The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
All other trademarks are the property of their respective owners.
Red Hat Enterprise Linux 6.6 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. 6.6 ಗಾಗಿನ Red Hat Enterprise Linux ಗೆ ಮಾಡಲಾದ ಅಪ್‌ಡೇಟ್‌ನ ಕುರಿತದಾದ ವಿವರವಾದ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ.
Red Hat Enterprise Linux ಕಿರು ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 6.6 ಬಿಡುಗಡೆ ಟಿಪ್ಪಣಿಗಳಲ್ಲಿನ Red Hat Enterprise Linux 6 ಕಾರ್ಯ ವ್ಯವಸ್ಥೆ \nಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಕಿರು ಬಿಡುಗಡೆಯಲ್ಲಿ ಮಾಡಲಾದ ಬದಲಾವಣೆಗಳ (ಅಂದರೆ ದೋಷಗಳನ್ನು ಸರಿಪಡಿಸಲಾಗಿದೆ, ಸುಧಾರಣೆಗಳನ್ನು ಸೇರಿಸಲಾಗಿದೆ, ಗೊತ್ತಿರುವ ವಿಷಯಗಳನ್ನು ಕಂಡುಹಿಡಿಯಲಾಗಿದೆ) ವಿವರಣೆಗಳಿಗಾಗಿ ತಾಂತ್ರಿಕ ಟಿಪ್ಪಣಿಗಳನ್ನು ನೋಡಿ. ಈ ತಾಂತ್ರಿಕ ಟಿಪ್ಪಣಿಗಳ ದಸ್ತಾವೇಜಿನಲ್ಲಿ ಪ್ರಸಕ್ತ ಲಭ್ಯವಿರುವ ಎಲ್ಲಾ ತಂತ್ರಜ್ಞಾನ ಮುನ್ನೋಟಗಳನ್ನು ಒದಗಿಸುವ ಪ್ಯಾಕೇಜುಗಳ ಜೊತೆಗೆ ಅವುಗಳ ಪಟ್ಟಿಯನ್ನೂ ಸಹ ನೀಡಲಾಗಿದೆ.
ಪ್ರಮುಖ ಅಂಶ
Red Hat Enterprise Linux 6.6 ಬಿಡುಗಡೆ ಟಿಪ್ಪಣಿಗಳಆನ್ಲೈನ್ಆವೃತ್ತಿಯನ್ನು, \nನಿಶ್ಚಿತವಾದ, ಅಪ್-ಟು-ಡೇಟ್ ಆದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ಬಿಡುಗಡೆ ಸಂಬಂಧಿಸಿದ ಸಂದೇಹಗಳನ್ನು ಹೊಂದಿರುವ ಗ್ರಾಹಕರು ತಮ್ಮಲ್ಲಿರುವ Red Hat Enterprise Linux ನ ಆವೃತ್ತಿಗೆ ಸೂಕ್ತವಾದ ಆನ್‌ಲೈನ್‌ನಲ್ಲಿನ ಬಿಡುಗಡೆ ಮತ್ತು ತಾಂತ್ರಿಕ ಟಿಪ್ಪಣಿಗಳನ್ನು ನೋಡುವಂತೆ ಸಲಹೆ ಮಾಡಲಾಗುತ್ತದೆ.
ವ್ಯವಸ್ಥೆಯ ಇತರೆ ಆವೃತ್ತಿಗೆ ಹೋಲಿಸಿದಲ್ಲಿ Red Hat Enterprise Linux 6 ರ ಸಾಮರ್ಥ್ಯಗಳು ಮತ್ತು ಮಿತಿಗಳ ಕುರಿತಾದ ಮಾಹಿತಿಯನ್ನು ತಿಳಿಯಲು https://access.redhat.com/site/articles/rhel-limits ಎಂಬಲ್ಲಿರುವ ನಾಲೆಜ್ ಬೇಸ್ ಲೇಖನವನ್ನು ನೋಡಿ.
udev ಘಟನೆ ರಚನಾವ್ಯವಸ್ಥೆಯ ಮೂಲಕ SCSI ಸಾಧನಗಳಿಂದ ಸ್ವೀಕರಿಸಲಾದ ನಿರ್ದಿಷ್ಟ SCSI ಯುನಿಟ್ ಅಟೆನ್ಶನ್ ಸ್ಥಿತಿಗಳಿಗೆ ಬಳಕೆದಾರ ಸ್ಥಳವು ಪ್ರತಿಕ್ರಯಿಸುವುದನ್ನು ಸಕ್ರಿಯಗೊಳಿಸುವಂತೆ Red Hat Enterprise Linux 6.6 ನಲ್ಲಿನ ಕರ್ನಲ್ ಅನ್ನು ಸುಧಾರಿಸಲಾಗಿದೆ. ಬೆಂಬಲಿಸಲಾಗುವ ಯುನಿಟ್ ಅಟೆನ್ಶನ್ ಸ್ಥಿತಿಗಳೆಂದರೆ:
3F 03 INQUIRY DATA HAS CHANGED
2A 09 CAPACITY DATA HAS CHANGED
38 07 THIN PROVISIONING SOFT THRESHOLD REACHED
2A 01 MODE PARAMETERS CHANGED
3F 0E REPORTED LUNS DATA HAS CHANGED
ಬೆಂಬಲಿಸಲಾಗುವ ಯುನಿಟ್ ಅಟೆನ್ಶನ್ ಸ್ಥಿತಿಗಳಿಗಾಗಿನ ಪೂರ್ವನಿಯೋಜಿತ udev ನಿಯಮಗಳನ್ನು libstoragemgmt RPM ಪ್ಯಾಕೇಜಿನಿಂದ ಬೆಂಬಲಿಸಲಾಗುತ್ತದೆ. udev ನಿಯಮಗಳು /lib/udev/rules.d/90-scsi-ua.rules ಕಡತದಲ್ಲಿ ಇರುತ್ತವೆ.
