Product SiteDocumentation Site

Red Hat Enterprise Linux 7

Release Notes

Red Hat Enterprise Linux 7.0 ಗಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 0

Red Hat ಇಂಜಿನಿಯರಿಂಗ್ ಕಂಟೆಂಟ್ ಸರ್ವಿಸಸ್

ಲೀಗಲ್ ನೋಟೀಸ್

Copyright © 2014 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
MySQL® is a registered trademark of MySQL AB in the United States, the European Union and other countries.
All other trademarks are the property of their respective owners.


1801 Varsity Drive
RaleighNC 27606-2072 USA
Phone: +1 919 754 3700
Phone: 888 733 4281
Fax: +1 919 754 3701

ಸಾರಾಂಶ

ಬಿಡುಗಡೆ ಟಿಪ್ಪಣಿಯು Red Hat Enterprise Linux 7.0 ಬಿಡುಗಡೆಯಲ್ಲಿ ಅಳವಡಿಸಲಾದ ಪ್ರಮುಖ ಸೌಲಭ್ಯಗಳು ಮತ್ತು ಸುಧಾರಣೆಗಳನ್ನು ಹೊಂದಿರುತ್ತದೆ. Red Hat Enterprise Linux 6 ಮತ್ತು 7 ನಡುವಿನ ಬದಲಾವಣೆಗಳ ಕುರಿತು ವಿವರವಾದ ಮಾಹಿತಿಗಾಗಿ, ವರ್ಗಾವಣೆ ಯೋಜನಾ ಮಾರ್ಗದರ್ಶಿಯನ್ನು ನೋಡಿ. ಗೊತ್ತಿರುವ ತೊಂದರೆಗಳನ್ನು ತಾಂತ್ರಿಕ ಟಿಪ್ಪಣಿಗಳು ಎಂಬಲ್ಲಿ ಪಟ್ಟಿ ಮಾಡಲಾಗಿದೆ.
Red Hat Enterprise Linux 7.0 ಬಿಡುಗಡೆ ಟಿಪ್ಪಣಿಗಳಇಲ್ಲಿರುವ ಆನ್‌ಲೈನ್‌ ಆವೃತ್ತಿಯನ್ನು ನಿಶ್ಚಿತವಾದ, ಅಪ್‌-ಟು-ಡೇಟ್ ಆದ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ಬಿಡುಗಡೆ ಸಂಬಂಧಿಸಿದ ಸಂದೇಹಗಳನ್ನು ಹೊಂದಿರುವ ಗ್ರಾಹಕರು ತಮ್ಮಲ್ಲಿರುವ Red Hat Enterprise Linux ನ ಆವೃತ್ತಿಗೆ ಸೂಕ್ತವಾದ ಆನ್‌ಲೈನ್‌ನಲ್ಲಿನ ಬಿಡುಗಡೆ ಟಿಪ್ಪಣಿಗಳನ್ನು ಮತ್ತು ತಾಂತ್ರಿಕ ಟಿಪ್ಪಣಿಗಳನ್ನು ನೋಡುವಂತೆ ಸಲಹೆ ಮಾಡಲಾಗುತ್ತದೆ.
ಕೃತಜ್ಞತೆಗಳು
Red Hat Enterprise Linux 7 ಅನ್ನು ಪರೀಕ್ಷಿಸಲು ಗಮನಾರ್ಹ ಕೊಡುಗೆಯನ್ನು ನೀಡುದುದಕ್ಕಾಗಿ Sterling Alexander ಮತ್ತು Michael Everette ಅವರನ್ನು Red Hat ಗ್ಲೋಬಲ್ ಸಪೋರ್ಟ್ ಸರ್ವಿಸಸ್ ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತದೆ.
1. ಪರಿಚಯ
2. ಆರ್ಕಿಟಿಕ್ಚೆರ್
3. ಸಾಮರ್ಥ್ಯಗಳು ಮತ್ತು ಮಿತಿಗಳು
4. ಪ್ಯಾಕೇಜ್‌ ಮತ್ತು ಬೆಂಬಲದ ಬದಲಾವಣೆಗಳು
5. ಅನುಸ್ಥಾಪನೆ ಮತ್ತು ಬೂಟ್‌ ಮಾಡುವಿಕೆ
6. ಶೇಖರಣೆ
7. ಕಡತ ವ್ಯವಸ್ಥೆಗಳು
8. ಕರ್ನಲ್
9. ವರ್ಚುವಲೈಸೇಶನ್
10. ವ್ಯವಸ್ಥೆ ಮತ್ತು ಸೇವೆಗಳು
11. ಕ್ಲಸ್ಟರಿಂಗ್
12. ಕಂಪೈಲರ್ ಹಾಗು ಉಪಕರಣಗಳು
13. ನೆಟ್‌ವರ್ಕಿಂಗ್
14. ಸಂಪನ್ಮೂಲ ವ್ಯವಸ್ಥಾಪನೆ
15. ದೃಢೀಕರಣ ಹಾಗು ಇಂಟರ್‌ಆಪರೇಬಿಲಿಟಿ
16. ಸುರಕ್ಷತೆ
17. ಚಂದಾದಾರಿಕೆ ವ್ಯವಸ್ಥಾಪನೆ
18. ಗಣಕತೆರೆ
19. ಜಾಲ ಪರಿಚಾರಕಗಳು ಹಾಗು ಸೇವೆಗಳು
20. ಡಾಕ್ಯುಮೆಂಟೇಶನ್
21. ಅಂತರಾಷ್ಟ್ರೀಕರಣ(ಇಂಟರ್‌ನ್ಯಾಶನಲೈಸೇಶನ್)
22. ಬೆಂಬಲಿಸುವ ಸಾಮರ್ಥ್ಯ ಹಾಗು ನಿರ್ವಹಣೆ
A. ಪರಿಷ್ಕರಣೆಯ ಇತಿಹಾಸ

ಅಧ್ಯಾಯ 1. ಪರಿಚಯ

Red Hat Enterprise Linux 7.0 ಲಭ್ಯವಿದೆ ಎಂದು ಘೋಷಿಸಲು Red Hat ಗೆ ಹರ್ಷವೆನಿಸುತ್ತದೆ. Red Hat Enterprise Linux 7.0 ಎನ್ನುವುದು Red Hat ನ ಕಾರ್ಯಾಚರಣೆ ವ್ಯವಸ್ಥೆಗಳ ವಿಸ್ತಾರವಾದ ಸಂಗ್ರಹದಲ್ಲಿನ ಮುಂದುವರಿದ ಪೀಳಿಗೆಯಾಗಿದ್ದು, ಅತ್ಯಂತ-ಮುಖ್ಯವಾದ ಎಂಟರ್ಪೈಸ್ ಕಂಪ್ಯೂಟಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಮೇಲ್ಮಟ್ಟದ ತಂತ್ರಾಂಶ ಹಾಗೂ ಯಂತ್ರಾಂಶ ಮಾರಾಟಗಾರರಿಂದ ಪ್ರಮಾಣೀಕೃತವಾಗಿದೆ.

ಅಧ್ಯಾಯ 2. ಆರ್ಕಿಟಿಕ್ಚೆರ್

Red Hat Enterprise Linux 7.0 ಒಂದು ಕಿಟ್ ಆಗಿ ಈ ಕೆಳಗಿನ ಆರ್ಕಿಟೆಕ್ಚರುಗಳಲ್ಲಿ ಲಭ್ಯವಿರುತ್ತದೆ [1]:
  • 64-ಬಿಟ್ AMD
  • 64-ಬಿಟ್ Intel
  • IBM POWER7 ಮತ್ತು POWER8
  • IBM System z [2]
Red Hat ಈ ಬಿಡುಗಡೆಯಲ್ಲಿ ಪೂರೈಕೆಗಣಕ, ವ್ಯವಸ್ಥೆಗಳಲ್ಲಿನ ಸುಧಾರಣೆ, ಮತ್ತು ಜೊತೆಗೆ ಒಟ್ಟಾರೆಯಾದ Red Hat ಮುಕ್ತ ತಂತ್ರಾಂಶ (ಓಪನ್ ಸೋರ್ಸ್) ಅನುಭವವನ್ನು ಒದಗಿಸುತ್ತದೆ.


[1] Red Hat Enterprise Linux 7.0 ಅನುಸ್ಥಾಪನೆಯು ಕೇವಲ 64-ಬಿಟ್ ಯಂತ್ರಾಂಶದಲ್ಲಿ ಮಾತ್ರ ಬೆಂಬಲಿತವಾಗಿರುತ್ತದೆ ಎಂಬುದನ್ನು ನೆನಪಿಡಿ.
Red Hat Enterprise Linux 7.0 32-ಬಿಟ್ ಕಾರ್ಯಾಚರಣೆ ವ್ಯವಸ್ಥೆಗಳನ್ನು, Red Hat Enterprise Linux ನ ಹಿಂದಿನ ಆವೃತ್ತಿಗಳೂ ಸಹ ಸೇರಿದಂತೆ, ವರ್ಚುವಲ್ ಗಣಕಗಳಾಗಿ ಚಲಾಯಿಸಲು ಸಾಧ್ಯವಿರುತ್ತದೆ.
[2] Red Hat Enterprise Linux 7.0, IBM zEnterprise 196 ಯಂತ್ರಾಂಶ ಅಥವ ನಂತರದ್ದನ್ನು ಬೆಂಬಲಿಸುತ್ತದೆ ಎಂಬುದನ್ನು ನೆನಪಿಡಿ.

ಅಧ್ಯಾಯ 3. ಸಾಮರ್ಥ್ಯಗಳು ಮತ್ತು ಮಿತಿಗಳು

ಹಿಂದಿನ ಆವೃತ್ತಿ 5 ಮತ್ತು 6 ರ ಹೋಲಿಕೆಯಲ್ಲಿ Red Hat Enterprise Linux 7 ರ ಸಾಮರ್ಥ್ಯಗಳು ಮತ್ತು ಮಿತಿಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ತೋರಿಸಲಾಗಿದೆ.

ಕೋಷ್ಟಕ 3.1. Red Hat Enterprise Linux versions 5, 6 ಮತ್ತು 7 ಕ್ಕಾಗಿನ ಮಿತಿಗಳು

Red Hat Enterprise Linux 5 Red Hat Enterprise Linux 6 Red Hat Enterprise Linux 7
ಗರಿಷ್ಟ ತಾರ್ಕಿಕ CPUಗಳು    
x86_64 160/255 160/4096 160/5120
POWER 128/128 128 ಪರಿಶೀಲನೆಯಲ್ಲಿದೆ
System z 101 (zEC12) 101 (zEC12) ಪರಿಶೀಲನೆಯಲ್ಲಿದೆ
ಗರಿಷ್ಟ ಮೆಮೊರಿ    
x86_64 1 TB 3 TB ಬೆಂಬಲಿತ/64 TB 3 TB ಬೆಂಬಲಿತ/64 TB
POWER 512 GB ಕನಿಷ್ಟ/1 TB ಸಲಹೆ ಮಾಡಲಾಗುತ್ತದೆ 2 TB 2 TB
System z 3 TB (z196) 3 TB (z196) 3 TB (z196)
ಕನಿಷ್ಟ ಅಗತ್ಯವಿರುವುದು    
x86_64 512 MB ಕನಿಷ್ಟ/ಪ್ರತಿ ತಾರ್ಕಿಕ CPU ಗೆ 1 GB ಅನ್ನು ಸಲಹೆ ಮಾಡಲಾಗುತ್ತದೆ 1 GB ಕನಿಷ್ಟ/ಪ್ರತಿ ತಾರ್ಕಿಕ CPU ಗೆ 1 GB ಅನ್ನು ಸಲಹೆ ಮಾಡಲಾಗುತ್ತದೆ 1 GB ಕನಿಷ್ಟ/ಪ್ರತಿ ತಾರ್ಕಿಕ CPU ಗೆ 1 GB ಅನ್ನು ಸಲಹೆ ಮಾಡಲಾಗುತ್ತದೆ
POWER 1 GB/2 GB ಸಲಹೆ ಮಾಡಲಾಗುತ್ತದೆ 2 GB/2 GB ಪ್ರತಿ Red Hat Enterprise Linux ಅನುಸ್ಥಾಪನೆಗೆ 2 GB/2 GB ಪ್ರತಿ Red Hat Enterprise Linux ಅನುಸ್ಥಾಪನೆಗೆ
System z 512 MB 512 MB 1 GB[a]
ಕಡತ ವ್ಯವಸ್ಥೆಗಳು ಮತ್ತು ಶೇಖರಣಾ ಮಿತಿಗಳು    
ಗರಿಷ್ಟ ಕಡತದ ಗಾತ್ರ: XFS 16 TB 16 TB 16 TB
ಗರಿಷ್ಟ ಕಡತದ ಗಾತ್ರ: ext4 16 TB 16 TB 50 TB
ಗರಿಷ್ಟ ಕಡತದ ಗಾತ್ರ: Btrfs ಲಭ್ಯವಿಲ್ಲ ಪರಿಶೀಲನೆಯಲ್ಲಿದೆ ಪರಿಶೀಲನೆಯಲ್ಲಿದೆ
ಗರಿಷ್ಟ ಕಡತ ವ್ಯವಸ್ಥೆಯ ಗಾತ್ರ: XFS 100 TB[b] 100 TB 500 TB
ಗರಿಷ್ಟ ಕಡತ ವ್ಯವಸ್ಥೆಯ ಗಾತ್ರ: Btrfs 16 TB 16 TB 50 TB
ಗರಿಷ್ಟ ಕಡತ ವ್ಯವಸ್ಥೆಯ ಗಾತ್ರ: Btrfs ಲಭ್ಯವಿಲ್ಲ ಪರಿಶೀಲನೆಯಲ್ಲಿದೆ 50 TB
ಗರಿಷ್ಟ ಬೂಟ್ LUN ಗಾತ್ರ 2 TB 16 TB[c] 50 TB
ಗರಿಷ್ಟ ಪ್ರತಿ-ಪ್ರಕ್ರಿಯೆಯ ವಿಳಾಸದ ಗಾತ್ರ: x86_64 2 TB 128 TB 128 TB
     
[a] IBM System z ನಲ್ಲಿ 1 GB ಗಿಂತ ಹೆಚ್ಚಿನದನ್ನು ಸಲಹೆ ಮಾಡಲಾಗುತ್ತದೆ.
[b] Red Hat Enterprise Linux ಆವೃತ್ತಿ 5.5 ಅಥವ ನಂತರದ್ದು 100 TB ವರೆಗಿನ ಗಾತ್ರವನ್ನು ಹೊಂದಿರುವ XFS ಕಡತ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.
[c] 2 TB ಗಿಂತ ಹೆಚ್ಚಿನ ಬೂಟ್ LUN ಬೆಂಬಲಕ್ಕಾಗಿ UEFI ಮತ್ತು GPT ಬೆಂಬಲದ ಅಗತ್ಯವಿರುತ್ತದೆ ಎಂಬುದನ್ನು ನೆನಪಿಡಿ.

ಅಧ್ಯಾಯ 4. ಪ್ಯಾಕೇಜ್‌ ಮತ್ತು ಬೆಂಬಲದ ಬದಲಾವಣೆಗಳು

ಈ ಕೆಳಗಿನ ಅಪ್ರಚಲಿತಗೊಳಿಸಲಾದ ಅಥವ ತೆಗೆದುಹಾಕಲಾದ ಪ್ಯಾಕೇಜುಗಳು ಮತ್ತು ಚಾಲಕಗಳ ಪಟ್ಟಿಯನ್ನು Red Hat Enterprise Linux 7.0 ರಲ್ಲಿ ಖಂಡಿತವಾಗಿಯೂ ಸಹ ಸೂಕ್ತವಾದವು ಎಂದು ಪರಿಗಣಿಸಲಾಗಿದೆ ಮತ್ತು Red Hat Enterprise Linux 7.0 ಕ್ಕಾಗಿ Red Hat ನ ವಿವೇಚನೆಯ ಮೇರೆಗೆ ಬದಲಾಯಿಸಬಹುದಾಗಿರುತ್ತದೆ.

4.1. ಅಪ್ರಚಲಿತಗೊಳಿಸಲಾದ ಪ್ಯಾಕೇಜುಗಳು

ಈ ಕೆಳಗಿನ ಕಾರ್ಯಭಾರಗಳು ಮತ್ತು ಸಾಮರ್ಥ್ಯಗಳನ್ನು Red Hat Enterprise Linux 7.0 ರಲ್ಲಿ ಅಪ್ರಚಲಿತಗೊಳಿಸಬೇಕೆಂದು ಯೋಜಿಸಲಾಗಿತ್ತು, ಆದರೆ ಉತ್ಪನ್ನದ ಭವಿಷ್ಯದ ಆವೃತ್ತಿಯಿಂದ ತೆಗೆದುಹಾಕುವ ಸಾಧ್ಯತೆ ಇದೆ. ಎಲ್ಲಿ ಅಗತ್ಯವೊ ಅಲ್ಲೆಲ್ಲಾ ಕೆಳಗೆ ಪರ್ಯಾಯ ಸಾಮರ್ಥ್ಯಗಳನ್ನು ನೀಡಲಾಗಿದೆ.

ಕೋಷ್ಟಕ 4.1. ಅಪ್ರಚಲಿತಗೊಳಿಸಲಾದ ಪ್ಯಾಕೇಜುಗಳು

ಕ್ರಿಯಾಶೀಲತೆ/ಪ್ಯಾಕೇಜ್ ಪರ್ಯಾಯ ವರ್ಗಾವಣೆ ಟಿಪ್ಪಣಿಗಳು
ext2, ext3 ಕಡತ ವ್ಯವಸ್ಥೆಯ ಬೆಂಬಲ ext4 ext4 ಕೋಡ್ ಅನ್ನು ext2 ಮತ್ತು ext3 ಕಡತ ವ್ಯವಸ್ಥೆಗಳಿಗಾಗಿ ಬಳಸಬಹುದಾಗಿರುತ್ತದೆ
sblim-sfcb tog-pegasus
ಸಾಂಪ್ರದಾಯಿಕ RHN ಹೋಸ್ಟೆಡ್ ನೋಂದಣಿ subscription-manager ಮತ್ತು Subscription Asset Manager
acpid systemd
evolution-mapi evolution-ews ದಯವಿಟ್ಟು Microsoft Exchange Server 2003 ಗಣಕಗಳಿಂದ ವರ್ಗಾವಣೆ ಮಾಡಿಕೊಳ್ಳಿ
gtkhtml3 webkitgtk3
sendmail postfix
edac-utils ಮತ್ತು mcelog rasdaemon
libcgroup systemd cgutils ಎನ್ನುವುದು Red Hat Enterprise Linux 7.0 ರಲ್ಲಿ ಮುಂದುವರೆಯುತ್ತದೆ ಆದರೆ systemd ಎನ್ನುವುದು ಗ್ರಾಹಕರು ಮುಂದಿನ ಬಿಡುಗಡೆಗಳಲ್ಲಿ ವರ್ಗಾವಣೆ ಹೊಂದುವುದಕ್ಕೆ ನೆರವಾಗುವ ಮುಂಬರುವ ಸಾಮರ್ಥ್ಯವಾಗಿದೆ
krb5-appl openssh OpenSSH ಅನ್ನು ಹೆಚ್ಚು ಸಕ್ರಿಯವಾಗಿ ನೋಡಿಕೊಳ್ಳಲಾಗುತ್ತಿರುವ ಶಿಷ್ಟತೆಗಳು ಮತ್ತು ಹೆಚ್ಚು ಸಕ್ರಿಯವಾಗಿ ವಿಕಸನೆಗೊಳಿಸಲಾದ ಮತ್ತು ನೋಡಿಕೊಳ್ಳಲಾಗುತ್ತಿರುವ ಕೋಡ್ ಆಧಾರವನ್ನು ಬಳಸಿಕೊಂಡು ಅಳವಡಿಸಲಾಗುವ ಇದೇ ರೀತಿಯ ಉಪಕರಣಗಳನ್ನು ಹೊಂದಿರುತ್ತದೆ.
lvm1 lvm2
lvm2mirror ಮತ್ತು cmirror lvm2 raid1 lvm2 raid1 ಕ್ಲಸ್ಟರುಗಳನ್ನು ಬೆಂಬಲಿಸುವುದಿಲ್ಲ. cmirror ಅನ್ನು ಬದಲಾಯಿಸಲು ಯಾವುದೆ ಯೋಜನೆ ಇಲ್ಲ.

