Product SiteDocumentation Site

Red Hat Enterprise Linux 6

Release Notes

Red Hat Enterprise Linux 6.2 ಕ್ಕಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 2


Legal Notice

Copyright © 2011 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.


1801 Varsity Drive
 RaleighNC 27606-2072 USA
 Phone: +1 919 754 3700
 Phone: 888 733 4281
 Fax: +1 919 754 3701

ಸಾರಾಂಶ
Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 6.2 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಕಿರು ಬಿಡುಗಡೆಯಲ್ಲಿ ಮಾಡಲಾದ ವಿವರಣೆಗಳಿಗಾಗಿ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.

ಮುನ್ನುಡಿ
1. ಯಂತ್ರಾಂಶ ಬೆಂಬಲ
2. ಅನುಸ್ಥಾಪನೆ
3. ಕರ್ನಲ್
4. ಸಂಪನ್ಮೂಲ ವ್ಯವಸ್ಥಾಪನೆ
5. ಸಾಧನದ ಚಾಲಕಗಳು
6. ಶೇಖರಣೆ
7. ಕಡತ ವ್ಯವಸ್ಥೆ
8. ಜಾಲಬಂಧ
9. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ
10. ಎಂಟೈಟಲ್ಮೆಂಟ್
11. ಸುರಕ್ಷತೆ, ಶಿಷ್ಟತೆ ಹಾಗು ಪ್ರಮಾಣೀಕರಣ
12. ಕಂಪೈಲರ್ ಹಾಗು ಉಪಕರಣಗಳು
13. ಕ್ಲಸ್ಟರಿಂಗ್
14. ಹೈ ಅವೈಲೆಬಿಲಿಟಿ
15. ವರ್ಚುವಲೈಸೇಶನ್
16. ಗ್ರಾಫಿಕ್ಸ್‍
17. ಸಾಮಾನ್ಯ ಅಪ್‌ಡೇಟ್‌ಗಳು
A. ಘಟಕದ ಆವೃತ್ತಿಗಳು
B. ಪರಿಷ್ಕರಣ ಇತಿಹಾಸ

ಮುನ್ನುಡಿ

Red Hat Enterprise Linux 6.2 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. Red Hat Enterprise Linux ನ 6.2 ರ ಅಪ್‌ಡೇಟ್‌ನಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ

ಸೂಚನೆ

Red Hat Enterprise Linux 6.2 ರ ಅತ್ಯಂತ ಇತ್ತೀಚಿನ ಬಿಡುಗಡೆ ಟಿಪ್ಪಣಿಗಳ ಬೀಟಾ ಆವೃತ್ತಿಗಾಗಿ Online Release Notes ಅನ್ನು ನೋಡಿ.

ಅಧ್ಯಾಯ 1. ಯಂತ್ರಾಂಶ ಬೆಂಬಲ

biosdevname
biosdevname ಪ್ಯಾಕೇಜನ್ನು ಆವೃತ್ತಿ 0.3.8 ಕ್ಕೆ ನವೀಕರಿಸಲಾಗಿದ್ದು, ಇದು --smbios ಹಾಗು --nopirq ಆಜ್ಞಾ ಸಾಲಿನ ನಿಯತಾಂಕಗಳನ್ನು ಒದಗಿಸುತ್ತದೆ. ಈ ಆಜ್ಞಾ ಸಾಲಿನ ನಿಯತಾಂಕಗಳೊಂದಿಗೆ, ಈ ಸಂಕೇತಮಾರ್ಗಗಳನ್ನು (ಕೋಡ್‌ಪಾತ್ಸ್‍ ) ತೆಗೆದುಹಾಕಲಾದ ಆಕರ ಸಂಕೇತದ ತೇಪೆಗಳನ್ನು ನಿರ್ಮಾಣ ಪ್ರಕ್ರಿಯೆಯಿಂದ ತೆಗೆದುಹಾಕಲು ಸಾಧ್ಯವಿರುತ್ತದೆ.

ಅಧ್ಯಾಯ 2. ಅನುಸ್ಥಾಪನೆ

ಅನುಸ್ಥಾಪನೆಯ ಸಮಯದಲ್ಲಿ WWIDಗಳನ್ನು ಬಳಸಿಕೊಂಡು ಸಾಧನವನ್ನು ಗುರುತಿಸುವಿಕೆ
ಸ್ವಯಂಚಾಲಿತ ಅನುಸ್ಥಾಪನೆಗಳಿಗಾಗಿ Fibre Channel ಹಾಗು Serial Attach SCSI (SAS) ಸಾಧನಗಳನ್ನು ಈಗ ಒಂದು World Wide Name (WWN) ಅಥವ World Wide Identifier (WWID) ಇಂದ ಈಗ ಸೂಚಿಸಲು ಸಾಧ್ಯವಿರುತ್ತದೆ. WWN ಎನ್ನುವುದು IEEE ಶಿಷ್ಟತೆಯು ಒಂದು ಭಾಗವಾಗಿದ್ದು, ಇದು Storage Area Networks (SAN) ಹಾಗು ಇತರೆ ಸುಧಾರಿತ ಜಾಲಬಂಧ ಟೊಪೊಲಜಿಗಳನ್ನು ಬಳಸುವ ಬಳಕೆದಾರರಿಗಾಗಿ ಅನುಸ್ಥಾಪನಾ ಸಮಯದಲ್ಲಿ ಶೇಖರಣಾ ಸಾಧನವನ್ನು ಗುರುತಿಸುವುದನ್ನು ಸುಲಭಗೊಳಿಸುತ್ತದೆ. ಶೇಖರಣಾ ಸಾಧನವನ್ನು ರಿಡಂಡೆನ್ಸಿ ಅಥವ ಸುಧಾರಿತ ಕಾರ್ಯನಿರ್ವಹಣೆಗಾಗಿ ಅನೇಕ ಭೌತಿಕ ಮಾರ್ಗಗಳನ್ನು ಬಳಸಿಕೊಂಡು ಒಂದು ಪರಿಚಾರಕಕ್ಕೆ ಲಗತ್ತಿಸಿದಾಗ, ಯಾವುದೆ ಮಾರ್ಗಗಳಿಗಾಗಿನ WWN ಬಳಸಿಕೊಂಡು ಸಾಧನವನ್ನು ಗುರುತಿಸಲು ಸಾಧ್ಯವಿರುತ್ತದೆ.
BIOS ನೊಂದಿಗೆ 2.2 TB ಗಿಂತಲೂ ದೊಡ್ಡದಾದ ವಿಭಾಗಗಳಿಗಾಗಿ ಬೆಂಬಲ
ಅನುಸ್ಥಾಪನೆಗಳನ್ನು ಈಗ ಹೊಸ GUID Partition Table (GPT) ಅನ್ನು ಬೆಂಬಲಿಸುವ ಆಯ್ದ BIOS ಅನ್ನು ಬಳಸಿಕೊಂಡು 2.2 TB ಗಿಂತಲೂ ದೊಡ್ಡದಾದ ಹಾರ್ಡ್ ಡ್ರೈವ್ ವಿಭಾಗಗಳಿಂದ ಬೂಟ್ ಮಾಡಲಾಗುವಂತೆ ಸಂರಚಿಸಬಹುದಾಗಿರುತ್ತದೆ. ಸಾಂಪ್ರದಾಯಿಕ BIOS ಅನ್ವಯಿಸುವಿಕೆಯಲ್ಲಿ ಹೊಸದಾದ Unified Extensible Firmware Interface (UEFI) ಅನ್ನು ಬಳಸದೆ ಇರುವ ವ್ಯವಸ್ಥೆಗಳಲ್ಲಿ ಈ ಹಿಂದೆ ದೊಡ್ಡದಾದ ವಿಭಾಗಗಳನ್ನು ಬಳಸುವ ಸಾಮರ್ಥ್ಯಕ್ಕೆ ಮಿತಿ ಇರುತ್ತಿತ್ತು.
ಆರಂಭಿಕ ramdisk ಕಡತ
64-bit PowerPC ಹಾಗು 64-bit IBM POWER Series ವ್ಯವಸ್ಥೆಗಳಲ್ಲಿನ ಆರಂಭಿಕ ramdisk ಕಡತವನ್ನು ಈಗ initrd.img ಎಂದು ಹೆಸರಿಸಲಾಗಿರುತ್ತದೆ. ಹಿಂದಿನ ಬಿಡುಗಡೆಯಲ್ಲಿ, ಅದನ್ನು ramdisk.image.gz ಎಂದು ಹೆಸರಿಸಲಾಗಿತ್ತು.
ಜಾಲಬಂಧ ಅನುಸ್ಥಾಪನೆಗಾಗಿ ಸ್ಥಿರ IPv6 ವಿಳಾಸದ ಬೆಂಬಲ
Red Hat Enterprise Linux 6.2 ರಲ್ಲಿ, ಜಾಲಬಂಧ ಅನುಸ್ಥಾಪನೆಗಳಿಗಾಗಿನ ಒಂದು ಸ್ಥಿರ IPv6 ವಿಳಾಸವನ್ನು ipv6 ಬೂಟ್ ಆಯ್ಕೆಯೊಂದಿಗೆ ಸೂಚಿಸಬಹುದಾಗಿರುತ್ತದೆ. ಸೂಚಿಸಲಾದ ವಿಳಾಸವು ಈ ಕೆಳಗಿನ ರೂಪದಲ್ಲಿ ಇರಬೇಕು:
<IPv6 address>[/<prefix length>]
ಮಾನ್ಯವಾದ IPv6 ವಿಳಾಸದ ಒಂದು ಉದಾಹರಣೆಯು 3ffe:ffff:0:1::1/128 ಆಗಿರುತ್ತದೆ. ಪೂರ್ವಪ್ರತ್ಯಯವನ್ನು ಕಡೆಗಣಿಸಿದಲ್ಲಿ, 64 ರ ಮೌಲ್ಯವನ್ನು ಊಹಿಸಿಕೊಳ್ಳಲಾಗುತ್ತದೆ. ipv6 ಬೂಟ್‌ ಆಯ್ಕೆಗಾಗಿ ಒಂದು ಸ್ಥಿರವಾದ IPv6 ವಿಳಾಸವನ್ನು ಸೂಚಿಸುವುದರಿಂದ ipv6 ಬೂಟ್‌ ಆಯ್ಕೆಗಾಗಿ ಸೂಚಿಸಲಾಗುವ ಈಗಾಗಲೆ ಇರುವ dhcp ಹಾಗು auto ನಿಯತಾಂಕಗಳಿಗೆ ಮನ್ನಣೆ ನೀಡಿದಂತಾಗುತ್ತದೆ.

ಅಧ್ಯಾಯ 3. ಕರ್ನಲ್

Red Hat Enterprise Linux 6.2 ರೊಂದಿಗೆ ಒದಗಿಸಲಾಗಿರುವ ಕರ್ನಲ್‌ನಲ್ಲಿ ಅದಕ್ಕೆ ಅನ್ವಯಿಸಲಾಗಿರುವ ನೂರಾರು ದೋಷ ನಿವಾರಣೆಗಳು ಹಾಗು ಸುಧಾರಣೆಗಳನ್ನು ಒದಗಿಸಲಾಗಿರುತ್ತದೆ. ಪ್ರತಿಯೊಂದು ದೋಷ ನಿವಾರಣೆಗಳು ಹಾಗು ಕರ್ನಲ್‌ಗೆ ಮಾಡಲಾದ ಪ್ರತಿಯೊಂದು ಸುಧಾರಣೆಗಳ ಕುರಿತಾದ ವಿವರಗಳಿಗಾಗಿ Red Hat Enterprise Linux ನ 6.2 ರ ಬೀಟಾ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ
ಹೆಚ್ಚುವರಿ ಕಡತ ವ್ಯವಸ್ಥೆಗಳಲ್ಲಿ kexec kdump ಬೆಂಬಲ
Kdump (ಒಂದು kexec-ಆಧರಿತವಾದ ಕುಸಿತ ಡಂಪಿಂಗ್ ವ್ಯವಸ್ಥೆ) ಈಗ Red Hat Enterprise Linux 6 ರಲ್ಲಿನ ಈ ಕೆಳಗಿನ ಕಡತ ವ್ಯವಸ್ಥೆಗಳಿಗಾಗಿ ಕೋರ್ ಅನ್ನು ಡಂಪ್ ಮಾಡುವುದನ್ನು ಬೆಂಬಲಿಸುತ್ತದೆ:
  • Btrfs (ಈ ಕಡತವ್ಯವಸ್ಥೆಯು ಒಂದು ತಂತ್ರಜ್ಞಾನ ಮುನ್ನೋಟವಾಗಿರುತ್ತದೆ)
  • ext4
  • XFS (XFS ಒಂದು ಲೇಯರ್ ಉತ್ಪನ್ನವಾಗಿರುತ್ತದೆ ಹಾಗು ಈ ಸವಲತ್ತನ್ನು ಶಕ್ತಗೊಳಿಸಲು ಅದನ್ನು ಅನುಸ್ಥಾಪಿಸಬೇಕಾಗುತ್ತದೆ)
pkgtemp ಅನ್ನು coretemp ನೊಂದಿಗೆ ವಿಲೀನಗೊಳಿಸಲಾಗಿದೆ
pkgtemp ಮಾಡ್ಯೂಲ್ ಅನ್ನು coretemp ಮಾಡ್ಯೂಲ್‌ನೊಂದಿಗೆ ವಿಲೀನಗೊಳಿಸಲಾಗಿದೆ. pkgtemp ಮಾಡ್ಯೂಲ್ ಅನ್ನು ತೆಗೆದುಹಾಕಲಾಗಿದೆ. coretemp ಮಾಡ್ಯೂಲ್ ಈ ಹಿಂದೆ ಬೆಂಬಲಿಸಲಾಗುತ್ತಿರುವ ಎಲ್ಲಾ ಸವಲತ್ತುಗಳ ಜೊತೆಗೆ pkgtemp ಮಾಡ್ಯೂಲ್‌ನಿಂದ ಬೆಂಬಲಿಸಲಾಗುವ ಸವಲತ್ತುಗಳನ್ನೂ ಸಹ ಬೆಂಬಲಿಸುತ್ತದೆ.
coretemp ಈ ಹಿಂದೆ ಪ್ರತಿ ಕೋರ್ ಉಷ್ಣತೆಗಳನ್ನು ಮಾತ್ರ ಒದಗಿಸುತ್ತಿತ್ತು, ಹಾಗು pkgtemp ಮಾಡ್ಯೂಲ್‌ ಅನ್ನು CPU ಪ್ಯಾಕೇಜ್‌ನ ಉಷ್ಣತೆಗಳನ್ನು ಒದಗಿಸುತ್ತಿತ್ತು. Red Hat Enterprise Linux 6.2 ರಲ್ಲಿ, coretemp ಮಾಡ್ಯೂಲ್ ಕೋರುಗಳ, ಅನ್‌ಕೋರ್, ಹಾಗು ಪ್ಯಾಕೇಜಿನ ಉಷ್ಣತೆಗಳನ್ನು ಓದಲು ನಿಮಗೆ ಅನುವು ಮಾಡಿಕೊಡುತ್ತದೆ.
ಈ ಮಾಡ್ಯೂಲ್‌ಗಳಲ್ಲಿ ಒಂದನ್ನು ಬಳಸಿಕೊಂಡು ಯಾವುದೆ ಸ್ಕ್ರಿಪ್ಟುಗಳನ್ನು ಸರಿಹೊಂದಿಸುವಂತೆ ಸಲಹೆ ಮಾಡಲಾಗುತ್ತದೆ.
SCSI ಚಾಲಕ queuecommand ಕ್ರಿಯೆಗಳಲ್ಲಿ ಬಂಧರಹಿತವಾಗಿ (ಲಾಕ್‌ಲೆಸ್) ರವಾನಿಸುವಿಕೆ
Red Hat Enterprise Linux 6.2 ರಲ್ಲಿ, SCSI ಚಾಲಕ queuecommand ಕ್ರಿಯೆಗಳ ಐಚ್ಛಿಕ ಬಂಧರಹಿತ (ಲಾಕ್‌ಲೆಸ್) ರವಾನಿಸುವಿಕೆಯನ್ನು SCSI ಮಿಡ್‌ಲೇಯರ್ ಬೆಂಬಲಿಸುತ್ತದೆ.
ಇದು ಅಪ್‌ಸ್ಟ್ರೀಮ್‌ SCSI ಲಾಕ್ ಕೆಳತಳ್ಳುವ ಸಲ್ಲಿಸುವಿಕೆಯ ಬ್ಯಾಕ್‌ಪೋರ್ಟ್ ಆಗಿರುತ್ತದೆ. Red Hat Enterprise Linux 6.0 ಹಾಗು Red Hat Enterprise Linux 6.1 ರೊಂದಿಗಿನ ಬೈನರಿ ಹೊಂದಾಣಿಕೆಯನ್ನು ಬ್ಯಾಕ್‌ಪೋರ್ಟ್ ಉಳಿಸಿಕೊಳ್ಳುತ್ತದೆ. ಬೈನರಿ ಹೊಂದಾಣಿಕೆಯನ್ನು ಉಳಿಸಿಕೊಳ್ಳಲು ಸಮಾನಾಂತರವಾದ ಅಪ್‌ಸ್ಟ್ರೀಮ್ SCSI ಲಾಕ್ ಕೆಳತಳ್ಳುವ ವ್ಯವಸ್ಥೆಯಿಂದ ಕವಲಾಗಿಸುವ ಅಗತ್ಯವಿರುತ್ತದೆ.
ಈ ಹಿಂದೆ scsi_host_template ರಚನೆಯಲ್ಲಿ ಬಳಸದೆ ಇದ್ದ ಫ್ಲಾಗ್‌ ಅನ್ನು ಚಾಲಕ queuecommand ಅನ್ನು SCSI ಆತಿಥೇಯ ಬಸ್ ಲಾಕ್ ಅನ್ನು ಹಿಡಿಯದೆ ರವಾನಿಸಲಾಗುತ್ತದೆ ಎನ್ನುವ ಸೂಚನೆಯನ್ನು SCSI ಗೆ ಕಳುಹಿಸಲು SCSI ಚಾಲಕದಿಂದ ಬಳಸಲಾಗುತ್ತದೆ.
queuecommand ರವಾನೆಯ ಸಮಯದಲ್ಲಿ Scsi_Host ಲಾಕ್‌ನ ಅನ್ನು ಹಿಡಿದುಕೊಳ್ಳುವುದು ಪೂರ್ವನಿಯೋಜಿತ ವರ್ತನೆಯಾಗಿರುತ್ತದೆ. scsi_host_allocನ ಮೊದಲು scsi_host_template ಲಾಕ್‌ಲೆಸ್‌ ಬಿಟ್ ಅನ್ನು ಹೊಂದಿಸುವುದರಿಂದ Scsi_Host ಲಾಕ್ ಅನ್ನು ಹಿಡಿಯದೆ queuecommand ಕ್ರಿಯೆಯನ್ನು ರವಾನಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಅಗತ್ಯವಿರುವ ಯಾವುದೆ ಲಾಕ್ ಸಂರಕ್ಷಣೆಗಾಗಿನ ಜವಾಬ್ದಾರಿಯನ್ನು ಚಾಲಕ queuecommand ಸಂಕೇತದ ಮಾರ್ಗದಲ್ಲಿ ಕೆಳಗೆ ತಳ್ಳಲಾಗುತ್ತದೆ.
Red Hat Enterprise Linux 6.2 ರಲ್ಲಿ ಲಾಕ್‌ಲೆಸ್‌ queuecommand ಅನ್ನು ಬಳಸುವಂತೆ ಅಪ್‌ಡೇಟ ಮಾಡಲಾದ SCSI ಚಾಲಕಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
  • iscsi_iser
  • be2iscsi
  • bnx2fc
  • bnx2i
  • cxgb3i
  • cxgb4i
  • fcoe (software fcoe)
  • qla2xxx
  • qla4xxx
ಫೈಬರ್ ಚಾನಲ್ ಓವರ್ ಎತರ್ನೆಟ್ (FCoE) ಗುರಿಯ ವಿಧಾನವನ್ನು ಬೆಂಬಲಿಸುತ್ತದೆ
Red Hat Enterprise Linux 6.2 ರಲ್ಲಿ ಫೈಬರ್ ಚಾನಲ್ ಓವರ್ ಇತರ್ನೆಟ್ (FCoE) ಗುರಿ ಕ್ರಮಕ್ಕೆ ಬೆಂಬಲವನ್ನು ತಂತ್ರಜ್ಞಾನ ಅವಲೋಕನವಾಗಿ ಸೇರಿಸಲಾಗಿದೆ. ಈ ಕರ್ನಲ್ ಸವಲತ್ತನ್ನು fcoe-target-utils ಪ್ಯಾಕೇಜಿನಿಂದ ಒದಗಿಸಲಾದ targetadmin ಆಗಿ ಸಂರಚಿಸಬಹುದಾಗಿದೆ. FCoE ಅನ್ನು ಡೇಟಾ ಸೆಂಟರ್ ಬ್ರಿಜಿಂಗ್‌ ಅನ್ನು ಬೆಂಬಲಿಸುವ ಜಾಲಬಂಧದಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ (DCB). ಹೆಚ್ಚುವರಿ ವಿವರಗಳು dcbtool(8) ಹಾಗು targetadmin(8) ಮಾಹಿತಿ (ಮ್ಯಾನ್) ಪುಟಗಳಲ್ಲಿ ಲಭ್ಯವಿದೆ.