ಪೂರ್ವನಿಯೋಜಿತ ನಿಯಮಗಳು REPORTED LUNS DATA HAS CHANGED ಯುನಿಟ್ ಅಟೆನ್ಶನ್ ಅನ್ನು ನಿಭಾಯಿಸುತ್ತವೆ. ಕರ್ನಲ್‌ನಿಂದ ಉತ್ಪಾದಿಸಲಾಗುವ ಇತರೆ ಘಟನೆಗಳನ್ನು ಎನ್ಯುಮರೇಟ್ ಮಾಡಲು ಹೆಚ್ಚುವರಿ ಉದಾಹರಣೆ ನಿಯಮಗಳು ಇವೆ. SCSI ಗುರಿಯಲ್ಲಿ ಇನ್ನು ಮುಂದೆ ಇರದೆ ಇರುವ ಲಾಜಿಕಲ್ ಯುನಿಟ್ ನಂಬರ್‌ಗಳನ್ನು (LUNಗಳು) ಪೂರ್ವನಿಯೋಜಿತ ನಿಯಮಗಳು ಸ್ವಯಂಚಾಲಿತವಾಗಿ ತೆಗೆದುಹಾಕುವುದಿಲ್ಲ.
ಏಕೆಂದರೆ SCSI ಯುನಿಟ್ ಅಟೆನ್ಶನ್ ಸ್ಥಿತಿಗಳನ್ನು ಕೇವಲ SCSI ಆದೇಶಕ್ಕೆ ಪ್ರತಿಕ್ರಿಯೆಯಾಗಿ ಮಾತ್ರ ವರದಿ ಮಾಡುವುದರಿಂದ, SCSI ಸಾಧನಕ್ಕೆ ಯಾವುದೆ ಆದೇಶಗಳನ್ನು ಕಳುಹಿಸದೆ ಇದ್ದರೆ ಯಾವ ಸ್ಥಿತಿಯನ್ನೂ ಸಹ ವರದಿ ಮಾಡಲಾಗುವುದಿಲ್ಲ.
udev ನಿಯಮಗಳನ್ನು ಬದಲಾಯಿಸುವ ಮೂಲಕ ಪೂರ್ವನಿಯೋಜಿತ ವರ್ತನೆಯನ್ನು ಮಾರ್ಪಡಿಸಬಹುದು. libstoragemgmt RPM ಪ್ಯಾಕೇಜನ್ನು ಅನುಸ್ಥಾಪಿಸಲಾಗಿರದೆ ಇದ್ದಲ್ಲಿ, ಪೂರ್ವನಿಯೋಜಿತ ನಿಯಮಗಳನ್ನು ಇರುವುದಿಲ್ಲ. ಆ ಘಟನೆಗಳಿಗೆ ಯಾವುದೆ udev ನಿಯಮಗಳು ಇರದೆ ಇದ್ದಲ್ಲಿ, ಯಾವುದೆ ಕ್ರಿಯೆಯನ್ನು ನಡೆಸಲಾಗುವುದಿಲ್ಲ, ಆದರೆ ಸ್ವತಃ ಘಟನೆಗಳನ್ನು ಕರ್ನಲ್‌ನಿಂದ ಉತ್ಪಾದಿಸಲಾಗುತ್ತದೆ.
ಓಪನ್ vSwitch ಕರ್ನಲ್ ಮಾಡ್ಯೂಲ್
Red Hat Enterprise Linux 6.6 ರಲ್ಲಿ Open vSwitch ಕರ್ನಲ್ ಮಾಡ್ಯೂಲ್ ಅನ್ನು Red Hat ನಿಂದ ಒದಗಿಸಲಾಗುವ ಲೇಯರ್ಡ್ ಉತ್ಪನ್ನಗಳನ್ನು ಸಕ್ರಿಯಗೊಳಿಸುವ ಸಾಧನವಾಗಿ ಸೇರಿಸಲಾಗಿದೆ. Open vSwitch ಅನ್ನು ಕೇವಲ ಬಳಕೆದಾರ ಸ್ಥಳದ ಸವಲತ್ತುಗಳ ಜೊತೆ ಇರುವ ಉತ್ಪನ್ನಗಳೊಂದಿಗಿದ್ದಲ್ಲಿ ಮಾತ್ರ ಬೆಂಬಲಿಸಲಾಗುತ್ತದೆ ಎನ್ನುವುದನ್ನು ನೆನಪಿಡಿ. ಈ ಅಗತ್ಯವಿರುವ ಬಳಕೆದಾರ ಸ್ಥಳದ ಸವಲತ್ತುಗಳಿಲ್ಲದೆ, Open vSwitch ಕೆಲಸ ಮಾಡುವುದಿಲ್ಲ ಮತ್ತು ಬಳಕೆಯ ಸಲುವಾಗಿ ಸಕ್ರಿಯಗೊಳಿಸಲು ಸಾಧ್ಯವಿರುವುದಿಲ್ಲ ಎನ್ನುವುದನ್ನು ನೆನಪಿಡಿ. ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ನಾಲೆಜ್ ಬೇಸ್ ಲೇಖನವನ್ನು ನೋಡಿ: https://access.redhat.com/knowledge/articles/270223.