4.2. ತೆಗೆದುಹಾಕಲಾದ ಪ್ಯಾಕಜುಗಳು

ಈ ವಿಭಾಗದಲ್ಲಿ Red Hat Enterprise Linux 6 ರ ಹೋಲಿಕೆಯಲ್ಲಿ Red Hat Enterprise Linux 7 ರಲ್ಲಿ ತೆಗೆದುಹಾಕಲಾದ ಪ್ಯಾಕೇಜುಗಳ ಪಟ್ಟಿಯನ್ನು ತೋರಿಸಲಾಗುತ್ತದೆ.

ಕೋಷ್ಟಕ 4.2. ತೆಗೆದುಹಾಕಲಾದ ಪ್ಯಾಕಜುಗಳು

ಕ್ರಿಯಾಶೀಲತೆ/ಪ್ಯಾಕೇಜ್ ಪರ್ಯಾಯ ವರ್ಗಾವಣೆ ಟಿಪ್ಪಣಿಗಳು
gcj OpenJDK Java ಅನ್ವಯಗಳನ್ನು gcj ಯೊಂದಿಗೆ ಸ್ಥಳೀಯ ಕೋಡ್‌ಗೆ ಕಂಪೈಲ್ ಮಾಡಬೇಡಿ.
ಅನುಸ್ಥಾಪನಾ ಆರ್ಕಿಟೆಕ್ಚರುಗಳಾಗಿ 32-ಬಿಟ್ ಆರ್ಕಿಟೆಕ್ಚರುಗಳು 64-ಬಿಟ್‌ ಆರ್ಕಿಟೆಕ್ಚರುಗಳು ಆನ್ವಯಗಳು ಆದರೂ ಸಹ ಹೊಂದಾಣಿಕೆಯಾಗುವ ಲೈಬ್ರರಿಗಳೊಂದಿಗೆ ಚಲಾಯಿತಗೊಳ್ಳುತ್ತದೆ. ನಿಮ್ಮ ಅನ್ವಯಗಳನ್ನು 64-ಬಿಟ್ Red Hat Enterprise Linux 6 ರಲ್ಲಿ ಪರೀಕ್ಷಿಸಿ. 32-ಬಿಟ್ ಬೂಟ್ ಬೆಂಬಲದ ಅಗತ್ಯವಿದ್ದಲ್ಲಿ, Red Hat Enterprise Linux 6 ಅನ್ನು ಬಳಸುವುದನ್ನು ಮುಂದುವರೆಸಿ.
IBM POWER6 ಬೆಂಬಲ ಯಾವುದೂ ಇಲ್ಲ Red Hat Enterprise Linux 5 ಅಥವ 6 ಅನ್ನು ಬಳಸುವುದನ್ನು ಮುಂದುವರೆಸಿ.
Matahari CIM-ಆಧರಿತವಾದ ನಿರ್ವಹಣೆ Matahari ಅನ್ನು Red Hat Enterprise Linux 6.4 ರಿಂದ ತೆಗೆದುಹಾಕಲಾಗಿದೆ. ಅದನ್ನು ಬಳಸದಿರಿ.
ecryptfs ಈಗಿರುವ LUKS ಅಥವ dm-crypt ಬ್ಲಾಕ್-ಆಧರಿತವಾದ ಗೂಢಲಿಪೀಕರಣವನ್ನು ಬಳಸು ವರ್ಗಾವಣೆ ಲಭ್ಯವಿಲ್ಲ; ಬಳಕೆದಾರರು ಗೂಢಲಿಪೀಕರಿಸಲಾದ ದತ್ತಾಂಶವನ್ನು ಮರುರಚನೆ ಮಾಡಿಬೇಕಿದೆ.
TurboGears2 ಜಾಲ ಅನ್ವಯದ ಸ್ಟ್ಯಾಕ್ ಯಾವುದೂ ಇಲ್ಲ
OpenMotif ಆವೃತ್ತಿ 2.2 Motif 2.3 Red Hat Enterprise Linux 6 ರಲ್ಲಿ ಇರುವ ಪ್ರಸಕ್ತ Motif ಆವೃತ್ತಿಯ ವಿರುದ್ಧ ಅನ್ವಯಗಳನ್ನು ಮರಳಿ ನಿರ್ಮಿಸಿ.
webalizer ಜಾಲ ವಿಶ್ಲೇಷಕ ಉಪಕರಣ ಯಾವುದೂ ಇಲ್ಲ
compiz ಕಿಟಕಿ ವ್ಯವಸ್ಥಾಪಕ gnome-shell
ಎಕ್ಲಿಪ್ಸ್ ವಿಕಸನೆಗಾರರ ಟೂಲ್‌ಸೆಟ್ ಯಾವುದೂ ಇಲ್ಲ ಎಕ್ಲಿಪ್ಸ್ ಅನ್ನು ಈಗ Red Hat ಡೆವಲಪರ್ ಟೂಪ್‌ಸೆಟ್‌ ನೀಡಿಕೆಯೊಂದಿಗೆ ಒದಗಿಸಲಾಗಿದೆ.
Qpid ಮತ್ತು QMF ಯಾವುದೂ ಇಲ್ಲ Qpid ಮತ್ತು QMF ಈಗ MRG ನೀಡಿಕೆಯಲ್ಲಿ ಲಭ್ಯವಿದೆ.
amtu ಯಾವುದೂ ಇಲ್ಲ ಕಾಮನ್ ಕ್ರೈಟೀರಿಯಾ ಪ್ರಮಾಣಪತ್ರಗಳಿಗೆ ಇನ್ನು ಮುಂದೆ ಈ ಉಪಕರಣದ ಅಗತ್ಯವಿರುವುದಿಲ್ಲ.
system-config-services systemadm
pidgin ಮುಂಭಾಗ empathy
perl-suidperl ಇಂಟರ್‌ಪ್ರಿಟರ್ ಯಾವುದೂ ಇಲ್ಲ ಈ ಕ್ರಿಯಾಶೀಲತೆಯು ಇನ್ನು ಮುಂದೆ Perl ಅಪ್‌ಸ್ಟ್ರೀಮ್‌ನಲ್ಲಿ ಲಭ್ಯವಿರುವುದಿಲ್ಲ.
pam_passwdqc, pam_cracklib pam_pwquality
HAL ಲೈಬ್ರರಿ ಮತ್ತು ಡೀಮನ್ udev
ConsoleKit ಲೈಬ್ರರಿ ಮತ್ತು ಡೀಮನ್ systemd http://www.freedesktop.org/wiki/Software/systemd/writing-display-managers
DeviceKit-power upower
system-config-lvm gnome-disk-utility ಮತ್ತು system-storage-manager gnome-disk-utility ಎನ್ನುವುದು Red Hat Enterprise Linux 6 ರಲ್ಲಿಯೂ ಸಹ ಇರುತ್ತದೆ. system-storage-manager ಎನ್ನುವುದನ್ನು ಸರಳವಾದ ಕಾರ್ಯಗಳಿಗಾಗಿ ಬಳಸಬೇಕು, ಆದರೆ lvm2 ಆದೇಶವನ್ನು ಫೈನ್‌ ಟೂನಿಂಗ್‌ಗಾಗಿ ಮತ್ತು LVM ಗೆ ಸಂಬಂಧಿಸಿದಂತಹ ಹೆಚ್ಚು ಸಂಕೀರ್ಣವಾದ ಕಾರ್ಯಾಚರಣೆಗಳಿಗಾಗಿ ಬಳಸಬಹುದು ಎಂಬುದನ್ನು ನೆನಪಿಡಿ.
system-config-network nm-connection-editor, nmcli nm-connection-editor ಎನ್ನುವುದು Red Hat Enterprise Linux 6 ರಲ್ಲಿಯೂ ಸಹ ಇದೆ.
taskjuggler ಯಾವುದೂ ಇಲ್ಲ
thunderbird evolution
vconfig iproute ಎಲ್ಲಾ vconfig ಸೌಲಭ್ಯಗಳನ್ನು iproute ಪ್ಯಾಕೇಜಿನಲ್ಲಿನ ip ಉಪಕರಣದಿಂದ ನೀಡಲಾಗುತ್ತದೆ. ವಿವರಗಳಿಗಾಗಿ ip-link(8) ಕೈಪಿಡಿಯನ್ನು ನೋಡಿ.
ವಿವಿಧ ಹಳೆಯ ಗ್ರಾಫಿಕ್ಸ್ ಚಾಲಕಗಳು ಆಧುನಿಕ ಯಂತ್ರಾಂಶ ಅಥವ vesa ಚಾಲಕ
xorg-x11-twm ಯಾವುದೂ ಇಲ್ಲ
xorg-x11-xdm gdm
system-config-firewall firewall-config ಮತ್ತು firewall-cmd system-config-firewall ಎನ್ನುವುದು iptables ಸೇವೆಗಳೊಂದಿಗೆ ಸ್ಥಿರ-ಮಾತ್ರವಾದ ಪರಿಸರಗಳಿಗಾಗಿನ ಒಂದು ಪರ್ಯಾಯ ಫೈರ್ವಾಲ್‌ ಪರಿಹಾರದ ಒಂದು ಭಾಗವಾಗಿ ಇನ್ನೂ ಸಹ ಲಭ್ಯವಿದೆ.
mod_perl mod_fcgid mod_perl ಎನ್ನುವುದು HTTP 2.4 ರೊಂದಿಗೆ ಹೊಂದಾಣಿಕೆಯಾಗುವುದಿಲ್ಲ
busybox ಯಾವುದೂ ಇಲ್ಲ
prelink ಯಾವುದೂ ಇಲ್ಲ prelink ಅನ್ನು Red Hat Enterprise Linux 7.0 ರಲ್ಲಿ ಸೇರಿಸಲಾಗಿದೆ, ಆದರೆ ಅದನ್ನು ಪೂರ್ವನಿಯೋಜಿತವಾಗಿ ನಿಷ್ಕ್ರಿಯಗೊಳಿಸಲಾಗಿರುತ್ತದೆ ಎನ್ನುವುದನ್ನು ನೆನಪಿಡಿ.
KVM ಮತ್ತು ವರ್ಚುವಲೈಸೇಶನ್ ಪ್ಯಾಕೇಜುಗಳು (ComputeNode ವೇರಿಯಂಟ್) ಸರ್ವರ್ ವೇರಿಯಂಟ್‌ನಂತಹ ವೇರಿಯಂಟ್‌ ಇಂದ ಸದೃಢಗೊಂಡಿರುವ KVM ಮತ್ತು ವರ್ಚುವಲೈಸೇಶನ್
module-init-tools kmod
kernel-firmware-* linux-firmware
flight-recorder ಯಾವುದೂ ಇಲ್ಲ
wireless-tools ಆದೇಶ ಸಾಲಿನಿಂದ ಮೂಲಭೂತ ವೈರ್ಲೆಸ್ ಸಾಧನ ವಿಸ್ತರಣೆಯನ್ನು ಮಾಡಲು, iw ಪ್ಯಾಕೇಜಿನಲ್ಲಿನ iw ಬೈನರಿಯನ್ನು ಬಳಸಿ.
libtopology hwloc
digikam ಯಾವುದೂ ಇಲ್ಲ ಸಂಕೀರ್ಣ ಅವಲಂಬನೆಗಳ ಕಾರಣದಿಂದಾಗಿ, digiKam ಚಿತ್ರ ನಿರ್ವಹಣಾ ಪ್ರೊಗ್ರಾಮ್ Red Hat Enterprise Linux 7.0 ತಂತ್ರಾಂಶ ಚಾನಲ್‌ಗಳನ್ನು ಲಭ್ಯವಿರುವುದಿಲ್ಲ.
NetworkManager-openswan NetworkManager-libreswan
KDE ಡಿಸ್‌ಪ್ಲೇ ಮ್ಯಾನೇಜರ್, KDM GNOME ಡಿಸ್‌ಪ್ಲೇ ಮ್ಯಾನೇಜರ್, GDM GNOME ಡಿಸ್‌ಪ್ಲೇ ಮ್ಯಾನೇಜರ್ ಎನ್ನುವುದು Red Hat Enterprise Linux 7.0 ರಲ್ಲಿನ ಪೂರ್ವನಿಯೋಜಿತ ಪ್ರದರ್ಶಕ ನಿರ್ವಾಹಕವಾಗಿದೆ. KDE (K ಡೆಸ್ಕ್‌ಟಾಪ್ ಎನ್ವಿರಾನ್ಮೆಂಟ್) ಇನ್ನೂ ಸಹ ಲಭ್ಯವಿದೆ ಮತ್ತು ಬೆಂಬಲಿತವಾಗಿದೆ ಎನ್ನುವುದನ್ನು ನೆನಪಿಡಿ.
virt-tar virt-tar-in ಮತ್ತು virt-tar-out ಆದೇಶ ಸಾಲಿನ ಸಿಂಟ್ಯಾಕ್ಸ್ ಅನ್ನು ಬದಲಾಯಿಸಲಾಗಿದೆ ಎನ್ನುವುದನ್ನು ನೆನಪಿಡಿ. ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಪುಟವನ್ನು ನೋಡಿ.
virt-list-filesytems virt-filesystems ಆದೇಶ ಸಾಲಿನ ಸಿಂಟ್ಯಾಕ್ಸ್ ಅನ್ನು ಬದಲಾಯಿಸಲಾಗಿದೆ ಎನ್ನುವುದನ್ನು ನೆನಪಿಡಿ. ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಪುಟವನ್ನು ನೋಡಿ.
virt-list-partitions virt-filesystems ಆದೇಶ ಸಾಲಿನ ಸಿಂಟ್ಯಾಕ್ಸ್ ಅನ್ನು ಬದಲಾಯಿಸಲಾಗಿದೆ ಎನ್ನುವುದನ್ನು ನೆನಪಿಡಿ. ಹೆಚ್ಚಿನ ಮಾಹಿತಿಗಾಗಿ ಮಾಹಿತಿ ಪುಟವನ್ನು ನೋಡಿ.

4.3. ಬಿಟ್ಟುಬಿಡಲಾದ ಚಾಲಕಗಳು ಮತ್ತು ಮಾಡ್ಯೂಲ್‌ಗಳು

ಈ ಕೆಳಗಿನ ಚಾಲಕಗಳು ಮತ್ತು ಮಾಡ್ಯೂಲ್‌ಗಳನ್ನು Red Hat Enterprise Linux 7.0 ಇಂದ ಬಿಡಲಾಗಿದೆ ಮತ್ತು Red Hat Enterprise Linux ನ ಭವಿಷ್ಯದ ಬಿಡುಗಡೆಗಳಲ್ಲಿ ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.
ಗ್ರಾಫಿಕ್ಸ್ ಚಾಲಕಗಳು
xorg-x11-drv-ast
xorg-x11-drv-cirrus
xorg-x11-drv-mach64
xorg-x11-drv-mga
xorg-x11-drv-openchrome
ಮೇಲಿನ ಎಲ್ಲಾ ಗ್ರಾಫಿಕ್ಸ್ ಚಾಲಕಗಳೂ ಸಹ ಕರ್ನಲ್ ಮೋಡ್ ಸೆಟ್ಟಿಂಗ್ (KMS) ಚಾಲಕಗಳಿಂದ ಬದಲಾಯಿಸಲ್ಪಡುತ್ತವೆ ಎಂಬುದನ್ನು ನೆನಪಿಡಿ.
ಇನ್‌ಪುಟ್ ಚಾಲಕಗಳು
xorg-x11-drv-void
ಶೇಖರಣಾ ಸಾಧನಗಳು
3w-9xxx
arcmsr
aic79xx
Emulex lpfc820

4.4. ತೆಗೆದುಹಾಕಲಾದ ಕರ್ನಲ್ ಚಾಲಕಗಳು, ಮಾಡ್ಯೂಲ್‌ಗಳು ಮತ್ತು ಸೌಲಭ್ಯಗಳು

ಈ ವಿಭಾಗವು Red Hat Enterprise Linux 6 ರ ಹೋಲಿಕೆಯಲ್ಲಿ Red Hat Enterprise Linux 7.0 ಇಂದ ತೆಗೆದುಹಾಕಲಾದ ಚಾಲಕಗಳು ಮತ್ತು ಮಾಡ್ಯೂಲ್‌ಗಳ ಪಟ್ಟಿಯನ್ನು ತೋರಿಸುತ್ತದೆ.
ಶೇಖರಣಾ ಸಾಧನಗಳು
megaraid_mm
cciss[3]
aic94xx
aic7xxx
i2o
ips
megaraid_mbox
mptlan
mptfc
sym53c8xx
ecryptfs
3w-xxxx
ನೆಟ್‌ವರ್ಕಿಂಗ್ ಚಾಲಕಗಳು
3c59x
3c574_cs
3c589_c
3c589_cs
8390
acenic
amd8111e
at76c50x-usb
ath5k
axnet_cs
b43
b43legacy
can-dev
cassini
cdc-phonet
cxgb
de4x5
de2104x
dl2k
dmfe
e100
ems_pci
ems_usb
fealnx
fmvi18x_cs
fmvj18x_cs
forcedeth
ipw2100
ipw2200
ixgb
kvaser_pci
libertas
libertas_tf
libertas_tf_usb
mac80211_hwsim
natsemi
ne2k-pci
niu
nmckan_cs
nmclan_cs
ns83820
p54pci
p54usb
pcnet32
pcnet_32
pcnet_cs
pppol2tp
r6040
rt61pci
rt73usb
rt2400pci
rt2500pci
rt2500usb
rtl8180
rtl8187
s2io
sc92031
sis190
sis900
sja1000
sja1000_platform
smc91c92_cs
starfire
sundance
sungem
sungem_phy
sunhme
tehuti
tlan
tulip
typhoon
uli526x
vcan
via-rhine
via-velocity
vxge
winbond-840
xirc2ps_cs
xircom_cb
zd1211rw
ಗ್ರಾಫಿಕ್ಸ್ ಚಾಲಕಗಳು
xorg-x11-drv-acecad
xorg-x11-drv-aiptek
xorg-x11-drv-elographics
xorg-x11-drv-fpit
xorg-x11-drv-hyperpen
xorg-x11-drv-mutouch
xorg-x11-drv-penmount
ಇನ್‌ಪುಟ್ ಚಾಲಕಗಳು
xorg-x11-drv-acecad
xorg-x11-drv-aiptek
xorg-x11-drv-elographics
xorg-x11-drv-fpit
xorg-x11-drv-hyperpen
xorg-x11-drv-mutouch
xorg-x11-drv-penmount


[3] ಈ ಕೆಳಗಿನ ನಿಯಂತ್ರಕಗಳನ್ನು ಇನ್ನು ಮುಂದೆ ಬೆಂಬಲಿಸಲಾಗುವುದಿಲ್ಲ:
  • Smart Array 5300
  • Smart Array 5i
  • Smart Array 532
  • Smart Array 5312
  • Smart Array 641
  • Smart Array 642
  • Smart Array 6400
  • Smart Array 6400 EM
  • Smart Array 6i
  • Smart Array P600
  • Smart Array P800
  • Smart Array P400
  • Smart Array P400i
  • Smart Array E200i
  • Smart Array E200
  • Smart Array E500
  • Smart Array P700M

ಅಧ್ಯಾಯ 5. ಅನುಸ್ಥಾಪನೆ ಮತ್ತು ಬೂಟ್‌ ಮಾಡುವಿಕೆ

5.1. ಅನುಸ್ಥಾಪಕ

Red Hat Enterprise Linux ಅನುಸ್ಥಾಪಕವಾದಂತಹ, Anaconda ಅನ್ನು, Red Hat Enterprise Linux 7 ಗಾಗಿನ ಅನುಸ್ಥಾಪನೆಯ ಪ್ರಕ್ರಿಯೆಯನ್ನು ಸುಧಾರಿಸುವಂತೆ ಮರುವಿನ್ಯಾಸಗೊಳಿಸಲಾಗಿದೆ ಮತ್ತು ಉತ್ತಮಪಡಿಸಲಾಗಿದೆ.