ಪ್ರಮುಖ ಅಂಶ

ಈ ಸವಲತ್ತು ತಂತ್ರಜ್ಞಾನ ಅವಲೋಕನವಾದಂತಹ ಹೊಸ SCSI ಗುರಿಯ ಪದರವನ್ನು ಬಳಸುತ್ತದೆ, ಹಾಗು ಇದನ್ನು FCoE ಗುರಿಯ ಬೆಂಬಲದೊಂದಿಗೆ ಸ್ವತಂತ್ರವಾಗಿ ಬಳಸುವಂತಿಲ್ಲ. ಈ ಪ್ಯಾಕೇಜು AGPL ಲೈಸನ್ಸನ್ನು ಹೊಂದಿದೆ.
crashkernel=auto ಎಂಬ ಬೂಟ್ ನಿಯತಾಂಕವನ್ನು ಬೆಂಬಲಿಸುತ್ತದೆ
Red Hat Enterprise Linux 6.1 ರಲ್ಲಿ, BZ#605786ರೊಂದಿಗೆ, crashkernel=auto ಬೂಟ್ ನಿಯತಾಂಕವನ್ನು ತೆಗೆದುಹಾಕಲಾಗಿತ್ತು. ಆದರೆ, Red Hat Enterprise Linux 6.2 ರಲ್ಲಿ, crashkernel=auto ಅನ್ನು ಎಲ್ಲಾ Red Hat Enterprise Linux 6 ವ್ಯವಸ್ಥೆಗಳಲ್ಲಿ ಮುಂದುವರೆಸಲಾಗಿದೆ.
ಬಳಕೆದಾರ ಸ್ಥಳದಲ್ಲಿ MD RAIDಗೆ ಬೆಂಬಲ
mdadm ಹಾಗು mdmon ಸವಲತ್ತುಗಳನ್ನು ಅರೆ ಆಟೋ-ರಿಬಿಲ್ಡ್‍, RAID ಲೆವೆಲ್ ಮೈಗ್ರೇಶನ್ಸ್, RAID 5 ಬೆಂಬಲದ ಮಿತಿ, ಹಾಗು SAS-SATA ಡ್ರೈವ್ ರೋಮಿಂಗ್ ಅನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿರುತ್ತದೆ.
ಫ್ಲಶ್ ಮನವಿ ವಿಲೀನಗೊಳಿಕೆ
ಫ್ಲಶ್ ಅನ್ನು ನಿರ್ವಹಿಸುವಲ್ಲಿ ನಿಧಾನವಾದಂತಹ ಸಾಧನಗಳಲ್ಲಿ ನೆರವಾಗುವಂತೆ ಫ್ಲಶ್ ಮನವಿಗಳನ್ನು ವಿಲೀನಗೊಳಿಸುವುದನ್ನು Red Hat Enterprise Linux 6.2 ರಲ್ಲಿ ಬೆಂಬಲಿಸಲಾಗುತ್ತದೆ.
UV2 ಹಬ್ ಬೆಂಬಲ
Red Hat Enterprise Linux 6.2 ರಲ್ಲಿ UV2 ಬೆಂಬಲವನ್ನು ಸೇರಿಸಲಾಗಿದೆ. UV2 ಎನ್ನುವುದು UVhub ಚಿಪ್‌ ಆಗಿದ್ದು, ಪ್ರಸ್ತುತ ಇರುವ UV1 ಹಬ್ ಚಿಪ್ ಎನ್ನುವುದರ ಮುಂದಿನ ಆವೃತ್ತಿಯಾಗಿರುತ್ತದೆ. UV2 ಯು ಪ್ರಸಕ್ತ ವಿಕಸನೆಯಲ್ಲಿರುವ HARP ಹಬ್ ಚಿಪ್ ಅನ್ನು ಬಳಸುತ್ತದೆ. UV2 ಯು ಹೊಸ Intel ಸಾಕೆಟ್‌ಗಳಿಗೆ ಬೆಂಬಲವನ್ನು ಒದಗಿಸುತ್ತದೆ. ಇದು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹೊಸ ಸವಲತ್ತುಗಳನ್ನು ಒದಗಿಸುತ್ತದೆ. UV2 ಅನ್ನು ಒಂದು SSI ಯಲ್ಲಿನ 64 TB ಯಷ್ಟು ಮೆಮೊರಿಯನ್ನು ಬೆಂಬಲಿಸಲು ವಿನ್ಯಸಿಸಲಾಗಿದೆ. ಅಷ್ಟೆ ಅಲ್ಲದೆ, UV ವ್ಯವಸ್ಥೆಗಳಿಗಾಗಿ ನೋಡ್ ನಿಯಂತ್ರಕ MMRಗಳನ್ನು ಅಪ್‌ಡೇಟ್ ಮಾಡಲಾಗಿದೆ.
acpi_rsdp ಬೂಟ್ ನಿಯತಾಂಕ
EFI (ಎಕ್ಸ್‍ಟೆನ್ಸಿಬಲ್ ಫರ್ಮ್-ವೇರ್ ಇಂಟರ್ಫೇಸ್) ಇಲ್ಲದೆ kdump ಕರ್ನಲ್ ಬೂಟ್‌ ಆಗುವಂತೆ Red Hat Enterprise Linux 6.2 ರಲ್ಲಿ kdump ಗಾಗಿ ACPI RSDP ವಿಳಾಸವನ್ನು ರವಾನಿಸಲು acpi_rsdp ಎಂಬ ಬೂಟ್ ನಿಯತಾಂಕವನ್ನು ಪರಿಚಯಿಸಲಾಗುತ್ತಿದೆ.
QETH ಚಾಲಕದ ಸುಧಾರಣೆಗಳು
QETH ಜಾಲಬಂಧ ಸಾಧನ ಚಾಲಕಕ್ಕೆ ಈ ಕೆಳಗಿನ ಸುಧಾರಣೆಗಳನ್ನು ಸೇರಿಸಲಾಗಿದೆ:
  • af_iucv HiperSockets ವರ್ಗಾವಣೆಗಾಗಿ ಬೆಂಬಲ
  • ಒತ್ತಾಯಪೂರ್ವಕ ಸಂಜ್ಞೆ ಅಡಾಪ್ಟರ್ ಸೂಚನೆಗಳನ್ನು ಬೆಂಬಲಿಸುತ್ತದೆ
  • ಶೇಖರಣಾ ಖಂಡಗಳನ್ನು ಹೊಂದಿಕೆಯಾಗದ ರೀತಿಯಲ್ಲಿ ಒದಗಿಸುವ ಬೆಂಬಲ
  • DASD ಚಾಲಕಕ್ಕಾಗಿ ಕಚ್ಛಾ ECKD ನಿಲುಕಣೆ
  • ಹೊಸ ಎತರ್ನೆಟ್ ಪ್ರೊಟೊಕಾಲ್ ID ಅನ್ನು if_ether ಮಾಡ್ಯೂಲ್‌ಗೆ ಸೇರಿಸಲಾಗಿದೆ
CPACF ಅಲ್ಗಾರಿತಮ್‌ಗಳು
IBM zEnterprise 196 ಇಂದ ಬೆಂಬಲಿಸಲಾಗುವ ಹೊಸ CPACF (CP ಅಸಿಸ್ಟ್‍ ಫಾರ್ ಕ್ರಿಪ್ಟೊಗ್ರಾಫಿಕ್ ಫಂಕ್ಷನ್) ಅಲ್ಗಾರಿತಮ್‌ಗಳಿಗಾಗಿನ ಬೆಂಬಲವನ್ನು ಸೇರಿಸಲಾಗಿದೆ. ಹೊಸ ಯಂತ್ರಾಂಶ ವೇಗವರ್ಧಿತ ಅಲ್ಗಾರಿತಮ್‌ಗಳು ಹೀಗಿವೆ:
  • AES ಗಾಗಿ CTR ಕ್ರಮ
  • DES ಹಾಗು 3DES ಗಾಗಿ CTR ಕ್ರಮ
  • AES ಗಾಗಿ 128 ಹಾಗು 256 ಬಿಟ್‌ಗಳಷ್ಟು ಉದ್ದದ ಕೀಲಿಗಳೊಂದಿಗೆ XTS ಕ್ರಮ
  • GCM ಕ್ರಮಕ್ಕಾಗಿ GHASH ಸಂದೇಶ ಡೈಜೆಸ್ಟ್‍
Red Hat Enterprise Linux 6.2 ರಲ್ಲಿ pci=realloc ಕರ್ನಲ್ ನಿಯತಾಂಕದ ಮೂಲಕ ನಿಬಂಧಾತ್ಮಕ ಸಂಪನ್ಮೂಲ-ಮರುನಿಯೋಜನೆಯನ್ನು ಬೆಂಬಲಿಸಲಾಗುತ್ತದೆ. ಈ ಸವಲತ್ತು ಯಾವುದೆ ಹಿಂಜರಿತಕ್ಕೆ ಕಾರಣವಾಗದೆ ಕ್ರಿಯಾತ್ಮಕ ಮರುನಿಯೋಜನೆ pci ಸಂಪನ್ಮೂಲವನ್ನು ಸೇರಿಸಲು ಒಂದು ತಾತ್ಕಾಲಿಕ ಪರಿಹಾರವನ್ನು ಒದಗಿಸುತ್ತದೆ. ಇದು ಪೂರ್ವನಿಯೋಜಿತವಾಗಿ ಕ್ರಿಯಾತ್ಮಕ ಮರುನಿಯೋಜನೆಯನ್ನು ಅಶಕ್ತಗೊಳಿಸುತ್ತದೆ, ಆದರೆ pci=realloc ಎಂಬ ಕರ್ನಲ್ ಆಜ್ಞಾ ಸಾಲಿನ ನಿಯತಾಂಕದ ಮೂಲಕ ಶಕ್ತಗೊಳಿಸುವ ಸಾಮರ್ಥ್ಯವನ್ನು ಸೇರಿಸುತ್ತದೆ.
PCI ಸುಧಾರಣೆಗಳು
ಪೂರ್ವನಿಯೋಜಿತವಾಗಿ ಕ್ರಿಯಾತ್ಮಕ ಮರುನಿಯೋಜನೆಯನ್ನು ಅಶಕ್ತಗೊಳಿಸಲಾಗಿರುತ್ತದೆ. pci=realloc ಎಂಬ ಕರ್ನಲ್ ಆಜ್ಞಾ ಸಾಲಿನ ನಿಯತಾಂಕದ ಮೂಲಕ ಇದನ್ನು ಶಕ್ತಗೊಳಿಸುವ ಶಕ್ತಗೊಳಿಸಲು ಸಾಧ್ಯವಿರುತ್ತದೆ. ಜೊತೆಗೆ, PCI assign unassigned ಕರೆಯಲ್ಲಿ ದೊಡ್ಡದಾದ ವ್ಯಾಪ್ತಿಗಳನ್ನು ಒದಗಿಸಲು ಬ್ರಿಜ್ ಸಂಪನ್ಮೂಲಗಳನ್ನು ಅಪ್‌ಡೇಟ್ ಮಾಡಲಾಗಿದೆ.
SMEP
Red Hat Enterprise Linux 6.2 ಕರ್ನಲ್‌ನಲ್ಲಿ SMEP (ಸೂಪರ್ವಿಶನ್ ಮೋಡ್ ಎಕ್ಸಿಕ್ಯೂಶನ್ ಪ್ರೊಟೆಕ್ಶನ್) ಅನ್ನು ಶಕ್ತಗೊಳಿಸುತ್ತದೆ. SMEP ಯು ಒಂದು ಒತ್ತಾಯಪಡಿಕೆ ರಚನಾವ್ಯವಸ್ಥೆಯನ್ನು ಒದಗಿಸುತ್ತದೆ, ಇದರಿಂದಾಗಿ ಮೇಲ್ವಿಚಾರಣೆ (ಸೂಪರ್ವಿಶನ್) ಕ್ರಮದಲ್ಲಿ ಇದ್ದಾಗ ಬಳಕೆದಾರ ಪುಟದಿಂದ ಕಾರ್ಯಗತಗೊಳಿಸಲು ಉದ್ಧೇಶಿತಗೊಂಡಿರಬಾರದು ಎನ್ನುವ ಒಂದು ಆವಶ್ಯಕತೆಯನ್ನು ಹೊಂದಿಸಲು ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ. ಈ ಆವಶ್ಯಕತೆಯನ್ನು CPU ಇಂದ ನಂತರ ಒತ್ತಾಯಪಡಿಸಲಾಗುತ್ತದೆ. ಈ ಸವಲತ್ತಿನಿಂದಾಗಿ, CPU ಮೇಲ್ವಿಚಾರಣಾ ಕ್ರಮದಲ್ಲಿ ಇದ್ದಾಗ, ಧಾಳಿಗಳ ಅಪಾಯಕಾರಿಯ ಮಟ್ಟ ಯಾವುದೆ ಇದ್ದರೂ ಅವುಗಳನ್ನು ತಡೆಗಟ್ಟಲು ಬಳಕೆದಾರ ಕ್ರಮದ ಪುಟಗಳಿಂದ ಕೋಡ್ ಅನ್ನು ಕಾರ್ಯಗತಗೊಳಿಸಲು ವ್ಯವಸ್ಥೆಗೆ ಅನುವು ಮಾಡಿಕೊಡುತ್ತದೆ.
ವೇಗದ ವಾಕ್ಯಾಂಶ ಸೂಚನೆಗಳನ್ನು ಸುಧಾರಿಸಲಾಗಿದೆ
ಇತ್ತೀಚಿನ Intel ಪ್ಲಾಟ್‌ಫಾರ್ಮಿನಲ್ಲಿ ವರ್ಧಿತ ವೇಗದ ವಾಕ್ಯಾಂಶ REP MOVSB/STORESB ಸೂಚನೆಗಳಿಗಾಗಿ ಬೆಂಬಲವನ್ನು ಸೇರಿಸಲಾಗಿದೆ.
USB 3.0 xHCI
USB 3.0 xHCI ಆತಿಥೇಯದಲ್ಲಿನ ಚಾಲಕವನ್ನು ವಿಭಜಿತ-ಹಬ್ ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ, ಇದರಿಂದಾಗಿ USB 3.0 ರೂಟ್‌ಹಬ್ USB 2.0 ರೂಟ್‌ಹಬ್ ನೋಂದಾಯಿಸುವ ಮೂಲಕ ಒಂದು ಬಾಹ್ಯ USB 3.0 ಹಬ್‌ ಆಗಿ ಕಾರ್ಯನಿರ್ವಹಿಸಲು xHCI ಆತಿಥೇಯ ನಿಯಂತ್ರಕಕ್ಕೆ ಅನುವು ಮಾಡಿಕೊಡುತ್ತದೆ.
ACPI, APEI, ಹಾಗು EINJ ನಿಯತಾಂಕ ಬೆಂಬಲ
ACPI, APEI, ಹಾಗು EINJ ನಿಯತಾಂಕ ಬೆಂಬಲವನ್ನು ಈಗ ಪೂರ್ವನಿಯೋಜಿತವಾಗಿ ಬೆಂಬಲಿಸಲಾಗುತ್ತದೆ.
pstore
Red Hat Enterprise Linux 6.2 ರಲ್ಲಿ pstore ಎಂಬುದಕ್ಕೆ ಬೆಂಬಲವನ್ನು ಸೇರಿಸುತ್ತದೆ —ಇದು ಪ್ಲಾಟ್‌ಫಾರ್ಮ್ ಅವಲಂಬಿತವಾದ ಸ್ಥಿರವಾದ ಶೇಖರಣೆಗಾಗಿ ಒಂದು ಕಡತ ವ್ಯವಸ್ಥೆ ಸಂಪರ್ಕಸಾಧನವಾಗಿರಯತ್ತದೆ.
PCIe AER ದೋಷ ಮಾಹಿತಿ ಮುದ್ರಣ
printk ಆಧರಿತವಾದ APEI (ACPI Platform Error Interface) ಯಂತ್ರಾಂಶ ದೋಷ ವರದಿ ಮಾಡುವಿಕೆಗೆ ಬೆಂಬಲವನ್ನು ಸೇರಿಸಲಾಗಿದೆ, ಇದರಿಂದಾಗಿ ಹಲವಾರು ಮೂಲಗಳಿಂದ ಬರುವ ದೋಷಗಳನ್ನು ಒಗ್ಗೂಡಿಸಿ ನಂತರ ಅವುಗಳನ್ನು ವ್ಯವಸ್ಥೆಯ ಕನ್ಸೋಲಿಗೆ ಕಳುಹಿಸಲಾಗುತ್ತದೆ.
ioatdma ಚಾಲಕ
dma ಎಂಜಿನ್‌ನೊಂದಿಗೆ Intel ಸಂಸ್ಕಾರಗಳನ್ನು ಬೆಂಬಲಿಸುವಂತೆ ioatdma ಚಾಲಕವನ್ನು (dma ಎಂಜಿನ್ ಚಾಲಕ) ಅಪ್‌ಡೇಟ್ ಮಾಡಲಾಗಿದೆ.
8250 PCI ಸರಣಿ ಚಾಲಕ
Digi/IBM PCIe 2-port Async EIA-232 ಅಡಾಪ್ಟರಿಗಾಗಿನ ಬೆಂಬಲವನ್ನು 8250 PCI ಸರಣಿ ಚಾಲಕಕ್ಕಾಗಿ ಸೇರಿಸಲಾಗಿದೆ. ಜೊತೆಗೆ, Digi/IBM PCIe 2-port Async EIA-232 ಅಡಾಪ್ಟರಿಗಾಗಿನ EEH (Enhanced Error Handling) ಬೆಂಬಲವನ್ನು 8250 PCI ಸರಣಿ ಚಾಲಕಕ್ಕಾಗಿ ಸೇರಿಸಲಾಗಿದೆ.
ARI ಬೆಂಬಲ
ARI (Alternative Routing- ID Interpretation) ಬೆಂಬಲ, ಒಂದು PCIe v2 ಸವಲತ್ತಾದಂತಹ, ಇದನ್ನು Red Hat Enterprise Linux 6.2 ಕ್ಕೆ ಸೇರಿಸಲಾಗಿದೆ.
PCIe OBFF
PCIe OBFF (Optimized Buffer Flush/Fill) ಶಕ್ತ/ಅಶಕ್ತ ಬೆಂಬಲವನ್ನು Intel ನ ಇತ್ತೀಚಿನ ಪ್ಲಾಟ್‌ಫಾರ್ಮಿಗೆ ಸೇರಿಸಲಾಗಿದೆ. OBFF ಸಾಧನಗಳಿಗೆ ತಡೆಗಳು ಹಾಗು ಮೆಮೊರಿ ಚಟುವಟಿಕೆಗಳು ಮತ್ತು ಅವುಗಳಲ್ಲಿ ಸಮರ್ಥವಾಗಿ ಕಡಿಮೆಗೊಳಿಸಲಾದ ವಿದ್ಯುಚ್ಛಕ್ತಿಯ ಮಹತ್ತರ ಪರಿಣಾಮದ ಕುರಿತಾದ ಮಾಹಿತಿಯನ್ನು ಒದಗಿಸುತ್ತದೆ, ಹಾಗು ಆ ಮೂಲಕ ಶಕ್ತಿಯ ದಕ್ಷತೆಯನ್ನು ಸುಧಾರಿಸುತ್ತದೆ.
oops/ಪ್ಯಾನಿಕ್ ವರದಿಗಳನ್ನು NVRAM ಗೆ ಸೆರೆಹಿಡಿಯುತ್ತದೆ
Red Hat Enterprise Linux 6.2 ರಲ್ಲಿ, PowerPC ಆರ್ಕಿಟೆಕ್ಚರುಗಳಿಗಾಗಿ dmesg ಬಫರಿನಿಂದ NVRAM ಗೆ oops/ಪ್ಯಾನಿಕ್ ವರದಿಗಳನ್ನು ಕರ್ನಲ್‌ ಸೆರೆಹಿಡಿದುಕೊಳ್ಳುವುದನ್ನು ಶಕ್ತಗೊಳಿಸಲಾಗಿದೆ.
MXM ಚಾಲಕ
NVIDIA ಪ್ಲಾಟ್‌ಫಾರ್ಮುಗಳಲ್ಲಿ ಗ್ರಾಫಿಕ್ಸುಗಳ ಬದಲಾವಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತ MXM ಚಾಲಕವನ್ನು Red Hat Enterprise Linux 6.2 ಕ್ಕೆ ಬ್ಯಾಕ್‌ಪೋರ್ಟ್ ಮಾಡಲಾಗಿದೆ.
ಪುಟದ ಒಟ್ಟುಗೂಡುವಿಕೆ
Red Hat Enterprise Linux 6.2 ರಲ್ಲಿ ಪುಟದ ಒಟ್ಟುಗೂಡುವಿಕೆಯನ್ನು ಪರಿಚಯಿಸಲಾಗುತ್ತದೆ. ಇದು IBM Power ಪರಿಚಾರಕಗಳಲ್ಲಿ ಕಂಡುಬರುವ ಒಂದು ಸವಲತ್ತಾಗಿದ್ದು, ತಾರ್ಕಿಕ ವಿಭಾಗಗಳ ನಡುವಿನ ಒಂದೇ ರೀತಿಯ ಪುಟಗಳನ್ನು ಒಟ್ಟುಗೂಡಿಸಲು ಅನುವು ಮಾಡುತ್ತದೆ.
L3 ಕ್ಯಾಶೆ ವಿಭಜನೆ
ಇತ್ತೀಚಿನ AMD ಗುಂಪಿನ CPUಗಳಿಗೆ L3 ಕ್ಯಾಶೆ ವಿಭಜನೆಗಾಗಿನ ಬೆಂಬಲವನ್ನು ಸೇರಿಸಲಾಗಿದೆ.
thinkpad_acpi ಮಾಡ್ಯೂಲ್
ಹೊಸ ThinkPad ಮಾದರಿಗಳಿಗಾಗಿ ಬೆಂಬಲವನ್ನು ಒದಗಿಸಲು thinkpad_acpi ಮಾಡ್ಯೂಲ್‌ ಅನ್ನು ಅಪ್‌ಡೇಟ್ ಮಾಡಲಾಗಿದೆ.
C-ಸ್ಟೇಟ್ ಬೆಂಬಲ
ಇತ್ತೀಚಿನ Intel ಸಂಸ್ಕಾರಕದ C-ಸ್ಟೇಟ್ ಬೆಂಬಲವನ್ನು intel_idle ಗೆ ಸೇರಿಸಲಾಗಿದೆ.
IOMMU ಎಚ್ಚರಿಕೆಗಳು
Red Hat Enterprise Linux 6.2 ಈಗ AMD ವ್ಯವಸ್ಥೆಗಳಲ್ಲಿ IOMMU (ಇನ್‌ಪುಟ್/ಔಟ್‌ಪುಟ್ ಮೆಮೊರಿ ಮ್ಯಾನೇಜ್‌ಮೆಂಟ್ ಯುನಿಟ್) ಎಚ್ಚರಿಕೆಗಳನ್ನು ತೋರಿಸುತ್ತದೆ.
ಬೂಟ್‌ ಸಮಯದಲ್ಲಿ dmesg ಗೆ ದಾಖಲಿಸುವಿಕೆ
ಬೂಟ್‌ ಸಮಯದಲ್ಲಿ, ಬೋರ್ಡಿನ, ವ್ಯವಸ್ಥೆಯ ಹಾಗು BIOS ಮಾಹಿತಿಯನ್ನು dmesgಗೆ ದಾಖಲಿಸುವಿಕೆಯನ್ನು ಸೇರಿಸಲಾಗಿದೆ.
IBM PowerPC ಬೆಂಬಲ
ಇತ್ತೀಚಿನ IBM PowerPC ಸಂಸ್ಕಾರಕ ಗುಂಪಿಗಾಗಿ ಬೆಂಬಲವನ್ನು ಒದಗಿಸುವಂತೆ cputable ನಮೂದುಗಳನ್ನು ಕರ್ನಲ್‌ಗೆ ಸೇರಿಸಲಾಗಿದೆ.
VPHN
VPHN (ವರ್ಚುವಲ್ ಪ್ರೊಸೆಸರ್ ಹೋಮ್ ನೋಡ್) ಸವಲತ್ತನ್ನು IBM System p ಯಲ್ಲಿ ಅಶಕ್ತಗೊಳಿಸಲಾಗಿದೆ.
ಇತ್ತೀಚಿನ Intel ಚಿಪ್‌ಸೆಟ್‌ನಿಂದ ಬೆಂಬಲಿಸಲಾಗುವ ಚಾಲಕಗಳು
ಇತ್ತೀಚಿನ Intel ಚಿಪ್‌ಸೆಟ್‌ನಿಂದ ಈಗ ಈ ಕೆಳಗಿನ ಚಾಲಕಗಳನ್ನು ಬೆಂಬಲಿಸಲಾಗುತ್ತದೆ:
  • i2c-i801 SMBus ಚಾಲಕ
  • ahci AHCI-mode SATA
  • ata_piix IDE-mode SATA ಚಾಲಕ
  • TCO ವಾಚ್‌ಡಾಗ್ ಚಾಲಕ
  • LPC ಕಂಟ್ರೋಲರ್ ಚಾಲಕ
exec-shield
IBM PowerPC ವ್ಯವಸ್ಥೆಗಳಲ್ಲಿ, sysctl ಅಥವ /proc/sys/kernel/exec-shield ನಿಯತಾಂಕದಲ್ಲಿ exec-shield ಮೌಲ್ಯವನ್ನು ಇನ್ನು ಮುಂದೆ ಒತ್ತಾಯಿಸಲಾಗುವುದಿಲ್ಲ.
PPC64 ಯಲ್ಲಿ kdump
64-bit PowerPC ಹಾಗು 64-bit IBM POWER Series ವ್ಯವಸ್ಥೆಗಳಲ್ಲಿ kdump ಅನ್ನು ಬೆಂಬಲಿಸುವಂತೆ ಹೆಚ್ಚುವರಿ ಪರಿಶೀಲನೆಗಳನ್ನು ಹಾಗು ಪರಿಹಾರಗಳನ್ನು ಸೇರಿಸಲಾಗಿದೆ.
UV MMTIMER ಮಾಡ್ಯೂಲ್‌
UV MMTIMER ಮಾಡ್ಯೂಲ್ (uv_mmtimer) ಅನ್ನು SGI ಪ್ಲಾಟ್‌ಫಾರ್ಮಿನಲ್ಲಿ ಶಕ್ತಗೊಳಿಸಲಾಗಿದೆ. ಎಲ್ಲಾ ಹಬ್‌ಗಳಲ್ಲಿ ಮೇಳೈಸಲಾದ UV ವ್ಯವಸ್ಥೆಯ ನಿಜ ಸಮಯದ ಗಡಿಯಾರಕ್ಕೆ ಬಳಕೆದಾರಪ್ರದೇಶವನ್ನು ನೇರವಾಗಿ ನಿಲುಕಿಸಿಕೊಳ್ಳಲು uv_mmtimer ಮಾಡ್ಯೂಲ್ ಅನುವು ಮಾಡಿಕೊಡುತ್ತದೆ.
IB700 ಮಾಡ್ಯೂಲ್
Red Hat Enterprise Linux 6.2 ರಲ್ಲಿ IB700 ಮಾಡ್ಯೂಲ್‌ಗೆ ಬೆಂಬಲವನ್ನು ಸೇರಿಸಲಾಗಿದೆ
PCIe AER ಮಾಸ್ಕ್‍ ರಿಜಸ್ಟರುಗಳನ್ನು ಅತಿಕ್ರಮಿಸಲಾಗಿದೆ
aer_mask_override ಮಾಡ್ಯೂಲ್ ನಿಯತಾಂಕವನ್ನು ಸೇರಿಸಲಾಗಿದ್ದು, ಇದು PCI ಸಾಧನಕ್ಕಾಗಿನ ಒಂದು ಸರಿಪಡಿಸಲಾದ ಅಥವ ಸರಿಪಡಿಸದೆ ಇರುವ ಮಾಸ್ಕುಗಳನ್ನು ಅತಿಕ್ರಮಿಸಲು ಮಾರ್ಗವನ್ನು ಒದಗಿಸುತ್ತದೆ. ಮಾಸ್ಕಿನಲ್ಲಿ aer_inject() ಕ್ರಿಯೆಗೆ ರವಾನಿಸಲಾದ ಸ್ಥಿತಿಗೆ ಸಂಬಂಧಿಸಿದ ವಿಷಯವನ್ನು ಹೊಂದಿರುತ್ತದೆ.
PPC64 ನಲ್ಲಿ USB 3.0 ಆತಿಥೇಯ ನಿಯಂತ್ರಕ ಬೆಂಬಲ
64-bit PowerPC ಹಾಗು 64-bit IBM POWER Series ವ್ಯವಸ್ಥೆಗಳಲ್ಲಿ USB 3.0 ಆತಿಥೇಯ ನಿಯಂತ್ರಕ ಬೆಂಬಲ ಸೇರಿಸಲಾಗಿದೆ.
OOM ಸ್ಥಗಿತಗಾರನಲ್ಲಿ ಸುಧಾರಣೆಗಳು
ಒಂದು ಸುಧಾರಿತ ಅಪ್‌ಸ್ಟ್ರೀಮ್‌ OOM (Out of Memory) ಸ್ಥಗಿತ ಅನ್ವಯಿಸುವಿಕೆಯನ್ನು Red Hat Enterprise Linux 6.2 ಕ್ಕೆ ಬ್ಯಾಕ್‌ಪೋರ್ಟ್ ಮಾಡಲಾಗಿದೆ. ಆ ಸುಧಾರಣೆಗಳೆಂದರೆ :
  • ನಿರ್ಗಮಿಸಲಿರುವ ಪ್ರಕ್ರಿಯೆಗಳಿಗೆ OOM ಸ್ಥಗಿತಗಾರನಿಂದ ಆದ್ಯತೆ ನೀಡಲಾಗುತ್ತದೆ.
  • OOM ಸ್ಥಗಿತಗೊಳಿಕೆಯ ಪ್ರಕ್ರಿಯೆಯು ಆಯ್ಕೆ ಮಾಡಲಾದ ಪ್ರಕ್ರಿಯೆಗಳ ಉಪ ಪ್ರಕ್ರಿಯೆಗಳನ್ನೂ ಸಹ ಸ್ಥಗಿತಗೊಳಿಸುತ್ತದೆ.
  • forkbomb ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲು ಹ್ಯೂರಿಸ್ಟಿಕ್ ಅನ್ನು ಸೇರಿಸಲಾಗಿದೆ.
oom_score_adj /proc ಟ್ಯೂನೇಬಲ್ ನಿಯತಾಂಕವು ಪ್ರತಿಯೊಂದು ಪ್ರಕ್ರಿಯೆಯ oom_score_adj ವೇರಿಯೇಬಲ್‌ನಲ್ಲಿ ಶೇಖರಿಸಿಡಲಾದ ಮೌಲ್ಯವನ್ನು ಸೇರಿಸುತ್ತದೆ, ಇದನ್ನು /proc ಇಂದ ಸರಿಹೊಂದಿಸಲು ಸಾಧ್ಯವಿರುತ್ತದೆ. ಇದರಿಂದಾಗಿ ಪ್ರತಿಯೊಂದು ಪ್ರಕ್ರಿಯೆಯ ಆಕರ್ಷಣೀಯತೆಯನ್ನು ಬಳಕೆದಾರ ಸ್ಥಳದಲ್ಲಿ OOM ಸ್ಥಗಿತಗಾರನಿಗೆ ಹೊಂದಿಸಲು ಸಾಧ್ಯವಿರುತ್ತದೆ; -1000 ಗೆ ಹೊಂದಿಸಿದಲ್ಲಿ, OOM ಸ್ಥಗಿತಗಾರನನ್ನು ಸಂಪೂರ್ಣವಾಗಿ ಅಶಕ್ತಗೊಳಿಸುತ್ತದೆ, ಹಾಗು +1000 ಎನ್ನುವುದು ಈ ಪ್ರಕ್ರಿಯೆಯು OOMನ ಸ್ಥಗಿತಗೊಳಿಸುವಿಕೆ ಪ್ರಾಥಮಿಕ ಗುರಿಯಾಗಿರುತ್ತದೆ.
ಹೊಸ ಅಳವಡಿಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, http://lwn.net/Articles/391222/ ಅನ್ನು ನೋಡಿ.
zram ಚಾಲಕ
Red Hat Enterprise Linux 6.2 ರಲ್ಲಿ zram ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ (ವಿಶಿಷ್ಟವಾದ RAM ಆಧರಿತವಾದ ಸಂಕುಚಿತ ಖಂಡ ಸಾಧನಗಳನ್ನು ರಚಿಸುತ್ತದೆ).
taskstat ಸವಲತ್ತು
Red Hat Enterprise Linux 6.2 ರಲ್ಲಿ, taskstat ಸವಲತ್ತು (ASET ಕಾರ್ಯಗಳ ಸ್ಥಿತಿಯನ್ನು ಮುದ್ರಿಸುತ್ತದೆ) top ಸವಲತ್ತನ್ನು ಬಳಸಲು ಮೈಕ್ರೊಸೆಕೆಂಡ್ CPU ಸಮಯ ಸೂಕ್ಷ್ಮತೆಯನ್ನು ಒದಗಿಸುವ ಮೂಲಕ ಕರ್ನಲ್ ಅನ್ನು ಉತ್ತಮಗೊಳಿಸಲಾಗಿದೆ.
perf ಸವಲತ್ತು
Red Hat Enterprise Linux 6.2 ರಲ್ಲಿ ಕರ್ನಲ್ ಅನ್ನು v 3.1 ಗೆ ನವೀಕರಿಸುವುದರ ಜೊತೆಗೆ perf ಸವಲತ್ತನ್ನು ಅಪ್‌ಸ್ಟ್ರೀಮ್‌ ಆವೃತ್ತಿ 3.1 ಗೆ ಅಪ್‌ಡೇಟ್ ಮಾಡಲಾಗಿದೆ. perf ಸವಲತ್ತಿನಿಂದಾಗಿ ಹೊಸದಾಗಿ ಬೆಂಬಲಿತಗೊಂಡ ಕರ್ನಲ್ ಸವಲತ್ತುಗಳಿಗಾಗಿ BZ#725524 ಅನ್ನು ನೋಡಿ. ಅಪ್‌ಡೇಟ್ ಮಾಡಲಾದ perf ಸವಲತ್ತು ಇದನ್ನು ಹೊಂದಿರುತ್ತದೆ:
  • cgroup ಬೆಂಬಲವನ್ನು ಸೇರಿಸಲಾಗಿದೆ
  • /proc/sys/kernel/kptr_restrict ಅನ್ನು ನಿಭಾಯಿಸುವಿಕೆಯನ್ನು ಸೇರಿಸಲಾಗಿದೆ
  • ಹೆಚ್ಚಿನ ಕ್ಯಾಶೆ-ತಪ್ಪಿದ ಪ್ರತಿಶತ ಮುದ್ರಿತಪ್ರತಿಗಳನ್ನು ಸೇರಿಸಲಾಗಿದೆ
  • ಹೆಚ್ಚಿನ CPU ಘಟನೆಗಳನ್ನು ತೋರಿಸಲು -d -d ಹಾಗು -d -d -d ಆಯ್ಕೆಗಳನ್ನು ಸೇರಿಸಲಾಗಿದೆ
  • --sync/-S ಆಯ್ಕೆಯನ್ನು ಸೇರಿಸಲಾಗಿದೆ
  • PERF_TYPE_RAW ನಿಯತಾಂಕಕ್ಕೆ ಬೆಂಬಲವನ್ನು ಸೇರಿಸಲಾಗಿದೆ
  • -f/--fields ಆಯ್ಕೆಯ ಕುರಿತು ಹೆಚ್ಚಿನ ದಸ್ತಾವೇಜನ್ನು ಸೇರಿಸಲಾಗಿದೆ
  • ಪೈತಾನ್ ಬೈಂಡಿಂಗ್ ಬೆಂಬಲಕ್ಕಾಗಿ python-perf ಪ್ಯಾಕೇಜನ್ನು ಸೇರಿಸಲಾಗಿದೆ.
OProfile ಬೆಂಬಲ
Red Hat Enterprise Linux 6.2 ರಲ್ಲಿ ಇತ್ತೀಚಿನ Intel ಸಂಸ್ಕಾರಕಗಳಿಗೆ OProfile ಬೆಂಬಲವನ್ನು ಸೇರಿಸಲಾಗಿದೆ.
IRQ ಎಣಿಕೆ
ತಡೆಯ ಮನವಿಗಳ (IRQ) ಸಂಖ್ಯೆಯನ್ನು ಈಗ sum of all irq ಕೌಂಟರಿನಿಂದ ಎಣಿಸಲಾಗುವುದು, /proc/stat ಕಡತದಲ್ಲಿ ಹುಡುಕಾಟದ ಹೊರೆಯು ಕಡಿಮೆಯಾಗುತ್ತದೆ.
ಅನುಸೂಚನೆಯಲ್ಲಿ ಸುಧಾರಣೆ
Red Hat Enterprise Linux 6.2 ಒಂದು ಅನುಸೂಚಿ ಸುಧಾರಣೆಯನ್ನು ಪರಿಚಯಿಸಲಾಗುತ್ತದೆ, ಇದರಿಂದಾಗಿ ನಿದ್ರಾ ಸ್ಥಿತಿ ಹಾಗು ಪೂರ್ವಭಾವಿ ಮಾರ್ಗದ ಮುಂದಿನ ಬಡ್ಡಿ (buddy) ಸುಳಿವಿನಲ್ಲಿ ಅನುಸೂಚಿಗೆ ಒಂದು ಸುಳಿವನ್ನು ನೀಡಲಾಗುತ್ತದೆ. ಈ ಸುಳಿವು/ಸುಧಾರಣೆಯು ಅನೇಕ ಕಾರ್ಯ ಸಮೂಹಗಳಲ್ಲಿನ ಅನೇಕ ಕಾರ್ಯಗಳ ಕಾರ್ಯದ ಹೊರೆಯಲ್ಲಿ ನೆರವಾಗುತ್ತದೆ.
ಟ್ರಾನ್ಸಪರೆಂಟ್ ಹ್ಯೂಜ್ ಪೇಜ್ ಸುಧಾರಣೆ
Red Hat Enterprise Linux 6.2 ರಲ್ಲಿ, ಕರ್ನಲ್‌ನ ಹಲವು ಜಾಗಗಳಲ್ಲಿ ಟ್ರಾನ್ಸಪರೆಂಟ್ ಹ್ಯೂಜ್ ಪೇಜ್‌ಗಳಿಗೆ ಬೆಂಬಲವನ್ನು ಸೇರಿಸಲಾಗಿದೆ:
  • mremap, mincore, ಹಾಗು mprotect ನ ವ್ಯವಸ್ಥೆಯ ಕರೆಗಳು
  • /proc ಟ್ಯೂನ್‌ ಮಾಡಬಹುದಾದ ನಿಯತಾಂಕಗಳು: /proc/<pid>/smaps ಹಾಗು /proc/vmstat
ಜೊತೆಗೆ, ಟ್ರಾನ್ಸಪರೆಂಟ್ ಹ್ಯೂಜ್ ಪೇಜ್‌ಗಳು ಹಾಗು ಸಂಕುಚನಗೊಳಿಕೆಯಲ್ಲಿನ ಕೆಲವು ಸುಧಾರಣೆಗಳು.
XTS AES256 ಸ್ವಯಂ-ಪರೀಕ್ಷೆಗಳು
Red Hat Enterprise Linux 6.2 ರಲ್ಲಿ FIPS-140 ಅಗತ್ಯತೆಗಳನ್ನು ಪೂರೈಸಲು XTS (XEX-based Tweaked CodeBook) AES256 ಸ್ವಯಂ-ಪರೀಕ್ಷೆಗಳನ್ನು ಸೇರಿಸಲಾಗಿದೆ.
SELinux ನೆಟ್‌ಫಿಲ್ಟರ್ ಪ್ಯಾಕೆಟ್ ತಪ್ಪಿಹೋಗುವಿಕೆಗಳು
ಈ ಹಿಂದೆ, SELinux ಒಂದು ಪ್ಯಾಕೆಟ್ ಅನ್ನು ತಪ್ಪಿಸಿದಲ್ಲಿ netfilter ಹುಕ್‌ಗಳು NF_DROP ಅನ್ನು ಮರಳಿಸುತ್ತಿದ್ದವು. Red Hat Enterprise Linux 6.2 ರಲ್ಲಿ, netfilter ತಪ್ಪಿಹೋದಲ್ಲಿ ಅದನ್ನು ಶಾಶ್ವತವಾದ ಗಂಭೀರ ದೋಷ ಹಾಗು ಕ್ಷಣಿಕವಲ್ಲ ಎಂದು ಸೂಚಿಸಲಾಗುತ್ತದೆ. ಹೀಗೆ ಮಾಡುವುದರಿಂದ, ದೋಷವನ್ನು ಸ್ಟ್ಯಾಕ್‌ಗೆ ಮರಳಿ ಕಳುಹಿಸಲಾಗುತ್ತದೆ, ಹಾಗು ಕೆಲವು ಸ್ಥಳಗಳಲ್ಲಿ ಮತ್ತು ಅನ್ವಯಗಳು ಏನು ತೊಂದರೆಯಾಗಿದೆ ಎಂದು ತಿಳಿಯಲು ವೇಗವಾಗಿ ಸಂವಹಿಸುತ್ತವೆ.
LSM ಹುಕ್‌
Red Hat Enterprise Linux 6.2 ರಲ್ಲಿ, ಮರುಆರೋಹಣ ಆರೋಹಣ ಆಯ್ಕೆಗಳನ್ನು (mount -o remount) ಹೊಸ LSM ಹುಕ್‌ಗೆ ರವಾನಿಸಲಾಗುತ್ತದೆ.
UEFI ವ್ಯವಸ್ಥೆಗಳಿಗಾಗಿ ಪೂರ್ವನಿಯೋಜಿತ ಕ್ರಮ
Red Hat Enterprise Linux 6.0 ಹಾಗು 6.1 ರಲ್ಲಿ UEFI ವ್ಯವಸ್ಥೆಗಳನ್ನು ಭೌತಿಕ ಅಡ್ರೆಸಿಂಗ್ ಕ್ರಮದಲ್ಲಿ ಚಲಾಯಿಸುವುದನ್ನು ಪೂರ್ವನಿಯೋಜಿತಗೊಳಿಸಲಾಗುತ್ತದೆ. Red Hat Enterprise Linux 6.2 ರಲ್ಲಿ UEFI ವ್ಯವಸ್ಥೆಗಳನ್ನು ಒಂದು ವರ್ಚುವಲ್ ಅಡ್ರೆಸಿಂಗ್ ಕ್ರಮದಲ್ಲಿ ಚಲಾಯಿಸಲಾಗುತ್ತದೆ. physefi ಎಂಬ ಕರ್ನಲ್ ನಿಯತಾಂಕವನ್ನು ನೀಡುವ ಮೂಲಕ ಹಿಂದಿನ ವರ್ತನೆಯನ್ನು ಪಡೆಯಬಹುದಾಗಿರುತ್ತದೆ.
SSH ಮೂಲಕ kdump ಮಾಡುವ ಪೂರ್ವನಿಯೋಜಿತ ವಿಧಾನ
Red Hat Enterprise Linux 6 ರಲ್ಲಿ, SSH ಮುಖಾಂತರ ಕೋರ್ ಅನ್ನು kdump ಮಾಡಲು ಪೂರ್ವನಿಯೋಜಿತ core_collector ವಿಧಾನವನ್ನು scp ಇಂದ makedumpfileಗೆ ಬದಲಾಯಿಸಲಾಗಿದೆ. ಇದರಿಂದಾಗಿ ಜಾಲಬಂಧ ಕೊಂಡಿಯ ಮುಖಾಂತರ ಕೋರ್ ಕಡತವನ್ನು ಕಾಪಿ ಮಾಡುವಾಗ ಅದರ ಗಾತ್ರವನ್ನು ಸಂಕುಚನಗೊಳಿಸುತ್ತದೆ, ಆಗ ಕಾಪಿ ಮಾಡುವಿಕೆಯು ವೇಗವಾಗಿ ನಡೆಯುತ್ತದೆ.
ನಿಮಗೆ ಹಳೆಯ vmcore ಸಂಪೂರ್ಣ ಗಾತ್ರದ ಕೋರ್ ಕಡತದ ಅಗತ್ಯವಿದ್ದಲ್ಲಿ, ಈ ಕೆಳಗಿನದನ್ನು /etc/kdump.conf ಕಡತದಲ್ಲಿ ಸೂಚಿಸಿ:
core_collector /usr/bin/scp