ಅಧ್ಯಾಯ 2. ಜಾಲಬಂಧ
HPN ಆಡ್-ಆನ್‌ಗೆ ಬದಲಾವಣೆಗಳು
Red Hat Enterprise Linux 6.6 ಇಂದ ಆರಂಭಗೊಂಡು, ಹೈ ಪರ್ಫಾಮೆನ್ಸ್ ನೆಟ್‌ವರ್ಕಿಂಗ್ (HPN) ಆಡ್-ಆನ್ ಇನ್ನು ಮುಂದೆ ಒಂದು ಪ್ರತ್ಯೇಕ ಉತ್ಪನ್ನವಾಗಿ ಲಭ್ಯವಿರುವುದಿಲ್ಲ. ಬದಲಿಗೆ, HPN ಆಡ್-ಆನ್‌ನಲ್ಲಿನ ಕ್ರಿಯಾಶೀಲತೆಯನ್ನು ಮೂಲ ಉತ್ಪನ್ನದೊಂದಿಗೆ ಸಂಯೋಜಿಸಲಾಗಿದೆ ಮತ್ತು Red Hat Enterprise Linux ಮೂಲಭೂತ ಚಾನಲ್‌ನ ಒಂದು ಭಾಗವಾಗಿ ನೀಡಲಾಗಿದೆ.
HPN ಕ್ರಿಯಾಶೀಲತೆಯನ್ನು ಮೂಲಭೂತ Red Hat Enterprise Linux 6 ಉತ್ಪನ್ನದೊಂದಿಗೆ ಸೇರಿಸುವುದರ ಜೊತೆಗೆ, RDMA ಓವರ್ ಕನ್ವರ್ಜಡ್ ಎತರ್ನೆಟ್ (RoCE) ಅಳವಡಿಕೆಯನ್ನೂ ಸಹ ಅಪ್‌ಡೇಟ್ ಮಾಡಲಾಗಿದೆ. RoCE ಯು ನೋಡ್‌ನಿಂದ-ನೋಡ್ ನಡುವಿನ ವ್ಯವಹಾರಕ್ಕಾಗಿ ಗ್ಲೋಬಲ್ ಐಡೆಂಟಿಫಯರ್ ಅನ್ನು ಅಥವ GID-ಆಧರಿತವಾದ ಅಡ್ರೆಸಿಂಗ್ ಅನ್ನು ಬಳಸುತ್ತದೆ. ಈ ಹಿಂದೆ, GIDಗಳನ್ನು, VLAN ID ಯ (ಬಳಸಲಾಗಿದ್ದಲ್ಲಿ) ಜೊತೆಗೆ ಎತರ್ನೆಟ್ ಸಂಪರ್ಕಸಾಧನದ MAC ವಿಳಾಸದ ಮೇಲೆ ಆಧರಿತವಾಗಿ ಎನ್ಕೋಡ್‌ಮಾಡಲಾಗುತ್ತಿತ್ತು. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, RoCE ಪ್ರೊಟೊಕಾಲ್ ಅನ್ನು ಚಲಾಯಿಸುವ ಕಂಪ್ಯೂಟ್ ಎಂಟಿಟಿಗೆ ಅದನ್ನು VLAN ನಿಂದ ಟ್ಯಾಗ್ ಮಾಡಲಾಗಿದೆ ಎಂದು ಅದಕ್ಕೆ ತಿಳಿದಿರುವುದಿಲ್ಲ. ಕಂಪ್ಯೂಟ್ ಎಂಟಿಟಿಯು ಕೆಲವೊಮ್ಮೆ ತಪ್ಪು GID ಯನ್ನು ರಚಿಸಬಹುದು ಅಥವ ಊಹಿಸಿಕೊಳ್ಳಬಹುದು, ಇದು ಸಂಪರ್ಕದಲ್ಲಿನ ತೊಂದರೆಗೆ ಕಾರಣವಾಗಬಹುದು. ಅಪ್‌ಡೇಟ್ ಮಾಡಲಾದ RoCE ಅಳವಡಿಕೆಯು RoCE GID ಗಳನ್ನು ಎನ್ಕೋಡ್ ಮಾಡಲಾಗುವ ವಿಧಾನವನ್ನು ಬದಲಾಯಿಸುವ ಮೂಲಕ, ಮತ್ತು ಅದರ ಬದಲಿಗೆ ಇತರ್ನೆಟ್ ಸಂಪರ್ಕಸಾಧನದ IP ವಿಳಾಸಕ್ಕೆ ಆಧಾರವನ್ನು ಬದಲಾಯಿಸುವ ಮೂಲಕ ಈ ಸಮಸ್ಯೆಯನ್ನು ಸರಿಪಡಿಸುತ್ತದೆ. RoCE ಪ್ರೊಟೊಕಾಲ್ ಅನ್ನು ಬಳಸುವ ಎಲ್ಲಾ ವ್ಯವಸ್ಥೆಗಳಲ್ಲಿ ವೈರ್ ಪ್ರೊಟೊಕಾಲ್ ವಿನ್ಯಾಸದಲ್ಲಿನ ಈ ಬದಲಾವಣೆಯಿಂದಾಗಿ ಸಂಪರ್ಕದ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು Red Hat Enterprise Linux 6.6 ಗೆ ನವೀಕರಿಸಬೇಕು.