ಸಂಪರ್ಕಸಾಧನ

  • Anaconda ವು IBM S/390, ಟೈಪ್‌ರೈಟರ್ ಟರ್ಮಿನಲ್‌ಗಳು, ಮತ್ತು ಕೇವಲ ಬರೆಯಲು ಮಾತ್ರ ಬಳಸಲು ಸಾಧ್ಯವಿರುವವುಗಳಿಗಾಗಿ ಹೊಸ ಪಠ್ಯ ವಿಧಾನವನ್ನು ಹೊಂದಿರುತ್ತದೆ.
  • Anaconda ಈಗ ಹೊಸದಾಗಿ ಮರುವಿನ್ಯಾಸಗೊಳಿಸಲಾದ ಗ್ರಾಫಿಕಲ್ ಬಳಕೆದಾರ ಸಂಪರ್ಕಸಾಧನವನ್ನು ಹೊಂದಿದ್ದು ಇದರಲ್ಲಿ ಆಧುನಿಕ ಮತ್ತು ಗ್ರಾಹ್ಯವಾದ ಹಬ್-ಆಂಡ್-ಸ್ಪೋಕ್ ಪರಸ್ಪರ ವ್ಯವಹರಿಸುವ ಮಾದರಿಯನ್ನು ಅಳವಡಿಸಲಾಗಿದೆ.
  • Anaconda ಅನುಸ್ಥಾಪಕವು ಸುಧಾರಿತ l10n (ಲೋಕಲೈಸೇಶನ್) ಬೆಂಬಲವನ್ನು ಹೊಂದಿದೆ.
  • ಆರಂಭಿಕ ಸಿದ್ಧತೆಗಳನ್ನು firstboot ಖಾತ್ರಿಗೊಳಿಸುತ್ತದೆ.

ಶೇಖರಣೆ

  • ನೇರವಾಗಿ-ಫಾರ್ಮ್ಯಾಟ್‌ ಮಾಡಲಾದ ವಿಭಜಿಸದೆ ಇರುವ ಸಾಧನಗಳನ್ನು ಬೆಂಬಲಿಸಲಾಗುತ್ತದೆ.
  • ತಾತ್ಕಾಲಿಕ ಕಡತ ಶೇಖರಣಾ ವ್ಯವಸ್ಥೆಯಾದಂತಹ tmpfs ಅನ್ನು, ಈಗ ಅನುಸ್ಥಾಪನೆಯ ಸಮಯದಲ್ಲಿ ಸಂರಚಿಸಲು ಸಾಧ್ಯವಿರುತ್ತದೆ.
  • LVM ತಿನ್ ಪ್ರಾವಿಶನಿಂಗ್ ಈಗ ಬೆಂಬಲಿತವಾಗಿದೆ.
  • Btrfs ಅನ್ನು ಈಗ ಒಂದು ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸಲಾಗುತ್ತದೆ.

ಜಾಲಬಂಧ

ನೆಟ್‌ವರ್ಕಿಂಗ್ ಸೌಲಭ್ಯಗಳು ಟೀಮಿಂಗ್, ಬಾಂಡಿಂಗ್ ಮತ್ತು NTP (ನೆಟ್‌ವರ್ಕ್ ಟೈಮ್ ಪ್ರೊಟೊಕಾಲ್) ಸಂರಚನೆಗೆ ಬೆಂಬಲವನ್ನು ಸೇರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ, ಅಧ್ಯಾಯ 13, ನೆಟ್‌ವರ್ಕಿಂಗ್ ಅನ್ನು ನೋಡಿ.

ವಿಕಸನಾ ಟೂಲಿಂಗ್

  • Anaconda ಈಗ ಸುಧಾರಿತ makeupdates ಸ್ಕ್ರಿಪ್ಟನ್ನು ಬಳಸುತ್ತದೆ.

ಇತರೆ ಸೌಲಭ್ಯಗಳು

  • ಭೂಸ್ಥಳಗಳನ್ನು ಈಗ ಬೆಂಬಲಿಸಲಾಗುತ್ತದೆ, ಭಾಷೆ ಮತ್ತು ಕಾಲವಲಯವನ್ನು ಈಗ GeoIP ಇಂದ ಮೊದಲೆ ಆರಿಸಲಾಗುತ್ತದೆ.
  • ತೆರೆಚಿತ್ರಗಳನ್ನು ಈಗ ಸಾರ್ವತ್ರಿಕವಾಗಿ ಬೆಂಬಲಿಸಲಾಗುತ್ತದೆ.
  • Anaconda ಈಗ ಆಡ್-ಆನ್‌ಗಳನ್ನು ಬೆಂಬಲಿಸುತ್ತದೆ.
  • loader ಬೈನರಿಯನ್ನು dracut ಮಾಡ್ಯೂಲ್‌ಗಳಿಂದ ಬದಲಾಯಿಸಲಾಗಿದೆ.
  • realmd DBus ಸೇವೆಯನ್ನು kickstartನೊಂದಿಗೆ ಒಟ್ಟುಗೂಡಿಸಲಾಗಿದೆ.
Red Hat Enterprise Linux 7.0 ಅನುಸ್ಥಾಪನಾ ಮಾರ್ಗದರ್ಶಿಯು ಅನುಸ್ಥಾಪಕ ಮತ್ತು ಅನುಸ್ಥಾಪನಾ ಪ್ರಕ್ರಿಯೆಯ ಕುರಿತು ವಿವರವಾದ ಮಾಹಿತಿಯನ್ನು ಒದಗಿಸುತ್ತದೆ.

5.2. ಬೂಟ್ ಲೋಡರ್

GRUB 2

Red Hat Enterprise Linux 7.0 ರಲ್ಲಿ ಹೊಸ ಬೂಟ್ ಲೋಡರ್ ಆದ GRUB 2 ಅನ್ನು ಸೇರಿಸಲಾಗಿದ್ದು, ಇದು Red Hat Enterprise Linux 6 ರಲ್ಲಿ ಬಳಸಲಾಗುವ ಇದರ ಹಿಂದಿನ ಬೂಟ್‌ಲೋಡರ್ ಆದಂತಹ GRUB ಗಿಂತ ಸದೃಢ, ಸುಲಭವಾಗಿ ಸ್ಥಳಾಂತರಿಸಬಹುದಾದ ಮತ್ತು ಶಕ್ತಿಯುತವಾಗಿದೆ. GRUB 2 ಹಲವಾರು ಸೌಲಭ್ಯಗಳು ಮತ್ತು ಸುಧಾರಣೆಗಳನ್ನು ಒದಗಿಸುತ್ತದೆ, ಅವುಗಳಲ್ಲಿ ಗಮನಾರ್ಹವಾದವುಗಳೆಂದರೆ:
  • 64-bit Intel ಮತ್ತು AMD ಆರ್ಕಿಟೆಕ್ಚರುಗಳ ಜೊತೆಗೆ, GRUB 2 ಈಗ PowerPC ಯೂ ಸೇರಿದಂತೆ ಹಲವು ವಿಧದ ಪ್ಲಾಟ್‌ಫಾರ್ಮುಗಳನ್ನು ಬೆಂಬಲಿಸುತ್ತದೆ.
  • GRUB 2 BIOS, EFI ಮತ್ತು OpenFirmware ಸೇರಿದಂತೆ ಹೆಚ್ಚುವರಿ ಫರ್ಮ್‌ವೇರ್ ಬಗೆಗಳನ್ನು ಬೆಂಬಲಿಸುತ್ತದೆ.
  • ಮಾಸ್ಟರ್ ಬೂಟ್ ರೇಕಾರ್ಡ್ (MBR) ವಿಭಜನಾ ಕೋಷ್ಟಕಗಳನ್ನು ಬೆಂಬಲಿಸುವುದರ ಜೊತೆಗೆ, GRUB 2 ಈಗ GUID ವಿಭಜನಾ ಕೋಷ್ಟಕಗಳನ್ನು (GPT) ಬೆಂಬಲಿಸುತ್ತದೆ.
  • ಲಿನಕ್ಸ್ ಕಡತ ವ್ಯವಸ್ಥೆಗಳ ಜೊತೆಗೆ, GRUB 2 ಈಗ ಲಿನಕ್ಸ್-ಅಲ್ಲದ ಕಡತ ವ್ಯವಸ್ಥೆಗಳಾದಂತಹ Apple Hierarchical File System Plus (HFS+) ಮತ್ತು Microsoft ನ NTFS ಕಡತ ವ್ಯವಸ್ಥೆಗಳನ್ನೂ ಸಹ ಬೆಂಬಲಿಸುತ್ತದೆ.

ಅಧ್ಯಾಯ 6. ಶೇಖರಣೆ

LIO ಕರ್ನಲ್ ಗುರಿ ಉಪವ್ಯವಸ್ಥೆ

ಈ ಕೆಳಗಿನ ಎಲ್ಲಾ ಶೇಖರಣಾ ವ್ಯವಸ್ಥೆಗಳಿಗಾಗಿನ ಶಿಷ್ಟ ಮುಕ್ತ ತಂತ್ರಾಂಶದ SCSI ಗುರಿಯಾದಂತಹ LIO ಕರ್ನಲ್ ಗುರಿ ಉಪವ್ಯವಸ್ಥೆಯನ್ನು Red Hat Enterprise Linux 7.0 ಬಳಸುತ್ತದೆ: FCoE, iSCSI, iSER (Mellanox InfiniBand), ಮತ್ತು SRP (Mellanox InfiniBand).
Red Hat Enterpise Linux 6 iSCSI ಗುರಿ ಬೆಂಬಲಕ್ಕಾಗಿ SCSI ಟಾರ್ಗೆಟ್ ಡೀಮನ್ ಆದಂತಹ tgtd ಅನ್ನು, fcoe-target-utils ಪ್ಯಾಕೇಜಿನ ಮೂಲಕ ಫೈಬರ್-ಚಾನಲ್ ಓವರ್ ಎತರ್ನೆಟ್ (FCoE) ಗುರಿಗಳಿಗಾಗಿ ಕೇವಲ ಲಿನಕ್ಸ್ ಕರ್ನಲ್ ಗುರಿಯಾದಂತಹ LIO ಅನ್ನು ಬಳಸುತ್ತದೆ.
targetcli ಶೆಲ್‌ LIO Linux SCSI ಗುರಿಗಾಗಿ ಸಾಮಾನ್ಯ ನಿರ್ವಹಣಾ ಪ್ಲಾಟ್‌ಫಾರ್ಮ್ ಅನ್ನು ಒದಗಿಸುತ್ತದೆ.

ವೇಗವಾದ ಬ್ಲಾಕ್ ಸಾಧನಗಳು ನಿಧಾನವಾದ ಬ್ಲಾಕ್‌ ಸಾಧನಗಳನ್ನು ಕ್ಯಾಶ್ ಮಾಡುವಿಕೆ

ನಿಧಾನಗತಿಯ ಬ್ಲಾಕ್‌ ಸಾಧನಗಳಿಗಾಗಿ ವೇಗವಾದ ಬ್ಲಾಕ್ ಸಾಧನಗಳು ಕ್ಯಾಶ್ ಆಗಿ ವರ್ತಿಸುವಂತೆ ಮಾಡುವ ಸಾಮರ್ಥ್ಯವನ್ನು Red Hat Enterprise Linux 7.0 ನಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ಪರಿಚಯಿಸಲಾಗಿದೆ. ಈ ಸೌಲಭ್ಯವು ಒಂದು PCIe SSD ಸಾಧನವು ಡೈರೆಕ್ಟ್-ಅಟ್ಯಾಚ್ಡ್ ಸ್ಟೋರೇಜ್‌ಗಾಗಿನ (DAS) ಸ್ಟೋರೇಜ್ ಏರಿಯಾ ನೆಟ್‌ವರ್ಕ್ (SAN) ಶೇಖರಣೆಗಾಗಿ ಒಂದು ಕ್ಯಾಶ್ ಆಗಿ ವರ್ತಿಸುವುದನ್ನು ಅನುಮತಿಸುತ್ತದೆ, ಇದು ಕಡತ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.

LVM ಕ್ಯಾಶ್

Red Hat Enterprise Linux 7.0 ರಲ್ಲಿ LVM ಕ್ಯಾಶ್ ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಈ ಸೌಲಭ್ಯವು ದೊಡ್ಡದಾದ ನಿಧಾನಗತಿಯ ಸಾಧನಗಳಿಗೆ ಕ್ಯಾಶ್ ಆಗಿ ಕೆಲಸ ಮಾಡುತ್ತಿರುವ ಸಣ್ಣ ವೇಗವಾದ ಸಾಧನಗಳನ್ನು ಹೊಂದಿರುವ ತಾರ್ಕಿಕ (ಲಾಜಿಕಲ್) ಪರಿಮಾಣಗಳನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಕ್ಯಾಶ್ ತಾರ್ಕಿಕ ಪರಿಮಾಣಗಳನ್ನು ರಚಿಸುವುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು lvm(8) ಮಾಹಿತಿ (ಮ್ಯಾನುವಲ್) ಪುಟವನ್ನು ನೋಡಿ.
ಈ ಕೆಳಗಿನ ಆದೇಶಗಳಿಗೆ ಕ್ಯಾಶ್ ಲಾಜಿಕಲ್‌ ಪರಿಮಾಣಗಳಲ್ಲಿ ಅನುಮತಿ ಇರುವುದಿಲ್ಲ ಎನ್ನುವುದನ್ನು ನೆನಪಿಡಿ:
  • pvmove: ಯಾವುದೆ ಲಾಜಿಕಲ್ ಪರಿಮಾಣದ ಮೂಲಕ ಕಡೆಗಣಿಸುತ್ತದೆ,
  • lvresize, lvreduce, lvextend: ಕ್ಯಾಶ್ ಲಾಜಿಕಲ್ ಪರಿಮಾಣಗಳನ್ನು ಪ್ರಸಕ್ತ ಮರುಗಾತ್ರಿಸಲು ಸಾಧ್ಯವಿರುವುದಿಲ್ಲ,
  • vgsplit: ಒಂದು ಪರಿಮಾಣ ಗುಂಪಿನಲ್ಲಿ ಕ್ಯಾಶ್ ತಾರ್ಕಿಕ (ಲಾಜಿಕಲ್) ಪರಿಮಾಣಗಳು ಇದ್ದರೆ ಅದನ್ನು ವಿಭಜಿಸಲು ಸಾಧ್ಯವಿರುವುದಿಲ್ಲ.

libStorageMgmt API ನೊಂದಿಗೆ ಸ್ಟೋರೇಜ್ ಅರೇ ಮ್ಯಾನೇಜ್ಮೆಂಟ್

Red Hat Enterprise Linux 7.0 ರಲ್ಲಿ ಶೇಖರಣಾ ವ್ಯೂಹ (ಅರೇ) ನಿರ್ವಹಣೆಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. libStorageMgmt ಎನ್ನುವುದು ಒಂದು ಶೇಖರಣಾ ವ್ಯೂಹ (ಅರೆ) ಮುಕ್ತವಾದ ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (API) ಆಗಿದೆ. ಇದು ವಿವಿಧ ಶೇಖರಣಾ ವ್ಯೂಹಗಳನ್ನು ಪ್ರೊಗ್ರಾಮ್‌ ಮೂಲಕ ನಿರ್ವಹಿಸಲು ಮತ್ತು ಒದಗಿಸಲಾದ ಯಂತ್ರಾಂಶ-ವೇಗವರ್ಧಿತ ಸೌಲಭ್ಯಗಳ ಪ್ರಯೋಜನಗಳನ್ನು ಪಡೆಯಲು ವಿಕಸನೆಗಾರರಿಗೆ ಅನುವು ಮಾಡಿಕೊಡುವ ಒಂದು ಸ್ಥಿರ ಮತ್ತು ಒಂದೇ ಸಮನಾದ API ಅನ್ನು ಒದಗಿಸುತ್ತದೆ. ಗಣಕ ವ್ಯವಸ್ಥಾಪಕರೂ ಸಹ ಶೇಖರಣೆಯನ್ನು ಕೈಯಾರೆ ನಿರ್ವಹಿಸಲೂ ಮತ್ತು ಅದರೊಂದಿಗೆ ನೀಡಲಾದ ಕಮಾಂಡ್ ಲೈನ್ ಇಂಟರ್ಫೇಸ್‌ (CLI) ಮುಖಾಂತರ ಶೇಖರಣಾ ನಿರ್ವಹಣೆಯನ್ನು ಸ್ವಯಂಚಾಲಿತಗೊಳಿಸಲೂ ಸಹ ಸಾಧ್ಯವಿರುತ್ತದೆ.

LSI ಸಿಂಕ್ರೊಗಾಗಿನ ಬೆಂಬಲ

Red Hat Enterprise Linux 7.0 ರಲ್ಲಿ LSI Syncro CS ಹೈ-ಅವೆಲಿಬಿಲಿಟಿ ಡೈರೆಕ್ಟ್-ಅಟ್ಯಾಚ್ಡ್ ಸ್ಟೋರೇಜ್ (HA-DAS) ಅಡಾಪ್ಟರುಗಳನ್ನು ಸಕ್ರಿಯಗೊಳಿಸಲು megaraid_sas ಚಾಲಕದಲ್ಲಿನ ಕೋಡ್ ಅನ್ನು ಸೇರಿಸಲಾಗಿದೆ. megaraid_sas ಚಾಲಕವನ್ನು ಈ ಹಿಂದೆ ಸಕ್ರಿಯಗೊಳಿಸಲಾದ ಅಡಾಪ್ಟರುಗಳಲ್ಲಿ ಸಂಪೂರ್ಣವಾಗಿ ಬೆಂಬಲಿಸಲಾಗಿದ್ದರೂ ಸಹ, Syncro CS ಗಾಗಿನ ಈ ಚಾಲಕದ ಬಳಕೆಯು ಒಂದು ತಂತ್ರಜ್ಞಾನ ಮುನ್ನೋಟವಾಗಿತ್ತು. ಈ ಅಡಾಪ್ಟರಿಗಾಗಿನ ಬೆಂಬಲವನ್ನು ನೇರವಾಗಿ LSI ಇಂದ, ನಿಮ್ಮ ವ್ಯವಸ್ಥೆಯ ಸಂಘಟಕನಿಂದ, ಅಥವ ವ್ಯವಸ್ಥೆಯ ಮಾರಾಟಗಾರನಿಂದ ಒದಗಿಸಲಾಗುತ್ತದೆ. Red Hat Enterprise Linux 7.0 ರಲ್ಲಿ Syncro CS ಅನ್ನು ನಿಯೋಜನೆ ಮಾಡುವ ಬಳಕೆದಾರರಿಗೆ Red Hat ಮತ್ತು LSI ಗೆ ಅಭಿಪ್ರಾಯವನ್ನು ತಿಳಿಸುವಂತೆ ಉತ್ತೇಜಿಸಲಾಗುತ್ತದೆ. LSI Syncro CS ಪರಿಹಾರಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು http://www.lsi.com/products/shared-das/pages/default.aspx ಅನ್ನು ನೋಡಿ.