ಅಧ್ಯಾಯ 4. ಸಂಪನ್ಮೂಲ ವ್ಯವಸ್ಥಾಪನೆ

Cgroups CPU ಸೀಲಿಂಗ್ ಒತ್ತಾಯಪಡಿಕೆ
ಲಿನಕ್ಸ್ ಕರ್ನಲ್‌ನಲ್ಲಿನ Completely Fair Scheduler (CFS) ಎನ್ನುವುದು ಸಮಪ್ರಮಾಣದ ಹಂಚಿಕಾ ಅನುಸೂಚಿಯಾಗಿರುತ್ತದೆ. ಇದು ಕಾರ್ಯಗಳ ಆದ್ಯತೆ/ಘನತೆ ಅಥವ ಕಾರ್ಯಗಳ ಗುಂಪುಗಳಿಗೆ ನಿಯೋಜಿಸಲಾದ ಹಂಚಿಕೆಗಳ ಆಧಾರದಲ್ಲಿ ಕಾರ್ಯಗಳ ಗುಂಪಿನ ನಡುವೆ CPU ಸಮಯವನ್ನು ಸಮಪ್ರಮಾಣದಲ್ಲಿ ವಿಂಗಡಿಸುತ್ತದೆ. CFS ನಲ್ಲಿ, ಅನುಸೂಚಿತಯ ಕೆಲಸ ಸಂರಕ್ಷಣಾ ವರ್ತನೆಯಿಂದಾಗಿ ವ್ಯವಸ್ಥೆಯಲ್ಲಿ ಸಾಕಷ್ಟು ಜಡ CPU ಆವರ್ತನೆಗಳು ಇದ್ದಲ್ಲಿ ಒಂದು ಕಾರ್ಯ ಸಮೂಹವು ಅದರ ಭಾಗದ CPU ಗಿಂತಲೂ ಹೆಚ್ಚಿನದನ್ನು ಪಡೆಯುವ ಸಾಧ್ಯತೆ ಇರುತ್ತದೆ.
ಆದರೆ ಈ ಕೆಳಗೆ ಪಟ್ಟಿ ಮಾಡಲಾದ ಎಂಟರ್ಪ್ರೈಸ್ ಸನ್ನಿವೇಶಗಳಲ್ಲಿ, ಒಂದು ಕಾರ್ಯ ಸಮೂಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ CPU ಹಂಚಿಕೆಯನ್ನು ಒದಗಿಸಲು ಅನುಮತಿ ಇರುವುದಿಲ್ಲ:
ಬಳಸಿದಂತೆ-ಪಾವತಿಸಿ
ಅನೇಕ ಗ್ರಾಹಕರಿಗೆ ನೆರವು ನೀಡುವಂತಹ ಎಂಟರ್ಪ್ರೈಸ್ ವ್ಯವಸ್ಥೆಗಳಲ್ಲಿ, ಕ್ಲೌಡ್ ಸೇವೆಯನ್ನು ಒದಗಿಸುವವರು ಸೇವೆಯ ಮಟ್ಟಕ್ಕೆ ಆಧರಿತವಾಗಿ ವರ್ಚುವಲ್‌ ಅತಿಥಿಗಳಿಗಾಗಿ ನಿಶ್ಚಿತ ಮೊತ್ತದ CPU ಸಮಯವನ್ನು ನಿಯೋಜಿಸುವ ಅಗತ್ಯವಿರುತ್ತದೆ.
ಸೇವಾ ಹಂತದ ಭರವಸೆ
ಗ್ರಾಹಕರ ಪ್ರತಿಯೊಂದು ವರ್ಚುವಲ್ ಅತಿಥಿಗಾಗಿನ ಸೇವೆಯಲ್ಲಿ ತಡೆಯುಂಟು ಮಾಡದೆ CPU ಸಂಪನ್ಮೂಲದಲ್ಲಿ ಒಂದು ಭಾಗವನ್ನು ಒದಗಿಸುವಂತೆ ಬೇಡಿಕೆ.
ಈ ಸನ್ನಿವೇಶಗಳಲ್ಲಿ, ಅನುಸೂಚಕವು ಒಂದು ಕಾರ್ಯ ಸಮೂಹದ CPU ಸಂಪನ್ಮೂಲದ ಬಳಕೆಯು ಪೂರ್ವಸೂಚಿತ ಮಿತಿಯನ್ನು ಮೀರಿದಲ್ಲಿ ಅದಕ್ಕೆ ಒಂದು ದೃಢವಾದ ನಿಲುಗಡೆಯನ್ನು ಹಾಕಬೇಕಾಗುತ್ತದೆ. ಕಾರ್ಯ ಸಮೂಹಕ್ಕೆ ನಿಯೋಹಿಸಲಾದ CPU ಸಮಯವನ್ನು ಅದು ಸಂಪೂರ್ಣವಾಗಿ ಬಳಸಿಕೊಂಡಿದ್ದಲ್ಲಿ ಅದನ್ನು ಕಡಿಮೆ ಮಾಡುವ ಮೂಲಕ ಇದನ್ನು ಸಾಧಿಸಬಹುದಾಗಿರುತ್ತದೆ.
cgroups CPU ಸೀಲಿಂಗ್ ಒತ್ತಾಯಪಡಿಕೆಯನ್ನು ಮೇಲೆ ಪಟ್ಟಿ ಮಾಡಲಾದ ಬಳಕೆಯ ಸನ್ನಿವೇಶಕ್ಕಾಗಿ Red Hat Enterprise Linux ಸವಲತ್ತುಗಳ ಸಂಗ್ರಹಕ್ಕೆ ಒಂದು ಪ್ರಮುಖ ಸೇರ್ಪಡಿಕೆ ಎಂದು ಪರಿಗಣಿಸಲಾಗಿದೆ. CPU ಸೀಲಿಂಗ್ ಒತ್ತಾಯಪಡಿಕೆಯನ್ನು Xen ನಲ್ಲಿ Credit Scheduler ನಿಂದ, ಹಾಗು VMware ESX ಅನುಸೂಚಿಯಿಂದಲೂ ಸಹ ಒದಗಿಸಲಾಗುತ್ತದೆ.
SMP ವ್ಯವಸ್ಥೆಗಳಲ್ಲಿ SMP Cgroups CPU ನಿಯಂತ್ರಕದ ಸ್ಕೇಲೆಬಿಲಿಟಿ ಸುಧಾರಣೆ
Red Hat Enterprise Linux 6 ರಲ್ಲಿ cgroups ಅನ್ನು ಔಟ್-ಆಫ್-ದಿ ಬಾಕ್ಸ್ ಶಕ್ತಗೊಳಿಸಲಾಗಿತ್ತು, ಹಾಗು libvirt ಪ್ರತಿ ಅತಿಥಿ ಮಾದರಿಗೂ ಸಹ ಒಂದು cgroups ಅನ್ನು ಸೃಷ್ಟಿಸುತ್ತಿತ್ತು. ದೊಡ್ಡದಾದ SMP ವ್ಯವಸ್ಥೆಗಳಲ್ಲಿ, cgroups ನ ಸಂಖ್ಯೆಯಲ್ಲಿ ಹೆಚ್ಚಳ ಉಂಟಾದಾಗ, ಕಾರ್ಯನಿರ್ವಹಣೆಯು ಕ್ಷೀಣಿಸುತ್ತಿತ್ತು. ಆದರೆ, Red Hat Enterprise Linux 6.2 ರಲ್ಲಿ, cgroups CPU ಸ್ಕೇಲೆಬಿಲಿಟಿಯನ್ನು ಗಮನಾರ್ಹವಾಗಿ ಸುಧಾರಿಸಲಾಗಿದ್ದು, ಇದರಿಂದಾಗಿ ಕಾರ್ಯನಿರ್ವಹಣೆಯ ಮೇಲೆ ಯಾವುದೆ ತಡೆಯುಂಟಾಗದೆ ಒಮ್ಮೆಲೆ ನೂರಾರು cgroups ಸೃಷ್ಟಿಸಿ ಚಲಾಯಿಸಲು ಸಾಧ್ಯವಿರುತ್ತದೆ.
ಸ್ಕೇಲೆಬಿಲಿಟಿ ಸುಧಾರಣೆಯೊಂದಿಗೆ, /proc ಟ್ಯೂನೆಬಲ್ ನಿಯತಾಂಕವಾದಂತಹ, dd sysctl_sched_shares_window ಅನ್ನು ಪೂರ್ವನಿಯೋಜಿತವನ್ನು 10 ms ಗೆ ಹೊಂದಿಸುವುದರೊಂದಿಗೆ ಸೇರಿಸಲಾಗಿದೆ.
Cgroups I/O ನಿಯಂತ್ರಕ ಕಾರ್ಯನಿರ್ವಹಣೆ ಸುಧಾರಣೆ
cgroups I/O ನಿಯಂತ್ರಕ ವಿನ್ಯಾಸವನ್ನು I/O ನಿಯಂತ್ರಕದ ಒಳಗಿನ ಲಾಕ್‌ನ ಬಳಕೆಯನ್ನು ಕಡಿಮೆ ಮಾಡುವಂತೆ ಸುಧಾರಿಸಲಾಗಿದೆ, ಇದರ ಪರಿಣಾಮವಾಗಿ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ಉಂಟಾಗಿದೆ. ಜೊತೆಗೆ, I/O ನಿಯಂತ್ರಕವು ಈಗ cgroup ಅಂಕಿ ಅಂಶಗಳನ್ನು ಬೆಂಬಲಿಸುತ್ತದೆ.
Cgroups ಮೆಮೊರಿ ನಿಯಂತ್ರಕ ಕಾರ್ಯನಿರ್ವಹಣೆ ಸುಧಾರಣೆ
Red Hat Enterprise Linux 6.2 ರಲ್ಲಿ page_cgroup ವ್ಯೂಹಕ್ಕಾಗಿನ ನಿಯೋಜನಾ ಮೇಲುವೆಚ್ಚವನ್ನು ಕಡಿಮೆ ಮಾಡುವ ಮೂಲಕ ಮೆಮೊರಿ ಬಳಕೆಯ ಮೇಲುವೆಚ್ಚದಲ್ಲಿ 37% ದಷ್ಟು ಸುಧಾರಣೆಯನ್ನು ಪರಿಚಯಿಸಲಾಗಿದೆ. ಜೊತೆಗೆ, ನೇರವಾದ page_cgroup-to-page ಸೂಚಕವನ್ನು ತೆಗೆದುಹಾಕಲಾಗಿದ್ದು, ಇದರಿಂದಾಗಿ ಮೆಮೊರಿ ನಿಯಂತ್ರಕದ ಕಾರ್ಯ ನಿರ್ವಹಣೆಯಲ್ಲಿ ಸುಧಾರಣೆ ಉಂಟಾಗಿದೆ.
CFQ group_isolation ವೇರಿಯೇಬಲ್‌ಗಾಗಿನ ಪೂರ್ವನಿಯೋಜಿತ ಮೌಲ್ಯ
CFQನ group_isolation ವೇರಿಯೇಬಲ್‌ನ ಪೂರ್ವನಿಯೋಜಿತವನ್ನು 0 ಇಂದ 1 (/sys/block/<device>/queue/iosched/group_isoaltion) ಕ್ಕೆ ಬದಲಾಯಿಸಲಾಗಿದೆ. ಹಲವಾರು ಪರೀಕ್ಷೆ ಹಾಗು ಅನೇಕ ಬಳಕೆದಾರ ವರದಿಗಳ ನಂತರ, ಪೂರ್ವನಿಯೋಜಿತವಾಗಿ 1 ಎಂದು ಬಳಸುವುದು ಹೆಚ್ಚು ಸೂಕ್ತ ಎಂದು ಕಂಡುಬಂದಿದೆ. 0ಗೆ ಹೊಂದಿಸಿದಾಗ, ಎಲ್ಲಾ ಯಾದೃಚ್ಛಿಕ I/O ಸರತಿಗಳು ರೂಟ್ cgroupನ ಭಾಗವಾಗಿರುತ್ತದೆ ಹಾಗು ಅನ್ವಯದ ಭಾಗವಾಗಿರುವಂತಹ ನಿಜವಾದ cgroup ಆಗಿರುವುದಿಲ್ಲ. ಪರಿಣಾಮವಾಗಿ, ಅನ್ವಯಗಳ ಸೇವೆಯಲ್ಲಿ ಯಾವುದೆ ವ್ಯತ್ಯಾಸವು ಕಂಡುಬರುವುದಿಲ್ಲ.

ಹೆಚ್ಚಿನ ಓದಿಗಾಗಿ

ಸಂಪನ್ಮೂಲ ವ್ಯವಸ್ಥಾಪನೆ ಹಾಗು ನಿಯಂತ್ರಣ ಗುಂಪುಗಳಿಗಾಗಿ ಹೆಚ್ಚಿನ ಮಾಹಿತಿಗಾಗಿ, Red Hat Enterprise Linux 6.2 Resource Management Guide ಅನ್ನು ನೋಡಿ.