ಸುರಕ್ಷತೆ ಮಾರ್ಗದರ್ಶನ, ಬೇಸ್‌ಲೈನ್‌ಗಳು, ಮತ್ತು ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್ (SCAP) ಅನ್ನು ಬಳಸುವ ಸಂಬಂಧಿತ ವ್ಯಾಲಿಡೇಶನ್ ರಚನಾವ್ಯವಸ್ಥೆಯನ್ನು ಒದಗಿಸುವ scap-security-guide ಪ್ಯಾಕೇಜ್ ಅನ್ನು Red Hat Enterprise Linux 6.6 ರಲ್ಲಿ ಸೇರಿಸಲಾಗಿದೆ. SCAP ಸೆಕ್ಯುರಿಟಿ ಗೈಡ್‌ನಲ್ಲಿ ಸೂಚಿಸಲಾದ ಸುರಕ್ಷತಾ ಅಗತ್ಯತೆಗಳಿಗೆ ಸಂಬಂಧಿಸಿದಂತೆ ವ್ಯವಸ್ಥೆಯ ಸುರಕ್ಷತಾ ಅನುಸರಣೆ ಶೋಧನೆಯನ್ನು ಮಾಡಲು ಬೇಕಿರುವ ಮಾಹಿತಿಯನ್ನು ಹೊಂದಿರುತ್ತದೆ; ಬರೆಯಲಾದ ವಿವರಣೆ ಮತ್ತು ಒಂದು ಸ್ವಯಂಚಾಲಿತ ಪರೀಕ್ಷೆಯನ್ನು (ತನಿಖೆ) ಸೇರಿಸಲಾಗಿರುತ್ತದೆ. ಪರೀಕ್ಷೆಯನ್ನು ಸ್ವಯಂಚಾಲಿತಗೊಳಿಸುವುದರಿಂದ, SCAP ಸೆಕ್ಯುರಿಟಿ ಗೈಡ್ ಕಾಲಕಾಲಕ್ಕೆ ವ್ಯವಸ್ಥೆಯ ಅನುಸರಣೆಯನ್ನು ಪರೀಕ್ಷಿಸಲು ಸುಲಭವಾದ ಮತ್ತು ನಂಬಿಕಾರ್ಹವಾದ ಮಾರ್ಗವನ್ನು ಒದಗಿಸುತ್ತದೆ.
ಅಧ್ಯಾಯ 4. ವರ್ಚುವಲೈಸೇಶನ್
ಹೊಸ ಪ್ಯಾಕೇಜುಗಳು: hyperv-daemons
ಹೊಸ hyperv-daemons ಪ್ಯಾಕೇಜುಗಳನ್ನು Red Hat Enterprise Linux 6.6 ಗೆ ಸೇರಿಸಲಾಗಿದೆ. ಹೊಸ ಪ್ಯಾಕೇಜುಗಳು ಈ ಹಿಂದೆ hypervkvpd ಪ್ಯಾಕೇಜ್‌ನಿಂದ ಒದಗಿಸಲಾಗುವ Hyper-V KVP ಡೀಮನ್ ಅನ್ನು , ಈ ಹಿಂದೆ hypervvssd ಪ್ಯಾಕೇಜಿನಿಂದ ಒದಗಿಸಲಾದ Hyper-V VSS ಡೀಮನ್ ಅನ್ನು, ಮತ್ತು ಈ ಹಿಂದೆ hypervfcopyd ಪ್ಯಾಕೇಜಿನಿಂದ ಒದಗಿಸಲಾದ hv_fcopy ಡೀಮನ್ ಅನ್ನು ಹೊಂದಿರುತ್ತವೆ. hyperv-daemons ಇಂದ ಒದಗಿಸಲಾದ ಸೂಟ್ ಡೀಮನ್‌ಗಳು ಒಂದು Linux ಅತಿಥಿ ಗಣಕವು Hyper-V ಯೊಂದಿಗೆ Microsoft Windows ಆತಿಥೇಯ ಗಣಕದದಲ್ಲಿ ಚಲಾಯಿತಗೊಳ್ಳುವಾಗ ಅಗತ್ಯವಿರುತ್ತದೆ .
ಅಧ್ಯಾಯ 5. ಶೇಖರಣೆ
device-mapper ಗೆ ಸುಧಾರಣೆ
device-mapperಗೆ ಹಲವಾರು ಗಮನಾರ್ಹ ಸುಧಾರಣೆಗಳನ್ನು Red Hat Enterprise Linux 6.6 ನಲ್ಲಿ ಸೇರಿಸಲಾಗಿದೆ:
ನಿಧಾನವಾದ ಶೇಖರಣಾ ಸಾಧನಗಳಿಗಾಗಿ ವೇಗವಾದ ಶೇಖರಣಾ ಸಾಧನವಾಗಿ ಕೆಲಸ ಮಾಡಲು ಅವಕಾಶ ನೀಡುವ, dm-cache device-mapper ಗುರಿಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ.
ಹೊರೆ ಸಮತೋಲನಕ್ಕಾಗಿ ಬಳಸಲು ಬೇರೆ ಮಾರ್ಗಗಳು ಇದ್ದಲ್ಲಿ, device-mapper-multipath ALUA ಆದ್ಯತೆ ಪರೀಕ್ಷಕವು ಇಚ್ಛೆಯು ಮಾರ್ಗ ಸಾಧನವನ್ನು ಇನ್ನು ಮುಂದೆ ತನ್ನದೆ ಮಾರ್ಗದ ಗುಂಪಿನಲ್ಲಿ ಇರಿಸುವುದಿಲ್ಲ.
multipath.conf ಕಡತದಲ್ಲಿನ fast_io_fail_tmo ನಿಯತಾಂಕವು ಈಗ ಫೈಬರ್ ಚಾನಲ್ ಸಾಧನದ ಜೊತೆಗೆ iSCSI ಸಾಧನಗಳಲ್ಲಿ ಕೆಲಸ ಮಾಡುತ್ತದೆ.