LVM ಅನ್ವಯ ಪ್ರೊಗ್ರಾಮಿಂಗ್ ಸಂಪರ್ಕಸಾಧನ

Red Hat Enterprise Linux 7.0 ರಲ್ಲಿ ಹೊಸ LVM ಅಪ್ಲಿಕೇಶನ್ ಪ್ರೊಗ್ರಾಮಿಂಗ್ ಇಂಟರ್ಫೇಸ್ (API) ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ. ಈ API ಅನ್ನು LVM ನ ಕೆಲವು ಅಂಶಗಳನ್ನು ಮನವಿ ಮಾಡಲು ಮತ್ತು ನಿಯಂತ್ರಿಸಲು ಬಳಸಲಾಗುತ್ತದೆ.

DIF/DIX ಬೆಂಬಲ

DIF/DIX ಎನ್ನುವುದು SCSI ಶಿಷ್ಟತೆಗೆ ಒಂದು ಹೊಸ ಸೇರ್ಪಡೆಯಾಗಿದೆ ಹಾಗು Red Hat Enterprise Linux 7.0 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿದೆ. DIF/DIX ಡೇಟಾ ಇಂಟಿಗ್ರಿಟಿ ಫೀಲ್ಡ್ (DIF) ಅನ್ನು ಸೇರಿಸುವ ಮೂಲಕ ಸಾಮಾನ್ಯವಾಗಿ ಬಳಸಲಾಗುವ 512-ಬೈಟ್ ಡಿಸ್ಕ್ ಬ್ಲಾಕ್ ಅನ್ನು 512 ಇಂದ 520 ಬೈಟ್‌ಗಳಿಗೆ ಹೆಚ್ಚಿಸುತ್ತದೆ. ಒಂದು ಬರೆಯುವಿಕೆಯು ಸಂಭವಿಸಿದಾಗ, ಹೋಸ್ಟ್ ಬಸ್ ಅಡಾಪ್ಟರ್ (HBA) ಇಂದ ದತ್ತಾಂಶ ಬ್ಲಾಕ್‌ಗಾಗಿ ಲೆಕ್ಕಹಾಕಲಾದ ಒಂದು ಚೆಕ್‌ಸಮ್ ಮೌಲ್ಯವನ್ನು DIF ಶೇಖರಿಸಿ ಇರಿಸುತ್ತದೆ. ಶೇಖರಣಾ ಸಾಧನವು ಚೆಕ್‌ಸಮ್ ಅನ್ನು ಸ್ವೀಕರಿಸಿದಾಗ ಖಚಿತಪಡಿಸುತ್ತದೆ, ಮತ್ತು ದತ್ತಾಂಶ ಮತ್ತು ಚೆಕ್‌ಸಮ್ ಎರಡನ್ನೂ ಸಹ ಶೇಖರಿಸಿ ಇರಿಸುತ್ತದೆ. ಇದೇ ರೀತಿ, ಓದುವಿಕೆಯು ಸಂಭವಿಸಿದಾಗ, ಚೆಕ್‌ಸಮ್ ಅನ್ನು ಶೇಖರಣಾ ಸಾಧನದಿಂದ ಮತ್ತು ಸ್ವೀಕರಿಸುವ HBA ಇಂದ ಪರೀಶೀಲಿಸಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ, ಶೇಖರಣೆ ವ್ಯವಸ್ಥಾಪನಾ ಮಾರ್ಗದರ್ಶಿಯಲ್ಲಿನ Block Devices with DIF/DIX Enabled ವಿಭಾಗವನ್ನು ನೋಡಿ.

ಸಮಾನಾಂತರ NFS ಗೆ ಬೆಂಬಲ

ಪ್ಯಾರಲೆಲ್ NFS (pNFS) ಎನ್ನುವುದು ಕ್ಲೈಂಟ್‌ಗಳಿಗೆ ಶೇಖರಣೆಯ ಸಾಧನಗಳನ್ನು ನೇರವಾಗಿ ಮತ್ತು ಸಮಾನಾಂತರವಾಗಿ ನಿಲುಕಿಸಿಕೊಳ್ಳಲು ಅವಕಾಶ ಮಾಡಿಕೊಡುವ NFS v4.1 ಶಿಷ್ಟತೆಯ ಒಂದು ಭಾಗವಾಗಿರುತ್ತದೆ. pNFS ಆರ್ಕಿಟೆಕ್ಚರ್ ಹಲವಾರು ಸಾಮಾನ್ಯ ಕಾರ್ಯಹೊರೆಗಳಿಗಾಗಿ NFS ಪೂರೈಕೆಗಣಕಗಳ ಸ್ಕೇಲೆಬಿಲಿಟಿ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
pNFS 3 ವಿವಿಧ ಶೇಖರಣೆ ಪ್ರೊಟೊಕಾಲ್‌ ಅಥವ ರೂಪವಿನ್ಯಾಸಗಳನ್ನು ಸೂಚಿಸುತ್ತದೆ: ಕಡತಗಳು, ವಸ್ತುಗಳು ಮತ್ತು ಬ್ಲಾಕ್‌ಗಳು. Red Hat Enterprise Linux 7.0 ಕ್ಲೈಂಟ್ ಕಡತಗಳ ರೂಪವಿನ್ಯಾಸವನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ, ಮತ್ತು ಬ್ಲಾಕ್‌ಗಳು ಮತ್ತು ವಸ್ತು ರೂಪವಿನ್ಯಾಸಗಳನ್ನು ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸುತ್ತದೆ.
pNFS ಕುರಿತು ಹೆಚ್ಚಿನ ಮಾಹಿತಿಗಾಗಿ, http://www.pnfs.com/" ಅನ್ನು ನೋಡಿ.

ಅಧ್ಯಾಯ 7. ಕಡತ ವ್ಯವಸ್ಥೆಗಳು

XFS ಕಡತ ವ್ಯವಸ್ಥೆಯ ಬೆಂಬಲ

Red Hat Enterprise Linux 7.0 ನ ಒಂದು Anaconda-ಆಧರಿತವಾದ ಅನುಸ್ಥಾಪನೆಗಾಗಿನ ಪೂರ್ವನಿಯೋಜಿತ ಕಡತ ವ್ಯವಸ್ಥೆಯು ಈಗ XFS ಆಗಿದೆ, ಇದು Red Hat Enterprise Linux 6 ರಲ್ಲಿ ಬಳಸಲಾದ ಫೋರ್ತ್ ಎಕ್ಸ್‌ಟೆಂಡೆಂಡ್ ಕಡತವ್ಯವಸ್ಥೆಯನ್ನು (ext4) ಬದಲಿ ಮಾಡುತ್ತದೆ. ext4 ಮತ್ತು Btrfs (B-Tree) ಕಡತ ವ್ಯವಸ್ಥೆಗಳನ್ನು XFS ಗೆ ಪರ್ಯಾಯವಾಗಿ ಬಳಸಬಹುದಾಗಿರುತ್ತದೆ.
XFS ಎನ್ನುವುದು ಅತ್ಯಂತ ಎನ್ನುವುದು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸಬಹುದಾದ, ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿರುವ ಕಡತವ್ಯವಸ್ಥೆಯಾಗಿದ್ದು, ಇದನ್ನು Silicon Graphics, Inc ಇಂದ ರಚಿಸಲಾಗಿದೆ. ಇದನ್ನು 16 ಎಕ್ಸಾಬೈಟ್‌ಗಳವರೆಗಿನ (ಸುಮಾರು 16 ಮಿಲಿಯನ್ ಟೆರಾಬೈಟ್‌ಗಳು) ಕಡತವ್ಯವಸ್ಥೆಗಳನ್ನು, 8 ಎಕ್ಸಾಬೈಟ್‌ಗಳವರೆಗಿನ (ಸುಮಾರು 8 ಮಿಲಿಯನ್ ಟೆರಾಬೈಟ್‌ಗಳು) ಕಡತಗಳನ್ನು ಮತ್ತು ಹತ್ತಾರು ಮಿಲಿಯನ್‌ ನಮೂದುಗಳನ್ನು ಹೊಂದಿರುವ ಕೋಶ ರಚನೆಯನ್ನು ಬೆಂಬಲಿಸುವಂತೆ ರಚಿಸಲಾಗಿದೆ. XFS ಯು ಕ್ಷಿಪ್ರವಾಗಿ ಕುಸಿತದಿಂದ ಸುಸ್ಥಿತಿಗೆ ಮರಳುವುದನ್ನು ಸುಲಭವಾಗಿಸುವ ಮೆಟಾಡೇಟಾ ಜರ್ನಲಿಂಗ್ ಅನ್ನು ಬೆಂಬಲಿಸುತ್ತದೆ. XFS ಕಡತ ವ್ಯವಸ್ಥೆಗಳನ್ನು ಆರೋಹಿಸಿದಾಗ ಹಾಗು ಸಕ್ರಿಯವಾಗಿದ್ದಾಗಲೆ ತುಂಡರಿಸಲು ಹಾಗು ಗಾತ್ರ ಬದಲಾಯಿಸಲು ಸಾಧ್ಯವಿರುತ್ತದೆ.
ext4 ಮತ್ತು XFSನಲ್ಲಿನ ಸಾಮಾನ್ಯ ಕಾರ್ಯಗಳಿಗಾಗಿ ಬಳಸಲಾಗುವ ಆದೇಶಗಳ ನಡುವಿನ ಬದಲಾವಣೆಗಳ ಕುರಿತಾದ ಮಾಹಿತಿಗಾಗಿ, ಅನುಸ್ಥಾಪನಾ ಮಾರ್ಗದರ್ಶಿಯಲ್ಲಿನ ಉಲ್ಲೇಖ ಕೋಷ್ಟಕವನ್ನು ನೋಡಿ.

IBM System z ಗಾಗಿ libhugetlbfs ಬೆಂಬಲ

libhugetlbfs ಲೈಬ್ರರಿಯು ಈಗ IBM System z ಆರ್ಕಿಟೆಕ್ಚರಿನಲ್ಲಿ ಬೆಂಬಲಿತವಾಗಿದೆ. ಲೈಬ್ರರಿಯು C ಮತ್ತು C++ ಪ್ರೊಗ್ರಾಮ್‌ಗಳಲ್ಲಿನ ದೊಡ್ಡ ಪುಟಗಳನ್ನು ಪಾರದರ್ಶಕವಾಗಿ ಉಪಯೋಗ ಪಡೆದುಕೊಳ್ಳುವುದನ್ನು ಸಕ್ರಿಯಗೊಳಿಸುತ್ತದೆ. ಅನ್ವಯಗಳು ಮತ್ತು ಮಿಡಲ್‌ವೇರ್ ಪ್ರೊಗ್ರಾಮ್‌ಗಳು ಯಾವುದೆ ಬದಲಾವಣೆ ಮಾಡದೆ ಮತ್ತು ಮರುಕಂಪೈಲ್ ಮಾಡದೆ ಕಾರ್ಯನಿರ್ವಹಣೆ ಪ್ರಯೋಜನಗಳಿಂದ ಅಥವ ದೊಡ್ಡ ಪುಟಗಳಿಂದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅಧ್ಯಾಯ 8. ಕರ್ನಲ್

Red Hat Enterprise Linux 7.0 ಅನ್ನು kernel ಆವೃತ್ತಿ 3.10 ರೊಂದಿಗೆ ನೀಡಲಾಗುತ್ತದೆ, ಇದು ಹಲವಾರು ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ, ಅವುಗಳಲ್ಲಿ ಅತ್ಯಂತ ಗಮನಾರ್ಹವಾದವುಗಳನ್ನು ಈ ಕೆಳಗೆ ನೀಡಲಾಗಿದೆ.

ದೊಡ್ಡದಾದ ಕ್ರಾಶ್‌ಕರ್ನಲ್ ಗಾತ್ರಗಳಿಗಾಗಿ ಬೆಂಬಲ ನೀಡುತ್ತದೆ

ದೊಡ್ಡ ಗಾತ್ರದ ಮೆಮೊರಿಯನ್ನು (3TB ವರೆಗೆ) ಹೊಂದಿರುವ ವ್ಯವಸ್ಥೆಗಳಲ್ಲಿ kdump ಕ್ರಾಶ್ ಡಂಪ್ ಮಾಡುವ ರಚನಾವ್ಯವಸ್ಥೆಯನ್ನು Red Hat Enterprise Linux 7.0 ರಲ್ಲಿ ಬೆಂಬಲಿಸಲಾಗುತ್ತದೆ.

1 CPU ಗಿಂತ ಹೆಚ್ಚಿನವುಗಳೊಂದಿಗಿನ ಕ್ರಾಶ್‌ಕರ್ನಲ್

Red Hat Enterprise Linux 7.0 ರಲ್ಲಿ ಒಂದಕ್ಕಿಂತ ಹೆಚ್ಚಿನ CPU ನೊಂದಿಗೆ ಕ್ರಾಶ್‌ಕರ್ನಲ್ ಅನ್ನು ಬೂಟ್ ಮಾಡುವುದನ್ನು ಸಕ್ರಿಯಗೊಳಿಸುತ್ತದೆ. ಈ ಸೌಲಭ್ಯವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ.

ಸ್ವಾಪ್ ಮೆಮೊರಿ ಸಂಕುಚನಗೊಳಿಸುವಿಕೆ

Red Hat Enterprise Linux 7.0 ಒಂದು ಹೊಸ ಸೌಲಭ್ಯವಾದಂತಹ ಸ್ವಾಪ್ ಮೆಮೊರಿಯನ್ನು ಪರಿಚಯಿಸುತ್ತದೆ. ಸ್ವಾಪ್ ಸಂಕುಚನವನ್ನು frontswap ನ ಹಗುರವಾದ ಬ್ಯಾಕೆಂಡ್ ಆದಂತಹ zswap ಮುಖಾಂತರ ಮಾಡಲಾಗುತ್ತದೆ. ಸ್ವಾಪ್ ಮೆಮೊರಿ ಸಂಕುಚನ ತಂತ್ರಜ್ಞಾನವನ್ನು ಬಳಸಿಕೊಳ್ಳುವುದರಿಂದ I/O ತಗ್ಗುವಿಕೆ ಮತ್ತು ಕಾರ್ಯನಿರ್ವಹಣೆಯಲ್ಲಿ ಗಮನಾರ್ಹವಾದ ಸುಧಾರಣೆಗೆ ಕಾರಣವಾಗುತ್ತದೆ.

NUMA-ಅವೇರ್ ಶೆಡ್ಯೂಲಿಂಗ್ ಮತ್ತು ಮೆಮೊರಿ ನಿಯೋಜನೆ

Red Hat Enterprise Linux 7.0 ರಲ್ಲಿ, ನಾನ್-ಯುನಿಫಾರ್ಮ್ ಮೆಮೊರಿ ಎಕ್ಸೆಸ್‌ ಅನ್ನು (NUMA) ಹೊಂದಿರುವ ವ್ಯವಸ್ಥೆಗಳಲ್ಲಿ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಕರ್ನಲ್ ಸ್ವಯಂಚಾಲಿತವಾಗಿ ಅದೇ ವ್ಯವಸ್ಥೆಗಳಲ್ಲಿನ NUMA ನೋಡ್‌ಗಳ ನಡುವೆ ಪ್ರಕ್ರಿಯೆಗಳನ್ನು ಮತ್ತು ಮೆಮೊರಿಯನ್ನು ಸ್ಥಳಾಂತರ ಹೊಂದುತ್ತದೆ.

APIC ವರ್ಚುವಲೈಸೇಶನ್

ವರ್ಚುವಲ್ ಮೆಶೀನ್ ಮಾನೀಟರ್ (VMM) ತಡೆಯ ನಿಭಾಯಿಸುವಿಕೆಯನ್ನು ಸುಧಾರಿಸಲು ಹೊಸ ಸಂಸ್ಕಾರಕಗಳ ಯಂತ್ರಾಂಶ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಮೂಲಕ ಅಡ್ವಾನ್ಸಡ್ ಪ್ರೊಗ್ರಾಮೆಬಲ್ ಇಂಟರಪ್ಟ್ ಕಂಟ್ರೋಲರ್‌ (APIC) ರಿಜಿಸ್ಟರ್‌ಗಳ ವರ್ಚುವಲೈಸೇಶನ್ ಅನ್ನು ಬೆಂಬಲಿಸಲಾಗುತ್ತದೆ.

ಕರ್ನಲ್‌ನಲ್ಲಿ vmcp ನಿರ್ಮಾಣ

Red Hat Enterprise Linux 7.0 ರಲ್ಲಿ, vmcp ಕರ್ನಲ್ ಮಾಡ್ಯೂಲ್ ಅನ್ನು ಕರ್ನಲ್‌ನ ಒಳಗೆಯೆ ನಿರ್ಮಿಸಲಾಗಿರುತ್ತದೆ. ಇದರಿಂದಾಗಿ vmcp ಸಾಧನ ನೋಡ್ ಯಾವಾಗಲೂ ಇರುವಂತೆ ಖಾತ್ರಿಪಡಿಸುತ್ತದೆ, ಮತ್ತು ಬಳಕೆದಾರರು vmcp ಕರ್ನಲ್‌ ಮಾಡ್ಯೂಲ್ ಅನ್ನು ಮೊದಲಿಗೆ ಚಲಾಯಿಸುವ ಅಗತ್ಯವಿರದೆ IBM z/VM ಹೈಪರ್ವೈಸರ್ ನಿಯಂತ್ರಣ ಪ್ರೊಗ್ರಾಮ್ ಆದೇಶಗಳನ್ನು ಕಳುಹಿಸಲು ಸಾಧ್ಯವಿರುತ್ತದೆ.