ಅಧ್ಯಾಯ 5. ಸಾಧನದ ಚಾಲಕಗಳು

Emulex lpfc ಚಾಲಕ
ಎಮುಲೆಕ್ಸ್ LPFC FC/FCoE ಚಾಲಕಕ್ಕಾಗಿನ ಪೂರ್ವನಿಯೋಜಿತ ತಡೆಯ ಸಂರಚನೆಯನ್ನು INT-X ಇಂದ MSI-X ಗೆ ಬದಲಾಯಿಸಲಾಗಿದೆ. ಇದನ್ನು,lpfc_use_msi ಮಾಡ್ಯೂಲ್ ನಿಯತಾಂಕವನ್ನು (/sys/class/scsi_host/host#/lpfc_use_msi ನಲ್ಲಿ) ಹಿಂದಿನ 0 ಬದಲಿಗೆ ಪೂರ್ವನಿಯೋಜಿತವಾಗಿ 2 ಗೆ ಹೊಂದಿಸಲಾಗುವ ಮೂಲಕ ತೋರಿಸಲಾಗುತ್ತದೆ. ಈ ಬದಲಾವಣೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, Red Hat Enterprise Linux 6.2 Technical Notes ಅನ್ನು ನೋಡಿ.
ಶೇಖರಣಾ ಚಾಲಕಗಳು
  • ಎಮುಲೆಕ್ಸ್ ಫೈಬರ್ ಚಾನಲ್ ಹೋಸ್ಟ್‍ ಬಸ್‌ ಅಡಾಪ್ಟರುಗಳಗಾಗಿನ Ipfc ಚಾಲಕವನ್ನು ಆವೃತ್ತಿ 8.3.5.45.2p ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • mptfusion ಚಾಲಕವನ್ನು ಆವೃತ್ತಿ 3.4.19 ಗೆ ಅಪ್‌ಡೇಟ್ ಮಾಡಲಾಗಿದೆ
  • ಬ್ರಾಡ್‌ಕಾಮ್‌ NetXtreme II 57712 ಚಿಪ್‌ಗಾಗಿನ bnx2fc ಚಾಲಕವನ್ನು ಆವೃತ್ತಿ 1.0.4 ಗೆ ಅಪ್‌ಡೇಟ್ ಮಾಡಲಾಗಿದೆ
  • ಕ್ಯುಲಾಜಿಕ್ ಫೈಬರ್ ಚಾನಲ್ HBAಗಳ qla2xxx ಚಾಲಕವನ್ನು ಆವೃತ್ತಿ 8.03.07.05.06.2-k ಗೆ ಅಪ್‌ಡೇಟ್ ಮಾಡಲಾಗಿದೆ.
  • megaraid ಚಾಲಕವನ್ನು ಆವೃತ್ತಿ v5.38 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • ಅರೆಕಾ RAID ನಿಯಂತ್ರಕಗಳಿಗಾಗಿನ arcmsr ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • beiscsi ಚಾಲಕವನ್ನು ಆವೃತ್ತಿ 2.103.298.0 ಗೆ ಅಪ್‌ಡೇಟ್ ಮಾಡಲಾಗಿದೆ.
  • IBM Power Linux RAID SCSI HBAಗಳಿಗಾಗಿನ qlaxxx ಚಾಲಕವನ್ನು ಆವೃತ್ತಿ 2.5.2 ಗೆ ಅಪ್‌ಡೇಟ್ ಮಾಡಲಾಗಿದೆ.
  • cciss ಚಾಲಕದ kdump ವಿಫಲತೆಗಳಿಗಾಗಿ ಒಂದು ಪರಿಹಾರವನ್ನು ಒದಗಿಸುವಂತೆ cciss ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • hpsa ಚಾಲಕದ kdump ವಿಫಲತೆಗಳಿಗಾಗಿ ಒಂದು ಪರಿಹಾರವನ್ನು ಒದಗಿಸುವಂತೆ hpsa ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಬ್ರಾಡ್‌ಕಾಮ್‌ NetXtreme II iSCSI ಗಾಗಿನ bnx2i ಚಾಲಕವನ್ನು 578xx ಮಲ್ಟಿ-ಪೋರ್ಟ್ ಸಿಂಗಲ್-ಚಿಪ್ 10G ಎತರ್ನೆಟ್ ಕನ್ವರ್ಜೆನ್ಸ್‍ ಕಂಟ್ರೋಲರುಗಳ ಗುಂಪಿನ 578xx ಅನ್ನು ಬೆಂಬಲಿಸುವಂತೆ ಆವೃತ್ತಿ 2.7.0.3 ಗೆ ಅಪ್‌ಡೇಟ್ ಮಾಡಲಾಗಿದೆ
  • mpt2sas ಚಾಲಕವನ್ನು ಆವೃತ್ತಿ 09.101.00.00 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • Brocade BFA FC SCSI ಚಾಲಕವನ್ನು (bfa ಚಾಲಕ) ಆವೃತ್ತಿ 2.3.2.4 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi ಚಾಲಕವನ್ನು ಆವೃತ್ತಿ 4.0.160r ಗೆ ಅಪ್‌ಡೇಟ್ ಮಾಡಲಾಗಿದೆ.
  • ata_generic ಚಾಲಕವನ್ನು Intel IDE-R ATA ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • isci ಚಾಲಕವನ್ನು ಆವೃತ್ತಿ 2.6.40-rc ಗೆ ಅಪ್‌ಡೇಟ್ ಮಾಡಲಾಗಿದೆ.
  • libfc, libfcoe, ಹಾಗು fcoe ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ.
  • qib ಚಾಲಕ TrueScale HCAಗಳನ್ನು ಅಪ್‌ಡೇಟ್ ಮಾಡಲಾಗಿದೆ.
  • ದೋಷದ ಮೇಲ್ವಿಚಾರಣೆಯಲ್ಲಿ ಸುಧಾರಣೆಯನ್ನು ತರಲು libata ಮಾಡ್ಯೂಲ್ ಅನ್ನು ಅಪ್‌ಡೇಟ್ ಮಾಡಲಾಗಿದೆ.
  • dm-raid ಗುರಿಯನ್ನು ಒಳಗೊಳ್ಳುವಂತೆ md ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು ಒಂದು DM ಸಂಪರ್ಕಸಾಧನದ ಮೂಲಕ RAID ಸಾಮರ್ಥ್ಯಗಳನ್ನು ಒದಗಿಸುತ್ತದೆ. dm-raid ಸಂಕೇತವನ್ನು ಒಂದು ತಂತ್ರಜ್ಞಾನ ಅವಲೋಕನ ಎಂದು ಗುರುತಿಸಲಾಗಿದೆ.
  • ಸಾಧನ ಮ್ಯಾಪರ್ ಬೆಂಬಲವನ್ನು ಅಪ್‌ಸ್ಟ್ರೀಮಿನ ಆವೃತ್ತಿಯನ್ನು 3.1+ ಗೆ ಅಪ್‌ಡೇಟ್ ಮಾಡಲಾಗಿದೆ.
  • bsg/netlink ಸಂಪರ್ಕಸಾಧನಗಳನ್ನು ಬಳಸಿಕೊಂಡು qla4xxxಗಾಗಿನ ಅನ್ವಯ ಬೆಂಬಲವನ್ನು ಸೇರಿಸಲಾಗಿದೆ.
  • DIF/DIX ಕರ್ನಲ್ ಕೋಡ್ ಅನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ, ಇದು scsi, block, ಹಾಗು dm/mdಯ ಮೇಲೆ ಪರಿಣಾಮವನ್ನು ಬೀರುತ್ತದೆ.
ಜಾಲಬಂಧ ಚಾಲಕಗಳು
  • NetXen ಮಲ್ಟಿ ಪೋರ್ಟ್ (1/10) ಗಿಗಾಬಿಟ್ ನೆಟ್‌ವರ್ಕ್ ಸಾಧನಗಳಿಗಾಗಿನ netxen ಚಾಲಕವನ್ನು ಆವೃತ್ತಿ 4.0.75 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • vmxnet3 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • bnx2x ಚಾಲಕವನ್ನು ಆವೃತ್ತಿ v1.70 ಗೆ ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine 2 Open iSCSI ಸಾಧನಗಳಿಗಾಗಿನ be2net ಚಾಲಕವನ್ನು ಆವೃತ್ತಿ 4.0.100u ಗೆ ಅಪ್‌ಡೇಟ್ ಮಾಡಲಾಗಿದೆ.
  • ixgbevf ಚಾಲಕವನ್ನು ಆವೃತ್ತಿ 2.1.0-k2 ಗೆ ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ ಟರ್ಮಿನೇಟರ್4 10G ಯೂನಿಫೈಡ್ ವೈರ್ ನೆಟ್‌ವರ್ಕ್ ನಿಯಂತ್ರಕಗಳಿಗಾಗಿನ cxgb4 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ T3 ಕುಟುಂಬದ ನೆಟ್‌ವರ್ಕ್ ಸಾಧನಗಳಿಗಾಗಿನ cxgb3 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • Intel 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 3.4.8-k ಗೆ ಅಪ್‌ಡೇಟ್ ಮಾಡಲಾಗಿದೆ.
  • Intel PRO/1000 ಜಾಲಬಂಧ ಸಾಧನಗಳಿಗಾಗಿ e1000e ಚಾಲಕವನ್ನು ಆವೃತ್ತಿ 1.3.16-k ಗೆಅಪ್‌ಡೇಟ್ ಮಾಡಲಾಗಿದೆ.
  • Intel PRO/1000 ಜಾಲಬಂಧ ಸಾಧನಗಳಿಗಾಗಿ e1000 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದ್ದು, ಇದು Marvell Alaska M88E1118R PHY ಬೆಂಬಲವನ್ನು ಒದಗಿಸುತ್ತದೆ.
  • e100 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • Cisco 10G ಎತರ್ನೆಟ್ ಸಾಧನಕ್ಕಾಗಿನ enic ಆವೃತ್ತಿಯನ್ನು 2.1.1.24 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • ixgbevf ಚಾಲಕವನ್ನು ಆವೃತ್ತಿ 2.0.0-k ಗೆ ಅಪ್‌ಡೇಟ್ ಮಾಡಲಾಗಿದೆ.
  • Intel ಗಿಗಾಬಿಟ್ ಎತರ್ನೆಟ್ ಅಡಾಪ್ಟರುಗಳಿಗಾಗಿನ igb ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಬ್ರಾಡ್‌ಕಾಮ್‌ NetXtreme II 1 ಗಿಗಾಬಿಟ್‌ ಎತರ್ನೆಟ್‌ಗಾಗಿನ bnx2i ಚಾಲಕವನ್ನು ಆವೃತ್ತಿ 2.1.6+ ಗೆ ಅಪ್‌ಡೇಟ್ ಮಾಡಲಾಗಿದೆ
  • Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಆವೃತ್ತಿ 3.119 ಗೆ ಅಪ್‌ಡೇಟ್ ಮಾಡಲಾಗಿದೆ.
  • HP NC-ಸೀರೀಸ್ ಕ್ಯುಲಾಜಿಕ್ 10 ಗಿಗಾಬಿಟ್ ಸರ್ವರ್ ಅಡಾಪ್ಟರ್ಸ್ ಸಾಧನಕ್ಕಾಗಿನ qlcnic ಆವೃತ್ತಿಯನ್ನು 5.0.16+ ಗೆಅಪ್‌ಡೇಟ್ ಮಾಡಲಾಗಿದೆ.
  • bna ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • r8169 ಚಾಲಕವನ್ನು Rx ಚೆಕ್‌ಸಮ್ ಆಫ್‌ಲೋಡಿಂಗ್‌ಗೆ ಸಂಬಂಧಿಸಿದ ಎರಡು ದೋಷಗಳನ್ನು ಸರಿಪಡಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • qlge ಚಾಲಕವನ್ನು ಆವೃತ್ತಿ v1.00.00.29 ಗೆ ಅಪ್‌ಡೇಟ್ ಮಾಡಲಾಗಿದೆ.
  • Multi-Port Single-Chip 10G Ethernet Converged Controllers ಗುಂಪಿನ 578xx ಗಾಗಿ iSCSI ಹಾಗು FCoE ಬೆಂಬಲವನ್ನು ಸೇರಿಸುವಂತೆ, VLAN ಬೆಂಬಲ, ಹಾಗು ಹೊಸ bnx2x ಫರ್ಮ್-ವೇರ್ ಸಂಪರ್ಕಸಾಧನಕ್ಕೆ ಬೆಂಬಲವನ್ನು ಒದಗಿಸುವಂತೆ cnic ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • iwl6000 ಹಾಗು iwlwifi ಅನ್ನು EEPROM ಆವೃತ್ತಿ 0x423 ಯೊಂದಿಗೆ ಅಪ್‌ಡೇಟ್ ಮಾಡಲಾಗಿದೆ.
ಗ್ರಾಫಿಕ್ಸ್‍ ಹಾಗು ವಿವಿಧ ಚಾಲಕಗಳು
  • ಬ್ಯಾಕ್‌ಪೋರ್ಟ್ ಮಾಡಲಾದ drm/agp ಕೋಡ್‌ಗಳನ್ನು ಸೇರಿಸುವದರ ಜೊತೆಗೆ radeon ಚಾಲಕವನ್ನು post-3.0 ಪರಿಹಾರಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.
  • ಬ್ಯಾಕ್‌ಪೋರ್ಟ್ ಮಾಡಲಾದ drm/agp ಕೋಡ್‌ಗಳನ್ನು ಸೇರಿಸುವದರ ಜೊತೆಗೆ nouveau ಹಾಗು i915 ಚಾಲಕಗಳನ್ನು ಅಪ್‌ಡೇಟ್ ಮಾಡಲಾಗಿದೆ.
  • Ricoh ಮೆಮೊರಿ ಸ್ಟಿಕ್ ಚಾಲಕ (R5C592) ಅನ್ನು ಹೊಸ KFIFO ಅನ್ವಯ ಪ್ರೊಗ್ರಾಮಿಂಗ್ ಸಂಪರ್ಕಸಾಧನದೊಂದಿಗೆ ಅಪ್‌ಡೇಟ್ ಮಾಡಲಾಗಿದೆ.
  • netjet ಚಾಲಕವನ್ನು Digium TDM400P PCI Card ಅನ್ನು ಬ್ಲಾಕ್‌ಲಿಸ್ಟ್ ಮಾಡುವಂತೆ ಅಪ್‌ಡೇಟ್ ಮಾಡಲಾಗಿದೆ..
  • lm78 ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • wacom ಚಾಲಕವನ್ನು Cintiq 21UX2, Intuos4 WL, ಹಾಗು DTU-2231 ಅಡಾಪ್ಟರ್ ಕಾರ್ಡುಗಳಿಗೆ ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • synaptics ಚಾಲಕವನ್ನು ಮಲ್ಟಿ-ಟಚ್ ಬೆಂಬಲವನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • ALSA HDA ಆಡಿಯೊ ಚಾಲಕವನ್ನು ಹೊಸ ಚಿಪ್‌ಸೆಟ್‌ಗಳು ಹಾಗು HDA ಆಡಿಯೊ ಕೊಡೆಕ್‌ಗಳಿಗಾಗಿನ ಬೆಂಬಲವನ್ನು ಅಪ್‌ಡೇಟ್ ಮಾಡುವಂತೆ ಅಥವ ಸುಧಾರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • edac ಚಾಲಕವನ್ನು AMD ಪ್ಲಾಟ್‌ಫಾರ್ಮುಗಳಿಗಾಗಿ ಹೊಸ Northbridge ಚಿಪ್‌ ಅನ್ನು ಬೆಂಬಲಿಸುವಂತೆ ಅಪ್‌ಡೇಟ್ ಮಾಡಲಾಗಿದೆ.

ಅಧ್ಯಾಯ 6. ಶೇಖರಣೆ

SAS VRAID ಕ್ರಿಯೆಗಳಿಗಾಗಿ iprutil ಬೆಂಬಲ
ipr SCSI ಶೇಖರಣೆಯನ್ನು ಸಾಧನ ಚಾಲಕದಿಂದ ಬೆಂಬಲಿಸಲಾಗುವ SCSI ಸಾಧನಗಳನ್ನು ನಿರ್ವಹಿಸಲು ಹಾಗು ಸಂರಚಿಸಲು ಅಗತ್ಯವಿರುವ ಸವಲತ್ತುಗಳನ್ನು Iprutils ಪ್ಯಾಕೇಜ್ ಒದಗಿಸುತ್ತದೆ. Iprutils ಪ್ಯಾಕೇಜ್ ಅನ್ನು ಹೊಸ 6 GB IBM POWER7 ಅಡಾಪ್ಟರುಗಳಿಗಾಗಿ AS VRAID ಕಾರ್ಯಗಳನ್ನು ಬೆಂಬಲಿಸುವಂತೆ ಅಪ್ಡೇಟ್ ಮಾಡಲಾಗಿದೆ.
LVM RAID ಬೆಂಬಲ
Red Hat ಎಂಟರ್ಪ್ರೈಸ್ ಲಿನಕ್ಸ್ 6.2 ರಲ್ಲಿ MDಯ RAID ಪರ್ಸನಾಲಿಟಿಗಳಿಗೆ ಒಂದು ತಂತ್ರಜ್ಞಾನ ಪೂರ್ವಾವಲೋಕನವಾಗಿ LVM ಗೆ ಬೆಂಬಲವನ್ನು ಸೇರಿಸಲಾಗಿದೆ. ಕೆಳಗಿನ ಮೂಲಭೂತ ಲಕ್ಷಣಗಳನ್ನು ಲಭ್ಯವಿದೆ: ಸೃಷ್ಟಿಸುವಿಕೆ, ಪ್ರದರ್ಶನ, ಹೆಸರು ಬದಲಿಸುವಿಕೆ ಹಾಗುRAID ಅನ್ನು ತಾರ್ಕಿಕ ಪರಿಮಾಣಗಳನ್ನು ತೆಗೆದುಹಾಕುವುದು. ಸ್ವಯಂಚಾಲಿತ ತಪ್ಪು ಸಹನೆ ಇನ್ನೂ ಲಭ್ಯವಿಲ್ಲ.
--type <segtype> ಆರ್ಗ್ಯುಮೆಂಟ್ ಅನ್ನು ಸೂಚಿಸುವ ಮೂಲಕ RAID ತಾರ್ಕಿಕ ಪರಿಮಾಣಗಳನ್ನು ಸೂಚಿಸಲು ಸಾಧ್ಯವಿರುತ್ತದೆ. ಈ ಕೆಳಗೆ ಕೆಲವು ಉದಾಹರಣೆಗಳನ್ನು ನೀಡಲಾಗಿದೆ:
  • ಒಂದು RAID1 ವ್ಯೂಹವನ್ನು ರಚಿಸಿ (ಇದು LVMನ mirror ಸೆಗ್ಮೆಂಟಿಗೆ ಹೋಲಿಸಿದಲ್ಲಿ RAID1 ರ ಭಿನ್ನವಾದ ಅಳವಡಿಕೆಯಾಗಿರುತ್ತದೆ):
    ~]# lvcreate --type raid1 -m 1 -L 1G -n my_lv my_vg
  • ಒಂದು RAID5 ವ್ಯೂಹವನ್ನು ಸೃಷ್ಟಿಸಿ (3 ಪಟ್ಟಿಗಳು + 1 ಸೂಚ್ಯ ಅನುರೂಪತೆ):
    ~]# lvcreate --type raid5 -i 3 -L 1G -n my_lv my_vg
  • ಒಂದು RAID6 ವ್ಯೂಹವನ್ನು ಸೃಷ್ಟಿಸಿ (3 ಪಟ್ಟಿಗಳು + 2 ಸೂಚ್ಯ ಅನುರೂಪತೆ):
    ~]# lvcreate --type raid6 -i 3 -L 1G -n my_lv my_vg
RDMA (iSER) ಆರಂಭಕ ಹಾಗು ಗುರಿಗಾಗಿನ iSCSI ವಿಸ್ತರಣೆ
iSER ಆರಂಭಕವನ್ನು ಮತ್ತು ಗುರಿ ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ. Red Hat Enterprise Linux ಈಗ ಒಂದು iSCSI ಆರಂಭಕವನ್ನು ಮತ್ತು ಉತ್ಪಾದನಾ ಶೇಖರಣಾ ಪರಿಚಾರಕವನ್ನು ಕಾರ್ಯನಿರ್ವಹಿಸಬಲ್ಲInfiniBand ಮತ್ತು ಇಲ್ಲಿ ಹೆಚ್ಚಿನ ಥ್ರೋಪುಟ್ ಮತ್ತು ಕಡಿಮೆ ಲೇಟೆನ್ಸಿ ಬಳಸುವ ಪರಿಸರದಲ್ಲಿನ ಪ್ರಮುಖ ಅಗತ್ಯತೆಗಳಾಗಿರುತ್ತವೆ.
LVM ಸಾಧನಗಳಿಗಾಗಿ ಸಕ್ರಿಯಗೊಳಿಕಾ ಸಮಯದಲ್ಲಿ ಕಡಿತ
LVM ಸಾಧನಗಳನ್ನು ಈಗ ಮೊದಲಿಗಿಂತಲೂ ಕ್ಷಿಪ್ರವಾಗಿ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು. ಇದುLVM ದೊಡ್ಡ ಸಂಖ್ಯೆಯ ಒಳಗೊಂಡ ಹೆಚ್ಚಿನ ಸಾಂದ್ರತೆಯ ಸೂಕ್ತ ಪರಿಸರದಲ್ಲಿಸಂರಚನೆಗಳನ್ನು. ಇದಕ್ಕೆ ಒಂದು ಉದಾಹರಣೆ ನೂರಾರು ಬೆಂಬಲಿಸುವ ಆತಿಥೇಯವರ್ಚುವಲ್‌ ಅತಿಥಿಗಳು ಒಂದು ಅಥವಾ ಹೆಚ್ಚು ತಾರ್ಕಿಕ ಪರಿಮಾಣಗಳನ್ನು ಬಳಸಿಕೊಳ್ಳುವಲ್ಲಿ.