ಡಿವೈಸ್-ಮ್ಯಾಪರ್ ಮಲ್ಟಿಪಾತ್ರ sysfs ಕಡತಗಳನ್ನು ನಿಭಾಯಿಸುವಿಕೆಯಲ್ಲಿ ಸುಧಾರಣೆ ಉಂಟಾದ ಕಾರಣ ದೊಡ್ಡ ಸಂಖ್ಯೆಯ ಮಲ್ಟಿಪಾತ್ ಸಾಧನಗಳನ್ನು ಹೊಂದಿರುವ ಸೆಟ್‌ಅಪ್‌ಗಳಲ್ಲಿ ಉತ್ತಮವಾದ ಕಾರ್ಯನಿರ್ವಹಣೆಯನ್ನು ಸಾಧಿಸಲು ಈಗ ಸಾಧ್ಯವಿರುತ್ತದೆ.
multipath.conf ನಲ್ಲಿ ಒಂದು ಹೊಸ force_sync ನಿಯತಾಂಕವನ್ನು ಪರಿಚಯಿಸಲಾಗಿದೆ. ಈ ನಿಯತಾಂಕವು ಅಸಿಂಕ್ರೋನಸ್ ಮಾರ್ಗದ ಪರಿಶೀಲನೆಗಳನ್ನು ನಿಷ್ಕ್ರಿಯಗೊಳಿಸುತ್ತದೆ, ಇದು ದೊಡ್ಡ ಸಂಖ್ಯೆಯ ಮಲ್ಟಿಪಾತ್ ಸಾಧನಗಳಲ್ಲಿನ CPU ಕಂಟೆಂನ್ಶನ್ ಸಮಸ್ಯೆಗಳ ಸಂಖ್ಯೆಯನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ.
dm-era ತಂತ್ರಜ್ಞಾನ ಮುನ್ನೋಟ
device-mapper-persistent-data ಪ್ಯಾಕೇಜ್ ಈಗ ತಂತ್ರಜ್ಞಾನ ಮುನ್ನೋಟವಾಗಿ ಬಿಡುಗಡೆ ಮಾಡಲಾದ dm-era ಡಿವೈಸ್ ಮ್ಯಾಪರ್ ಕ್ರಿಯಾಶೀಲತೆಯನ್ನು ಬಳಸಲು ನೆರವಾಗುವ ಉಪಕರಣಗಳನ್ನು ಒದಗಿಸುತ್ತದೆ. dm-era ಕ್ರಿಯಾಶೀಲತೆಯು era ಎಂದು ಕರೆಯಲಾಗುವ ಬಳಕೆದಾರ ಸಮಯದ ಅವಧಿಯ ಒಳಗೆ ಸಾಧನದಲ್ಲಿನ ಬ್ಲಾಕ್‌ಗಳನ್ನು ಬರೆಯಲಾಗುತ್ತದೆ ಎನ್ನುವ ಜಾಡನ್ನು ಇರಿಸುತ್ತದೆ. ಈ ಕ್ರಿಯಾಶೀಲತೆಯು ಬದಲಾಯಿಸಲಾದ ಬ್ಲಾಕ್‌ಗಳ ಜಾಡನ್ನು ಇರಿಸಲು ಅಥವ ಬದಲಾವಣೆಗಳನ್ನು ಹಿಮ್ಮರಳಿಸಿದ ನಂತರ ಕ್ಯಾಶ್‌ನ ಹೊಂದಾಣಿಕೆಯನ್ನು ಮರಳಿಸ್ಥಾಪಿಸಲು ಬ್ಯಾಕ್‌ಅಪ್ ತಂತ್ರಾಂಶಕ್ಕೆ ಅವಕಾಶ ನೀಡುತ್ತದೆ.
ಅಧ್ಯಾಯ 6. ಯಂತ್ರಾಂಶ ಸಕ್ರಿಯಗೊಳಿಕೆ
Intel Wildcat Point-LP PCH ಗಾಗಿನ ಬೆಂಬಲ
Broadwell-U PCH SATA, HD ಆಡಿಯೊ, TCO ವಾಚ್‌ಡಾಗ್, ಮತ್ತು I2C (SMBus) ಸಾಧನೆ IDಗಳನ್ನು ಚಾಲಕಗಳಿಗಾಗಿ ಸೇರಿಸಲಾಗಿದ್ದು, ಇದು Red Hat Enterprise Linux 6.6 ರಲ್ಲಿನ ಮುಂದಿನ ಪೀಳಿಗೆ ಮೊಬೈಲ್ ಪ್ಲಾಟ್‌ಫಾರ್ಮ್‌ಗಾಗಿನ ಬೆಂಬಲವನ್ನು ಸಕ್ರಿಯಗೊಳಿಸುತ್ತದೆ.
VIA VX900 ಮೀಡಿಯಾ ಸಿಸ್ಟಮ್ ಪ್ರೊಸೆಸರ್‌ಗಾಗಿನ ಬೆಂಬಲ
VIA VX900 VIA VX900 ಮೀಡಿಯಾ ಸಿಸ್ಟಮ್ ಪ್ರೊಸೆಸರ್ ಅನ್ನು Red Hat Enterprise Linux 6.6 ರಲ್ಲಿ ಬೆಂಬಲಿಸಲಾಗುತ್ತದೆ.