ಯಂತ್ರಾಂಶ ದೋಷ ವರದಿ ನೀಡಿಕೆಯ ವ್ಯವಸ್ಥೆ

ಪ್ರಸಕ್ತ, ಲಿನಕ್ಸ್‌ನಲ್ಲಿನ ಯಂತ್ರಾಂಶದ ದೋಷವನ್ನು ವರದಿ ಮಾಡುವ ವ್ಯವಸ್ಥೆಯು ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ, ಇದಕ್ಕೆ ಕಾರಣ ಬಹುಷಃ ವಿವಿಧ ವಿಧಾನಗಳೊಂದಿಗೆ ಬೇರೆಬೇರೆ ಮೂಲಗಳಿಂದ ದೋಷಗಳನ್ನು ಸಂಗ್ರಹಿಸುವ ಹಲವಾರು ಉಪಕರಣಗಳು (mcelog ಮತ್ತು EDAC) ಮತ್ತು ದೋಷದ ಘಟನೆಗಳನ್ನು ವರದಿ ಉಪಕರಣಗಳು (mcelog, edac-utils, ಮತ್ತು syslog ನಂತಹ) ಆಗಿರಬಹುದು.
ಯಂತ್ರಾಂಶ ವರದಿ ಮಾಡುವಿಕೆಯಲ್ಲಿನ ತೊಂದರೆಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು:
  • ಹಲವಾರು ಮತ್ತು ಕೆಲವೊಮ್ಮೆ ಎರಡೆರಡು ಬಾರಿ ಮಾಹಿತಿಯನ್ನು ಸಂಗ್ರಹಿಸುವ ವಿವಿಧ ದೋಷ ಮಾಹಿತಿ ಸಂಗ್ರಹಿಸುವ ವ್ಯವಸ್ಥೆಗಳು,
  • ಹಾಗೂ ಈ ಮಾಹಿತಿಯನ್ನು ವಿವಿಧ ಸ್ಥಳಗಳಲ್ಲಿ ವಿವಿಧ ಮುದ್ರೆಗಳೊಂದಿಗೆ ವರದಿ ಮಾಡುವ ವಿವಿಧ ಉಪಕರಣಗಳು, ಇದರಿಂದಾಗಿ ಘಟನೆಗಳ ನಡುವೆ ಸಂಬಂಧ ಕಲ್ಪಿಸಲು ಕಷ್ಟವಾಗುತ್ತದೆ.
Red Hat Enterprise Linux 7.0 ರಲ್ಲಿರುವ ಹೊಸ ಹಾರ್ಡ್‌ವೇರ್ ಇವೆಂಟ್ ರಿಪೋರ್ಟಿಂಗ್ ಮೆಕ್ಯಾನಿಸಮ್, ಅಥವ HERM ಗುರಿಯು ಹಲವು ಸಂಪನ್ಮೂಲಗಳಿಂದ ದೋಷ ಮಾಹಿತಿ ಸಂಗ್ರಹಣೆಯನ್ನು ಒಗ್ಗೂಡಿಸುವುದು ಮತ್ತು ದೋಷ ಘಟನೆಗಳನ್ನು ಬಳಕೆದಾರರ ಸ್ಥಳದಲ್ಲಿನ ಒಂದು ಅನುಕ್ರಮಿತ ಕಾಲಮಾನದಲ್ಲಿ ಮತ್ತು ಒಂದೇ ಸ್ಥಳದಲ್ಲಿ ವರದಿ ಮಾಡುವುದಾಗಿದೆ. Red Hat Enterprise Linux 7.0 ನಲ್ಲಿನ HERM ಒಂದು ಹೊಸ ಬಳಕೆದಾರ ಸ್ಥಳ ಡೀಮನ್ ಆದಂತಹ, rasdaemon ಅನ್ನು ಪರಿಚಯಿಸುತ್ತದೆ, ಇದು ಕರ್ನಲ್ ಟ್ರೇಸಿಂಗ್ ಮೂಲಸೌಕರ್ಯದಿಂದ ಬರುವ ಎಲ್ಲಾ ರಿಲಯಬಿಲಿಟಿ, ಅವೆಲಿಬಿಲಿಟಿ, ಮತ್ತು ಸರ್ವಿಸ್‌ಎಬಿಲಿಟಿ (RAS) ದೋಷ ಘಟನೆಗಳನ್ನು ನಿಭಾಯಿಸುತ್ತದೆ ಮತ್ತು ಅವುಗಳನ್ನು ಲಾಗ್ ಮಾಡುತ್ತದೆ. Red Hat Enterprise Linux 7.0 ನಲ್ಲಿನ HERM ದೋಷಗಳನ್ನು ವರದಿ ಮಾಡುವ ಉಪಕರಣಗಳನ್ನೂ ಸಹ ಒದಗಿಸುತ್ತದೆ ಮತ್ತು ಬರ್ಸ್ಟ್ ಮತ್ತು ಸ್ಪಾರ್ಸ್ ದೋಷಗಳು ಎಂಬಂತಹ ವಿವಿಧ ಬಗೆಯ ದೋಷಗಳನ್ನೂ ಸಹ ಪತ್ತೆ ಮಾಡಲು ಸಾಧ್ಯವಿರುತ್ತದೆ.

ಸಂಪೂರ್ಣ DynTick ಬೆಂಬಲ

nohz_full ಬೂಟ್ ನಿಯತಾಂಕವು ಮೂಲ ಟಿಕ್‌ಲೆಸ್ ಕರ್ನಲ್ ಸೌಲಭ್ಯವನ್ನು per-cpu nr_running=1 ಸಿದ್ಧತೆಯನ್ನು ಬಳಸಿದಾಗ, ಯಾವಾಗ ಟಿಕ್ ಅನ್ನು ನಿಲ್ಲಿಸಬಹುದು ಎಂಬ ಒಂದು ಹೆಚ್ಚುವರಿ ಸನ್ನಿವೇಶಕ್ಕೆ ವಿಸ್ತರಿಸುತ್ತದೆ. ಅಂದರೆ, ಒಂದು CPUನ ಚಾಲನೆ ಸರತಿಯಲ್ಲಿ ಒಂದು ಚಲಾಯಿಸಬಹುದಾದ ಕಾರ್ಯವಿದೆ ಎಂದರ್ಥ.

ಕರ್ನಲ್ ಮಾಡ್ಯೂಲ್‌ಗಳನ್ನು ಬ್ಲಾಕ್‌ಲಿಸ್ಟ್ ಮಾಡುವಿಕೆ

Red Hat Enterprise Linux 7.0 ರಲ್ಲಿ ನೀಡಲಾಗುವ modprobe ಸೌಲಭ್ಯವು ಅನುಸ್ಥಾಪನಾ ಸಮಯದಲ್ಲಿ ಕರ್ನಲ್ ಮಾಡ್ಯೂಲ್ ಅನ್ನು ಬ್ಲಾಕ್‌ಲಿಸ್ಟ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಒಂದು ಮಾಡ್ಯೂಲ್‌ ಸ್ವಯಂಚಾಲಿತವಾಗಿ ಲೋಡ್ ಮಾಡುವುದನ್ನು ಸಾರ್ವತ್ರಿಕವಾಗಿ ನಿಷ್ಕ್ರಿಯಗೊಳಿಸಲು ಈ ಕೆಳಗಿನ ಆದೇಶವನ್ನು ಚಲಾಯಿಸಿ:
modprobe.blacklist=module

ಡೈನಮಿಕ್ ಕರ್ನಲ್ ಪ್ಯಾಚ್ ಮಾಡುವಿಕೆ

Red Hat Enterprise Linux 7.0 ರಲ್ಲಿ ಡೈನಮಿಕ್ ಕರ್ನಲ್ ಪ್ಯಾಚ್ ನಿರ್ವಾಹಕವಾದಂತಹ kpatch ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. kpatch ಅನ್ನು ಬಳಸಿಕೊಂಡು ಬಳಕೆದಾರರು ಕರ್ನಲ್‌ ಅನ್ನು ಮರಳಿ ಬೂಟ್‌ ಮಾಡದೆ ಕ್ರಿಯಾತ್ಮಕವಾಗಿ ಪ್ಯಾಚ್‌ ಮಾಡಲು ನೆರವಾಗುವ ಬೈನರಿ ಕರ್ನಲ್ ಪ್ಯಾಚ್‌ಗಳ ಸಂಗ್ರಹವನ್ನು ನೋಡಿಕೊಳ್ಳಲು ಅವಕಾಶ ಹೊಂದಿರುತ್ತಾರೆ.

ಎಮ್ಯುಲೆಕ್ಸ್ ocrdma ಚಾಲಕ

ಎಮ್ಯುಲೆಕ್ಸ್ ocrdma ಚಾಲಕವನ್ನು Red Hat Enterprise Linux 7.0 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಈ ಚಾಲಕವು ನಿಶ್ಚಿತ ಎಮ್ಯುಲೆಕ್ಸ್ ಅಡಾಪ್ಟರುಗಳ ಮುಖಾಂತರ ರಿಮೋಟ್ ಡೈರೆಕ್ಸ್ ಮೆಮೊರಿ ಎಕ್ಸೆಸ್ (RDMA) ಸಾಮರ್ಥ್ಯಗಳನ್ನು ಒದಗಿಸುತ್ತದೆ.

dm-era ಗುರಿ

Red Hat Enterprise Linux 7.0 ರಲ್ಲಿ dm-era device-mapper ಗುರಿಯನ್ನು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. dm-era ವು ಯಾವ ಬ್ಲಾಕ್‌ ಅನ್ನು "era" ಎಂದು ಕರೆಯಲಾಗುವ ಬಳಕೆದಾರ-ಸೂಚಿತ ಅವಧಿಯ ಒಳಗೆ ಯಾವ ಬ್ಲಾಕ್‌ ಅನ್ನು ಬರೆಯಲಾಗಿದೆ ಎಂಬ ಜಾಡನ್ನು ಇರಿಸುತ್ತದೆ. ಪ್ರತಿ era ಗುರಿ ಸನ್ನಿವೇಶವು ಪ್ರಸಕ್ತ era ಅನ್ನು ಏಕತಾನತೆಯಿಂದ ಹೆಚ್ಚಳಗೊಳ್ಳುವ 32-ಬಿಟ್ ಕೌಂಟರ್ ಆಗಿರುವಂತೆ ನೋಡಿಕೊಳ್ಳುತ್ತದೆ. ಈ ಗುರಿಯು ಹಿಂದಿನ ಬಾರಿಯ ಬ್ಯಾಕ್‌ಅಪ್‌ನ ನಂತರ ಯಾವ ಬ್ಲಾಕ್‌ಗಳು ಬದಲಾಗಿವೆ ಎಂಬುದರ ಜಾಡನ್ನು ಇರಿಸಲು ಬ್ಯಾಕ್ಅಪ್ ತಂತ್ರಾಂಶಕ್ಕೆ ನೆರವಾಗುತ್ತದೆ. ಇದು ವೆಂಡರ್ ಸ್ನ್ಯಾಪ್‌ಶಾಟ್‌ಗೆ ಹಿಮ್ಮರಳಿದ ನಂತರ ಕ್ಯಾಶ್ ಸುಸಂಬದ್ಧಗೊಳಿಕೆಯನ್ನು ಮರುಸ್ಥಾಪಿಸಲು ಕ್ಯಾಶ್‌ನ ಕಂಟೆಂಟ್‌ಗಳ ಆಂಶಿಕ ಅಮಾನ್ಯಗೊಳಿಕೆಗೂ ಸಹ ಅವಕಾಶ ನೀಡುತ್ತದೆ. dm-era ಗುರಿಯು ಪ್ರಾಥಮಿಕವಾಗಿ dm-cache ಗುರಿಯೊಂದಿಗೆ ಜೋಡಿಯಾಗಿರಬೇಕು ಎಂದು ನಿರೀಕ್ಷಿಸಲಾಗಿದೆ.

ಅಧ್ಯಾಯ 9. ವರ್ಚುವಲೈಸೇಶನ್

9.1. ಕರ್ನಲ್-ಆಧರಿತ ವರ್ಚುವಲೈಸೇಶನ್

virtio-blk-data-plane ಬಳಸಿಕೊಂಡು ಸುಧಾರಿತ ಬ್ಲಾಕ್ I/O ಕಾರ್ಯನಿರ್ವಹಣೆ

Red Hat Enterprise Linux 7.0 ರಲ್ಲಿ, virtio-blk-data-plane I/O ವರ್ಚುವಲೈಸೇಶನ್ ಕಾರ್ಯಶೀಲತೆಯು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಈ ಕ್ರಿಯಾಶೀಲತೆಯನ್ನು I/O ಕಾರ್ಯನಿರ್ವಹಣೆಗಾಗಿ ಸೂಕ್ತಗೊಳಿಸಲಾದ ಒಂದು ಮೀಸಲಾದ ತ್ರೆಡ್‌ನಲ್ಲಿ ಡಿಸ್ಕ್ I/O ಅನ್ನು ನಿರ್ವಹಿಸಲು QEMU ಗೆ ವಿಸ್ತರಿಸಲಾಗಿದೆ.

PCI ಬ್ರಿಜ್

QEMU ಈ ಹಿಂದೆ ಕೇವಲ 32 PCI ಸ್ಲಾಟ್‌ಗಳ ವರೆಗೆ ಮಾತ್ರ ಬೆಂಬಲ ಹೊಂದಿತ್ತು. Red Hat Enterprise Linux 7.0 ರಲ್ಲಿ PCI ಬ್ರಿಜ್ ಅನ್ನು ಸೇರಿಸಲಾಗಿದ್ದು, ಇದು ಬಳಕೆದಾರರಿಗೆ 32 PCI ಸಾಧನಗಳಿಗಿಂತ ಹೆಚ್ಚಿನವುಗಳನ್ನು ಸಂರಚಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಬ್ರಿಜ್‌ನ ಹಿಂಭಾಗದಲ್ಲಿ ಸಾಧನಗಳನ್ನು ಹಾಟ್ ಪ್ಲಗ್‌ ಮಾಡುವುದನ್ನು ಬೆಂಬಲಿಸಲಾಗುವುದಿಲ್ಲ ಎಂಬುದನ್ನು ನೆನಪಿಡಿ.

QEMU ಸ್ಯಾಂಡ್‌ಬಾಕ್ಸಿಂಗ್

Red Hat Enterprise Linux 7.0 ರಲ್ಲಿ ಕರ್ನಲ್ ವ್ಯವಸ್ಥೆ ಕಾಲ್ ಫಿಲ್ಟರ್ ಮಾಡುವಿಕೆಯ ಮುಖಾಂತರ ಸುಧಾರಿತ KVM ವರ್ಚುವಲೈಸೇಶನ್ ಸುರಕ್ಷತೆಯನ್ನು ಹೊಂದಿರುತ್ತದೆ, ಇದರಿಂದಾಗಿ ಆತಿಥೇಯ ವ್ಯವಸ್ಥೆ ಮತ್ತು ಅತಿಥಿಯ ನಡುವಿನ ಪ್ರತ್ಯೇಕಗೊಳಿಕೆಯನ್ನು ಸುಧಾರಿಸುತ್ತದೆ.

QEMU ವರ್ಚುವಲ್ CPU ಹಾಟ್ ಸೇರಿಸುವಿಕೆಯ ಬೆಂಬಲ

Red Hat Enterprise Linux 7.0 ರಲ್ಲಿನ QEMU ನಲ್ಲಿ ವರ್ಚುವಲ್ CPU (vCPU) ಅನ್ನು ಹಾಟ್ ಸೇರಿಸುವಿಕೆಯ ಬೆಂಬಲವನ್ನು ಸೇರಿಸಲಾಗಿದೆ. ವರ್ಚುವಲ್ CPUಗಳನ್ನು (vCPUಗಳು) ಚಾಲನೆಯಲ್ಲಿರುವ ವರ್ಚುವಲ್ ಗಣಕಗಳಿಗೆ ಕೆಲಸದ ಹೊರೆಯ ಬೇಡಿಕೆಯನ್ನು ಪೂರೈಸಲು ಅಥವ ಸರ್ವಿಸ್ ಲೆವೆಲ್ ಅಗ್ರೀಮೆಂಟ್‌ (SLA) ಅನ್ನು ನೋಡಿಕೊಳ್ಳಲು ಸೇರಿಸಬಹುದಾಗಿರುತ್ತದೆ. vCPU ಹಾಟ್‌ ಪ್ಲಗ್ ಮಾಡುವಿಕೆಯನ್ನು ಕೇವಲ pc-i440fx-rhel7.0.0 ಗಣಕದ ಬಗೆಯನ್ನು ಬಳಸುವ ವರ್ಚುವಲ್ ಗಣಕಗಳಲ್ಲಿ ಮಾತ್ರ ಬಳಸಲಾಗುತ್ತದೆ ಎನ್ನುವುದನ್ನು ನೆನಪಿಡಿ.

ಬಹು ಸರತಿಯ NICಗಳು

ಬಹು ಸರತಿಯ virtio_net ಉತ್ತಮ ಸ್ಕೇಲೆಬಿಲಿಟಿಯನ್ನು ಒದಗಿಸುತ್ತದೆ; ಪ್ರತಿ ವರ್ಚುವಲ್ CPU ಸಹ ಇತರೆ CPU ಗಳ ಮೇಲೆ ಯಾವುದೆ ಪರಿಣಾಮ ಬೀರದೆ ಇರುವಂತೆ ಒಂದು ಪ್ರತ್ಯೇಕ ಪ್ರಸಾರ ಅಥವ ಸರತಿಯನ್ನು ಮತ್ತು ಪ್ರತ್ಯೇಕ ತಡೆಗಳನ್ನು ಹೊಂದಿರುತ್ತದೆ.

ಬಹು ಸರತಿಯ virtio_scsi

ಬಹು ಸರತಿಯ virtio_scsi ಉತ್ತಮ ಸ್ಕೇಲೆಬಿಲಿಟಿಯನ್ನು ಒದಗಿಸುತ್ತದೆ; ಪ್ರತಿ ವರ್ಚುವಲ್ CPU ಸಹ ಇತರೆ CPU ಗಳ ಮೇಲೆ ಯಾವುದೆ ಪರಿಣಾಮ ಬೀರದೆ ಇರುವಂತೆ ಒಂದು ಪ್ರತ್ಯೇಕ ಸರತಿಯನ್ನು ಮತ್ತು ತಡೆಗಳನ್ನು ಹೊಂದಿರುತ್ತದೆ.

ಲೈವ್ ವರ್ಗಾವಣೆಗಾಗಿ ಪುಟದ ಡೇಲ್ಟಾ ಸಂಕುಚನಗೊಳಿಕೆ

ಅತಿಥಿ ಮೆಮೊರಿ ಪುಟಗಳನ್ನು ಸಂಕುಚನಗೊಳಿಸುವ ಮತ್ತು ವರ್ಗಾಯಿಸಲಾದ ವರ್ಗಾವಣೆ ದತ್ತಾಂಶದ ಗಾತ್ರವನ್ನು ಕಡಿಮೆ ಮಾಡುವ ಮೂಲಕ KVM ಲೈವ್ ವರ್ಗಾವಣೆ ಸೌಲಭ್ಯವನ್ನು ಸುಧಾರಿಸಲಾಗಿದೆ. ಈ ಸೌಲಭ್ಯವು ವರ್ಗಾವಣೆಯು ವೇಗವಾಗಿ ಒಂದೆಡೆ ಸೇರುವಂತೆ ಮಾಡುತ್ತದೆ.

KVM ನಲ್ಲಿನ HyperV Enlightenment

KVM ಅನ್ನು ಹಲವಾರು Microsoft Hyper-V ಕ್ರಿಯೆಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ; ಉದಾಹರಣೆಗೆ, ಮೆಮೊರಿ ಮ್ಯಾನೇಜ್ಮೆಂಟ್ ಯುನಿಟ್ (MMU) ಮತ್ತು ವರ್ಚುವಲ್ ಇಂಟರಪ್ಟ್ ಕಂಟ್ರೋಲರ್‌ಗಾಗಿನ ಬೆಂಬಲ. Microsoft ಅತಿಥಿ ಮತ್ತು ಆತಿಥೇಯದ ನಡುವೆ ಒಂದು ಪ್ಯಾರಾ-ವರ್ಚುವಲ್ ಆದಂತಹ API ಅನ್ನು ಒದಗಿಸುತ್ತದೆ, ಮತ್ತು ಈ ಕ್ರಿಯಾಶೀಲತೆಯ ಭಾಗಗಳನ್ನು ಅಳವಡಿಸಿಕೊಳ್ಳುವ, ಮತ್ತು Microsoft ನ ಸ್ಪಷ್ಟಪಡಿಕೆಗಳ ಮೇರೆಗೆ ತೋರಿಸುವ ಮೂಲಕ, Microsoft Windows ಅತಿಥಿಗಳು ತಮ್ಮ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಿಕೊಳ್ಳುತ್ತವೆ.

