೋದಲ್ಲಿ ಅದರ ವಿವರಗಳನ್ನು ಸ್ಥಳೀಯ ವ್ಯವಸ್ಥೆಯಲ್ಲಿ ದಾಖಲಿಸುತ್ತದೆ, ಹಾಗು ಈ ತೊಂದರೆಗಳನ್ನು Red Hat ಬೆಂಬಲ ತಂಡಕ್ಕೆ ವರದಿ ಮಾಡಲು ಸಂಪರ್ಕಸಾಧನಗಳನ್ನು (ಚಿತ್ರಾತ್ಮಕ ಹಾಗು ಆಜ್ಞಾ ಸಾಲಿನ) ಒದಗಿಸುತ್ತದೆ. Red Hat Enterprise Linux 6.1 ರಲ್ಲಿ, ABRT ಅನ್ನು 1.1.16 ಕ್ಕೆ ಅಪ್‌ಡೇಟ್ ಮಾಡಲಾಗಿದೆ. ಈ ಅಪ್‌ಡೇಟ್ ಹಲವು ದೋಷ ಪರಿಹಾರಗಳು ಹಾಗು ಸುಧಾರಣೆಗಳ ಜೊತೆಗೆ ಒಂದು ಸುಧಾರಿತ ಚಿತ್ರಾತ್ಮಕ ಸಂಪರ್ಕ ಸಾಧನವನ್ನು (GUI) ಒದಗಿಸುತ್ತದೆ.
openCryptoki
openCryptoki ಯು IBM ಕ್ರಿಪ್ಟೊಕಾರ್ಡುಗಳಿಗಾಗಿ ಅನ್ವಯಿಸಲಾದ PKCS#11 API ನ ಆವೃತ್ತಿ 2.11 ಅನ್ನು ಹೊಂದಿದೆ. openCryptoki ಅನ್ನು Red Hat Enterprise Linux 6.1 ರಲ್ಲಿ ಅಪ್‌ಡೇಟ್ ಮಾಡಲಾಗಿದೆ, ಇದು ಒಟ್ಟಾರೆ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸುವುದರ ಜೊತೆಗೆ ಹಲವಾರು ದೋಷ ಪರಿಹಾರಗಳು ಹಾಗು ಸುಧಾರಣೆಗಳನ್ನು ಒದಗಿಸುತ್ತದೆ.
OpenLDAP
OpenLDAP ಎನ್ನುವುದು ಲೈಟ್‌ವೇಟ್ ಡಿರಕ್ಟರಿ ಎಕ್ಸೆಸ್ ಪ್ರೊಟೊಕಾಲ್ (LDAP) ಅನ್ವಯಗಳು ಹಾಗು ವಿಕಸನಾ ಉಪಕರಣಗಳ ಒಂದು ಮುಕ್ತ ತಂತ್ರಾಂಶ ಸೂಟ್ ಆಗಿದೆ. Red Hat Enterprise Linux 6.1 ರಲ್ಲಿನ OpenLDAP ಅನ್ನು ಆವೃತ್ತಿ 2.4.23 ಗೆ ಅಪ್‌ಡೇಟ್ ಮಾಡಲಾಗಿದೆ. ಅಪ್‌ಡೇಟ್ ಮಾಡಲಾದ OpenLDAP ಈಗ OpenSSL ಬದಲಿಗೆ ನೆಟ್‌ವರ್ಕ್ ಸೆಕ್ಯುರಿಟಿ ಸರ್ವಿಸಸ್ (NSS) ಕ್ರಿಪ್ಟೊಗ್ರಾಫಿಕ್ ಲೈಬ್ರರಿಗಳನ್ನು ಬಳಸಿಕೊಳ್ಳುತ್ತದೆ.
TigerVNC
TigerVNC ವರ್ಚುವಲ್ ನೆಟ್‌ವರ್ಕ್ ಕಂಪ್ಯೂಟಿಂಗ್‌ಗಾಗಿ (VNC) ಕ್ಲೈಂಟ್ ಹಾಗು ಪರಿಚಾರಕ ತಂತ್ರಾಂಶವನ್ನು ಒದಗಿಸುತ್ತದೆ. VNC ಎನ್ನುವುದು ದೂರಸ್ಥ ಪ್ರದರ್ಶಕ ವ್ಯವಸ್ಥೆಯಾಗಿದ್ದು, ಇದು ಒಂದು ಜಾಲಬಂಧ ಸಂಪರ್ಕದ ಮೂಲಕ ಬಳಕೆದಾರರು ಒಂದು ಗಣಕದ ತೆರೆಯನ್ನು ನೋಡಲು ಅನುವು ಮಾಡಿಕೊಡುತ್ತದೆ.TigerVNC ಅನ್ನು ಆವೃತ್ತಿ 1.1.0 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ಹಲವಾರು ದೋಷ ಪರಿಹಾರಗಳು ಹಾಗು ಸುಧಾರಿತ ಗೂಢಲಿಪೀಕರಣ ಬೆಂಬಲವನ್ನು ಒದಗಿಸುತ್ತದೆ.
ಟ್ಯೂನ್ಡ್
ಟ್ಯೂನ್ಡ್ ಎನ್ನುವುದು ವ್ಯವಸ್ಥೆಯನ್ನು ಟ್ಯೂನ್ ಮಾಡುವ ಡೀಮನ್ ಆಗಿದ್ದು ಇದು ವ್ಯವಸ್ಥೆಯ ಘಟಕಗಳನ್ನು ನೋಡಿಕೊಳ್ಳುತ್ತದೆ ಹಾಗು ವ್ಯವಸ್ಥೆಯ ಸಿದ್ಧತೆಗಳನ್ನು ಕ್ರಿಯಾತ್ಮಕವಾಗಿ ಟ್ಯೂನ್ ಮಾಡುತ್ತದೆ. ktune (ವ್ಯವಸ್ಥೆಯನ್ನು ಟ್ಯೂನ್ ಮಾಡುವ ಸ್ಥಾಯಿ ವ್ಯವಸ್ಥೆ) ಅನ್ನು ಬಳಸಿಕೊಂಡು, ಟ್ಯೂನ್ಡ್ ಸಾಧನಗಳನ್ನು (ಉದಾ. ಹಾರ್ಡ್ ಡಿಸ್ಕ್ ಡ್ರೈವ್‌ಗಳು ಹಾಗು ಇತರ್ನೆಟ್ ಸಾಧನಗಳು) ನೋಡಿಕೊಳ್ಳಬಲ್ಲದು ಹಾಗು ಟ್ಯೂನ್ ಮಾಡಬಲ್ಲದು. Red Hat Enterprise Linux 6.1 ರಲ್ಲಿ,ಟ್ಯೂನ್ಡ್ ಟ್ಯೂನ್ ಮಾಡುವ ಪ್ರೊಫೈಲ್‌ಗಳು ಈಗ s390x ಅರ್ಕಿಟೆಕ್ಚರುಗಳಿಗೆ ಬೆಂಬಲವನ್ನು ಹೊಂದಿರುತ್ತದೆ.
A. ಪುನರಾವರ್ತನೆಯ ಇತಿಹಾಸ
ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1-0
Tue Mar 22 2011
RyanLerch
Red Hat Enterprise Linux 6.1 ಬಿಡುಗಡೆ ಟಿಪ್ಪಣಿಗಳ ಆರಂಭಿಕ ಆವೃತ್ತಿ