ಅಧ್ಯಾಯ 7. ಕಡತ ವ್ಯವಸ್ಥೆ

XFS ಸ್ಕೇಲೆಬಿಲಿಟಿ
XFS ಕಡತ ವ್ಯವಸ್ಥೆಯನ್ನು ಪ್ರಸಕ್ತ Red Hat Enterprise Linux 6 ರಲ್ಲಿ ಬೆಂಬಲಿಸಲಾಗುತ್ತದೆ ಹಾಗು ಇದು ಒಂದು ಆತಿಥೇಯದಲ್ಲಿನ ಬಹು ದೊಡ್ಡ ಕಡತಗಳು ಹಾಗು ಕಡತ ವ್ಯವಸ್ಥೆಗಳಿಗಾಗಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಸಂಘಟಿತ ಬ್ಯಾಕ್ಅಪ್ ಹಾಗು ಮರುಸ್ಥಾಪಿಸುವಿಕೆ, ನೇರವಾದ I/O ಕಡತ ವ್ಯವಸ್ಥೆಗಳ ನೇರವಾದ ಗಾತ್ರ ಬದಲಾವಣೆ ಇವೆ ಮೊದಲಾದ ಉಪಯುಕ್ತತೆಗಳನ್ನು ಈ ಕಡತವ್ಯವಸ್ಥೆಯು ಒದಗಿಸುತ್ತದೆ.
ಮೆಟಾಡೇಟಾ ತೀವ್ರತರ ಕಾರ್ಯದ ಹೊರೆಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಲು XFS ಅನ್ವಯಿಸುವಿಕೆಯನ್ನು ಸುಧಾರಿಸಲಾಗಿದೆ. ಈ ಬಗೆಯ ಕಾರ್ಯದ ಹೊರೆಯ ಒಂದು ಉದಾಹರಣೆಯೆಂದರೆ ಒಂದು ಕೋಶದಲ್ಲಿನ ಸಾವಿರಾರು ಸಣ್ಣ ಕಡತಗಳನ್ನು ನಿಲುಕಿಸಿಕೊಳ್ಳುವಿಕೆ. ಈ ಸುಧಾರಣೆಯ ಮೊದಲು, ಮೆಟಾಡೇಟ ಸಂಸ್ಕರಣೆಯು ಅಡಚಣೆಗೆ ಕಾರಣವಾಗುತ್ತಿತ್ತು ಹಾಗು ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿತ್ತು. ಈ ತೊಂದರೆಯನ್ನು ಸರಿಪಡಿಸಲು, ಮೆಟಾಡೇಟಾ ದಾಖಲಿಸುವಿಕೆಯಲ್ಲಿ ವಿಳಂಬ ಉಂಟಾಗುವಂತೆ ಒಂದು ಆಯ್ಕೆಯನ್ನು ಸೇರಿಸಲಾಗಿದೆ, ಹಾಗು ಇದರಿಂದಾಗಿ ಗಮನಾರ್ಹವಾದ ಕಾರ್ಯನಿರ್ವಹಣೆ ಸುಧಾರಣೆಗೆ ಕಾರಣವಾಗಿದೆ. ವಿಳಂಬಿತ ಮೆಟಾಡೇಟಾ ದಾಖಲಿಸುವಿಕೆಯಿಂದಾಗಿ, ಅಂತಹ ಕಾರ್ಯದ ಹೊರೆಯಲ್ಲಿ XFS ಕಾರ್ಯನಿರ್ವಹಣೆಯು ext4 ಯೊಂದಿಗೆ ಹೊಂದಿಕೆಯಾಗುತ್ತದೆ. ವಿಳಂಬವಾಗಿ ದಾಖಲಿಸುವಂತೆ ಪೂರ್ವನಿಯೋಜಿತ ಆರೋಹಣಾ ಆಯ್ಕೆಗಳನ್ನೂ ಸಹ ಅಪ್‌ಡೇಟ್ ಮಾಡಲಾಗಿದೆ.
ಪ್ಯಾರಲಲ್ NFS
ಪ್ಯಾರಲಲ್ NFS (pNFS) ಎನ್ನುವುದು NFS v4.1 ಶಿಷ್ಟತೆಯ ಒಂದು ಭಾಗವಾಗಿದ್ದು, ಇದು ಕ್ಲೈಂಟ್‌ಗಳು ಶೇಖರಣಾ ಸಾಧನಗಳನ್ನು ನೇರವಾಗಿ ಹಾಗು ಸಮಾನಾಂತರವಾಗಿ ನಿಲುಕಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. pNFS ಆರ್ಕಿಟೆಕ್ಚರ್ ಇಂದು NFS ಪರಿಚಾರಕಗಳಲ್ಲಿನ ಸ್ಕೇಲಿಬಿಲಿಟಿ ಹಾಗು ಕಾರ್ಯನಿರ್ವಹಣೆಗೆ ಸಂಬಂಧಿಸಿದ ದೋಷಗಳನ್ನು ನಿವಾರಿಸುತ್ತದೆ.
pNFS ಎನ್ನುವುದು 3 ವಿವಿಧ ಶೇಖರಣಾ ಪ್ರೊಟೊಕಾಲ್ ಅಥವ ಲೇಔಟ್‌ಗಳಾದಂತಹ ಕಡತಗಳು, ವಸ್ತುಗಳು ಹಾಗು ಖಂಡಗಳನ್ನು ಬೆಂಬಲಿಸುತ್ತದೆ. Red Hat Enterprise Linux 6.2 NFS ಕ್ಲೈಂಟ್ ಕಡತಗಳ ಲೇಔಟ್‌ ಪ್ರೊಟೊಕಾಲ್‌ ಅನ್ನು ಬೆಂಬಲಿಸುತ್ತದೆ.
pNFS ಕ್ರಿಯೆಯನ್ನು ಸ್ವಯಂಚಾಲಿತವಾಗಿ ಶಕ್ತಗೊಳಿಸಲು, /etc/modprobe.d/dist-nfsv41.conf ಎಂಬಲ್ಲಿ ಈ ಕೆಳಗಿನ ಸಾಲನ್ನು ಹೊಂದಿರುವ ಕಡತವೊಂದನ್ನು ಸೃಷ್ಟಿಸಿ:
alias nfs-layouttype4-1 nfs_layout_nfsv41_files
-o minorversion=1 ಆರೋಹಣಾ ಆಯ್ಕೆಯನ್ನು ಸೂಚಿಸಿದಾಗ, ಹಾಗು pNFS-ಶಕ್ತಗೊಳಿಸಿದಾಗ, pNFS ಕ್ಲೈಂಟ್‌ ಕೋಡ್ ಅನ್ನು ಸ್ವಯಂಚಾಲಿತವಾಗಿ ಶಕ್ತಗೊಳಿಸಲಾಗುತ್ತದೆ.
ಈ ಸವಲತ್ತು ಒಂದು ತಂತ್ರಜ್ಞಾನ ಅವಲೋಕನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ pNFS, http://www.pnfs.com/ ಅನ್ನು ನೋಡಿ.
CIFS ನಲ್ಲಿ ಹೊಂದಿಕೆಯಾಗದ ರೀತಿಯಲ್ಲಿ ಬರೆಯುವಿಕೆ
CIFS (Common Internet File System) ಪ್ರೊಟೊಕಾಲ್‌ ವಿಭಿನ್ನ ಕಾರ್ಯ ವ್ಯವಸ್ಥೆಗಳಲ್ಲಿನ ದೂರಸ್ಥ ಕಡತಗಳನ್ನು ನಿಲುಕಿಸಿಕೊಳ್ಳಲು ಒಂದು ಕೇಂದ್ರೀಕೃತ ಮಾರ್ಗವನ್ನು ಒದಗಿಸುತ್ತದೆ. CIFS ಕ್ಲೈಂಟ್‌ ಈ ಹಿಂದೆ ಕೇವಲ ಹೊಂದಿಕೆಯಾಗುವ ಬರೆಯುವಿಕೆಯಲ್ಲಿ ಮಾತ್ರ ಅನುಮತಿಸಲಾಗುತ್ತಿತ್ತು. ಅಂದರೆ ಬರೆಯುವಿಕೆಯು ಪೂರ್ಣಗೊಳ್ಳದ ಹೊರತು ಕ್ಲೈಂಟ್ ಪ್ರಕ್ರಿಯೆಯು ನಿಯಂತ್ರಣವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿರುವುದಿಲ್ಲ. ದೊಡ್ಡ ವ್ಯವಹಾರಗಳು ಪೂರ್ಣಗೊಳ್ಳಲು ಬಹಳ ಸಮಯ ತೆಗೆದುಕೊಳ್ಳುವಂತಹ ಸನ್ನಿವೇಶಗಳಲ್ಲಿ ಇದು ಕಾರ್ಯನಿರ್ವಹಣೆಯಲ್ಲಿ ಕೊರತೆಗೆ ಕಾರಣವಾಗುತ್ತದೆ. ಸರಣಿ ಬರೆಯುವಿಕೆಗಳಿಗಾಗಿ ಕಾಯದೆ ದತ್ತಾಂಶವನ್ನು ಸಮಾನಾಂತರವಾಗಿ ಬರೆಯುವಂತೆ CIFS ಕ್ಲೈಂಟ್‌ ಅನ್ನು ಅಪ್‌ಡೇಟ್‌ ಮಾಡಲಾಗಿದೆ. ಈ ಬದಲಾವಣೆಯಿಂದಾಗಿ ಕಾರ್ಯನಿರ್ವಹಣೆಯಲ್ಲಿ 200% ದ ವರೆಗೆ ಸುಧಾರಣೆಗೊಂಡಿದೆ.
CIFS NTLMSSP ದೃಢೀಕರಣ
NTLMSSP ದೃಢೀಕರಣಕ್ಕಾಗಿನ ಬೆಂಬಲವನ್ನು CIFS ಗೆ ಸೇರಿಸಲಾಗಿದೆ. ಜೊತೆಗೆ, CIFS ಈಗ ಕರ್ನಲ್‌ನ ಕ್ರಿಪ್ಟೊ API ಅನ್ನು ಬಳಸುತ್ತದೆ.
autofs4 ಮಾಡ್ಯೂಲ್
autofs4 ಕರ್ನಲ್‌ ಆವೃತ್ತಿ 2.6.38 ಗೆ ಅಪ್‌ಡೇಟ್ ಮಾಡಲಾಗಿದೆ.
ext3 ಹಾಗು jbd ಗಾಗಿನ ನಿಶ್ಚಿತ ಟ್ರೇಸ್‌ಪಾಯಿಂಟ್‌ಗಳು
ext3 ಹಾಗು jbd ಗಾಗಿನ ನಿಶ್ಚಿತ ಟ್ರೇಸ್‌ಪಾಯಿಂಟ್‌ಗಳನ್ನು ಸೇರಿಸಲಾಗಿದೆ.
ಸೂಪರ್ಬ್ಲಾಕ್‌ನಲ್ಲಿ ಆರೋಹಣಾ ಆಯ್ಕೆಗಳು
ext4, ಹಾಗು ಅದರ ಅದರ ಸೌಲಭ್ಯಗಳಾದಂತಹ tune2fs, debugfs, libext2fsಗಾಗಿ -o nobarrier ಆರೋಹಣಾ ಆಯ್ಕೆಗಾಗಿ ಬೆಂಬಲವನ್ನು ಸೇರಿಸಲಾಗಿದೆ.

ಅಧ್ಯಾಯ 8. ಜಾಲಬಂಧ

ಬಹು-ಸಂದೇಶ ಕಳುಹಿಸುವ ವ್ಯವಸ್ಥೆಯ ಕರೆ
Red Hat Enterprise Linux 6.2 ರಲ್ಲಿ ಬಹು-ಸಂದೇಶ send ವ್ಯವಸ್ಥೆಯ ಕರೆಯನ್ನು ಪರಿಚಯಿಸಲಾಗುತ್ತದೆ. ಇದು Red Hat Enterprise Linux 6 ರಲ್ಲಿ ಈಗಿರುವ recvmmsg ವ್ಯವಸ್ಥೆಯ ಕರೆಯ send ಆಗಿರುತ್ತದೆ.
ವ್ಯವಸ್ಥೆ ಕರೆಯ sendmmsg ಸಾಕೆಟ್‌ API ಈ ರೀತಿ ಕಾಣಿಸಿಕೊಳ್ಳುತ್ತದೆ:
struct mmsghdr {
	struct msghdr	msg_hdr;
	unsigned	msg_len;
    };

ssize_t sendmmsg(int socket, struct mmsghdr *datagrams, int vlen, int flags);
ಟ್ರಾನ್ಸಿಟ್ ಪ್ಯಾಕೆಟ್ ಸ್ಟೀರಿಂಗ್ (XPS)
Red Hat Enterprise Linux 6.2 ರಲ್ಲಿ ಬಹುಸರತಿ (ಮಲ್ಟಿಕ್ಯೂ) ಸಾಧನಗಳಿಗಾಗಿ ಟ್ರಾನ್ಸಿಟ್ ಪ್ಯಾಕೆಟ್ ಸ್ಟೀರಿಂಗ್ (XPS) ಅನ್ನು ಒಳಗೊಂಡಿರುತ್ತದೆ. ಪ್ಯಾಕೆಟ್‌ ಅನ್ನು ಕಳುಹಿಸುವಲ್ಲಿ ಭಾಗಿಯಾದ ಸಂಸ್ಕಾರಕವನ್ನು ನಿಶ್ಚಿತವಾಗಿ ಗುರಿಯಾಗಿರಿಸಿಕೊಳ್ಳುವ ಮೂಲಕ ಬಹುಸರತಿ ಸಾಧನಗಳಿಗಾಗಿ ಜಾಲಬಂಧ ಪ್ಯಾಕೆಟ್‌ಗಳನ್ನು ಹೆಚ್ಚು ದಕ್ಷತೆಯಿಂದ ಕಳುಹಿಸುವುದನ್ನು XPS ಪರಿಚಯಿಸುತ್ತದೆ. ಸಂರಚನೆಯ ಆಧಾರದಲ್ಲಿ ಪ್ಯಾಕೆಟ್ ಕಳುಹಿಸಲು ಕಳುಹಿಸುವ ಸರತಿಯನ್ನು ಆಯ್ಕೆ ಮಾಡಲು XPS ಅನುವು ಮಾಡಿಕೊಡುತ್ತದೆ. ಇದು Red Hat Enterprise Linux 6.1 ಅನ್ವಯಿಸಲಾದ ಸ್ವೀಕರಿಸುವ-ಬದಿಯ ಕಾರ್ಯಶೀಲತೆಗೆ ಸಮನಾಗಿದ್ದು, ಇದರಲ್ಲಿ ಸ್ವೀಕರಿಸುವ ಸರತಿಯ (RPS) ಆಧಾರದಲ್ಲಿ ಸಂಸ್ಕಾರಕದ ಆಯ್ಕೆಗೆ ಅನುವು ಮಾಡಲಾಗುತ್ತದೆ. XPS ನಿಂದಾಗಿ ತ್ರೂಪುಟ್ 20% ರಿಂದ 30% ರಷ್ಟು ಸುಧಾರಣೆಗೊಂಡಿರುವುದು ಕಂಡುಬಂದಿದೆ.
ನೋಂದಾಯಿಸದೆ ಇರುವ ಗುಂಪುಗಳಲ್ಲಿ ಟ್ರಾಫಿಕ್ ಫ್ಲಡಿಂಗ್
ಈ ಹಿಂದೆ, ನೋಂದಾಯಿಸದೆ ಇರುವ ಗುಂಪುಗಳನ್ನು ಎಲ್ಲಾ ಸಂಪರ್ಕಸ್ಥಾನಗಳ ಫ್ಲಡೆಡ್ ಪ್ಯಾಕೆಟ್‌ಗಳನ್ನು ಬ್ರಿಜ್‌ ಮಾಡಲಾಗುತ್ತಿತ್ತು. ಆದರೆ, ನೋಂದಾಯಿಸದೆ ಇರುವ ಗುಂಪುಗಳಿಗಾಗಿ ಯಾವಾಗಲೂ ಟ್ರಾಫಿಕ್‌ ಇರುವಂತಹ ವ್ಯವಸ್ಥೆಯಲ್ಲಿ ಈ ವರ್ತನೆಯನ್ನು ಬಯಸುವುದಿಲ್ಲ. Red Hat Enterprise Linux 6.2 ರಲ್ಲಿ, ಟ್ರಾಫಿಕ್ ಅನ್ನು ನೋಂದಾಯಿಸದೆ ಇರುವ ಗುಂಪುಗಳ ಕೇವಲ ರೌಟರ್ ಎಂದು ಗುರುತು ಹಾಕಲಾದ ಸಂಪರ್ಕಸ್ಥಾನಗಳಿಗೆ ಮಾತ್ರ ಕಳುಹಿಸಲಾಗುತ್ತದೆ. ಒಂದು ನಿರ್ದಿಷ್ಟ ಸಂಪರ್ಕಸ್ಥಾನಕ್ಕೆ ಫ್ಲಡಿಂಗ್ ಅನ್ನು ಒತ್ತಾಯಪಡಿಸಲು, ಸಂಪರ್ಕಸ್ಥಾನವನ್ನು ರೌಟರ್ ಎಂದು ಗುರುತು ಹಾಕಿ.
ಸ್ಟ್ರೀಮ್ ಕಂಟ್ರೋಲ್ ಟ್ರಾನ್ಸ್‍ಮಿಶನ್ ಪ್ರೊಟೊಕಾಲ್ (SCTP) ಮಲ್ಟಿಹೋಮ್ ಬೆಂಬಲ
Red Hat Enterprise Linux 6.2 ರಲ್ಲಿ SCTP ಮಲ್ಟಿಹೋಮಿಂಗ್‌ಗೆ ಬೆಂಬಲವನ್ನು ಸೇರಿಸಲಾಗಿದೆ —ಹಲವಾರು IP ವಿಳಾಸಗಳ ಅಡಿಯಲ್ಲಿ ನೋಡ್‌ಗಳನ್ನು (ಅಂದರೆ, ಮಲ್ಟಿ-ಹೋಮ್ ನೋಡ್‌ಗಳು) ತಲುಪುವ ಸಾಧ್ಯತೆ ಇರುತ್ತದೆ.
UDP ಪ್ಯಾಕೆಟ್ ತಪ್ಪಿಹೋಗುವಿಕೆ ಘಟನೆಗಳಿಗಾಗಿನ ಟ್ರೇಸ್‌ಪಾಯಿಂಟ್‌ಗಳು
Red Hat Enterprise Linux 6.2 ರಲ್ಲಿ, UDP ಪ್ಯಾಕೆಟ್‌ ತಪ್ಪಿ ಹೋಗುವಿಕೆ ಘಟನೆಗಳಲ್ಲಿ ಹೆಚ್ಚಿನ ಟ್ರೇಸ್‌ಪಾಯಿಂಟ್‌ಗಳನ್ನು ಸೇರಿಸಲಾಗಿದೆ. ಈ ಟ್ರೇಸ್‌ಪಾಯಿಂಟ್‌ಗಳನ್ನು ಬಳಸಿಕೊಂಡು UDP ಪ್ಯಾಕೆಟ್‌ಗಳು ಏಕೆ ತಪ್ಪಿಹೋದವು ಎಂದು ವಿಶ್ಲೇಷಿಸಲು ಸಾಧ್ಯವಿರುತ್ತದೆ.
IPSet
ಕರ್ನಲ್‌ಗೆ IPSet ಸವಲತ್ತನ್ನು ಸೇರಿಸುವುದರಿಂದ ಹಲವು IP ವಿಳಾಸಗಳು ಅಥವ ಸಂಪರ್ಕಸ್ಥಾನ ಸಂಖ್ಯೆಗಳನ್ನು ಶೇಖರಿಸಿಡಲು, ಹಾಗು ಅವುಗಳನ್ನು iptables ಮೂಲಕ ಸಂಗ್ರಹದೊಂದಿಗೆ ತಾಳೆ ಮಾಡಲು ಸಾಧ್ಯವಿರುತ್ತದೆ.
TCP ಆರಂಭಿಕ ಸ್ವೀಕರಿಸುವ ಪೂರ್ವನಿಯೋಜಿತ ವಿಂಡೊ
TCP ಆರಂಭಿಕ ಸ್ವೀಕರಿಸುವ ಪೂರ್ವನಿಯೋಜಿತ ವಿಂಡೊವನ್ನು 4 kB ಇಂದ 15 kB ಗೆ ಹೆಚ್ಚಿಸಲಾಗಿದೆ. ಇದರಿಂದಾಗಿ, ಯಾವುದೆ ದತ್ತಾಂಶವು (15 kB > ಪೇಲೋಡ್ > 4 kB) ಈಗ ಆರಂಭಿಕ ವಿಂಡೊಕ್ಕೆ ಹೊಂದಿಕೆಯಾಗಲು ಸಾಧ್ಯವಿರುತ್ತದೆ. 4 kB ಸಿದ್ಧತೆಯಲ್ಲಿ (IW3), ಯಾವುದೆ ಪೇಲೋಡ್ 4 kB ಗಿಂತ ಹೆಚ್ಚಾಗಿದ್ದಲ್ಲಿ ಅದನ್ನು ಅನೇಕ ವರ್ಗಾವಣೆಗಳಾಗಿ ವಿಭಜಿಸುವ ಅಗತ್ಯವಿರುತ್ತಿತ್ತು.
TCP ಆರಂಭಿಕ ಇಕ್ಕಟ್ಟಿನ ಪೂರ್ವನಿಯೋಜಿತ ವಿಂಡೊ
Red Hat Enterprise Linux 6.2 ರಲ್ಲಿ, TCP ಆರಂಭಿಕ ಇಕ್ಕಟ್ಟಿನ ವಿಂಡೊ ಪೂರ್ವನಿಯೋಜಿತವನ್ನು RFC 5681ನಲ್ಲಿ ಸೂಚಿಸಲಾಗಿರುವಂತೆ ಈಗ 10 ಕ್ಕೆ ಹೊಂದಿಸಲಾಗಿದೆ. ಜೊತೆಗೆ, TCP ಹಾಗು CCID-2 ಗೆ ಸಾಮಾನ್ಯವಾದ ಆರಂಭಿಕ-ವಿಂಡೊವನ್ನು ಕ್ರೊಢೀಕರಿಸಲಾಗಿದೆ.
IPv6 ನಲ್ಲಿ GSO ಬೆಂಬಲ
IPv6 ಫಾರ್ವಾರ್ಡ್ ಮಾರ್ಗಕ್ಕಾಗಿನ GSO (ಜನೆರಿಕ್ ಸೆಗ್ಮೆಂಟೇಶನ್ ಆಫ್‌ಲೋಡ್) ಬೆಂಬಲವನ್ನು ಸೇರಿಸಲಾಗಿದ್ದು, GSO ಅನ್ನು ಶಕ್ತಗೊಳಿಸಲಾಗಿದ್ದರೆ ಆತಿಥೇಯ/ಅತಿಥಿಯ ಸಂವಹನವನ್ನು ಉತ್ತಮಗೊಳಿಸುತ್ತದೆ.
vios-proxy
vios-proxy ಎನ್ನುವುದು ಒಂದು ವರ್ಚುವಲ್‌ ಅತಿಥಿಯಲ್ಲಿರುವ ಕ್ಲೈಂಟ್‌ ಹಾಗು ಹೈಪರ್ವೈಸರ್ ಆತಿಥೇಯದಲ್ಲಿರುವ ಒಂದು ಪರಿಚಾರಕದ ನಡುವೆ ಸಂಪರ್ಕವನ್ನು ಒದಗಿಸುವ ಸ್ಟ್ರೀಮ್-ಸಾಕೆಟ್ ಪ್ರಾಕ್ಸಿಯಾಗಿದೆ. virtio-serial ಕೊಂಡಿಗಳ ಮೂಲಕ ಸಂವಹನವು ನಡೆಯುತ್ತದೆ. ಈ ಸವಲತ್ತನ್ನು Red Hat Enterprise Linux 6.2 ರಲ್ಲಿ ತಂತ್ರಜ್ಞಾನ ಅವಲೋಕನವಾಗಿ ಪರಿಚಯಿಸಲಾಗಿದೆ.

ಅಧ್ಯಾಯ 9. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ

ಗುರುತಿನ ನಿರ್ವಹಣೆ
Red Hat Enterprise Linux 6.2 ಗುರುತಿನ ನಿರ್ವಹಣೆ ಸಾಮರ್ಥ್ಯಗಳು ಒಳಗೊಂಡಿದೆಬಳಕೆದಾರ ಗುರುತುಗಳನ್ನು, ನೀತಿ ಆಧಾರಿತ ಪ್ರವೇಶ ನಿಯಂತ್ರಣ ಕೇಂದ್ರ ನಿರ್ವಹಣೆ ಅವಕಾಶಮತ್ತು ದೃಢೀಕರಣವನ್ನು ಸೇವೆಗಳು. ಈ ಗುರುತು ನಿರ್ವಹಣೆ ಸೇವೆ, ಹಿಂದೆ, IPA ಎಂದು ಕರೆಯಲಾಗುತ್ತಿತ್ತು, ಇದು ಮುಕ್ತ ತಂತ್ರಾಂಶ ಪರಿಯೋಜನೆಯಾದಂತಹ FreeIPA ಯ ಮೇಲೆ ಆಧರಿಸಿದೆ. ಈ ಸೇವೆಗಳು ಹಿಂದಿನ Red Hat Enterprise Linux 6 ಬಿಡುಗಡೆಯಲ್ಲಿ ಒಂದು ತಂತ್ರಜ್ಞಾನ ಪೂರ್ವಾವಲೋಕನವಾಗಿ ಪ್ರಸ್ತುತ ಮಾಡಲಾಗಿತ್ತು. ಈ ಬಿಡುಗಡೆಯೊಂದಿಗೆ, ಗುರುತು ನಿರ್ವಹಣೆ ಮಾಡಲಾಗಿದೆ ಸಂಪೂರ್ಣವಾಗಿ ಬೆಂಬಲಿತವಾಗಿದೆ ಬಡ್ತಿ.

ಹೆಚ್ಚಿನ ಓದಿಗಾಗಿ

Identity Management Guide ಎನ್ನುವುದು ತಾನು ಕೆಲಸ ಮಾಡುವ ತಂತ್ರಜ್ಞಾನವಾದಂತಹ ಐಡೆಂಟಿಟಿ ಮ್ಯಾನೇಜ್ಮೆಂಟ್ ಸಲ್ಯೂಶನ್‌ ಕುರಿತು, ಹಾಗು ಅದನ್ನು ವಿವರಿಸಲು ಬಳಸಲಾಗುವ ಕೆಲವು ಪಾರಿಭಾಷಿಕ ಪದಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಇದು ಕ್ಲೈಂಟ್ ಮತ್ತು ಪರಿಚಾರಕ ಘಟಕಗಳಿಗಾಗಿನ ಉನ್ನತ-ಮಟ್ಟದ ವಿನ್ಯಾಸ ಮಾಹಿತಿಯನ್ನು ಒದಗಿಸುತ್ತದೆ.
ಸ್ಮಾರ್ಟ್ ಕಾರ್ಡುಗಳಿಗಾಗಿ PIV ಬೆಂಬಲ
PIV (ಪರ್ಸನಲ್ ಐಡೆಂಟಿಟಿ ವೇರಿಫಿಕೇಶನ್‌) ಯೊಂದಿಗಿನ ಸ್ಮಾರ್ಟ್ ಕಾರ್ಡುಗಳು ಬೆಂಬಲ ಸಂಪರ್ಕಸಾಧನವನ್ನು Red Hat Enterprise Linux 6.2 ರಲ್ಲಿ ಸೇರಿಸಲಾಗಿದೆ. ದತ್ತಾಂಶವನ್ನು ಸುರಕ್ಷಿತವಾಗಿ ಬಳಸಲು ಅನುಮತಿಸುವ FIPS 201 ಹೊಂದಿಕೆಯಾಗುವ PIV ಕಾರ್ಡುಗಳನ್ನು ಬಳಸಲು ಈಗ ಸಾಧ್ಯವಿರುತ್ತದೆ. PIV ಕಾರ್ಡುಗಳು ಕಾರ್ಡ್ ಹೋಲ್ಡರಿಗೆ ಪ್ರವೇಶಿಸುವ ಅನುಮತಿಯನ್ನು ನಿರ್ಬಂಧಿಸುವ ಮೂಲಕ ದತ್ತಾಂಶದ ಗೌಪ್ಯತೆಯನ್ನು ಕಾಪಾಡುತ್ತದೆ. ಮಾರ್ಪಾಡುಗಳನ್ನು ಮಾಡಲು ಕಾರ್ಡ್ ಹೋಲ್ಡರುಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ದತ್ತಾಂಶವನ್ನು ಸಮಗ್ರತೆಯನ್ನು ಕಾಯ್ದುಕೊಳ್ಳುತ್ತವೆ. ಅವುಗಳು ಮಾಹಿತಿಯ ಸತ್ಯಾಸತ್ಯತೆಯನ್ನು ಖಾತರಿಪಡಿಸುತ್ತವೆ ಮತ್ತುದತ್ತಾಂಶವು ನಿರಾಕರಣವಾಗದಿರುವಂತೆ ತಡೆಯುತ್ತದೆ. PIV ಕಾರ್ಡುಗಳ ಬಳಕೆಯನ್ನು U. S. Homeland Security Presidential Directive 12 (HSPC-12) ಮೂಲಕ ಕಡ್ಡಾಯಗೊಳಿಸಲಾಗಿದೆ, ಇದಕ್ಕಾಗಿ ಎಲ್ಲಾ ಸರ್ಕಾರಿ IT ವ್ಯವಸ್ಥೆಗಳಿಗೆ ಪ್ರವೇಶಾಧಿಕಾರವನ್ನು ಹೊಂದಲು ಈ ಬಗೆ ತಂತ್ರಜ್ಞಾನವನ್ನು ಬಳಸುವ ಅಗತ್ಯವಿರುತ್ತದೆ.