ಹೆಚ್ಚಿನ ಬ್ಯಾಂಡ್‌ವಿಡ್ತ್ I/O ಗಾಗಿ EOI ವೇಗವರ್ಧನೆ

Red Hat Enterprise Linux 7.0 ತಡೆಯ ಅಂತ್ಯದ (EOI) ಸಂಸ್ಕರಣೆಯನ್ನು ವೇಗವರ್ಧನೆಗೊಳಿಸಲು ಅಡ್ವಾನ್ಸಡ್ ಪ್ರೊಗ್ರಾಮೆಬಲ್ ಇಂಟರಪ್ಟ್ ಕಂಟ್ರೋಲರ್ (APIC) ಗೆ Intel ಮತ್ತು AMD ಸುಧಾರಣೆಗಳನ್ನು ಬಳಸಿಕೊಳ್ಳುತ್ತದೆ. ಹಳೆಯ ಚಿಪ್‌ಸೆಟ್‌ಗಳಲ್ಲಿ, EOI ವೇಗವರ್ಧನೆಗಾಗಿ Red Hat Enterprise Linux 7.0 ನಲ್ಲಿ ಪ್ಯಾರಾ-ವರ್ಚುವಲೈಸೇಶನ್ ಆಯ್ಕೆಗಳನ್ನು ಒದಗಿಸುತ್ತದೆ.

KVM ಅತಿಥಿಗಳಿಗೆ USB 3.0 ಬೆಂಬಲ

Red Hat Enterprise Linux 7.0 ರಲ್ಲಿ USB 3.0 ಹೋಸ್ಟ್‌ಅಡಾಪ್ಟರ್ (xHCI) ಎಮ್ಯುಲೇಶನ್ ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಸೇರಿಸುವ ಮೂಲಕ ಸುಧಾರಿತ USB ಬೆಂಬಲವನ್ನು ಹೊಂದಿರುತ್ತದೆ.

Windows 8 ಮತ್ತು Windows Server 2012 ಅತಿಥಿ ಬೆಂಬಲ

Red Hat Enterprise Linux 7.0 ರಲ್ಲಿ KVM ವರ್ಚುವಲ್ ಗಣಕಗಳ ಒಳಗೆ ಚಲಾಯಿತಗೊಳ್ಳುತ್ತಿರುವ Microsoft Windows 8 ಮತ್ತು Windows Server 2012 ಅತಿಥಿಗಳನ್ನು ಬೆಂಬಲಿಸಲಾಗುತ್ತದೆ.

QEMU ಅತಿಥಿಗಳಿಗಾಗಿ I/O ತ್ರಾಟಲಿಂಗ್

ಈ ಸೌಲಭ್ಯವು QEMU ಅತಿಥಿಗಳ ಬ್ಲಾಕ್ ಸಾಧನಗಳಿಗಾಗಿ I/O ತ್ರಾಟಲಿಂಗ್, ಅಥವ ಮಿತಿಗಳನ್ನು ಒದಗಿಸುತ್ತದೆ. I/O ತ್ರಾಟಲಿಂಗ್ I/O ಮೆಮೊರಿ ಮನವಿಗಳ ಸಂಸ್ಕರಣೆಯನ್ನು ನಿಧಾನಗೊಳಿಸುತ್ತದೆ ಆದರೆ ಅದು ಕುಸಿತಗೊಳ್ಳದಂತೆ ತಡೆಯುತ್ತದೆ. ಇದು ತ್ರಾಟಲ್ ದತ್ತಾಂಶ ಸಮತಲಗಳಲ್ಲಿ ಸಾಧ್ಯವಿರುವುದಿಲ್ಲ ಎನ್ನುವುದನ್ನು ನೆನಪಿಡಿ.

ಬಲೂನಿಂಗ್ ಮತ್ತು ಟ್ರಾನ್ಸ್‌ಪರೆಂಟ್ ಹ್ಯೂಜ್ ಪೇಜಸ್‌ ಸಂಘಟನೆ

ಬಲೂನಿಂಗ್ ಮತ್ತು ಟ್ರಾನ್ಸ್‌ಪರೆಂಟ್ ಹ್ಯೂಜ್ ಪೇಜಸ್‌ ಅನ್ನು Red Hat Enterprise Linux 7.0 ರಲ್ಲಿ ಉತ್ತಮವಾಗಿ ಸಂಘಟಿಸಲಾಗಿದೆ. ಬಲೂನ್ ಪುಟಗಳನ್ನು ಹ್ಯೂಜ್ ಪುಟಗಳಾಗುವಂತೆ ಸ್ಥಳಾಂತರಿಸಬಹುದು ಮತ್ತು ಸಂಕುಚನಗೊಳಿಸಬಹುದು.

ಆತಿಥೇಯದಿಂದ ಸಿಸ್ಟಮ್ ಎಂಟ್ರೋಪಿಯನ್ನು ಸೆಳೆದುಕೊಳ್ಳುವಿಕೆ

ಒಂದು ಹೊಸ ಸಾಧನವಾದ virtio-rng ಅನ್ನು ಅತಿಥಿಗಳಿಗಾಗಿ ಸಂರಚಿಸಬಹುದಾಗಿದ್ದು ಇದು ಅತಿಥಿಗಳಿಗಾಗಿ ಆತಿಥೇಯಗಳಿಂದ ಎಂಟ್ರೋಪಿಯನ್ನು ಲಭ್ಯವಾಗುವಂತೆ ಮಾಡುತ್ತದೆ. ಪೂರ್ವನಿಯೋಜಿತವಾಗಿ, ಈ ಮಾಹಿತಿಯು /dev/random ಕಡತದಿಂದ ಬಂದಿರುತ್ತದೆ, ಆದರೆ ಆತಿಥೇಯದಲ್ಲಿ ಲಭ್ಯವಿರುವ ಯಂತ್ರಾಂಶದ ರ‌್ಯಾಂಡಮ್ ನಂಬರ್ ಜನರೇಟರ್ (RNGಗಳು) ಅನ್ನು ಇದರ ಮೂಲವಾಗಿಯೂ ಸಹ ಬಳಸಬಹುದು.

ಬ್ರಿಜ್ ಜ಼ೀರೊ ಕಾಪಿ ಟ್ರಾನ್ಸ್‌ಮಿಟ್

ಬ್ರಿಜ್ ಜ಼ೀರೊ-ಕಾಪಿ ಟ್ರಾನ್ಸ್‌ಮಿಟ್ ಎನ್ನುವುದು ದೊಡ್ಡ ಸಂದೇಶಗಳ CPU ಸಂಸ್ಕರಣೆಯನ್ನು ಸುಧಾರಿಸುವ ಒಂದು ಕಾರ್ಯನಿರ್ವಹಣಾ ಸೌಲಭ್ಯವಾಗಿದೆ. ಬ್ರಿಜ್ ಜ಼ೀರೊ-ಕಾಪಿ ಟ್ರಾನ್ಸ್‌ಮಿಟ್ ಸೌಲಭ್ಯವು ಒಂದು ಬ್ರಿಜ್ ಅನ್ನು ಬಳಸುವಾಗ ಅತಿಥಿಯಿಂದ ಬಾಹ್ಯ ಟ್ರಾಫಿಕ್‌ಗೆ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.

ಲೈವ್ ವರ್ಗಾವಣೆ ಬೆಂಬಲ

ಅತಿಥಿಯನ್ನು Red Hat Enterprise Linux 6.5 ಇಂದ ಒಂದು Red Hat Enterprise Linux 7.0 ಆತಿಥೇಯಕ್ಕೆ ಲೈವ್ ವರ್ಗಾವಣೆ ಮಾಡುವುದಕ್ಕೆ ಬೆಂಬಲ ನೀಡಲಾಗುತ್ತದೆ.

qemu-kvm ನಲ್ಲಿ ತ್ಯಜಿಸುವ ಬೆಂಬಲ

fstrim ಅಥವ mount -o discard ಆದೇಶವನ್ನು ಬಳಸಿಕೊಂಡು ತ್ಯಜಿಸುವಿಕೆಯ ಬೆಂಬಲವು, ಡೊಮೇನ್‌ನ XML ವಿವರಣೆಯಲ್ಲಿನ <driver> ಘಟಕಕ್ಕೆ discard='unmap' ಅನ್ನು ಸೇರಿಸಿದ ನಂತರ ಅತಿಥಿಗಳಲ್ಲಿ ಕೆಲಸ ಮಾಡುತ್ತದೆ. ಉದಾಹರಣೆಗೆ:
<disk type='file' device='disk'>
	<driver name='qemu' type='raw' discard='unmap'/>
  <source file='/var/lib/libvirt/images/vm1.img'>
  ...
</disk>

NVIDIA GPU ಸಾಧನ ನಿಯೋಜನೆ

Red Hat Enterprise Linux 7.0 ಎಮ್ಯುಲೇಟ್ ಆದ VGA ಗೆ ಎರಡನೆಯ ಗ್ರಾಫಿಕ್ಸ್ ಸಾಧನವಾಗಿ NVIDIA ಪ್ರೊಫೆಶನಲ್ ಸರಣಿಯ ಗ್ರಾಫಿಕ್ಸ್ ಸಾಧನಗಳ (GRID ಮತ್ತು Quadro) ಸಾಧನ ನಿಯೋಜನೆಯನ್ನು ಬೆಂಬಲಿಸುತ್ತದೆ.

ಪ್ಯಾರಾ-ವರ್ಚುವಲ್ ಆದ ಟಿಕೆಟ್‌ಲಾಕ್‌ಗಳು

Red Hat Enterprise Linux 7.0 ರಲ್ಲಿ ಅತಿಚಂದಾದಾರಗೊಂಡ CPUಗಳನ್ನು ಹೊಂದಿರುವ Red Hat Enterprise Linux 7.0 ಆತಿಥೇಯಗಳಲ್ಲಿ ಚಲಾಯಿತಗೊಳ್ಳುತ್ತಿರುವ Red Hat Enterprise Linux 7.0 ಅತಿಥಿ ವರ್ಚುವಲ್ ಗಣಕಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಪ್ಯಾರಾ-ವರ್ಚುವಲ್ ಆದ ಟಿಕೆಟ್‌ಲಾಕ್‌ಗಳನ್ನು (pvticketlocks) ಬೆಂಬಲಿಸಲಾಗುತ್ತದೆ.

ನಿಯೋಜಿತಗೊಂಡ PCIe ಸಾಧನಗಳಲ್ಲಿ ತೊಂದರೆ ನಿಭಾಯಿಸುವಿಕೆ

ಅಡ್ವಾನ್ಸಡ್ ಎರರ್ ರಿಪೋರ್ಟಿಂಗ್ (AER) ಅನ್ನು ಹೊಂದಿರುವ ಒಂದು PCIe ಸಾಧನವನ್ನು ಒಂದು ಅತಿಥಿಗೆ ನಿಯೋಜಿಸಿದಾಗ ದೋಷವು ಎದುರಾದಲ್ಲಿ, ಚಲಾಯಿತಗೊಳ್ಳುತ್ತಿರುವ ಇತರೆ ಯಾವುದೆ ಅತಿಥಿಗಳು ಮತ್ತು ಆತಿಥೇಯಗಳ ಮೇಲೆ ಯಾವುದೆ ಪರಿಣಾಮವಾಗದಂತೆ ಕೇವಲ ತೊಂದರೆ ಉಂಟಾದ ಅತಿಥಿಯನ್ನು ಮಾತ್ರ ಸ್ಥಗಿತಗೊಳಿಸಲಾಗುತ್ತದೆ. ಸಾಧನಕ್ಕಾಗಿನ ಆತಿಥೇಯ ಚಾಲಕವು ತೊಂದರೆಯಿಂದ ಚೇತರಿಕೆ ಹೊಂದಿದ ನಂತರ ಅತಿಥಿಗಳನ್ನು ಮತ್ತೆ ಚಾಲನೆಗೊಳಿಸಬಹುದು.

Q35 ಚಿಪ್‌ಸೆಟ್, PCI ಎಕ್ಸ್‌ಪ್ರೆಸ್ Bus ಮತ್ತು AHCI ಬಸ್‌ ಎಮ್ಯುಲೇಶನ್

KVM ಅತಿಥಿ ವರ್ಚುವಲ್ ಗಣಕಗಳಲ್ಲಿ PCI ಎಕ್ಸ್‌ಪ್ರೆಸ್‌ ಬಸ್‌ಗಾಗಿ ಅಗತ್ಯವಿರುವ Q35 ಗಣಕದ ಬಗೆಯನ್ನು ಈಗ Red Hat Enterprise Linux 7.0 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಒಂದು AHCI ಬಸ್ ಕೇವಲ Q35 ಗಣಕದ ಬಗೆಯಲ್ಲಿ ಸೇರಿಸಲು ಮಾತ್ರ ಬೆಂಬಲಿಸಲಾಗುತ್ತದೆ ಮತ್ತು ಇದು Red Hat Enterprise Linux 7.0 ರಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿಯೂ ಸಹ ಲಭ್ಯವಿದೆ.

VFIO-ಆಧರಿತ PCI ಸಾಧನ ನಿಯೋಜನೆ

ವರ್ಚುವಲ್ ಫಂಕ್ಶನ್ I/O (VFIO) ಬಳಕೆದಾರ-ಸ್ಥಳ ಚಾಲಕ ಸಂಪರ್ಕಸಾಧನವು ಸುಧಾರಿತ PCI ಸಾಧನ ನಿಯೋಜನಾ ಪರಿಹಾರದೊಂದಿಗೆ KVM ಅತಿಥಿ ವರ್ಚುವಲ್ ಗಣಕಗಳನ್ನು ಒದಗಿಸುತ್ತದೆ. VFIO ಯು ಕರ್ನಲ್-ಮಟ್ಟದ ಸಾಧನ ಬೇರ್ಪಡಿಕೆಯ ಜಾರಿಗೊಳಿಕೆಯನ್ನು ಒದಗಿಸುತ್ತದೆ, ಇದು ಸಾಧನದ ನಿಲುಕಿನ ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಸುರಕ್ಷತಾ ಬೂಟ್‌ನಂತಹ ಸೌಲಭ್ಯಗಳೊಂದಿಗೆ ಹೊಂದಿಕೆಯಾಗುತ್ತದೆ. VFIO ವು Red Hat Enterprise Linux 6 ರಲ್ಲಿ ಬಳಸಲಾಗುತ್ತಿದ್ದಂತಹ KVM ಸಾಧನ ನಿಯೋಜನೆಯನ್ನು ಬದಲಾಯಿಸುತ್ತದೆ.

Intel VT-d ಲಾರ್ಜ್ ಪೇಜಸ್

Red Hat Enterprise Linux 7.0 ರಲ್ಲಿ ಒಂದು KVM ಅತಿಥಿ ವರ್ಚುವಲ್ ಗಣಕದೊಂದಿಗೆ ವರ್ಚುವಲ್ ಫಂಕ್ಶನ್ I/O (VFIO) ಸಾಧನ ನಿಯೋಜನೆಯನ್ನು ಬಳಸುವಾಗ, 2MB ಪುಟಗಳನ್ನು ಇನ್‌ಪುಟ್/ಔಟ್‌ಪುಟ್ ಮೆಮೊರಿ ಮ್ಯಾನೇಜ್ಮೆಂಟ್ ಯುನಿಟ್ (IOMMU) ಇಂದ ಬಳಸಲಾಗುತ್ತದೆ, ಆ ಮೂಲಕ I/O ಕಾರ್ಯಾಚರಣೆಗಳಿಗಾಗಿನ ಟ್ರಾನ್ಸಲೇಶನ್ ಲುಕ್‌ಅಸೈಡ್ ಬಫರ್ (TLB) ಓವರ್ಹೆಡ್ ಅನ್ನು ಕಡಿಮೆ ಮಾಡುತ್ತದೆ. 1GB ಪುಟದ ಬೆಂಬಲವನ್ನು Red Hat Enterprise Linux 7.0 ರಲ್ಲಿ ನೀಡಲು ಯೋಜಿಸಲಾಗಿದೆ. VT-d ಲಾರ್ಜ್ ಪೇಜ್‌ಗಳ ಸೌಲಭ್ಯವನ್ನು ಕೇವಲ ನಿರ್ದಿಷ್ಟ ಇತ್ತೀಚಿನ Intel-ಆಧರಿತವಾದ ಪ್ಲಾಟ್‌ಫಾರ್ಮುಗಳಲ್ಲಿ ಮಾತ್ರ ಬೆಂಬಲಿಸಲಾಗುತ್ತದೆ.

KVM ಕ್ಲಾಕ್ ಗೆಟ್ ಟೈಮ್ ಕಾರ್ಯನಿರ್ವಹಣೆ

Red Hat Enterprise Linux 7.0 ರಲ್ಲಿ vsyscall ರಚನಾವ್ಯವಸ್ಥೆಯನ್ನು KVM ಅತಿಥಿಗಳಿಗಾಗಿನ ಬಳಕೆದಾರ ಸ್ಥಳದಿಂದ ಗಡಿಯಾರದ ವೇಗದ ಓದುವಿಕೆಯನ್ನು ಬೆಂಬಲಿಸುವಂತೆ ಉತ್ತಮಗೊಳಿಸಲಾಗಿದೆ. Red Hat Enterprise Linux 7.0 ಆತಿಥೇಯದ ಮೇಲೆ ಚಲಾಯಿತಗೊಳ್ಳುತ್ತಿರುವ Red Hat Enterprise Linux 7.0 ಅತಿಥಿ ವರ್ಚುವಲ್ ಗಣಕವು ದಿನದ ಸಮಯವನ್ನು ಪದೇ ಪದೇ ಓದುವ ಅನ್ವಯಗಳಿಗಾಗಿ ಸುಧಾರಿತ ಕಾರ್ಯಕ್ಷಮತೆಯನ್ನು ಕಾಣಬಹುದಾಗಿರುತ್ತದೆ.

QCOW2 ಆವೃತ್ತಿ 3 ಚಿತ್ರಿಕಾ ವಿನ್ಯಾಸ

Red Hat Enterprise Linux 7.0 ರಲ್ಲಿ QCOW2 ಆವೃತ್ತಿ 3 ಚಿತ್ರಿಕಾ ವಿನ್ಯಾಸಕ್ಕೆ ಬೆಂಬಲ ನೀಡಲಾಗುತ್ತದೆ

ಸುಧಾರಿತ ಲೈವ್ ವರ್ಗಾವಣೆ ಅಂಕಿಅಂಶಗಳು

ಲೈವ್ ವರ್ಗಾವಣೆಯ ಕುರಿತಾದ ಮಾಹಿತಿಯು ಕಾರ್ಯನಿರ್ವಹಣೆಯನ್ನು ವಿಶ್ಲೇಷಿಸಲು ಮತ್ತು ಟ್ಯೂನ್‌ ಮಾಡಲು ಈಗ ಲಭ್ಯವಿರುತ್ತದೆ. ಸುಧಾರಿತ ಅಂಕಿಅಂಶಗಳು ನಿರೀಕ್ಷಿತ ಸ್ಥಗಿತಸಮಯ, ಸ್ಥಗಿತಸಮಯ ಅಥವ ಡರ್ಟಿ ಪುಟಗಳ ದರದ ಕುರಿತಾದ ಮಾಹಿತಿಯನ್ನು ಹೊಂದಿರುತ್ತದೆ.

ಲೈವ್ ವರ್ಗಾವಣೆ ತ್ರೆಡ್‌ಗಳು

ತ್ರೆಡಿಂಗ್ ಅನ್ನು ಬೆಂಬಲಿಸಲಾಗುವಂತೆ KVM ಲೈವ್ ವರ್ಗಾವಣೆ ಸೌಲಭ್ಯವನ್ನು ಸುಧಾರಿಸಲಾಗಿದೆ.