ಅಧ್ಯಾಯ 7. ಇಂಡಸ್ಟ್ರಿ ಸ್ಟ್ಯಾಂಡರ್ಡ್ಸ್ ಮತ್ತು ಸರ್ಟಿಫಿಕೇಶನ್
Fips 140 ರಿವ್ಯಾಲಿಡೇಶನ್ಸ್
ಫೆಡರಲ್ ಇನ್‌ಫಾರ್ಮೇಶನ್ ಪ್ರೊಸೆಸಿಂಗ್ ಸ್ಟ್ಯಾಂಡರ್ಡ್ಸ್ ಪಬ್ಲಿಕೇಶನ್ಸ್ (FIPS) 140 ಎನ್ನುವುದು U.S. ಸರ್ಕಾರದ ಸುರಕ್ಷತೆಯ ಶಿಷ್ಟತೆಯಾಗಿದ್ದ, ಇದು ಸೂಕ್ಷ್ಮಸಂವೇದಿ, ಆದರೆ ರಹಸ್ಯವರ್ಗವಾಗಿರದ ಮಾಹಿತಿಯನ್ನು ಸಂರಕ್ಷಿಸುವ ಸುರಕ್ಷತಾ ವ್ಯವಸ್ಥೆಯಲ್ಲಿ ಬಳಕೆ ಮಾಡಬೇಕಿರುವ ಸುರಕ್ಷತಾ ಅಗತ್ಯತೆಗಳನ್ನು ಸೂಚಿಸುತ್ತದೆ. ಈ ಶಿಷ್ಟತೆಯು ನಾಲ್ಕು ಏರಿಕೆ ಕ್ರಮದ, ಗುಣಾತ್ಮಕ ಮಟ್ಟಗಳ ಸುರಕ್ಷತಾ ಹಂತಗಳನ್ನು ಒದಗಿಸುತ್ತದೆ: ಹಂತ 1, ಹಂತ 2, ಹಂತ 3, ಮತ್ತು ಹಂತ 4. ಈ ಹಂತಗಳು ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್‌ಗಳನ್ನು ಅಳವಡಿಸಲಾದ ಸಮರ್ಥ ಅನ್ವಯಗಳು ಮತ್ತು ಪರಿಸರಗಳ ದೊಡ್ಡ ವ್ಯಾಪ್ತಿಯನ್ನು ನೋಡಿಕೊಳ್ಳಲು ಉದ್ಧೇಶಿಸಿರುವವುಗಳಾಗಿವೆ. ಸುರಕ್ಷತಾ ಅಗತ್ಯತೆಗಳು ಸುರಕ್ಷತೆಯ ವಿನ್ಯಾಸಗೊಳಿಕೆ ಮತ್ತು ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್‌ನ ಅಳವಡಿಕೆಗೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುತ್ತದೆ. ಈ ವಿಷಯಗಳೆಂದರೆ, ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್ ಗುಣವಿಶೇಷಗಳು, ಕ್ರಿಪ್ಟೋಗ್ರಾಫಿಕ್ ಮಾಡ್ಯೂಲ್ ಪೋರ್ಟುಗಳು ಮತ್ತು ಇಂಟರ್ಫೇಸಸ್; ಪಾತ್ರಗಳು, ಸೇವೆಗಳು, ಮತ್ತು ದೃಢೀಕರಣ; ಫೈನೇಟ್ ಸ್ಟೇಟ್ ಮಾದರಿ; ಭೌತಿಕ ಸುರಕ್ಷತೆ; ಕಾರ್ಯನಿರ್ವಹಣಾ ಪರಿಸರ; ಕ್ರಿಪ್ಟೋಗ್ರಾಫಿಕ್ ಕೀಲಿ ವ್ಯವಸ್ಥಾಪನೆ; ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಟರ್ಫೇಸಸ್/ಎಲೆಕ್ಟ್ರೋಮ್ಯಾಗ್ನೆಟಿಕ್ ಕಂಪ್ಯಾಟಿಬಿಲಿಟಿ (EMI/EMC); ಸ್ವಯಂ-ಪರೀಕ್ಷೆಗಳು; ವಿನ್ಯಾಸ ಖಾತರಿಪಡಿಕೆ; ಮತ್ತು ಇತರೆ ಧಾಳಿಗಳ ಉಪಶಮನ.