ಅಧ್ಯಾಯ 10. ಎಂಟೈಟಲ್ಮೆಂಟ್

ಹೊಸ ಅನುಸ್ಥಾಪನೆಗಳಿಗಾಗಿ ಪ್ರಮಾಣಪತ್ರ ಆಧರಿತವಾದ RHN ಪೂರ್ವನಿಯೋಜಿತ
Red Hat Enterprise Linux 6.1 ಪರಿಚಯಿಸಲಾಯಿತು ಮುಂದಿನ ಪೀಳಿಗೆಯ ಚಂದಾ ನಿರ್ವಹಣೆ ಸಾಮರ್ಥ್ಯಗಳನ್ನು ಈಗ Red Hat Enterprise Linux 6.2 ಹೊಸ ಅನುಸ್ಥಾಪನೆಗಳಿಗೆ ಒಂದು ಪೂರ್ವನಿಯೋಜಿತಗಳು ಇವೆ. ಹೊಸ ಚಂದಾ ನಿರ್ವಹಣೆ ವೇದಿಕೆ ಹೊಂದಿಕೊಳ್ಳುವ, ಆರೋಹಣೀಯವಾಗಿದೆ, ಸುರಕ್ಷಿತ ರೀತಿಯಲ್ಲಿ Red Hat ಚಂದಾ ಮತ್ತು ತಂತ್ರಾಂಶ ಸೇವೆಗಳು ನೀಡುತ್ತದೆ. ಒಂದು ಹೊಸ Red Hat Enterprise Linux 6 ವ್ಯವಸ್ಥೆಯ ಅನುಸ್ಥಾಪಿಸುವಾಗ, ಬಳಕೆದಾರರು Red Hat ಉತ್ಪನ್ನಗಳು ಅನುಸ್ಥಾಪಿಸಲಾದ ಬಗ್ಗೆ ಮಾಹಿತಿಯನ್ನು ಯಾವ ಚಂದಾ ಯಂತ್ರ ಸೇವಿಸುವ ಇದು x.509 ಪ್ರಮಾಣಪತ್ರಗಳನ್ನು ಪಡೆಯುತ್ತದೆ. ಚಂದಾ ವಿವರಗಳು ಬೆಂಬಲ ಮಟ್ಟದ ಮುಕ್ತಾಯ ದಿನಾಂಕ, Red Hat ಖಾತೆ ಸಂಖ್ಯೆಗಳು, ಮತ್ತು Red Hat ಕರಾರು ಸಂಖ್ಯೆಗಳು ಒಳಗೊಂಡಿದೆ. ಹೆಚ್ಚುವರಿಯಾಗಿ, x.509 ಪ್ರಮಾಣಪತ್ರ ವಿಷಯಗಳಿಗೆ Red Hat ಡೆಲಿವರಿ ನೆಟ್ವರ್ಕ್ (CDN) ಪ್ರಮಾಣೀಕರಿಸಲು ಒಂದು ಗಣಕಕ್ಕೆ ಅನುಮತಿಸುತ್ತದೆ. ಜಾಗತಿಕವಾಗಿ ವಿತರಣೆ ವಿಷಯಗಳಿಗೆ Red Hat ಡೆಲಿವರಿ ನೆಟ್ವರ್ಕ್ (CDN) Red Hat ವ್ಯವಸ್ಥೆಗಳ ನಿಲುಗಡೆ ಜೊತೆ ಕೂಡ ಕೆಲಸ ವಿನ್ಯಾಸಗೊಳಿಸಲಾಗಿದೆ. ಉತ್ತರ ಅಮೆರಿಕದ ಹೊರಗೆ ಬಳಕೆದಾರರು ಹೊಸ ವ್ಯವಸ್ಥೆಯ ಸುಧಾರಿತ ಅಪ್ಡೇಟ್ ವೇಗ ಮತ್ತು ಲಭ್ಯತೆ ನೋಡಬಹುದು. RHN ಕ್ಲಾಸಿಕ್ ಮತ್ತು RHN ಸ್ಯಾಟಲೈಟ್ 5 ಲಭ್ಯವಿರುವ ಮತ್ತು ಸಂಪೂರ್ಣವಾಗಿ ಕಂಪ್ಯೂಟರ್ ನೋಂದಣಿ ಮತ್ತು ನವೀಕರಣಗಳನ್ನು ಸ್ವೀಕರಿಸುವ ಪರ್ಯಾಯ ಆಯ್ಕೆಗಳನ್ನು ಎಂದು ಬೆಂಬಲಿಸುವುದಿಲ್ಲ.
ಸಂಪರ್ಕ ಕಡಿದ ವ್ಯವಸ್ಥೆಗಳಿಗಾಗಿ ಎಂಟೈಟಲ್ಮೆಂಟ್‌ ಪ್ರಮಾಣಪತ್ರಗಳು
Red Hat Enterprise Linux 6.2 ಲಭ್ಯವಿರುವ ಹೊಸ ಕಾರ್ಯಕ್ಷಮತೆ ಹೊಂದಿರುವ ಸಂಯೋಗ Red Hat ಕಸ್ಟಮರ್ ಪೋರ್ಟಲ್, ಗ್ರಾಹಕರು ನೋಂದಣಿ ಸಂಪೂರ್ಣವಾಗಿ ಸಂಪರ್ಕ ಕಡಿತಗೊಳಿಸಿ ಎಂದು 25 ಗಣಕಗಳವರೆಗೆ ಚಂದಾದಾರರಾಗಲು ಅನುಮತಿಸುತ್ತದೆ. ಮೊದಲು ಈ ವರ್ಧನೆಗೆ ಸಂಪರ್ಕ ವ್ಯವಸ್ಥೆಗಳು ಗ್ರಾಹಕರನ್ನು RHN ಜಾಲತಾಣದಿಂದ ಚಂದಾ ಮಾಹಿತಿ ಮತ್ತು ಟ್ರ್ಯಾಕಿಂಗ್ ಪ್ರಯೋಜನಗಳು ಪಡೆಯಲು ಸಾಧ್ಯವಾಗಲಿಲ್ಲ. 25 ಕ್ಕೂ ಹೆಚ್ಚಿನ ಸಂಪರ್ಕ ಯಂತ್ರಗಳನ್ನು ಗ್ರಾಹಕರಿಗೆ, RHN ಉಪಗ್ರಹ ಹೆಚ್ಚುವರಿ ವೆಚ್ಚದಲ್ಲಿ ಒಂದು ಸಲಹೆ ಮಾಡಲಾಗುವ ಆಯ್ಕೆಯನ್ನು ಮುಂದುವರಿದಿದೆ.
ಒಂದು ಚಂದಾದಾರಿಕೆಯನ್ನು ನವೀಕರಿಸಿದ ನಂತರ ಪ್ರಮಾಣಪತ್ರದ ಸ್ವಯಂಚಾಲಿತ ಮರುಉತ್ಪಾದನೆ
ಇದು ಸ್ವಯಂಚಾಲಿತವಾಗಿ ಚಂದಾ ನವೀಕರಣ ನಂತರ ಅಧಿಕಾರದ ಪ್ರಮಾಣಪತ್ರಗಳನ್ನು ಪುನರುತ್ಪಾದನೆಯ ಸಾಧ್ಯವಾಗುತ್ತದೆ. ಮೊದಲು ಈ ವರ್ಧನೆಯು ಗ್ರಾಹಕರು ಕೈಯಾರೆ ತಂತ್ರಾಂಶ ನವೀಕರಣಗಳನ್ನು ಮತ್ತು ಇತರ ಚಂದಾ ಸೇವೆಯಲ್ಲಿ ಸ್ವೀಕರಿಸಲು ಮುಂದುವರಿಸಲು ಪ್ರಮಾಣಪತ್ರ ಪುನರುತ್ಪಾದನೆಯ ಅಗತ್ಯವಿತ್ತು. ಸ್ವಯಂಚಾಲಿತವಾಗಿ ಮರುಉತ್ಪಾದನೆ ಪ್ರಮಾಣಪತ್ರ ಸೇವೆ ಅಡ್ಡಿಗಳನ್ನು ಕಡಿಮೆ. ಬಳಕೆದಾರರ ಪ್ರಮಾಣಪತ್ರಗಳನ್ನು ಸ್ವಯಂಚಾಲಿತ ಪುನಶ್ಚೇತನಕ್ಕೆ ಯಶಸ್ವಿಯಾಗದೆ ಇದ್ದಲ್ಲಿ ಅವರಿಗೆ ಸೂಚಿಸಿದ ಪ್ರಕರಣಗಳು ಗಮನದಲ್ಲಿ ಇವೆ. ಹೆಚ್ಚಿನ ಮಾಹಿತಿಗಾಗಿ, https://www.redhat.com/rhel/renew/faqs/ ಅನ್ನು ನೋಡಿ.
Red Hat ಚಂದಾದಾರ ವ್ಯವಸ್ಥಾಪಕ ಹಾಗು ಚಂದಾದಾರಿಕೆ ಸೇವೆ
Red Hat Enterprise Linux 6.2 ರಲ್ಲಿ, ವ್ಯವಸ್ಥೆಯ ನೋಂದಣಿಯ ಸಮಯದಲ್ಲಿ, Red Hat ಚಂದಾದಾರ ವ್ಯವಸ್ಥಾಪಕವನ್ನು ಪೂರ್ವನಿಯೋಜಿತವಾಗಿ ಬಳಸಲಾಗುತ್ತದೆ.

ಹೆಚ್ಚಿನ ಓದಿಗಾಗಿ

ಚಂದಾದಾರಿಕೆಗಳನ್ನು ವ್ಯವಸ್ಥಾಪಿಸುವ ಕುರಿತಾದ ಹೆಚ್ಚಿನ ಮಾಹಿತಿಗಾಗಿ Red Hat Enterprise Linux 6.2 Deployment Guide ಅನ್ನು ನೋಡಿ
Red Hat Enterprise Linux 6.2 ಅನುಸ್ಥಾಪನಾ ಮಾರ್ಗದರ್ಶಿಯು firstboot ಹಾಗು kickstart ಅನ್ನು ಬಳಸಿಕೊಂಡು ನೋಂದಣಿ ಹಾಗು ಚಂದಾದಾರಿಕೆ ಪ್ರಕ್ರಿಯೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಹೊಂದಿದೆ.

ಅಧ್ಯಾಯ 11. ಸುರಕ್ಷತೆ, ಶಿಷ್ಟತೆ ಹಾಗು ಪ್ರಮಾಣೀಕರಣ

ಸಾಮಾನ್ಯ ಪ್ರಮಾಣೀಕರಣದ ಮಾನದಂಡ
Red Hat Enterprise Linux 6.2 ಬೀಟಾದಂತೆ, Red Hat Enterprise Linux 6 ಸಹ Evaluation Assurance Level (EAL) 4+ ರಲ್ಲಿನ ಕಾಮನ್ ಕ್ರೈಟೀರಯಾದ ಅಡಿಯಲ್ಲಿದೆ. ಕಾಮನ್‌ ಕ್ರೈಟೀರಿಯಾ ಭದ್ರತಾ ಅಗತ್ಯತೆಗಳಿಗಾಗಿ ಗುಣಮಟ್ಟದ ದಾರಿಯನ್ನು ಒದಗಿಸುತ್ತದೆ ಹಾಗು ಉತ್ಪನ್ನಗಳನ್ನು ಯಾವ ಕಠಿಣ ಮಾನದಂಡಗಳ ಮೂಲಕ ವಿಶ್ಲೇಷಿಸಬೇಕು ಎನ್ನುವುದನ್ನು ವ್ಯಾಖ್ಯಾನಿಸುತ್ತದೆ.
FIPS-140 ಮಾನ್ಯಗೊಳಿಕೆ
Red Hat Enterprise Linux 6.2 ಬೀಟಾದಂತೆ, Red Hat ಎಂಟರ್ಪ್ರೈಸ್ ಲಿನಕ್ಸ್ 6 ರ ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್‌ಗಳು FIPS-140 ಪ್ರಮಾಣೀಕೃತಗೊಳ್ಳಲು ಮೌಲ್ಯಮಾಪನ ಹಂತದಲ್ಲಿವೆ. FIPS-140 ಎನ್ನುವುದು ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್‌ಗಳನ್ನು ಅನುಮೋದಿಸಲು ಬಳಸಲಾಗುವ ಅಮೇರಿಕಾದ ಸರ್ಕಾರ ಭದ್ರತಾ ಶಿಷ್ಟತೆಯಾಗಿರುತ್ತದೆ. Red Hat Enterprise Linux ಈಗ ಅಮೇರಿಕಾದ ಸಂಯುಕ್ತ ಸರ್ಕಾರದಿಂದ ಎಲ್ಲಾ ಸರ್ಕಾರಿ ಏಜೆನ್ಸಿಗಳಿಂದ ಬಳಸಲಾಗುವ ಕ್ರಿಪ್ಟೋಗ್ರಾಫಿಕ್ ಘಟಕಗಳಲ್ಲಿ ಬಳಸಲು ಖಡ್ಡಾಯಗೊಳಿಸಲಾದ ಕಾನೂನಿನ ನಿಯಮಗಳನ್ನು ಪಾಲಿಸುತ್ತದೆ.
ನಂಬಿಕಸ್ತ ಬೂಟ್
Red Hat Enterprise Linux 6.2 includes Intel Trusted Boot, a trusted boot mechanism (provided by the tboot package). Trusted boot is an install-time optional component that allows for Intel's Trusted Execution Technology (TXT) to perform a measured and verified launch of the operating system kernel. Trusted boot is supported on both Intel x86 and Intel 64/AMD64 architectures.

ಅಧ್ಯಾಯ 12. ಕಂಪೈಲರ್ ಹಾಗು ಉಪಕರಣಗಳು

SystemTap
SystemTap ಎನ್ನುವುದು ಬಳಕೆದಾರರಿಗೆ ಕಾರ್ಯ ವ್ಯವಸ್ಥೆಯ (ವಿಶೇಷವಾಗಿ, ಕರ್ನಲ್) ಚಟುವಟಿಕೆಗಳನ್ನು ಸೂಕ್ಷ್ಮವಾದ ರೀತಿಯಲ್ಲಿ ಅರಿತುಕೊಳ್ಳಲು ಹಾಗು ಮೇಲ್ವಿಚಾರಣೆ ನಡೆಸಲು ಅನುಮತಿಸುವ ಜಾಡನ್ನು ಇರಿಸುವ ಹಾಗು ತನಿಖೆ ನಡೆಸುವ ಒಂದು ಉಪಕರಣವಾಗಿರುತ್ತದೆ. ಇದು netstat, ps, top, ಹಾಗು iostat ಉಪಕರಣಗಳನ್ನು ಹೋಲುವ ಔಟ್‌ಪುಟ್‌ ಅನ್ನು ಒದಗಿಸುತ್ತದೆ. ಆದರೆ, SystemTap ಸಂಗ್ರಹಿಸಲಾದ ಮಾಹಿತಿಗಾಗಿ ಹೆಚ್ಚಿನ ಫಿಲ್ಟರಿಂಗ್ ಹಾಗು ಹೆಚ್ಚಿನ ವಿಶ್ಲೇಷಣೆ ಆಯ್ಕೆಗಳನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.
Red Hat Enterprise Linux 6.2 ರಲ್ಲಿನ SystemTap ಅನ್ನು ಆವೃತ್ತಿ 1.6 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ಈ ಕೆಳಗಿನದನ್ನು ಒದಗಿಸುತ್ತದೆ:
  • ತನ್ನ ಹೆಸರಿನಲ್ಲಿ ಹೈಫನ್ ("-") ಅನ್ನು ಹೊಂದಿರುವ i2c-core ಕರ್ನಲ್ ಅನ್ನು ಈಗ ಸೂಕ್ತವಾಗಿ ನಿಭಾಯಿಸಲಾಗುತ್ತದೆ.
  • process.mark ಈಗ ನಿಯತಾಂಕಗಳನ್ನು ತನಿಖೆ ಮಾಡಲು $$parms ಅನ್ನು ಬೆಂಬಲಿಸುತ್ತದೆ.
  • SystemTap compile-server ಹಾಗು clientನ ಸುಧಾರಿತ ಹಾಗು ಸರಳೀಕೃತ ಕಾರ್ಯನಿರ್ವಹಣೆ:
    • ಸುಧಾರಿತ ಕಾರ್ಯನಿರ್ವಹಣೆಗಾಗಿ compile-server ಸ್ಕಿಪ್ಟ್ ನಿರ್ಮಾಣದ ಫಲಿತಾಂಶಗಳನ್ನು ಕ್ಯಾಶೆ ಮಾಡಬಹುದು.
    • compile-server ಹಾಗು client ಸಂವಹನ ಪ್ರೋಟೋಕಾಲ್ ಅನ್ನು ಸರಿಹೊಂದಿಸಿಕೊಳ್ಳಲು ಹಾಗು ಪರಿಚಾರಕದ ಸಾಧ್ಯವಾದಷ್ಟು ಹೊಚ್ಚ ಹೊಸ ಆವೃತ್ತಿಯನ್ನು ಬಳಸಲು ಆವೃತ್ತಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಸಂವಹಿಸುತ್ತವೆ.
    • ಅಪ್ರಚಲಿತ ಉಪಕರಣಗಳನ್ನು ತೆಗೆದುಹಾಕಲಾಗಿದೆ: stap-client, stap-authorize-server-cert, stap-authorize-signing-cert, stap-find-or-start-server, ಹಾಗು stap-find-servers.
  • ದೂರಸ್ಥ ನಿರ್ವಹಣೆಗೆ, --remote USER@HOSTಕಾರ್ಯವನ್ನು ಈಗ ಸ್ವಯಂ ಚಾಲಿತವಾಗಿ ಅನೇಕ ಬಾರಿ ನಿರ್ದಿಷ್ಟ ಮತ್ತು ವಿಶಿಷ್ಟ ಕರ್ನಲ್ ಮತ್ತು ಆರ್ಕಿಟೆಕ್ಚರ್ ಸಂರಚನೆಗಳ ಸ್ಕ್ರಿಪ್ಟ್ ನಿರ್ಮಿಸಲು ಮಾಡಬಹುದಾಗಿದೆ, ಮತ್ತುಒಮ್ಮೆ ಎಲ್ಲಾ ಎಂಬ ಯಂತ್ರಗಳ ಮೇಲೆ ಚಲಾಯಿಸಬಹುದಾಗಿರುತ್ತದೆ.
  • staprun ಸವಲತ್ತು ಈಗ ಒಂದೇ ಸಮಯದಲ್ಲಿ ಒಂದೇ ರೀತಿ ಸ್ಕ್ರಿಪ್ಟಿನ ಅನೇಕ ಸನ್ನಿವೇಶಗಳನ್ನು ಚಲಾಯಿಸಲು ಅನುಮತಿಸುತ್ತದೆ.

ಅಧ್ಯಾಯ 13. ಕ್ಲಸ್ಟರಿಂಗ್

ಕ್ರಿಯಾತ್ಮಕ ಸ್ಕೀಮಾ ಉತ್ಪಾದನೆ
ಅಂತ್ಯದ ಬಳಕೆದಾರರು Red Hat Enterprise Linux High Availability ಆಡ್-ಆನ್ ಕಸ್ಟಮ್ ಸಂಪನ್ಮೂಲ ಹಾಗು ಫೆನ್ಸ್‍ ಮಧ್ಯವರ್ತಿಗಳಿಗೆ ಸಂಪರ್ಕಿತಗೊಂಡಾಗ ಕ್ರಿಯಾತ್ಮಕ ಸ್ಕೀಮಾ ಉತ್ಪಾದನೆಯು ಹೆಚ್ಚು ಹೊಂದಾಣಿಕೆಯನ್ನು ಒದಗಿಸುತ್ತದೆ, ಆದರೂ ಸಹ ಅವುಗಳ ಸಂರಚನೆಯನ್ನು /etc/cluster.conf ಸಂರಚನಾ ಕಡತದಲ್ಲಿ ಮಾನ್ಯಗೊಳಿಸುವ ಸಾಧ್ಯತೆಯನ್ನು ಉಳಿಸಿಕೊಳ್ಳುತ್ತದೆ. ಕಸ್ಟಮ್ ಮಧ್ಯವರ್ತಿಗಳು ಸರಿಯಾದ ಮೆಟಾಡೇಟ ಔಟ್‌ಪುಟ್ ಅನ್ನು ಒದಗಿಸಬೇಕು ಹಾಗು ಮಧ್ಯವರ್ತಿಗಳನ್ನು ಎಲ್ಲಾ ನೋಡ್‌ಗಳಲ್ಲಿಯೂ ಸಹ ಅನುಸ್ಥಾಪಿಸಬೇಕು ಎನ್ನುವುದು ಕಟ್ಟುನಿಟ್ಟಿನ ಅಗತ್ಯವಾಗಿರುತ್ತದೆ.
GFS2 ನಲ್ಲಿ ಕ್ಲಸ್ಟರ್ ಮಾಡಲಾದ Samba
ಒಂದು ಕ್ಲಸ್ಟರ್ ಮಾಡಲಾದ ಪರಿಸರದಲ್ಲಿ Samba ಈಗ Red Hat Enterprise Linux 6.2 ರಲ್ಲಿ ಸಂಪೂರ್ಣವಾಗಿ ಬೆಂಬಲವನ್ನು ಒದಗಿಸಲಾಗಿದೆ. Samba ಕ್ಲಸ್ಟರಿಂಗ್ ಎಲ್ಲಾ ನೋಡ್‌ಗಳಲ್ಲಿ ಲಭ್ಯವಿರುವ ಹಾಗು ಹಂಚಲಾಗಿರುವ ಕಡತ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿರುತ್ತದೆ. Red Hat Enterprise Linux ಸನ್ನಿವೇಶದಲ್ಲಿ, Samba ಕ್ಲಸ್ಟರಿಂಗ್ ಅನ್ನು ಸ್ಥಳೀಯ ಶೇಖರಣಾ ಕಡತ ವ್ಯವಸ್ಥೆಯಾದಂತಹ GFS2 ನೊಂದಿಗೆ ಕೆಲಸ ಮಾಡಲು ಸಂರಚಿಸಲಾಗಿರುತ್ತದೆ.
Clustered Samba (ನಿಶ್ಚಿತವಾಗಿ ಹೇಳಬೇಕೆಂದರೆ CTDB) ಒಂದು ಕ್ಲಸ್ಟರಿನಲ್ಲಿ ಅನೇಕ ಭೌತಿಕ ಆತಿಥೇಯಗಳಲ್ಲಿ ಮೆಟಾಡೇಟಾವು ಹರಡಿಕೊಳ್ಳುವ ಸಾಮರ್ಥ್ಯವನ್ನು ಒದಗಿಸುತ್ತದೆ. CTDB ಯು ಸ್ವಯಂಚಾಲಿತವಾಗಿ ಪುನಶ್ಚೇತನಗೊಳ್ಳುತ್ತದೆ ಹಾಗು ನೋಡ್ ವಿಫಲಗೊಂಡಲ್ಲಿ ನೋಡ್-ನಿಶ್ಚಿತ ದತ್ತಸಂಚಯಗಳನ್ನು ದುರಸ್ತಿ ಮಾಡುತ್ತದೆ. ಇದು ನೋಡ್ ಮೇಲ್ವಿಚಾರಣೆ ಹಾಗು ಫೇಲ್‌ಓವರಿನಂತಹ ಅತಿ ಲಭ್ಯತೆಯ ಸವಲತ್ತುಗಳನ್ನೂ ಸಹ ಒದಗಿಸುತ್ತದೆ.
ಸ್ಟ್ಯಾಂಡ್‌ಅಲೋನ್ Corosync ನ ರಿಡಂಡೆಂಟ್ ರಿಂಗಿಗಾಗಿನ ಬೆಂಬಲ
Red Hat Enterprise Linux 6.2 ರಲ್ಲಿ ಸ್ವಯಂಪುನಶ್ಚೇತನದೊಂದಿಗೆ ರಿಡಂಡೆಂಟ್ ರಿಂಗಿಗಾಗಿನ ಬೆಂಬಲವನ್ನು ತಂತ್ರಜ್ಞಾನ ಪೂರ್ವಾವಲೋಕನವಾಗಿ ನೀಡಲಾಗಿದೆ. ಈ ತಂತ್ರಜ್ಞಾನ ಪೂರ್ವಾವಲೋಕನಕ್ಕೆ ಸಂಬಂಧಿಸಿದ ಗೊತ್ತಿರುವ ಸಮಸ್ಯೆಗಳ ಪಟ್ಟಿಗಾಗಿ Technical Notes ಅನ್ನು ನೋಡಿ.
corosync-cpgtool
corosync-cpgtool ಈಗ ಒಂದು ಡ್ಯುವಲ್ ರಿಂಗ್ ಸಂರಚನೆಯಲ್ಲಿ ಎರಡೂ ಸಂಪರ್ಕಸಾಧನವನ್ನು ಸೂಚಿಸುತ್ತದೆ.
/etc/cluster.conf ನಲ್ಲಿ rgmanager ಅನ್ನು ಅಶಕ್ತಗೊಳಿಸುವಿಕೆ
/etc/cluster.conf ಸಂರಚನಾ ಕಡತವನ್ನು pacemaker ಇಂದ ಬಳಸಲಾಗುವಂತೆ ಪರಿವರ್ತಿಸಿದ ಪರಿಣಾಮವಾಗಿ rgmanager ಅನ್ನು ಅಶಕ್ತಗೊಳಿಸಲಾಗುತ್ತದೆ. ಹೀಗೆ ಮಾಡದೆ ಇರುವುದರಿಂದ ಅಪಾಯ ಹೆಚ್ಚು; ಯಶಸ್ವಿಯಾಗಿ ಪರಿವರ್ತಿಸಿದ ನಂತರ, ಒಂದೇ ಆತಿಥೇಯದಲ್ಲಿ, ಒಂದೇ ಸಂಪನ್ಮೂಲವನ್ನು ಬಳಸಿಕೊಂಡು rgmanager ಹಾಗು pacemaker ಅನ್ನು ಆರಂಭಿಸಲು ಸಾಧ್ಯವಿರುತ್ತದೆ.
ಪರಿಣಾಮವಾಗಿ, Red Hat Enterprise Linux 6.2 ರಲ್ಲಿ ಈ ಕೆಳಗಿನ ಅಗತ್ಯತೆಗಳಿಗಾಗಿ ಒತ್ತಾಯಪಡಿಸುವ ಸವಲತ್ತನ್ನು (ತಂತ್ರಜ್ಞಾನ ಅವಲೋಕನವಾಗಿ) ಸೇರಿಸಲಾಗುತ್ತದೆ:
  • /etc/cluster.confನಲ್ಲಿ <rm disabled="1"> ಫ್ಲಾಗ್ ಕಂಡುಬಂದಲ್ಲಿ rgmanager ಆರಂಭಗೊಳ್ಳಲು ನಿರಾಕರಿಸಬೇಕು.
  • ಮರಳಿ ಸಂರಚಿಸುವಾಗ /etc/cluster.confನಲ್ಲಿ <rm disabled="1"> ಫ್ಲಾಗ್ ಕಂಡುಬಂದಲ್ಲಿ rgmanager ಆರಂಭಗೊಳ್ಳಲು ನಿರಾಕರಿಸಬೇಕು ಹಾಗು ನಿರ್ಗಮಿಸಬೇಕು.