ಕ್ಯಾರೆಕ್ಟರ್ ಸಾಧನಗಳು ಮತ್ತು ಅನುಕ್ರಮ ಸಂಪರ್ಕಸ್ಥಾನಗಳನ್ನು ಹಾಟ್‌ ಪ್ಲಗ್ ಮಾಡುವಿಕೆ

Red Hat Enterprise Linux 7.0 ರಲ್ಲಿ ಕ್ಯಾರೆಕ್ಟರ್ ಸಾಧನಗಳು ಮತ್ತು ಹೊಸ ಅನುಕ್ರಮ ಸಂಪರ್ಕಸ್ಥಾನಗಳನ್ನು ಹಾಟ್‌ ಪ್ಲಗ್ ಮಾಡುವಿಕೆಗೆ ಈಗ ಬೆಂಬಲಿಸಲಾಗುತ್ತದೆ.

AMD Opteron G5 ನ ಎಮ್ಯುಲೇಶನ್

KVM ಈಗ AMD Opteron G5 ಸಂಸ್ಕಾರಕಗಳನ್ನು ಎಮ್ಯುಲೇಟ್ ಮಾಡಲು ಸಮರ್ಥವಾಗಿದೆ.

KVM ಅತಿಥಿಗಳಲ್ಲಿ New Intel Instructions ನ ಬೆಂಬಲ

KVM ಅತಿಥಿಗಳು ಈಗ Intel 22nm ಸಂಸ್ಕಾರಕಗಳಿಂದ ಬೆಂಬಲಿಸಲಾಗುವ ಹೊಸ ಸೂಚನೆಗಳನ್ನು ಬಳಸಬಹುದು. ಅವುಗಳೆಂದರೆ:
  • ಫ್ಲೋಟಿಂಗ್-ಪಾಯಿಂಟ್ ಫ್ಯೂಸ್ಡ್ ಮಲ್ಟಿಪಲ್-ಆಡ್
  • 256-ಬಿಟ್ ಪೂರ್ಣಾಂಕ ವೆಕ್ಟರ್‌ಗಳು,
  • ಬಿಗ್-ಎಂಡಿಯನ್ ಮೂವ್ ಇನ್‌ಸ್ಟ್ರಕ್ಶನ್ (MOVBE) ಬೆಂಬಲ,
  • ಅಥವ HLE/HLE+.

VPC ಮತ್ತು VHDX ಕಡತ ವಿನ್ಯಾಸಗಳು

Red Hat Enterprise Linux 7.0 ರಲ್ಲಿನ KVM ಈಗ Microsoft Virtual PC (VPC) ಮತ್ತು Microsoft Hyper-V ವರ್ಚುವಲ್ ಹಾರ್ಡ್ ಡಿಸ್ಕ್ (VHDX) ಕಡತ ವಿನ್ಯಾಸಗಳಿಗಾಗಿನ ಬೆಂಬಲವನ್ನು ಹೊಂದಿರುತ್ತದೆ.

libguestfs ನಲ್ಲಿ ಹೊಸ ಸೌಲಭ್ಯಗಳು

libguestfs ಎನ್ನುವುದು ವರ್ಚುವಲ್ ಗಣಕ ಡಿಸ್ಕ್ ಚಿತ್ರಿಕೆಗಳನ್ನು ನಿಲುಕಿಸಿಕೊಳ್ಳಲು ಮತ್ತು ಮಾರ್ಪಡಿಸಲು ಇರುವ ಉಪಕರಣಗಳ ಸಂಗ್ರಹವಾಗಿದೆ. Red Hat Enterprise Linux 7.0 ರಲ್ಲಿ ಸೇರಿಸಲಾದ libguestfs ಹಲವಾರು ಸುಧಾರಣೆಗಳನ್ನು ಹೊಂದಿದೆ, ಅವುಗಳಲ್ಲಿ ಗಮನಾರ್ಹವಾದವುಗಳೆಂದರೆ:
  • SELinux, ಅಥವ sVirt ಸಂರಕ್ಷಣೆಯನ್ನು ಬಳಸಿಕೊಂಡು ಸೆಕ್ಯೂರ್ ವರ್ಚುವಲೈಸೇಶನ್, ಅಪಾಯಕಾರಿ ಮತ್ತು ತಪ್ಪಾಗಿರುವ ಡಿಸ್ಕ್ ಚಿತ್ರಿಕೆಗಳ ವಿರುದ್ಧ ಸುಧಾರಿತ ಸುರಕ್ಷತೆಯನ್ನು ಒದಗಿಸುತ್ತದೆ.
  • ದೂರದ ಡಿಸ್ಕುಗಳನ್ನು, ಆರಂಭದಲ್ಲಿಯೆ ನೆಟ್‌ವರ್ಕ್ ಬ್ಲಾಕ್ ಡಿವೈಸ್‌ (NBD) ಮುಖಾಂತರ ಪರಿಶೀಲಿಸಲು ಮತ್ತು ಮಾರ್ಪಡಿಸಲು ಸಾಧ್ಯವಿರುತ್ತದೆ.
  • ಡಿಸ್ಕುಗಳನ್ನು ಕೆಲವೊಂದು ಅನ್ವಯಗಳಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಹಾಟ್‌ ಪ್ಲಗ್ ಮಾಡಲು ಸಾಧ್ಯವಿರುತ್ತದೆ.

WHQL-ಪ್ರಮಾಣೀಕೃತ virtio-win ಚಾಲಕಗಳು

Red Hat Enterprise Linux 7.0 ರಲ್ಲಿ ಇತ್ತೀಚಿನ Microsoft Windows ಅತಿಥಿಗಳಾದಂತಹ, Microsoft Window 8, 8.1, 2012 ಮತ್ತು 2012 R2 ಗಾಗಿ Windows Hardware Quality Labs (WHQL) ಪ್ರಮಾಣೀಕೃತ virtio-win ಚಾಲಕಗಳನ್ನು ಸೇರಿಸಲಾಗಿದೆ.

9.2. Xen

Red Hat Enterprise Linux 7.0 Xen HVM ಅತಿಥಿ

ಬಳಕೆದಾರರು ಈಗ Red Hat Enterprise Linux 7.0 ಅನ್ನು ಜನಪ್ರಿಯವಾದ Xen ಪರಿಸರದಲ್ಲಿ ಒಂದು ಅತಿಥಿಯಾಗಿ ಬಳಸಬಹುದಾಗಿರುತ್ತದೆ.

9.3. ಹೈಪರ್-V

Red Hat Enterprise Linux 7.0 ಅನ್ನು ಜನರೇಶನ್ 2 ವರ್ಚುವಲ್ ಮೆಶೀನ್ ಆಗಿ ಹೋಸ್ಟ್ ಮಾಡಲಾಗಿದೆ

Red Hat Enterprise Linux 7.0 ಅನ್ನು Microsoft Hyper-V Server 2012 R2 ಆತಿಥೇಯದಲ್ಲಿ ಜನರೇಶನ್ 2 ವರ್ಚುವಲ್‌ ಗಣಕವಾಗಿ ಬಳಸಬಹುದಾಗಿದೆ. ಈ ಹಿಂದಿನ ಪೀಳಿಗೆಯಲ್ಲಿ ಬೆಂಬಲಿಸಲಾಗುತ್ತಿದ್ದಂತಹ ಕಾರ್ಯಭಾರಗಳ ಜೊತೆಗೆ; ಜನರೇಶನ್ 2 ಒಂದು ವರ್ಚುವಲ್ ಗಣಕದಲ್ಲಿ ಹೊಸ ಕಾರ್ಯಭಾರಗಳನ್ನು ಒದಗಿಸುತ್ತದೆ, ಉದಾಹರಣೆಗೆ ಸುರಕ್ಷಿತ ಬೂಟ್, ಒಂದು SCSI ವರ್ಚುವಲ್ ಹಾರ್ಡ್ ಡಿಸ್ಕಿನಿಂದ ಬೂಟ್ ಮಾಡುವಿಕೆ ಅಥವ UEFI ಫರ್ಮ್‌ವೇರ್ ಬೆಂಬಲ.

ಅಧ್ಯಾಯ 10. ವ್ಯವಸ್ಥೆ ಮತ್ತು ಸೇವೆಗಳು

systemd

systemd ಎನ್ನುವುದು ಲಿನಕ್ಸ್‌ನಲ್ಲಿನ ಒಂದು ವ್ಯವಸ್ಥೆ ಮತ್ತು ಸೇವೆಯ ನಿರ್ವಾಹಕವಾಗಿದೆ, ಮತ್ತು ಹಿಂದಿನ Red Hat Enterprise Linux ನಲ್ಲಿ ಬಳಸಲಾದ SysV ಅನ್ನು ಬದಲಿ ಮಾಡುತ್ತದೆ. systemd ಯು SysV ಮತ್ತು Linux Standard Base ಇನಿಟ್‌ ಸ್ಕ್ರಿಪ್ಟ್‌ಗಳೊಂದಿಗೆ ಹೊಂದಾಣಿಕೆಯಾಗುತ್ತದೆ .
systemd ಯು ಇನ್ನಿತರೆಯವುಗಳ ಜೊತೆಗೆ, ಈ ಕೆಳಗಿನ ಸಾಮರ್ಥ್ಯಗಳನ್ನು ನೀಡುತ್ತದೆ:
  • ಆಕ್ರಮಣಕಾರಿ ಸಮಾನಾಂತರೀಕರಣ (ಅಗ್ರೆಸೀವ್ ಪ್ಯಾರಲಲೈಸೇಶನ್) ಸಾಮರ್ಥ್ಯಗಳು.
  • ಸೇವೆಗಳನ್ನು ಆರಂಭಿಸುವುದಕ್ಕಾಗಿ ಸಾಕೆಟ್ ಮತ್ತು D-ಬಸ್ ಸಕ್ರಿಯಗೊಳಿಕೆಯ ಬಳಕೆ.
  • ಬೇಡಿಕೆಯ ಮೇರೆಗೆ ಡೀಮನ್‌ಗಳನ್ನು ಆರಂಭಿಸುವುದು.
  • ಕಂಟ್ರೋಲ್ ಗುಂಪುಗಳನ್ನು ನೋಡಿಕೊಳ್ಳುವುದು.
  • ವ್ಯವಸ್ಥೆಯ ಸ್ಥಿತಿಯ ಸ್ನ್ಯಾಪ್‌ಶಾಟ್‌ಗಳನ್ನು ರಚಿಸುವುದು ಮತ್ತು ವ್ಯವಸ್ಥೆಯ ಸ್ಥಿತಿಯನ್ನು ಮರುಸ್ಥಾಪಿಸುವುದು.
systemd ಮತ್ತು ಸಂರಚನೆಯ ಕುರಿತಾದ ವಿವರವಾದ ಮಾಹಿತಿಗಾಗಿ, ಗಣಕ ವ್ಯವಸ್ಥಾಪಕರ ಮಾರ್ಗದರ್ಶಿಯನ್ನು ನೋಡಿ.

ಅಧ್ಯಾಯ 11. ಕ್ಲಸ್ಟರಿಂಗ್

ಕ್ಲಸ್ಟರುಗಳು ವಿಶ್ವಾಸಾರ್ಹತೆ, ಗಾತ್ರ ಬದಲಾವಣೆಯ ಸಾಮರ್ಥ್ಯ, ಹಾಗು ಸಂದಿಗ್ಧ ಉತ್ಪಾದನಾ ಸೇವೆಗಳಲ್ಲಿ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಅನೇಕ ಗಣಕಗಳನ್ನು (ನೋಡ್‌ಗಳು) ಒಟ್ಟಿಗೆ ಕೆಲಸ ಮಾಡುವ ವ್ಯವಸ್ಥೆಯಾಗಿರುತ್ತದೆ. Red Hat Enterprise Linux 7.0 ಅನ್ನು ಬಳಸಿಕೊಂಡು ಕಾರ್ಯಕ್ಷಮತೆ, ಅತಿ ಲಭ್ಯತೆ, ಹೊರೆ ಸಮತೋಲನೆ, ಹಾಗು ಕಡತ ಹಂಚಿಕೆ ಮುಂತಾದ ಬದಲಾಗುವ ಅಗತ್ಯತೆಗೆ ಹೊಂದಿಕೊಳ್ಳುವಂತೆ ಹಲವಾರು ಸಂರಚನೆಗಳಲ್ಲಿ ನಿಯೋಜಿಸಬಹುದು.
Red Hat Enterprise Linux 7.0 ಲೋಡ್ ಬ್ಯಾಲೆನ್ಸರ್ ಈಗ್ Red Hat Enterprise Linux ನ ಮೂಲವಾಗಿದೆ.
Red Hat Enterprise Linux 7.0 ಗಾಗಿ Red Hat ಹೈ ಅವೆಲಿಬಿಲಿಟಿ ಆಡ್-ಆನ್‌ನ ಸಂರಚನೆ ಮತ್ತು ನಿರ್ವಹಣೆಯ ಕುರಿತಾದ ಮಾಹಿತಿಯನ್ನು ಒದಗಿಸುವ ಲಭ್ಯವಿರುವ ದಸ್ತಾವೇಜುಗಳ ಪಟ್ಟಿಗಾಗಿ ವಿಭಾಗ 20.5, “ಕ್ಲಸ್ಟರಿಂಗ್ ಮತ್ತು ಹೈ ಅವೈಲೆಬಿಲಿಟಿ” ಅನ್ನು ನೋಡಿ.

11.1. ಪೇಸ್‌ಮೇಕರ್ ಕ್ಲಸ್ಟರ್ ನಿರ್ವಾಹಕ

Red Hat Enterprise Linux 7.0 ನಲ್ಲಿ ಕ್ಲಸ್ಟರ್ ಸಂಪನ್ಮೂಲಗಳನ್ನು ನಿರ್ವಹಿಸಲು ಮತ್ತು ನೋಡ್ ವಿಫಲತೆಗಳಿಂದ ಚೇತರಿಸಿಕೊಳ್ಳುವುದಕ್ಕಾಗಿ rgmanager ಅನ್ನು Pacemaker ಇಂದ ಬದಲಾಯಿಸಲಾಗಿದೆ.
Pacemakerನ ಕೆಲವು ಪ್ರಯೋಜನಗಳೆಂದರೆ:
  • ಸಂಪನ್ಮೂಲ ಸಂರಚನೆಯ ಸ್ವಯಂಚಾಲಿತ ಹೊಂದಾಣಿಕೆ ಮಾಡುವಿಕೆ ಮತ್ತು ವರ್ಶನಿಂಗ್.
  • ಬಳಕೆದಾರರ ಪರಿಸರಕ್ಕೆ ಬಹಳ ಹತ್ತಿರದ ಹೋಲಿಕೆಯನ್ನು ಹೊಂದಿರಬಹುದಾದ ಒಂದು ಸುಲಭವಾಗಿ ಹೊಂದಿಕೊಳ್ಳುವ ಸಂಪನ್ಮೂಲ ಮತ್ತು ಫೆನ್ಸಿಂಗ್ ಮಾದರಿ.
  • ಸಂಪನ್ಮೂಲ-ಮಟ್ಟದ ವಿಫಲತೆಗಳಿಂದ ಚೇತರಿಸಕೊಳ್ಳಲು ಫೆನ್ಸಿಂಗ್ ಅನ್ನು ಬಳಸಬಹುದು.
  • ಸಮಯ-ಆಧರಿತ ಸಂರಚನಾ ಆಯ್ಕೆಗಳು.
  • ಒಂದೇ ಸಂಪನ್ಮೂಲವನ್ನು ಹಲವಾರು ನೋಡ್‌ಗಳಲ್ಲಿ ಚಲಾಯಿಸುವ ಸಾಮರ್ಥ್ಯ. ಉದಾಹರಣೆಗೆ, ಒಂದು ಜಾಲ ಪೂರೈಕೆಗಣಕ ಅಥವ ಕ್ಲಸ್ಟರ್ ಕಡತ ವ್ಯವಸ್ಥೆ.
  • ಎರಡು ವಿವಿಧ ಕ್ರಮಗಳಲ್ಲಿ ಒಂದರಲ್ಲಿನ ಅನೇಕ ನೋಡ್‌ಗಳಲ್ಲಿ ಒಂದೇ ಸಂಪನ್ಮೂಲವನ್ನು ಚಲಾಯಿಸುವ ಸಾಮರ್ಥ್ಯ. ಉದಾಹರಣೆಗೆ, ಒಂದು ಸಿಂಕ್ ಆಕರ ಮತ್ತು ಗುರಿ.
  • ಪೇಸ್‌ಮೇಕರಿಗೆ ಒಂದು ವಿತರಿಸಲಾದ ಲಾಕ್ ನಿರ್ವಾಹಕನ ಅಗತ್ಯವಿರುವುದಿಲ್ಲ.
  • ಕೋರಮ್ ಇಲ್ಲವಾದಾಗ ಅಥವ ಅನೇಕ ವಿಭಾಗಗಳನ್ನು ರಚಿಸಿದಾಗ ಸಂರಚಿಸಬಹುದಾದ ವರ್ತನೆ.

11.2. Piranha ಅನ್ನು keepalived ಮತ್ತು HAProxy ಇಂದ ಬದಲಾಯಿಸಲಾಗಿದೆ

Red Hat Enterprise Linux 7.0 ನಲ್ಲಿ Piranha ಲೋಡ್ ಬ್ಯಾಲೆನ್ಸರ್ ಅನ್ನು keepalived ಮತ್ತು HAProxy ಇಂದ ಬದಲಾಯಿಸಲಾಗಿದೆ.
keepalived ಪ್ಯಾಕೇಜು ಹೊರೆ-ಸಮತೋಲನ ಮತ್ತು ಹೈ-ಅವೇಲಿಬಿಲಿಟಿಗಾಗಿ ಸರಳವಾದ ಮತ್ತು ಸದೃಢವಾದ ಸೌಲಭ್ಯಗಳನ್ನು ಒದಗಿಸುತ್ತದೆ. ಹೊರೆ-ಸಮತೋಲನ ರಚನಾವ್ಯವಸ್ಥೆಯು ಹೆಚ್ಚಾಗಿ ಚಾಲ್ತಿಯಲ್ಲಿರುವ ಮತ್ತು ಬಳಕೆಯಲ್ಲಿರುವ, Layer4 ಜಾಲಬಂಧ ಹೊರೆ-ಸಮತೋಲನವನ್ನು ಒದಗಿಸುವ ಲಿನಕ್ಸ್ ವರ್ಚುವಲ್ ಸರ್ವರ್ ಕರ್ನಲ್ ಮಾಡ್ಯೂಲ್ ಅನ್ನು ಬಳಸುತ್ತದೆ. keepalived ಡೀಮನ್ ಹೊರೆ-ಸಮತೋಲನ ಪೂರೈಕೆಗಳಗಳ ಪೂಲ್‌ಗಳಿಗೆ ಅವುಗಳ ಸ್ಥಿತಿಗಳ ಮೇಲೆ ಆಧರಿತವಾಗಿ ಕೆಲವು ಆರೋಗ್ಯ ತಪಾಸಣೆಗಳನ್ನು ಅಳವಡಿಸುತ್ತದೆ. keepalived ಡೀಮನ್ ವರ್ಚುವಲ್ ರೌಟರ್ ರಿಡೆಂಡೆನ್ಸಿ ಪ್ರೊಟೊಕಾಲ್ (VRRP) ಅನ್ನೂ ಸಹ ಅಳವಡಿಸುತ್ತದೆ, ಇದು ರೌಟರ್ ಅಥವ ಡಿರೆಕ್ಟರ್ ಫೇಲ್ಓವರ್ ಅನ್ನು ಅತಿ ಲಭ್ಯತೆಯನ್ನು ಸಾಧಿಸಲು ಅವಕಾಶ ನೀಡುತ್ತದೆ.
HAProxy ಯು TCP ಮತ್ತು HTTP-ಆಧರಿತವಾದ ಅನ್ವಯಗಳಿಗಾಗಿ ಒಂದು ನಂಬಿಕಸ್ತ, ಉತ್ತಮ-ಕಾರ್ಯನಿರ್ವಹಣೆಯ ಜಾಲಬಂಧ ಹೊರೆ ಸಮತೋಲನೆಗಾರನನ್ನು ಒದಗಿಸುತ್ತದೆ. ಇದು ನಿರ್ದಿಷ್ಟವಾಗಿ, ಅತ್ಯಂತ ಹೆಚ್ಚಿನ ಹೊರೆಯಿಂದಾಗಿ ನಿಧಾನಕ್ಕೆ ತೆವಳುವ ಆಧರೆ ಸ್ಥಿರತೆ ಅಥವ Layer7 ಸಂಸ್ಕರಣೆಯ ಅಗತ್ಯವಿರುವ ಜಾಲ ತಾಣಗಳಿಗೆ ಸೂಕ್ತವಾಗಿರುತ್ತದೆ.