ಈ ಕೆಳಗಿನ ಗುರಿಗಳನ್ನು ಸಂಪೂರ್ಣವಾಗಿ ಮಾನ್ಯವಾಗಿದೆ ಎಂದು ಪರಿಗಣಿಸಲಾಗುತ್ತದೆ:
NSS FIPS-140 ಹಂತ 1
ಸೂಟ್ B ಎಲಿಪ್ಟಿಕಲ್ ಕರ್ವ್ ಕ್ರಿಪ್ಟೋಗ್ರಫಿ (ECC)
ಈ ಕೆಳಗಿನ ಗುರಿಗಳನ್ನು ಮರಳಿ ಮಾನ್ಯಗೊಳಿಸಲಾಗಿದೆ:
OpenSSH (ಕ್ಲೈಂಟ್ ಮತ್ತು ಸರ್ವರ್)
Openswan
dm-crypt
OpenSSL
ಸೂಟ್ B ಎಲಿಪ್ಟಿಕಲ್ ಕರ್ವ್ ಕ್ರಿಪ್ಟೋಗ್ರಫಿ (ECC)
ಕರ್ನಲ್ ಕ್ರಿಪ್ಟೊ API
AES-GCM, AES-CTS, ಮತ್ತು AES-CTR ಸಿಫರ್
ಅಧ್ಯಾಯ 8. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ
ಆಕ್ಟೀವ್ ಡಿರಕ್ಟರಿಯೊಂದಿಗೆ ಉತ್ತಮವಾದ ಇಂಟರ್‌ಆಪರೆಬಿಲಿಟಿ
ಸೇರ್ಪಡೆಗೊಳಿಸಲಾದ System Security Services Daemon (SSSD) ಎನ್ನುವುದು ಆ‌್ಯಕ್ಟೀವ್ ಡಿರಕ್ಟರಿಯೊಂದಿಗೆ Red Hat Enterprise Linux ಕ್ಲೈಂಟ್‌ಗಳ ಉತ್ತಮವಾದ ಇಂಟರ್‌ಆಪರೆಬಿಲಿಟಿಯನ್ನು ಸಾಧಿಸುತ್ತದೆ, ಆ ಮೂಲಕ Linux ಮತ್ತು Windows ಪರಿಸರಗಳಲ್ಲಿ ಐಡೆಂಟಿಟಿ ನಿರ್ವಹಣೆಯನ್ನು ಬಹಳ ಸುಲಭವಾಗಿಸುತ್ತದೆ. ಅತ್ಯಂತ ಗಮನಾರ್ಹವಾದ ಸುಧಾರಣೆಗಳೆಂದರೆ, ಬಳಕೆದಾರರು ಮತ್ತು ಗುಂಪುಗಳನ್ನು ಪರಿಹರಿಸುವಿಕೆ ಮತ್ತು ಸಿಂಗಲ್ ಫಾರೆಸ್ಟ್‌ನಲ್ಲಿ ನಂಬಿಕಸ್ತ ಡೊಮೇನ್‌ಗಳಿಂದ ಬಳಕೆದಾರರನ್ನು ದೃಢಿಕರಿಸುವಿಕೆ, DNS ಅಪ್‌ಡೇಟ್‌ಗಳು, ತಾಣದ ಡಿರಕ್ಟರಿ, ಮತ್ತು ಬಳಕೆದಾರ ಮತ್ತು ಗುಂಪುಗಳನ್ನು ಹುಡುಕಲು NetBIOS ಹೆಸರುಗಳನ್ನು ಬಳಸುವಿಕೆ.
IPA ಗಾಗಿ Apache ಮಾಡ್ಯೂಲ್‌ಗಳು
Apache ಮಾಡ್ಯೂಲ್‌ಗಳ ಒಂದು ಸೆಟ್ ಅನ್ನು Red Hat Enterprise Linux 6.6 ಗೆ ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. Apache ಮಾಡ್ಯೂಲ್‌ಗಳನ್ನು ಬಾಹ್ಯ ಅನ್ವಯಗಳಿಂದ ಸರಳವಾದ ದೃಢೀಕರಣದ ಹೊರತಾಗಿ ಒಂದು ಸದೃಢವಾದ ಸಂವಹನವನ್ನು ಹೊಂದಲು ಬಳಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, http://www.freeipa.org/page/Web_App_Authenticationನಲ್ಲಿನ ಗುರಿಯ ಸಿದ್ಧತೆಯ ವಿವರಣೆಯನ್ನು ನೋಡಿ.
ಅಧ್ಯಾಯ 9. ಡೆಸ್ಕ್‌ಟಾಪ್ ಮತ್ತು ಗ್ರಾಫಿಕ್ಸ್
ಹೊಸ ಪ್ಯಾಕೇಜು: gdk-pixbuf2
gtk2 ಪ್ಯಾಕೇಜಿನ ಒಂದು ಭಾಗವಾಗಿದ್ದಂತಹ gdk-pixbuf2 ಪ್ಯಾಕೇಜ್ ಅನ್ನು Red Hat Enterprise Linux 6.6 ಗೆ ಸೇರಿಸಲಾಗಿದೆ. ಹೊಸ ಚಿತ್ರಿಕೆ ವಿನ್ಯಾಸಗಳಿಗಾಗಿ ಲೋಡ್ ಮಾಡಬಹುದಾದ ಮಾಡ್ಯೂಲ್‌ಗಳಿಂದ ವಿಸ್ತರಿಸಬಹುದಾದ ಚಿತ್ರಿಕೆ-ಲೋಡ್ ಮಾಡುವ ಲೈಬ್ರರಿಯನ್ನು gdk-pixbuf2 ಹೊಂದಿರುತ್ತದೆ. ಈ ಲೈಬ್ರರಿಯನ್ನು GTK+ ಅಥವ Clutter ನಂತಹ ಟೂಲ್‌ಕಿಟ್‌ಗಳಿಂದ ಬಳಸಲಾಗುತ್ತದೆ. gdk-pixbuf2 ಮತ್ತು gtk2 ಪ್ಯಾಕೇಜುಗಳನ್ನು ಡೌನ್‌ಗ್ರೇಡ್ ಮಾಡುವುದು ವಿಫಲಗೊಳ್ಳಬಹುದು ಎಂಬುದನ್ನು ನೆನಪಿಡಿ.