ಅಧ್ಯಾಯ 14. ಹೈ ಅವೈಲೆಬಿಲಿಟಿ

ಹೈ ಅವೈಲೆಬಿಲಿಟಿ ಆಡ್-ಆನ್‌ನಲ್ಲಿ XFS
XFS ಅನ್ನು Red Hat Enterprise Linux 6.2 High Availability Add On ನೊಂದಿಗೆ ಕಡತವ್ಯವಸ್ಥೆ ಸಂಪನ್ಮೂಲವಾಗಿ ಬಳಸುವುದು ಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ.
VMWare ಗಾಗಿ HA ಬೆಂಬಲ
VMware ಆಧಾರಿತ ಅತಿಥಿಗಳು ಒಳಗೆ ಬರುವ ಅನ್ವಯಗಳನ್ನು ಈಗ ಸಂರಚಿಸಬಹುದುಅತಿ ಲಭ್ಯತೆಗಾಗಿ. ಇದು GFS2 ಈ ಬಳಕೆಗೆ ಸಂಪೂರ್ಣ ಬೆಂಬಲವನ್ನುಪರಿಸರದಲ್ಲಿ ಶೇಖರಣಾ ಕಡತ ವ್ಯವಸ್ಥೆಯನ್ನು ಹಂಚಿಕೊಳ್ಳಲಾಗುತ್ತದೆ. ಹೊಸ SOAP-ಆಧಾರಿತ ಫೆನ್ಸ್ ಮಧ್ಯವರ್ತಿಯನ್ನು ಅತಿಥಿಗಳು ಅಗತ್ಯ ಬಿದ್ದಾಗ ಸಾಮರ್ಥ್ಯವನ್ನು ಹೊಂದಿದೆ ಎಂದು ಸೇರಿಸಲಾಗಿದೆ.
ವ್ಯವಸ್ಥಾಪನಾ UI ಸುಧಾರಣೆಗಳು
ಕ್ಲಸ್ಟರುಗಳನ್ನು ಸಂರಚಿಸಲು ಜಾಲ-ಆಧರಿತವಾದ ವ್ಯವಸ್ಥಾಪನಾ UI ಆದಂತಹ Luci ಈ ಕೆಳಗಿನವುಗಳನ್ನು ಸೇರ್ಪಡಿಸುವಂತೆ ಅಪ್‌ಡೇಟ್ ಮಾಡಲಾಗಿದೆ:
  • Role-based access control (RBAC): ಬಳಕೆದಾರ ವರ್ಗಗಳನ್ನು ಸೂಚಿಸುವ ಮೂಲಕ ನಿಶ್ಚಿತ ಕ್ಲಸ್ಟರ್ ಕಾರ್ಯಾಚರಣೆಗಳಲ್ಲಿ ಅತಿ-ಸೂಕ್ಷ್ಮವಾದ ನಿಲುಕಣಾ ಹಂತಗಳನ್ನು ಶಕ್ತಗೊಳಿಸುತ್ತದೆ.
  • ಕ್ಲಸ್ಟರಿನಲ್ಲಿನ ಖಂಡನಾತ್ಮಕ ಕಾರ್ಯಗಳಲ್ಲಿ ಸುಧಾರಿತ ಪ್ರತಿಕ್ರಿಯೆ ಸಮಯಗಳು.
UDP-Unicast ಗೆ ಬೆಂಬಲ
IP ಮಲ್ಟಿಕಾಸ್ಟಿಂಗ್‌ ಎನ್ನುವುದು ಒಂದು ಕ್ಲಸ್ಟರ್ ವರ್ಗಾವಣೆಗಾಗಿನ ಬೆಂಬಲಿತವಾದ ಏಕಮಾತ್ರವಾದ ಆಯ್ಕೆಯಾಗಿದೆ.IP ಮಲ್ಟಿಕಾಸ್ಟಿಂಗ್‌ ಎನ್ನುವುದು ಸಂರಚಿಸಲು ಸ್ವಾಭಾವಿಕವಾಗಿ ಸಂಕೀರ್ಣವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಜಾಲಬಂಧ ಸ್ವಿಚ್‌ಗಲನ್ನು ಮರು ಸಂರಚಿಸುವ ಅಗತ್ಯವಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ UDP-ಯುನಿಕ್ಯಾಸ್ಟ್‍ ಎನ್ನುವುದು ಕ್ಲಸ್ಟರ್ ಸಂರಚನೆಗಾಗಿ ಸರಳವಾದ ಮಾರ್ಗವನ್ನು ಒದಗಿಸುತ್ತದೆ ಮತ್ತು ಕ್ಲಸ್ಟರ್ ಸಂವಹನಕ್ಕಾಗಿ ಇದು ಒಂದು ಪ್ರಮಾಣೀಕೃತವಾದ ಪ್ರೋಟೋಕಾಲ್ ಆಗಿರುತ್ತದೆ. UDP-ಯುನಿಕ್ಯಾಸ್ಟ್‍ ಅನ್ನು ಆರಂಭದಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿತ್ತು, ಇದುಈಗ ಸಂಪೂರ್ಣವಾಗಿ ಬೆಂಬಲಿತವಾಗಿದೆ.
fence_scsi ಯೊಂದಿಗೆ ವಾಚ್‌ಡಾಗ್ ಸಮೀಕರಣ
ವಾಚ್ಡಾಗ್ ಎನ್ನುವುದು ವ್ಯವಸ್ಥೆಯ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ನಡೆಸಲು ಬಳಸಲು ಲಿನಕ್ಸಿನಲ್ಲಿ ಲಭ್ಯವಿರುವ ಸಾರ್ವತ್ರಿಕ ಟೈಮರ್ ಸೇವೆಯಾಗಿರುತ್ತದೆ. ಫೆನ್ಸ್ ಮಧ್ಯವರ್ತಿಯನ್ನು ಈಗ ವಾಚ್ಡಾಗ್‌ನೊಂದಿಗೆ ಜೋಡಿಸಲಾಗಿದೆ, ಆದ್ದರಿಂದ ಈಗ fence_scsi ಅನ್ನು ಬಳಸಿಕೊಂಡು ಒಂದು ನೋಡ್ ಅನ್ನು ಫೆನ್ಸ್ ಮಾಡಿದಾಗ ವಾಚ್ಡಾಗ್ ಆ ನೋಡ್ ಅನ್ನು ರೀಬೂಟ್ ಮಾಡಲು ಶಕ್ತವಾಗಿರುತ್ತದೆ. ಇದರಿಂದಾಗಿ fence_scsi ಅನ್ನು ಬಳಸಿಕೊಂಡು ನೋಡ್ ಅನ್ನು ಫೆನ್ಸ್ ಮಾಡಿದ ನಂತರ ಅದನ್ನು ಮರಳಿ ಬೂಟ್ ಮಾಡಲು ಮನುಷ್ಯರ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ.

ಅಧ್ಯಾಯ 15. ವರ್ಚುವಲೈಸೇಶನ್

KVM ಸಂಸ್ಕಾರಕ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ
ವರ್ಚುವಲ್ CPU ಟೈಮ್‌ಸ್ಲೈಸ್ ಹಂಚಿಕೆ
ವರ್ಚುವಲ್‌ CPU ಟೈಮ್‌ಸ್ಲೈಸ್ ಹಂಚಿಕೆಯು ಲಿನಕ್ಸ್ ಅನುಸೂಚಿಯ ಹಂತದಲ್ಲಿನ ಒಂದು ಕಾರ್ಯನಿರ್ವಹಣೆಯನ್ನು ವರ್ಧಿಸುವ ಸವಲತ್ತು ಆಗಿದೆ, ಇಲ್ಲಿ ವರ್ಚುವಲ್ CPU ಅನ್ನು ತಿರುಗಿಸುವ ಮೂಲಕ CPU ಅನ್ನು ಉತ್ಪಾದಿಸುವ ಮೊದಲು ಬೇರೊಂದು ವರ್ಚುವಲ್ CPU ಗೆ ಜ್ಞಾಪನೆಯನ್ನು ನೀಡಬಲ್ಲದು. ಈ ಸವಲತ್ತು SMP ವ್ಯವಸ್ಥೆಗಳಲ್ಲಿ ವರ್ಚುವಲ್‌ CPUಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವ ಒಂದು ಸ್ವಾಭಾವಿಕ ಲಾಕ್ ಹೋಲ್ಡರಿನ ಪೂರ್ವಭಾವಿ ಸಮಸ್ಯೆಯನ್ನು ಪರಿಹರಿಸುತ್ತದೆ.ಈ ಸವಲತ್ತು ಬಹು-ಸಂಸ್ಕಾರಕ ಅತಿಥಿಗಳಲ್ಲಿ ಒಂದು ಸ್ಥಿರ ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ. ಈ ಸವಲತ್ತು Intel ಹಾಗು AMD ಸಂಸ್ಕಾರಕ ಎರಡರಲ್ಲಿಯೂ ಸಹ ಬೆಂಬಲಿತವಾಗಿದೆ ಇದನ್ನು Intel ಸಂಸ್ಕಾರದಲ್ಲಿ ಪಾಸ್ ಲೂಪ್ ಎಕ್ಸಿಟಿಂಗ್ (PLE) ಎಂದು, ಹಾಗು AMD ಸಂಸ್ಕಾರಗಳಲ್ಲಿ ಪಾಸ್ ಫಿಲ್ಟರ್ ಎಂದು ಕರೆಯಲಾಗುತ್ತದೆ.
KVM ಜಾಲಬಂಧ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ
KVM ಜಾಲಬಂಧ ಕಾರ್ಯನಿರ್ವಹಣೆಯು ವರ್ಚುವಲೈಸೇಶನ್ ಹಾಗು ಕ್ಲೌಡ್ ಆಧರಿತ ಉತ್ಪನ್ನಗಳು ಹಾಗು ಸಲ್ಯೂಶನ್‌ಗಳಿಗಾಗಿನ ಅತ್ಯಂತ ಪ್ರಮುಖ ಅಗತ್ಯತೆಗಳಲ್ಲಿ ಒಂದಾಗಿರುತ್ತದೆ. Red Hat Enterprise Linux 6.2 ರಲ್ಲಿ KVM ಜಾಲಬಂಧ ಪ್ಯಾರಾ-ವರ್ಚುವಲೈಸ್ಡ್‍ ಚಾಲಕದ ಹಲವು ಹಂತಗಳಲ್ಲಿ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸಲು ಹಲವಾರು ಜಾಲಬಂಧ ಕಾರ್ಯನಿರ್ವಹಣೆ ಸೂಕ್ತಗೊಳಿಕೆಯನ್ನು ಒದಗಿಸಲಾಗಿದೆ.
ಚಿಕ್ಕ ಸಂದೇಶ KVM ಕಾರ್ಯನಿರ್ವಹಣೆಯಲ್ಲಿ ಸುಧಾರಣೆ
Red Hat Enterprise Linux 6.2 ರಲ್ಲಿ ಚಿಕ್ಕ ಸಂದೇಶಗಳನ್ನು (< 4K) ಉತ್ಪಾದಿಸುವ ವಿವಿಧ ಜಾಲಬಂಧ ಕಾರ್ಯದ ಹೊರೆಗಳಿಗಾಗಿ ಅಗತ್ಯವಿರುವ KVM ಚಿಕ್ಕ ಸಂದೇಶ ಕಾರ್ಯನಿರ್ವಹಣೆಯಲ್ಲಿ ಸುಧಾರಣೆಯನ್ನು ಮಾಡಲಾಗಿದೆ.
KVM ಜಾಲಬಂಧ ಚಾಲಕಗಳಲ್ಲಿ ವೈರ್ ವೇಗದ ಅಗತ್ಯತೆಗಳು
ಕಜಾಲಬಂಧ ಕಾರ್ಯದ ಹೊರೆಗಳನ್ನು ಚಲಾಯಿಸುವ ವರ್ಚುವಲೈಸೇಶನ್ ಹಾಗು ಕ್ಲೌಡ್ ಉತ್ಪನ್ನಗಳು ವೈರ್ ವೇಗಗಳನ್ನು ಚಲಾಯಿಸುವ ಅಗತ್ಯವಿರುತ್ತದೆ. Red Hat Enterprise Linux 6.1 ರ ವರೆಗೆ, ಕೆಳಮಟ್ಟದ CPU 10 GB ಎತರ್ನೆಟ್ NICಯಲ್ಲಿ ವೈರ್ ವೇಗವನ್ನು ತಲುಪುವ ಒಂದೇ ಒಂದು ಮಾರ್ಗವೆಂದರೆ PCI ಸಾಧನ ನಿಯೋಜನೆಯನ್ನು (ಪಾಸ್‌ತ್ರೂ) ಬಳಸಿಕೊಳ್ಳುವುದಾಗಿತ್ತು, ಇದು ಮೆಮೊರಿ ಅತಿಸಲ್ಲಿಕೆ (ಓವರ್-ಕಮಿಟ್) ಹಾಗು ಅತಿಥಿ ವರ್ಗಾವಣೆಯಂತಹ ಇತರೆ ಸವಲತ್ತುಗಳನ್ನು ಮಿತಿಗೊಳಿಸುತ್ತದೆ
ಬಳಕೆದಾರರಿಗೆ ಅತ್ಯುತ್ತಮ ಕಾರ್ಯನಿರ್ವಹಣೆಯ ಅಗತ್ಯವಿದ್ದಾಗ macvtap/vhost ಶೂನ್ಯ-ನಕಲು ಸಾಮರ್ಥಗಳಿಂದಾಗಿ ಈ ಸವಲತ್ತುಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಈ ಸವಲತ್ತು ಯಾವುದೆ VEPA ಬಳಕೆಯ ಸಂದರ್ಭದಲ್ಲಿ Red Hat Enterprise Linux 6.x ಅತಿಥಿಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ. ಈ ಸವಲತ್ತನ್ನು ತಂತ್ರಜ್ಞಾನ ಅವಲೋಕನವಾಗಿ ಪರಿಚಯಿಸಲಾಗಿದೆ.
KVM ಜಾಲಬಂಧ ಚಾಲಕಗಳಿಗಾಗಿ UDP ಚೆಕ್‌ಸಮ್ ಸೂಕ್ತಗೊಳಿಕೆ
ಅತಿಥಿಯನ್ನು ಆತಿಥೇಯ NICಗಳಿಂದ ಪರಿಶೀಲಿಸಲಾಗಿದ್ದಲ್ಲಿ ಅದನ್ನು UDP ಚೆಕ್‌ಸಮ್‌ ಸೂಕ್ತಗೊಳಿಕೆಯು ಪರಿಶೀಲಿಸುವ ಅಗತ್ಯವನ್ನು ತೆಗೆದುಹಾಕುತ್ತದೆ. ಈ ಸವಲತ್ತು Red Hat Enterprise Linux 6.2 ಅತಿಥಿಗಳು ಹಾಗು ಆತಿಥೇಯಗಳೊಂದಿಗಿನ 10 GB ಎತರ್ನೆಟ್‌ ಕಾರ್ಡುಗಳಲ್ಲಿನ ಅತಿಥಿಯ ಹೊರಗೆ UDP ಯನ್ನು ವೇಗವಾಗಿಸುತ್ತದೆ. UDP ಚೆಕ್‌ಸಮ್ ಸೂಕ್ತಗೊಳಿಕೆಯನ್ನು virtio-net ಚಾಲಕದಲ್ಲಿ ಅಳವಡಿಸಲಾಗಿದೆ.
ಅತಿಥಿಯು ಆತಿಥೇಯಕ್ಕಿಂತ ನಿಧಾನವಾಗಿದ್ದಾಗ ಸುಧಾರಿತ I/O ಮಾರ್ಗ ಕಾರ್ಯನಿರ್ವಹಣೆ
Red Hat Enterprise Linux 6.2 KVM ಜಾಲಬಂಧ ಚಾಲಕವು ಕಡಿಮೆಗೊಳಿಸಲಾದ ವರ್ಚುವಲ್ ಗಣಕಯಂತ್ರದ ನಿರ್ಗಮನ ಹಾಗು ತಡೆಗಳೊಂದಿಗೆ I/O ಮಾರ್ಗದ ಕಾರ್ಯಕ್ಷಮತೆಯನ್ನು ಸುಧಾರಿಸಿದೆ, ಇದರಿಂದಾಗಿ ವೇಗವಾದ ದತ್ತಾಂಶ ನೀಡಿಕೆಗೆ ಕಾರಣವಾಗುತ್ತದೆ. ಈ ಸುಧಾರಣೆಯಿಂದಾಗಿ ಕಾರ್ಯಕ್ಷಮತೆಯಿಂದ ಯಾವುದೆ ದಂಡವನ್ನು ತೆರದೆ ಒಂದು ನಿಧಾನವಾದ ಆತಿಥೇಯದಲ್ಲಿ ವೇಗವಾದ ಅತಿಥಿಯನ್ನು ಚಲಾಯಿಸಲು ಸಾಧ್ಯವಿರುತ್ತದೆ. ಈ ಸುಧಾರಣೆಯನ್ನು ಸುಧಾರಿತ virtio ರಿಂಗ್ ರಚನೆಯಿಂದ, virtio ಮತ್ತು vhost-netನಲ್ಲಿನ ಘಟನೆ ಸೂಚಿ ಬೆಂಬಲದಿಂದ ಹೊಂದಲು ಸಾಧ್ಯವಿರುತ್ತದೆ.
KVM ವ್ಯವಸ್ಥೆಯಗಳ ನಿರ್ವಹಣೆ ಹಾಗು ಬಳಸುವಿಕೆಯಲ್ಲಿ ಸುಧಾರಣೆಗಳು
SNMP ಮೂಲಕ ವ್ಯವಸ್ಥೆಯ ಮೇಲ್ವಿಚಾರಣೆ
ಈ ವೈಶಿಷ್ಟ್ಯವು ಈಗಾಗಲೇ ಬೇರ್ ಮೆಟಲ್ ವ್ಯವಸ್ಥೆಗಳು ಡಾಟಾ ಸೆಂಟರ್ ಬಳಕೆಯಲ್ಲಿರುವ ಸ್ಥಿರ ತಂತ್ರಜ್ಞಾನದ KVM ಬೆಂಬಲವನ್ನು ನೀಡುತ್ತದೆ. SNMP ಮೇಲ್ವಿಚಾರಣೆಗೆ ಸ್ಟ್ಯಾಂಡರ್ಡ್ ಹಾಗೂ ಲೆಕ್ಕಾಚಾರದ ಸಮರ್ಥ ಅತ್ಯಂತ ಚೆನ್ನಾಗಿ ತಿಳಿದಿರುತ್ತದೆ. Red Hat Enterprise Linux 6.2 ರಲ್ಲಿ SNMP ಮೂಲಕ ಗಣಕವನ್ನು ಪರಿವೀಕ್ಷಿಸುತ್ತಿರುವ KVM ಘಟನೆಗಳು ಪ್ರಮಾಣಿತ SNMP ಪ್ರೋಟೋಕಾಲ್ ಮೂಲಕ ಬಳಕೆದಾರರಿಗೆ ತಿಳಿಸಲು ಸಾಧ್ಯವಿಲ್ಲ. ಹೈಪರ್ವೈಸರ್ ಎಷ್ಟು ಘಟನೆಗಳ ಮೇಲೆ SNMP ಟ್ರಾಪ್‌ಗಳು ಕಳುಹಿಸಲು ಆತಿಥೇಯಗಳು ಅನುಮತಿಸುತ್ತದೆ. ಈ ಸವಲತ್ತನ್ನು ಹೊಸ ಪ್ಯಾಕೇಜಿನ ಜೊತೆಗೆ ನೀಡಲಾಗಿದೆ: libvirt-snmp. ಈ ಸವಲತ್ತನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿದೆ.
ಸುಧಾರಿತ ಅತಿಥಿ ದೋಷನಿವಾರಣಾ ಸಾಮರ್ಥ್ಯ
ತಮ್ಮ ಡೇಟಾ ಸೆಂಟರುಗಳನ್ನು ವರ್ಚುವಲೈಸ್ ಮಾಡುವ ಬಳಕೆದಾರರಿಗೆ ಅತಿಥಿ OS ಅತಂತ್ರಗೊಂಡರೆ ಹಾಗು ಕುಸಿತದ ಡಂಪ್ ಅನ್ನು ಆರಂಭಿಸಬೇಕಾದಲ್ಲಿ ದೋಷ ನಿವಾರಣೆಗೆ ಒಂದು ಮಾರ್ಗದ ಅಗತ್ಯವಿರುತ್ತದೆ. ಭೌತಿಕ ವ್ಯವಸ್ಥೆಗಳಲ್ಲಿ ಹೆಚ್ಚಾಗಿ ಬಳಸಲಾಗುವ ಎರಡು ವಿಧಾನಗಳಿವೆ:
  • ಅತಿಥಿಯಲ್ಲಿ ನಾನ್-ಮಾಸ್ಕೆಬಲ್ ಇಂಟರಪ್ಟ್‍ (NMI) ಅನ್ನು ಆರಂಭಿಸುವಿಕೆ
  • SysRq ಸರಣಿಗಳನ್ನು ಅತಿಥಿಗೆ ಕಳುಹಿಸುವಿಕೆ
ಈ ಸಾಮರ್ಥ್ಯಗಳನ್ನು KVM ಕನ್ಸೋಲ್ ನೇರವಾಗಿ ನೀಡಲಾಗಿದ್ದರೂ ಸಹ ಹಲವು ಬಳಕೆದಾರರು libvirt API ಮತ್ತು virsh ಮೂಲಕ KVM ಅನ್ನು ಬಳಸುತ್ತಾರೆ. ಈ ಎರಡು ವೈಶಿಷ್ಟ್ಯಗಳನ್ನು ಕಾಣೆಯಾದ ಅಲ್ಲಿ Red Hat Enterprise Linux 6.2 ಹೀಗಾಗಿ ಬಳಕೆದಾರರು ಅತಿಥಿಯಲ್ಲಿ NMIs ಪ್ರಚೋದಕ ಮತ್ತು ಅತಿಥಿಗಳಿಗೆ SysRq ಕೀ ಅನುಕ್ರಮಗಳನ್ನು ಕಳುಹಿಸಲು ಅವಕಾಶ KVM ಸ್ಟ್ಯಾಕ್ ಅಡ್ಡಲಾಗಿ ಅತಿಥಿ ದೋಷ ನಿವಾರಣ ಸಾಮರ್ಥ್ಯಗಳನ್ನು ಸುಧಾರಿಸುತ್ತದೆ.
ವರ್ಚುವಲ್ ಗಣಕದ ಬೂಟ್ ಅಪ್‌ ನಿಲುಕಣೆಯಲ್ಲಿ ಸುಧಾರಣೆ
ತಮ್ಮ ಮಾಹಿತಿ ಕೇಂದ್ರಗಳಲ್ಲಿ ವರ್ಚುವಲೈಸ್ಡ್ ಬಳಕೆದಾರರು ಪ್ರಕ್ರಿಯೆ ಅಪ್ ಅತಿಥಿ ಬೂಟ್ ಟ್ರ್ಯಾಕ್ ಮತ್ತು ಪ್ರಾರಂಭದಿಂದ ಸಂದೇಶ ಇಡೀ BIOS ಮತ್ತು ಕರ್ನಲ್ ಬೂಟ್ ಪ್ರದರ್ಶಿಸಲು ಬೇಕಾಗುತ್ತದೆ. ಈ ವೈಶಿಷ್ಟ್ಯವನ್ನು ಅನುಪಸ್ಥಿತಿಯಲ್ಲಿ ಬೂಟ್ ಮೊದಲು, virsh ಕನ್ಸೋಲ್ ಒಂದು ಸಂವಾದಾತ್ಮಕ ಬಳಸಲು ಬಳಕೆದಾರರನ್ನು ತಡೆಯುತ್ತದೆ. ಹೊಸ ಪ್ಯಾಕೇಜನ್ನು sgabios qemu-kvm ಕೆಲವು ಸೇರ್ಪಡಿಕೆಗಳನ್ನು ಜೊತೆಗೆ ಈ ಸಾಮರ್ಥ್ಯವನ್ನು ನೀಡುವುದು Red Hat Enterprise Linux 6.2, ಸೇರಿಸಬಹುದು ಮಾಡಲಾಗಿದೆ.
ಲೈವ್ ಸ್ನ್ಯಾಪ್‌ಶಾಟ್‌ಗಳು
Red Hat Enterprise Linux 6.2 ಒಂದು ತಂತ್ರಜ್ಞಾನ ಮುನ್ನೋಟವಾಗಿ ಲೈವ್ ಸ್ನಾಪ್ಷಾಟ್ ವೈಶಿಷ್ಟ್ಯವನ್ನು ಪರಿಚಯಿಸುತ್ತದೆ. ನೇರ ಸ್ನ್ಯಾಪ್‌ಶಾಟ್‌ ವೈಶಿಷ್ಟ್ಯವನ್ನು ಹಾರ್ಡ್ ಡ್ರೈವಿನಲ್ಲಿ ವರ್ಚುವಲ್ ಗಣಕ ಚಿತ್ರಗಳನ್ನು ಸ್ವಯಂಚಾಲಿತ ಬ್ಯಾಕ್ಅಪ್ ಒದಗಿಸುತ್ತದೆ, ಮತ್ತು ಬಾಹ್ಯ qcow2 ಚಿತ್ರಗಳನ್ನು ಬಳಸಿಕೊಂಡು ಪಾರದರ್ಶಕವಾಗಿ ವಾಸ್ತವ ಡಿಸ್ಕುಗಳನ್ನು ಪ್ರತಿ ಡ್ರೈವ್ ಚಿತ್ರಣವನ್ನು ನೀಡುತ್ತದೆ. ಬಹು-ಡಿಸ್ಕ್ ಲೈವ್ ಚಿತ್ರಣವನ್ನು ಸೃಷ್ಟಿ ಮೊದಲು ಡಿಸ್ಕುಗಳು ಇವೆ ಎಂದು ಹಲವು snapshots ಎಂದು ತೆಗೆದುಕೊಳ್ಳುವ QEMU pausing ಮೂಲಕ ದತ್ತಾಂಶವನ್ನು ಸಮಗ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೀಗೆ, ಬಹು-ಡಿಸ್ಕ್ ಚಿತ್ರಣವನ್ನು ಎಲ್ಲಾ ಡಿಸ್ಕುಗಳನ್ನು ಸಮಯದಲ್ಲಿ ಅದೇ ಪಾಯಿಂಟ್ ದತ್ತಾಂಶವನ್ನು ಹೊಂದಿರುವ ಹೊಂದಿರುತ್ತದೆ.
ಕಡತ ವ್ಯವಸ್ಥೆಯ ಸ್ಥಿರತೆ ಒಂದು ಮಿತಿಯ ಎಂದು ತಿಳಿಯಲು ಮುಖ್ಯ. ಆದರೆ, ಚಿತ್ರಣವನ್ನು ಚಿತ್ರ ಮರು ಬಳಕೆಯ ಕುಸಿತಕ್ಕೆ-ಸ್ಥಿರವಾಗಿರುತ್ತದೆ. ಬಳಕೆದಾರ ಪವರ್ ಕಾರ್ಡ್ ಎಳೆದಾಡುವುದು ನಂತರ ಬೂಟ್ ಹೋಲುವ ಒಂದು ಕಡತ ವ್ಯವಸ್ಥೆಯನ್ನು ಪರಿಶೀಲಿಸಿ (fsck) ಅಥವಾ ಜರ್ನಲ್ ನಮೂದುಗಳನ್ನು ಮರಳಿ ಚಲಾಯಿಸಲು ಎಂದು.
ಬಹು-ಸಂಸ್ಕಾರಕ (NUMA) ಟ್ಯೂನಿಂಗ್ ಸುಧಾರಣೆಗಳು
Red Hat Enterprise Linux 6.2 ರಲ್ಲಿ SPECvirt ಮಾಪನಗಳು ನಿರ್ವಹಿಸುವಾಗ ಸುಧಾರಿತ ಔಟ್‌-ಆಫ್-ದಿ ಬಾಕ್ಸ್ ಕಾರ್ಯನಿರ್ವಹಣೆಯ ಸುಧಾರಣೆಯ ಪರಿಣಾಮವಾಗಿ libvirt ಎಪಿಐ ಸ್ಟ್ಯಾಕ್ ಗೆ ಟ್ಯೂನಿಂಗ್ ಸುಧಾರಣೆಗಳನ್ನು ಒದಗಿಸುತ್ತದೆ. Red Hat Enterprise Linux 6.2 ಈಗ ವರ್ಚುವಲ್ ಗಣಕವನ್ನು ಸೃಷ್ಟಿ ಮಾಡಿದಾಗ, ಒಂದು NUMA ನೋಡ್ ಸಂಬಂಧಿಸಿದ ಮೆಮೊರಿ ಪಿನ್ ಮಾಡಲು ಸಾಧ್ಯವಿರುತ್ತದೆ.
USB ಸುಧಾರಣೆಗಳು
USB 2.0 ಎಮ್ಯುಲೇಶನ್ ಅನ್ನು qemu-kvmಗಾಗಿ ಅನ್ವಯಿಸಲಾಗಿದೆ. ಇದು ನೇರವಾಗಿ QEMU ಗಾಗಿ ಮಾತ್ರ ಲಭ್ಯವಿರುತ್ತದೆ. Libvirt ಬೆಂಬಲವನ್ನು ಮುಂದಿನ ಬಿಡುಗಡೆಯಲ್ಲಿ ಸೇರಿಸಲು ಯೋಜಿಸಲಾಗಿದೆ.
USB ಆತಿಥೇಯ ನಿಯಂತ್ರಕಕ್ಕಾಗಿ ರಿಮೋಟ್ ವೇಕ್‌ಅಪ್ ಬೆಂಬಲವನ್ನು ಸೇರಿಸಲಾಗಿದೆ. ಅತಿಥಿ OS ನ ಸಹಯೋಗದೊಂದಿಗೆ ಪುನರಾವರ್ತಿತ 1000hz ಪೋಲಿಂಗ್ ಕ್ರಮವನ್ನು ತಡೆಯುತ್ತದೆ ಹಾಗು ಸಾಧನವನ್ನು ನಿದ್ರಾ ಸ್ಥಿತಿಗೆ ಕಳುಹಿಸುತ್ತದೆ. ಇದು ವಿದ್ಯುಚ್ಛಕ್ತಿಯ ಬಳಕೆಯನ್ನು ಹಾಗು CPU USB ಮೌಸ್ ಎಮ್ಯುಲೇಶನ್‌ನೊಂದಿಗೆ (ಅಥವ ಟ್ಯಾಬ್ಲೆಟ್) ವರ್ಚುವಲ್ ಗಣಕಗಳ CPU ಬಳಕೆಯನ್ನು ಆಶ್ಚರ್ಯಕರ ರೀತಿಯಲ್ಲಿ ಉತ್ತಮಗೊಳಿಸುತ್ತದೆ — ಪ್ರತಿಯೊಂದು ವರ್ಚುವಲ್ ಗಣಕವೂ ಸಹ ಹೊಂದಿರುವ ಒಂದು ಸಾಮಾನ್ಯ ಸಾಧನ).
Xen ಸುಧಾರಣೆಗಳು
ಮೆಮೊರಿ ಬಲೂನಿಂಗ್
ಮೆಮೊರಿ ಬಲೂನಿಂಗ್ ಅನ್ನು Red Hat Enterprise Linux 6 ಪ್ಯಾರಾವರ್ಚುವಲೈಸ್ಡ್‍ Xen ಅತಿಥಿಗಳಲ್ಲಿ ಈ ಬೆಂಬಲಿಸಲಾಗುತ್ತದೆ.
ಡೊಮೈನ್ ಮೆಮೊರಿ ಮಿತಿ
x86_64 domU PV ಅತಿಥಿಗಳಿಗಾಗಿನ ಮೆಮೊರಿ ಮಿತಿಯನ್ನು 128 GBಗೆ ಹೆಚ್ಚಿಸಲಾಗಿದೆ: CONFIG_XEN_MAX_DOMAIN_MEMORY=128.
ಸಮಯದ ಲೆಕ್ಕಾಚಾರ
xen_sched_clock ಅನ್ವಯಿಸುವಿಕೆಯನ್ನು (ಬಳಸದೆ ಇರುವ ನ್ಯಾನೊಸೆಕೆಂಡುಗಳನ್ನು ಮರಳಿಸುತ್ತದೆ) xen_clocksource_read ಇಂದ ಬದಲಾಯಿಸಲಾಗಿದೆ.
ವರ್ಚುವಲೈಸೇಶನ್ ದಸ್ತಾವೇಜು
Red Hat Enterprise Linux ವರ್ಚುವಲೈಸೇಶನ್ ಗೈಡ್ ಅನ್ನು ಹಲವಾರು ನಿಶ್ಚಿತ ಮಾರ್ಗದರ್ಶಿಗಳಾಗಿ ವಿಭಜಿಸಲಾಗಿದೆ:
spice-protocol
spice-protocol ಎಂಬ ಪ್ಯಾಕೇಜ್ ಅನ್ನು ಆವೃತ್ತಿ 0.8.1 ಗೆ ನವೀಕರಿಸಲಾಗಿದು, ಈ ಕೆಳಗಿನ ಸವಲತ್ತುಗಳನ್ನು ಒದಗಿಸುತ್ತದೆ:
  • ಧ್ವನಿ ಬದಲಾವಣೆಗೆ ಬೆಂಬಲ
  • ಅಸಿಂಕ್ ಅತಿಥಿ I/O ಬರೆಯುವಿಕೆಗಳಿಗೆ ಹಾಗು ತಡೆಗಳಿಗೆ ಬೆಂಬಲ
  • ಸ್ಥಗಿತ (S3) ಸಂಬಂಧಿತ ಅತಿಥಿ I/O ಬರೆಯುವಿಕೆಗಳಿಗೆ ಬೆಂಬಲ
  • ಒಂದು ಅತಿಥಿಯಲ್ಲಿನ ದೋಷವನ್ನು ಸೂಚಿಸುವ ತಡೆಗೆ ಬೆಂಬಲ
ಲಿನಕ್ಸ್ ಕಂಟೈನರುಗಳು
ಲಿನಕ್ಸ್ ಕಂಟೈನರ್ ಸಂಪೂರ್ಣ ಕೆಲಸದ ಹೊರೆಯನ್ನು ವರ್ಚುವಲೈಸ್ ಅವಶ್ಯಕತೆ ಇಲ್ಲದೆ ಬೇರ್-ಮೆಟಲ್ ಗಣಕಗಳಲ್ಲಿ ಅನ್ವಯದ ಚಾಲನಾ ಸಮಯದಲ್ಲಿನ ನಿರೋಧಕತೆಗೆ ತಕ್ಕಂತೆ ವಿಧಾನವನ್ನು ಒದಗಿಸುತ್ತದೆ. Red Hat Enterprise Linux 6.2 ರಲ್ಲಿ cgroup ಮತ್ತು namespaces ಮೂಲಕ ಅನ್ವಯ ಸಂಪನ್ಮೂಲ ಬಳಕೆಯ ನೀತಿಗಳನ್ನು ಪ್ರತ್ಯೇಕ ಮತ್ತು ನಿಯಂತ್ರಿಸಲು ಅನ್ವಯ ಮಟ್ಟದ ಕಂಟೈನರ್ ಅನ್ನು ಒದಗಿಸುತ್ತದೆ. ಈ ಬಿಡುಗಡೆಯು ಅನುಮತಿಸಬಲ್ಲ ಕಂಟೈನರ್ ಜೀವನ ಚಕ್ರದ ಮೂಲ ನಿರ್ವಹಣೆಯನ್ನು ಪರಿಚಯಿಸುತ್ತದೆ. libvirt API ಮತ್ತು virt-manager GUI ಮೂಲಕ ಕಂಟೈನರ್ ಸೃಷ್ಟಿ, ಸಂಪಾದನೆ ಮತ್ತು ಅಳಿಸುವಿಕೆಗೆ ಅನುಮತಿಸುತ್ತದೆ. ಲಿನಕ್ಸ್ ಕಂಟೈನರ್ ಒಂದು ತಂತ್ರಜ್ಞಾನ ಪೂರ್ವಾವಲೋಕನವಾಗಿದೆ.
ಬಹು-ಅನುಸ್ಥಾಪಿಸಹುದಾದ Red Hat Enterprise Virtualization ಹೈಪರ್ವೈಸರ್ RPM
rhev-hypervisor ಪ್ಯಾಕೇಜನ್ನು ಒಟ್ಟಿಗೆ ಅನುಸ್ಥಾಪಿಸುವುದನ್ನು ಅನುಮತಿಸಲು, /etc/yum.conf ಕಡತವನ್ನು ಸಂಪಾದಿಸುವ ಮೂಲಕ ಹಾಗು installonlypkgs ಆಯ್ಕೆಯನ್ನು ಸೇರಿಸುವ ಮೂಲಕ rhev-hypervisor ಅನ್ನು ಒಂದು ಅನುಸ್ಥಾಪನೆಗೆ ಮಾತ್ರವಾದ ಪ್ಯಾಕೇಜ್ ಆಗಿ ಸಂರಚಿಸಿ:
[main]
...
installonlypkgs=rhev-hypervisor
ಈ ಆಯ್ಕೆಗಾಗಿ yum.conf man page (man yum.conf 5) ನಲ್ಲಿರುವ installonlypkgs ಆಯ್ಕೆಯ ವಿಭಾಗದಲ್ಲಿ ಕಂಡು ಬರುವ ಅನುಸ್ಥಾಪನೆಗೆ ಮಾತ್ರವಾದ ಪ್ಯಾಕೇಜುಗಳ ಪೂರ್ವನಿಯೋಜಿತ ಪಟ್ಟಿಯನ್ನೂ ಸಹ ಹೊಂದಿರಬೇಕಾಗುತ್ತದೆ.

ಅಧ್ಯಾಯ 16. ಗ್ರಾಫಿಕ್ಸ್‍

Red Hat Enterprise Linux 6.2 ರೊಂದಿಗೆ ನೀಡಲಾಗುವ X ಪರಿಚಾರಕವನ್ನು ಅಪ್‌ಸ್ಟ್ರೀಮ್ ಆವೃತ್ತಿ X.org 1.10 X ಪರಿಚಾರಕಕ್ಕೆ ಹಾಗು ಅಪ್‌ಸ್ಟ್ರೀಮ್ Mesa 7.11 ಬಿಡುಗಡೆಗಳಿಗೆ ಅಪ್‌ಡೇಟ್‌ ಮಾಡಲಾಗಿದೆ. X ಪರಿಚಾರಕಕ್ಕಾಗಿ ಎಲ್ಲಾ ವೀಡಿಯೊ ಹಾಗು ಇನ್‌ಪುಟ್ ಚಾಲಕಗಳನ್ನು ಅಪ್‌ಡೇಟ್ ಮಾಡಲು ಅಗತ್ಯವಿರುವ ಆಂತರಿಕ ರಚನಾವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಹೊಂದಿತ್ತು. ಜೊತೆಗೆ, ಹೊಸ ಯಂತ್ರಾಂಶ ಬೆಂಬಲ ಹಾಗು ದೋಷ ಪರಿಹಾರಗಳನ್ನು ಒಳಗೊಳ್ಳುವಂತೆ ಕರ್ನಲ್ ಗ್ರಾಫಿಕ್ಸ್ ಬೆಂಬಲವನ್ನು ಅಪ್‌ಡೇಟ್ ಮಾಡಲಾಗಿದೆ.
AMD
ATI/AMD GPU series HD2xxx, HD4xxx, HD5xxx, FirePro ಗಾಗಿ ಸುಧಾರಿತ ಬೆಂಬಲ. ಹೊಸ HD6xxx ಸೀರೀಸ್‌ಗಾಗಿ, FirePro ಸೀರೀಸ್‌ಗಾಗು ಹೊಸ ಮೊಬೈಲ್ GPU HD6xxxM ಸೀರೀಸ್‌ಗಾಗಿ ಬೆಂಬಲವನ್ನು ಸೇರಿಸಲಾಗಿದೆ.
Intel
Intel IvyBridge-class ಚಿಪ್‌ಸೆಟ್‌ಗಳಿಗೆ ಬೆಂಬಲವನ್ನು ಸೇರಿಸಲಾಗಿದೆ.
Nouveau
2D/Xv ವೇಗವರ್ಧನೆಯನ್ನು ಈಗ GeForce GT2xx (ಹಾಗು Quadro ಗೆ ಸಮಾನವಾದುದು) ನಲ್ಲಿ ಬೆಂಬಲಿಸಲಾಗುತ್ತದೆ. ಸ್ಥಗಿತಗೊಳಿಕೆ/ಮರುಆರಂಭದ ಬೆಂಬಲವನ್ನು ಸುಧಾರಿಸಲಾಗಿದೆ.
X server
RandR-ಶಕ್ತಗೊಂಡ ಚಾಲಕಗಳು (intel, nouveau, radeon) ಈಗ ಅಸಮತೆಯ ಮಲ್ಟಿಹೆಡ್‌ ಸಂರಚನೆಗಳಲ್ಲಿ ತೆರೆಸೂಚಕವನ್ನು ತೆರೆಯ ಗೋಚರಿಸುವ ಜಾಗಕ್ಕೆ ಮಾತ್ರ ಸೀಮಿತಗೊಳಿಸುತ್ತವೆ.
ಒಂದು ಗಣಕತೆರೆಯನ್ನು ಅನೇಕ GPUಗಳ ನಡುವೆ ವಿತರಿಸಲು Xinerama ಅನ್ನು ಬಳಸುವಾಗ ಈಗ ಕಾಂಪೋಸಿಟ್ ವಿಸ್ತರಣೆಯು ಕೆಲಸ ಮಾಡುತ್ತದೆ.
X ಪರಿಚಾರಕ ಕಡತವನ್ನು ಸ್ವತಃ /etc/X11/xorg.confನ ಜೊತೆಗೆ /etc/X11/xorg.conf.d/ಯಲ್ಲಿನ ಸಂರಚನಾ ಕಡತ ಸ್ನಿಪೆಟ್‌ಗಳೊಂದಿಗೆ ಈಗ ನಿರ್ವಹಿಸಲು ಸಾಧ್ಯವಿರುತ್ತದೆ. ಈ ಸ್ನಿಪೆಟ್‌ಗಳಲ್ಲಿನ X.org ಇನ್‌ಪುಟ್ ಸಾಧನವು ಚಾಲನಾ ಸಮಯದಲ್ಲಿ X ಪರಿಚಾರಕದಲ್ಲಿ ಲಭ್ಯವಾದಾಗ ಸಾಧನದ ಸಂರಚನೆಯನ್ನು ಅನ್ವಯಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 1.10 X ಪರಿಚಾರಕ ಅಪ್‌ಸ್ಟ್ರೀಮ್ ಹೇಳಿಕೆಯನ್ನು ನೋಡಿ: http://lists.freedesktop.org/archives/xorg-announce/2011-February/001612.html.
Mesa
ಬಿಡುಗಡೆ ಟಿಪ್ಪಣಿಗಳಿಗಾಗಿನ ಹೇಳಿಕೆಗಾಗಿ Mesa 7.11 ಅಪ್‌ಸ್ಟ್ರೀಮ್ ಅನ್ನು ನೋಡಿ: http://mesa3d.org/relnotes-7.11.html.

ಅಧ್ಯಾಯ 17. ಸಾಮಾನ್ಯ ಅಪ್‌ಡೇಟ್‌ಗಳು

Matahari
Red Hat Enterprise Linux 6.2 ರಲ್ಲಿ Matahari ಗೆ ಈಗ ಕೇವಲ x86 ಹಾಗು AMD64 ಆರ್ಕಿಟೆಕ್ಚರುಗಳಿಗಾಗಿ ಸಂಪೂರ್ಣ ಬೆಂಬಲವನ್ನು ಒದಗಿಸಲಾಗಿದೆ. ಇತರೆ ಆರ್ಕಿಟೆಕ್ಚರುಗಳಿಗಾಗಿನ ನಿರ್ಮಾಣಗಳನ್ನು ತಂತ್ರಜ್ಞಾನ ಅವಲೋಕನವಾಗಿ ಪರಿಗಣಿಸಲಾಗಿದೆ.
ಸ್ವಯಂಚಾಲಿತ ದೋಷ ವರದಿ ಮಾಡುವಿಕೆ ಉಪಕರಣ
Red Hat Enterprise Linux 6.2 ರಲ್ಲಿ ABRT 2.0 ಅನ್ನು ಪರಿಚಯಿಸಲಾಗುತ್ತದೆ. ABRT ಯು ತಂತ್ರಾಂಶ ಕುಸಿತಗಳ ದಾಖಲೆಗಳನ್ನು ಒಂದು ಸ್ಥಳೀಯ ವ್ಯವಸ್ಥೆಯಲ್ಲಿ ಇರಿಸಿಕೊಳ್ಳುತ್ತದೆ, ಹಾಗು Red Hat ಬೆಂಬಲವೂ ಸೇರಿದಂತೆ ಹಲವಾರು ಇಶ್ಯೂ ಟ್ರಾಕರುಗಳಿಗೆ ಸಮಸ್ಯೆಗಳನ್ನು ವರದಿ ಮಾಡಲು ಸಂಪರ್ಕಸಾಧನವನ್ನು ಒದಗಿಸುತ್ತದೆ (ಚಿತ್ರಾತ್ಮಕ ಹಾಗು ಆಜ್ಞಾ ಸಾಲು ಆಧರಿತ). ಈ ಅಪ್‌ಡೇಟ್‌ನಲ್ಲಿ ಈ ಕೆಳಗಿನ ಗಮನಾರ್ಹ ಸುಧಾರಣೆಗಳನ್ನು ಸೇರಿಸಲಾಗಿದೆ:
  • ಹೊಸ ಸಿಂಟ್ಯಾಕ್ಸಿನೊಂದಿಗೆ ಹೆಚ್ಚಿನ ಸರಳ ಸಂರಚನೆ.
  • Out-ouf-process ಪ್ಲಗ್‌ಇನ್‌ಗಳು (ಪ್ಲಗ್‌ಇನ್‌ಗಳು ಪ್ರತ್ಯೇಕ ಪ್ರಕ್ರಿಯೆಗಳಲ್ಲಿ ಚಲಾಯಿತಗೊಳ್ಳುತ್ತವೆ ಹಾಗು ಪ್ರಕ್ರಿಯೆ-ನಡುವಿನ ಸಂವಹನದ ಮೂಲಕ ಬೇರೆ ಪ್ರಕ್ರಿಯೆಗಳೊಂದಿಗೆ ಸಂವಹಿಸುತ್ತವೆ). ಇಂತಹ ವಿನ್ಯಾಸದ ಪ್ರಯೋಜನಗಳೆಂದರೆ:
    • ಪ್ಲಗ್‌ಇನ್‌ಗಳಲ್ಲಿನ ದೋಷಗಳು ಮುಖ್ಯ ಡೀಮನ್ ಮೇಲೆ ಪರಿಣಾಮ ಬೀರುವುದಿಲ್ಲ,
    • ಹೆಚ್ಚಿನ ಸಂಸ್ಕರಣೆಯನ್ನು ಸಾಮಾನ್ಯ (ನಿರ್ವಾಹಕನಲ್ಲ) ಬಳಕೆದಾರನ ಅಡಿಯಲ್ಲಿ ನಡೆಸಲಾಗುವುದರಿಂದ ಹೆಚ್ಚು ಸುರಕ್ಷಿತವಾಗಿರುತ್ತದೆ,
    • ಪ್ಲಗ್‌ಇನ್‌ಗಳನ್ನು ಯಾವುದೆ ಪ್ರೊಗ್ರಾಮಿಂಗ್ ಭಾಷೆಯಲ್ಲಿ ಬರೆಯಲು ಸಾಧ್ಯವಿರುತ್ತದೆ.
  • ವರದಿ ಮಾಡುವ ಬ್ಯಾಕೆಂಡ್ ಅನ್ನು Red Hatನ ಎಲ್ಲಾ ವರದಿ ಮಾಡುವಿಕೆ ಉಪಕರಣಗಳಾದ್ಯಂತ ಹಂಚಿಕೊಳ್ಳಲಾಗುತ್ತದೆ:
    • ABRT, sealert, python-meh ನ ಎಲ್ಲಾ ಬಳಕೆದಾರರು (Anaconda, firstboot)
    • ಮೇಲಿನ ಪ್ರತಿಯೊಂದು ಉಪಕರಣಗಳು ಒಂದೇ ರೀತಿಯ ಸಂರಚನೆಯನ್ನು ಬಳಸುವುದರಿಂದ, ಅದನ್ನು ಕೇವಲ ಒಮ್ಮೆ ಮಾತ್ರ ಬರೆಯಬೇಕಾಗುತ್ತದೆ.

ಹೆಚ್ಚಿನ ಓದಿಗಾಗಿ

ABRT ಸಂರಚನೆ ಹಾಗು ಹೊಸ ಸಿಂಟ್ಯಾಕ್ಸಿಗಾಗಿನ ಹೆಚ್ಚಿನ ಮಾಹಿತಿಗಾಗಿ, Red Hat Enterprise Linux 6.2 Deployment Guide ಅನ್ನು ನೋಡಿ.
IBM System z ನಲ್ಲಿನ ಲಿನಕ್ಸಿಗಾಗಿ ಸೂಕ್ತಗೊಳಿಸಲಾದ ಮ್ಯಾತ್ ಲೈಬ್ರರಿ
Red Hat Enterprise Linux 6.2 ರಲ್ಲಿ IBM System z ನಲ್ಲಿನ ಲಿನಕ್ಸಿಗಾಗಿ ಸೂಕ್ತಗೊಳಿಸಲಾದ ಮ್ಯಾತ್ ಲೈಬ್ರರಿಯನ್ನು ಒದಗಿಸುತ್ತದೆ, ಇದು ಇತ್ತೀಚಿನ ಯಂತ್ರಾಂಶ ಕ್ರಿಯೆಗಳ ಪ್ರಯೋಜನವನ್ನು ಪಡೆದುಕೊಂಡು ಉನ್ನತಮಟ್ಟದ ಕ್ರಿಯೆಗಳಿಗಾಗಿನ ಸಂಕೇತವನ್ನು ಉತ್ಪಾದಿಸುವಂತೆ ಕಂಪೈಲರನ್ನು ಶಕ್ತಗೊಳಿಸುತ್ತದೆ.
ಸುಧಾರಿತ ಟ್ಯಾಬ್ಲೆಟ್ ಬೆಂಬಲ
Red Hat Enterprise Linux 6.2 ರಲ್ಲಿ Wacom ಸಾಧನಗಳಿಗಾಗಿ ಬೆಂಬಲವನ್ನು ಸುಧಾರಿಸಲಾಗಿದೆ. ಸಾಧನವನ್ನು ತೆಗೆದುಹಾಕಿ ನಂತರ ಮರು ಜೋಡಿಸಿದಾಗ ಇನ್ನು ಮುಂದೆ ಅದನ್ನು ಪುನಃ ಸಂರಚಿಸುವ ಅಗತ್ಯವಿರುವುದಿಲ್ಲ.
ಸುಧಾರಿತ ವೈರ್ಲೆಸ್ ಪತ್ತೆ ಮಾಡುವಿಕೆ
NetworkManager ಈಗ ಹಿನ್ನೆಲೆಯಲ್ಲಿ ವೈರ್ಲೆಸ್‌ ಜಾಲಬಂಧಗಳಿಗಾಗಿ ಹುಡುಕಾಡುತ್ತದೆ, ಆ ಮೂಲಕ ಉತ್ತಮ ಬಳಕೆದಾರ ಅನುಭವವನ್ನು ಒದಗಿಸುತ್ತದೆ.
GNOME ನಲ್ಲಿ CPU ಬೆಂಬಲವನ್ನು ಹೆಚ್ಚಿಸುತ್ತದೆ
gnome-system-monitor ಸವಲತ್ತು ಈಗ 64 ಗಳಿಗೂ ಹೆಚ್ಚಿನ CPU ಗಳನ್ನು ಹೊಂದಿರುವ ವ್ಯವಸ್ಥೆಯನ್ನು ಮೇಲ್ವಿಚಾರಣೆ ನಡೆಸಬಲ್ಲದು.

ಘಟಕದ ಆವೃತ್ತಿಗಳು

ಈ ಅನುಬಂಧವು Red Hat Enterprise Linux 6.2 ಬಿಡುಗಡೆಯಲ್ಲಿನ ಘಟಕಗಳು ಹಾಗು ಅವುಗಳ ಆವೃತ್ತಿಗಳ ಒಂದು ಪಟ್ಟಿಯಾಗಿರುತ್ತದೆ.
ಘಟಕ
ಆವೃತ್ತಿ
ಕರ್ನಲ್
2.6.32-202
QLogic qla2xxx ಚಾಲಕ
8.03.07.05.06.2-k
QLogic qla2xxx ಫರ್ಮ್-ವೇರ್
ql23xx-firmware-3.03.27-3.1
ql2100-firmware-1.19.38-3.1
ql2200-firmware-2.02.08-3.1
ql2400-firmware-5.06.01-1
ql2500-firmware-5.06.01-1
Emulex lpfc ಚಾಲಕ
8.3.5.45.2p
iSCSI ಆರಂಭಕ ಸವಲತ್ತುಗಳು
6.2.0.872-27
DM-ಮಲ್ಟಿಪಾತ್
0.4.9-43
LVM
2.02.87-3
X Server
1.10.4-3
ಕೋಷ್ಟಕ A.1. ಘಟಕದ ಆವೃತ್ತಿಗಳು

ಪರಿಷ್ಕರಣ ಇತಿಹಾಸ

ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 1-0Mon Dec 5 2011Martin Prpič
Red Hat Enterprise Linux 6.2 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