ಅಧ್ಯಾಯ 10. ಕಾರ್ಯನಿರ್ವಹಣೆ ಮತ್ತು ಸ್ಕೇಲೆಬಿಲಿಟಿ
ಪರ್ಫಾಮೆನ್ಸ್ ಕೋ-ಪೈಲಟ್ (PCP)
ಪರ್ಫಾಮೆನ್ಸ್ ಕೊ-ಪೈಲಟ್ (PCP) ಎನ್ನುವುದು ವ್ಯವಸ್ಥೆ-ಮಟ್ಟದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮತ್ತು ವ್ಯವಸ್ಥಾಪನೆಯನ್ನು ಬೆಂಬಲಿಸಲು ಒಂದು ಫ್ರೇಮ್‌ವರ್ಕ್ ಮತ್ತು ಸೇವೆಗಳನ್ನು ಒದಗಿಸುತ್ತದೆ. ಇದರ ಹಗುರ-ತೂಕದ, ಹರಡಲ್ಪಟ್ಟ ಆರ್ಕಿಟೆಕ್ಚರ್ ವಿಶೇಷವಾಗಿ, ಸಂಕೀರ್ಣ ವ್ಯವಸ್ಥೆಗಳ ಕೇಂದ್ರೀಕೃತ ವಿಶ್ಲೇಷಣೆಗೆ ಉತ್ತಮವಾಗಿ ಹೊಂದಿಕೆಯಾಗುವಂತೆ ಮಾಡುತ್ತದೆ.
ಕಾರ್ಯನಿರ್ವಹಣಾ ಮೆಟ್ರಿಕ್‌ಗಳನ್ನು Python, Perl, C++ ಮತ್ತು C ಸಂಪರ್ಕಸಾಧನಗಳನ್ನು ಬಳಸಿಕೊಂಡು ಸೇರಿಸಲು ಸಾಧ್ಯವಿರುತ್ತದೆ. ವಿಶ್ಲೇಷಣಾ ಉಪಕರಣಗಳು ನೇರವಾಗಿ ಕ್ಲೈಂಟ್ APIಗಳನ್ನು (Python, C++, C) ಬಳಸುತ್ತವೆ, ಮತ್ತು ಸಮೃದ್ಧ ಜಾಲ ಅನ್ವಯಗಳು JSON ಸಂಪರ್ಕಸಾಧನವನ್ನು ಬಳಸಿಕೊಂಡು ಲಭ್ಯವಿರುವ ಎಲ್ಲಾ ಕಾರ್ಯನಿರ್ವಹಣಾ ದತ್ತಾಂಶದಲ್ಲಿ ಸಂಶೋಧಿಸಬಲ್ಲವು.
ಹೆಚ್ಚಿನ ಮಾಹಿತಿಗಾಗಿ, pcp ಮತ್ತು pcp-libs-devel ಪ್ಯಾಕೇಜುಗಳಲ್ಲಿನ ಸವಿಸ್ತಾರವಾದ ಮಾಹಿತಿ ಪುಟಗಳನ್ನು ನೋಡಿ. pcp-doc ಪ್ಯಾಕೇಜು /usr/share/doc/pcp-doc/* ಕೋಶದಲ್ಲಿ ಡಾಕ್ಯುಮೆಂಟೇಶನ್ ಅನ್ನು ಅನುಸ್ಥಾಪಿಸುತ್ತದೆ, ಇದು ಅಪ್‌ಸ್ಟ್ರೀಮ್ ಪರಿಯೋಜನೆಯ ಎರಡು ಉಚಿತ ಮತ್ತು ಮುಕ್ತ ಪುಸ್ತಕಗಳನ್ನೂ ಸಹ ಹೊಂದಿರುತ್ತದೆ:
OpenJDK 8 Java ರನ್‌ಟೈಮ್ ಎನ್ವಿರಾನ್ಮೆಂಟ್ ಮತ್ತು OpenJDK 8 Java ಸಾಫ್ಟ್‌ವೇರ್ ಡೆವಲಪ್ಮೆಂಟ್ ಕಿಟ್ ಅನ್ನು ಹೊಂದಿರುವ ಹೊಸ java-1.8.0-openjdk ಈಗ Red Hat Enterprise Linux 6.6 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಲಭ್ಯವಿದೆ.
ಘಟಕದ ಆವೃತ್ತಿಗಳು
ಈ ಅನುಬಂಧವುRed Hat Enterprise Linux 6.6 ಬಿಡುಗಡೆಯಲ್ಲಿನ ಘಟಕಗಳು ಹಾಗು ಅವುಗಳ ಆವೃತ್ತಿಗಳ ಒಂದು ಪಟ್ಟಿಯಾಗಿರುತ್ತದೆ.
ಘಟಕ
ಆವೃತ್ತಿ
ಕರ್ನಲ್
2.6.32-494
QLogic qla2xxx ಚಾಲಕ
8.07.00.08.06.6-k
QLogic ql2xxx ಫರ್ಮವೇರ್
ql23xx-firmware-3.03.27-3.1
ql2100-firmware-1.19.38-3.1
ql2200-firmware-2.02.08-3.1
ql2400-firmware-7.03.00-1
ql2500-firmware-7.03.00-1
ಎಮ್ಯಲೆಕ್ಸ್ lpfc ಚಾಲಕ
10.2.8020.1
iSCSI ಆರಂಭಕ ಸವಲತ್ತುಗಳು
iscsi-initiator-utils-6.2.0.873-11
DM-ಮಲ್ಟಿಪಾತ್
device-mapper-multipath-libs-0.4.9-80
LVM
lvm2-2.02.108-1
ಕೋಷ್ಟಕ A.1. ಘಟಕದ ಆವೃತ್ತಿಗಳು
ಪರಿಷ್ಕರಣ ಇತಿಹಾಸ
ಪುರಾವೃತ್ತ ಪರಿಷ್ಕರಣೆ
ಪರಿಷ್ಕರಣೆ 6-2
Mon Sep 15 2014
MilanNavrátil
Red Hat Enterprise Linux 6.6 ರ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.