11.3. ಅತಿ ಲಭ್ಯತೆಯ ನಿರ್ವಹಣೆ

ಪೇಸ್‌ಮೇಕರ್ ಸಂರಚನಾ ವ್ಯವಸ್ಥೆಯು, ಅಥವ pcs ಎನ್ನುವುದು, ಒಗ್ಗೂಡಿಸಲಾದ ಕ್ಲಸ್ಟರ್ ಸಂರಚನೆ ಮತ್ತು ವ್ಯವಸ್ಥಾಪನಾ ಉಪಕರಣವಾಗಿ ccs, ricci ಮತ್ತು luci ಅನ್ನು ಬದಲಿ ಮಾಡುತ್ತದೆ. pcs ನ ಕೆಲವು ಪ್ರಯೋಜನಗಳೆಂದರೆ:
  • ಆದೇಶ-ಸಾಲಿನ ಉಪಕರಣ.
  • ಸುಲಭವಾಗಿ ಒಂದು ಕ್ಲಸ್ಟರ್ ಅನ್ನು ಬೂಟ್‌ಸ್ಟ್ರಾಪ್ ಮಾಡುವ ಸಾಮರ್ಥ್ಯ, ಅಂದರೆ ಆರಂಭಿಕ ಕ್ಲಸ್ಟರ್ ಸಕ್ರಿಯಗೊಳಿಸಿ ನಂತರ ಚಲಾಯಿಸುವಿಕೆ.
  • ಕ್ಲಸ್ಟರ್ ಆಯ್ಕೆಗಳನ್ನು ಸಂರಚಿಸುವ ಸಾಮರ್ಥ್ಯ.
  • ಸಂಪನ್ಮೂಲಗಳು ಮತ್ತು ಅವುಗಳ ಸಂಬಂಧಗಳನ್ನು ಸೇರಿಸುವ, ತೆಗೆದುಹಾಕುವ, ಅಥವ ಮಾರ್ಪಡಿಸುವ ಸಾಮರ್ಥ್ಯ.

11.4. ಹೊಸ ಸಂಪನ್ಮೂಲ ಮಧ್ಯವರ್ತಿಗಳು

Red Hat Enterprise Linux 7.0 ಯಲ್ಲಿ ಹಲವಾರು ಸಂಪನ್ಮೂಲ ಮಧ್ಯವರ್ತಿಗಳನ್ನು ಸೇರಿಸಲಾಗಿದೆ. ಒಂದು ಸಂಪನ್ಮೂಲ ಮಧ್ಯವರ್ತಿ ಎನ್ನುವುದು ಒಂದು ಕ್ಲಸ್ಟರ್ ಸಂಪನ್ಮೂಲಕ್ಕಾಗಿ ಶಿಷ್ಟವಾದ ಸಂಪರ್ಕಸಾಧನವಾಗಿರುತ್ತದೆ. ಒಂದು ಸಂಪನ್ಮೂಲ ಮಧ್ಯವರ್ತಿಯು ಕಾರ್ಯಾಚರಣೆಗಳ ಶಿಷ್ಟ ಸಂಗ್ರಹವನ್ನು ಸಂಪನ್ಮೂಲ ಅಥವ ಅನ್ವಯಕ್ಕೆ ನಿಶ್ಚಿತವಾದ ಹಂತಗಳಿಗೆ ಮಾರ್ಪಡಿಸುತ್ತದೆ, ಮತ್ತು ಅವುಗಳ ಫಲಿತಾಂಶಗಳನ್ನು ಯಶಸ್ಸು ಅಥವ ವಿಫಲತೆಯಲ್ಲಿ ಅಳೆಯುತ್ತದೆ.

ಅಧ್ಯಾಯ 12. ಕಂಪೈಲರ್ ಹಾಗು ಉಪಕರಣಗಳು

12.1. GCC ಟೂಲ್‌ಚೇನ್

Red Hat Enterprise Linux 7.0 ನಲ್ಲಿ, gcc ಟೂಲ್‌ಚೇನ್ ಎನ್ನುವುದು gcc-4.8.x ಬಿಡುಗಡೆ ಸರಣಿಯ ಮೇಲೆ ಆಧರಿತವಾಗಿರುತ್ತದೆ, ಇದು Red Hat Enterprise Linux 6 ಗೆ ಸಮನಾಗಿರುವುದಕ್ಕೆ ಸಂಬಂಧಿಸಿರುವ ಹಲವಾರು ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತವೆ. ಅದೇ ರೀತಿ, Red Hat Enterprise Linux 7 ರಲ್ಲಿ binutils-2.23.52.x ಅನ್ನು ಒಳಗೊಳ್ಳಿಸಲಾಗಿದೆ.
ಈ ಆವೃತ್ತಿಗಳು Red Hat Developer Toolset 2.0 ರಲ್ಲಿನ ಉಪಕರಣಗಳಿಗೆ ಸಮನಾಗಿರುವ ಆವೃತ್ತಿಗಳಾಗಿರುತ್ತವೆ; Red Hat Enterprise Linux 6 ಮತ್ತು Red Hat Enterprise Linux 7 ರಲ್ಲಿನ gcc ಮತ್ತು binutils ಆವೃತ್ತಿಗಳ ನಡುವಿನ ವಿವರವಾದ ಹೋಲಿಕೆಯನ್ನು ಈ ಕೆಳಗೆ ನೋಡಬಹುದು:
Red Hat Enterprise Linux 7.0 ಟೂಲ್‌ಚೇನ್‌ ಈ ಕೆಳಗಿನ ಗಮನಾರ್ಹ ಮುಖ್ಯಾಂಶಗಳನ್ನು ಹೊಂದಿರುತ್ತದೆ:
  • C++11 ನೊಂದಿಗೆ ಸಹವರ್ತನೀಯವಾಗಿರುವ ಅನ್ವಯಗಳನ್ನು ರಚಿಸುವುದಕ್ಕಾಗಿನ ಪ್ರಾಯೋಗಿಕ ಬೆಂಬಲ (ಸಂಪೂರ್ಣ C++11 ಭಾಷೆಯ ಬೆಂಬಲ) ಮತ್ತು C11 ಸೌಲಭ್ಯಗಳಿಗಾಗಿ ಕೆಲವು ಪ್ರಾಯೋಗಿಕ ಬೆಂಬಲ.
  • OpenMP v3.1, C++11 ಬಗೆಗಳು ಮತ್ತು ಅಟಾಮಿಕ್ ಮೆಮೊರಿ ಎಕ್ಸೆಸ್‌ಗಾಗಿನ GCC ಒಳ-ನಿರ್ಮಿತಗಳೂ ಸೇರಿದಂತೆ ಸಮಾನಾಂತರ ಅನ್ವಯಗಳನ್ನು ಪ್ರೊಗ್ರಾಮ್ ಮಾಡುವುದಕ್ಕೆ ಸುಧಾರಿತ ಬೆಂಬಲ ಮತ್ತು ವ್ಯವಹಾರಿಕ ಮೆಮೊರಿಗಾಗಿ ಪ್ರಾಯೋಗಿಕ ಬೆಂಬಲ (Intel RTM/HLE ಇಂಟ್ರಿನ್ಸಿಕ್ಸ್, ಒಳ-ನಿರ್ಮಿತಗಳು, ಮತ್ತು ಕೋಡ್ ಉತ್ಪಾದನೆಗಳೂ ಸೇರಿದಂತೆ)
  • ಒಂದು ಹೊಸ ಲೋಕಲ್ ರಿಜಿಸ್ಟರ್ ಅಲೋಕೇಟರ್ (LRA), ಕೋಡ್ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
  • DWARF4 ಅನ್ನು ಈಗ ಪೂರ್ವನಿಯೋಜಿತ ದೋಷನಿದಾನ ವಿನ್ಯಾಸವಾಗಿ ಬಳಸಲಾಗುತ್ತದೆ.
  • ವಿವಿಧ ಹೊಸ ಆರ್ಕಿಟೆಕ್ಚರ್-ನಿಶ್ಚಿತ ಆಯ್ಕೆಗಳು.
  • AMD 15h ಮತ್ತು 16h ಗುಂಪಿನ ಸಂಸ್ಕಾರಕಗಳಿಗಾಗಿ ಬೆಂಬಲ.
  • ಕೊಂಡಿ-ಸಮಯದ ಸೂಕ್ತಗೊಳಿಕೆಯ ಬೆಂಬಲ.
  • ಸುಧಾರಿಸಲಾದ ಎಚ್ಚರಿಕೆಗಳು ಮತ್ತು ದೋಷಪತ್ತೆಮಾಡುವಿಕೆಗಳು.
  • ಹೊಸ ಫೋರ್ಟ್ರಾನ್ ಸೌಲಭ್ಯಗಳ ಒಂದು ವಿಧ.

12.2. GLIBC

Red Hat Enterprise Linux 7.0 glibc ಲೈಬ್ರರಿಗಳು (libc, libm, libpthread, NSS ಪ್ಲಗ್‌-ಇನ್‌ಗಳು, ಮತ್ತು ಇತರೆಯವು) glibc 2.17 ಬಿಡುಗಡೆಯ ಮೇಲೆ ಅವಲಂಬಿತವಾಗಿದೆ, ಮತ್ತು ಇದು Red Hat Enterprise Linux 6 ಗೆ ಸಮನಾಗಿರುವುದಕ್ಕೆ ಸಂಬಂಧಿಸಿರುವ ಹಲವಾರು ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತವೆ.
Red Hat Enterprise Linux 7.0 glibc ಲೈಬ್ರರಿಗಳು ಈ ಕೆಳಗಿನ ಗಮನಾರ್ಹ ಮುಖ್ಯಾಂಶಗಳನ್ನು ಹೊಂದಿರುತ್ತದೆ:
  • ಪ್ರಾಯೋಗಿಕ ISO C11 ಬೆಂಬಲ.
  • ಹೊಸ ಲಿನಕ್ಸ್ ಸಂಪರ್ಕಸಾಧನಗಳು: prlimit, prlimit64, fanotify_init, fanotify_mark, clock_adjtime, name_to_handle_at, open_by_handle_at, syncfs, setns, sendmmsg, process_vm_readv, process_vm_writev.
  • ಸ್ಟ್ರೀಮಿಂಗ್ SIMD ಎಕ್ಸ್‌ಟೆನ್ಶನ್‌ಗಳು (SSE), ಸಪ್ಲಿಮೆಂಟಲ್ ಸ್ಟ್ರೀಮಿಂಗ್ SIMD ಎಕ್ಸ್‌ಟೆನ್ಶನ್‌ಗಳು SIMD ಎಕ್ಸ್‌ಟೆನ್ಶನ್ಸ್ 3 (SSSE3), ಸ್ಟ್ರೀಮಿಂಗ್ SIMD ಎಕ್‌ಟೆನ್ಶನ್‌ಗಳು 4.2 (SSE4.2), ಮತ್ತು ಅಡ್ವಾನ್ಸಡ್ ಎಕ್ಸ್‌ಟೆನ್ಶನ್‌ಗಳು (AVX) ಅನ್ನು ಬಳಸಿಕೊಂಡು AMD64 ಮತ್ತು Intel 64 ಆರ್ಕಿಟೆಕ್ಚರುಗಳಿಗಾಗಿ ಹೊಸದಾದ ಸೂಕ್ತಗೊಳಿಸಲಾದ ವಾಕ್ಯಾಂಶ ಕಾರ್ಯಭಾರಗಳು.
  • IBM PowerPC ಮತ್ತು IBM POWER7 ಗಾಗಿ ಹೊಸ ಸೂಕ್ತಗೊಳಿಸಲಾದ ಸ್ಟ್ರಿಂಗ್ ಕಾರ್ಯಭಾರಗಳು.
  • IBM System z10 ಮತ್ತು IBM zEnterprise 196 ಗಾಗಿ ವಿಶಿಷ್ಟವಾಗಿ ಸೂಕ್ತಗೊಳಿಸಲಾದ ದಿನನಿತ್ಯದ ಕಾರ್ಯಗಳೊಂದಿಗೆ IBM S/390 ಮತ್ತು IBM System z ಗಾಗಿ ಹೊಸದಾಗಿ ಸೂಕ್ತಗೊಳಿಸಲಾದ ವಾಕ್ಯಾಂಶ ಕಾರ್ಯಭಾರಗಳು.
  • ಹೊಸ ಲೊಕ್ಯಾಲ್‌ಗಳು: os_RU, bem_ZA, en_ZA, ff_SN, sw_KE, sw_TZ, lb_LU, wae_CH, yue_HK, lij_IT, mhr_RU, bho_IN, unm_US, es_CU, ta_LK, ayc_PE, doi_IN, ia_FR, mni_IN, nhn_MX, niu_NU, niu_NZ, sat_IN, szl_PL, mag_IN.
  • ಹೊಸ ಎನ್ಕೋಡಿಂಗ್‌ಗಳು: CP770, CP771, CP772, CP773, CP774.
  • ಹೊಸ ಸಂಪರ್ಕಸಾಧನಗಳು: scandirat, scandirat64.
  • FD_SET, FD_CLR, FD_ISSET, ಪೋಲ್, ಮತ್ತು ppoll ಕಡತ ವಿವರಣೆಗಾರಗಳ ಆವೃತ್ತಿಯನ್ನು ಪರೀಕ್ಷಿಸುವ ಕಾರ್ಯಭಾರವನ್ನು ಸೇರಿಸಲಾಗಿದೆ.
  • ನೆಟ್‌ಗ್ರೂಪ್ ದತ್ತಸಂಚಯವನ್ನು ಕ್ಯಾಶ್ ಮಾಡುವುದನ್ನು ಈಗ nscd ಡೀಮನ್‌ನಲ್ಲಿ ಈಗ ಬೆಂಬಲಿಸಲಾಗುತ್ತದೆ.
  • ಹೊಸ ಕಾರ್ಯಭಾರವಾದಂತಹ secure_getenv() ಎನ್ನುವುದು ಪರಿಸರಕ್ಕೆ ಸುರಕ್ಷಿತ ನಿಲುಕನ್ನು ಒದಗಿಸುತ್ತದೆ, ಮತ್ತು ಒಂದು SUID ಅಥವ SGID ಪ್ರಕ್ರಿಯೆಯಲ್ಲಿ ಚಲಾಯಿತಗೊಳ್ಳುತ್ತಿದ್ದಲ್ಲಿ NULL ಅನ್ನು ಮರಳಿಸುತ್ತದೆ. ಈ ಕಾರ್ಯಭಾರವು ಆಂತರಿಕ ಕಾರ್ಯಭಾರವಾದಂತಹ __secure_getenv() ಅನ್ನು ಬದಲಾಯಿಸುತ್ತದೆ.
  • ಆ ಮೌಲ್ಯಗಳಿಗಾಗಿನ ವಿವರಗಳನ್ನು ಉಲ್ಲಂಘಿಸಿದಲ್ಲಿ crypt() ಕಾರ್ಯಭಾರವು ಈಗ ವಿಫಲಗೊಳ್ಳುತ್ತದೆ. ಲಿನಕ್ಸ್‌ನಲ್ಲಿ, FIPS ಕ್ರಮವನ್ನು ಸಕ್ರಿಯಗೊಳಿಸಲಾಗಿದೆ ಎಂದು ಪರಿಶೀಲಿಸಲು crypt() ಕಾರ್ಯಭಾರವು /proc/sys/crypto/fips_enabled ಕಡತವನ್ನು ನೋಡುತ್ತದೆ ಮತ್ತು ಕ್ರಮವನ್ನು ಸಕ್ರಿಯಗೊಳಿಸಿದಾಗ ಮೆಸೇಜ್-ಡೈಜೆಸ್ಟ್ ಅಲ್ಗಾರಿತಮ್ 5 (MD5) ಡೇಟಾ ಎನ್‌ಕ್ರಿಪ್ಶನ್ ಸ್ಟ್ಯಾಂಡರ್ಡ್ (DES) ಅಲ್ಗಾರಿತಮ್‌ ಅನ್ನು ಬಳಸುವ ಗೂಢಲಿಪೀಕರಿಸಲಾದ ವಾಕ್ಯಾಂಶಗಳಲ್ಲಿ ವಿಫಲಗೊಳ್ಳುತ್ತದೆ.
  • clock_* ಎಂಬ ಕಾರ್ಯಭಾರಗಳ ಸೂಟ್‌ (<time.h> ನಲ್ಲಿ ಸೂಚಿಸಲಾಗುತ್ತದೆ) ಈಗ ಮುಖ್ಯ C ಲೈಬ್ರರಿಯಲ್ಲಿ ನೇರವಾಗಿ ಲಭ್ಯವಿದೆ. ಈ ಹಿಂದೆ ಈ ಕಾರ್ಯಭಾರಗಳನ್ನು ಬಳಸಲು -lrt ನೊಂದಿಗೆ ಸಂಪರ್ಕಜೋಡಿಸುವ ಅಗತ್ಯವಿರುತ್ತಿತ್ತು. ಈ ಬದಲಾವಣೆಯ ಕಾರಣದಿಂದಾಗಿ clock_gettime() ನಂತಹ (ಮತ್ತು -lrtನೊಂದಿಗೆ ಸಂಪರ್ಕಿತಗೊಂಡಿರದೆ ಇರುವ) ಕಾರ್ಯಭಾರವನ್ನು ಬಳಸುವ ಒಂದೇ-ತ್ರೆಡ್‌ನ ಪ್ರೊಗ್ರಾಮ್‌ ಚಾಲನಾ ಸಮಯದಲ್ಲಿ ಇನ್ನುಮುಂದೆ ನಿಶ್ಚಿತವಾಗಿ pthreads ಲೈಬ್ರರಿಯನ್ನು ಲೋಡ್ ಮಾಡಲಾಗುವುದಿಲ್ಲ ಮತ್ತು C++ ಚಾಲನಾಸಮಯದ ಲೈಬ್ರರಿಯಾದಂತಹ ಇತರೆ ಕೋಡ್‌ನಲ್ಲಿ ಮಲ್ಟಿ-ತ್ರೆಡ್ ಬೆಂಬಲದೊಂದಿಗೆ ಸಂಬಂಧಿಸಿದ ಓವರ್ಹೆಡ್‌ಗಳಿಗೆ ಕಾರಣವಾಗುವುದಿಲ್ಲ
  • ಹೊಸ ಹೆಡರ್ <sys/auxv.h> ಮತ್ತು getauxval() ಕಾರ್ಯಭಾರವು ಲಿನಕ್ಸ್‌ನಿಂದ ರವಾನಿಸಲಾಗುವ AT_* ಕೀಲಿ-ಮೌಲ್ಯದ ಜೋಡಿಯನ್ನು ಸುಲಭವಾಗಿ ನಿಲುಕಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಹೆಡರ್ AT_HWCAP ಕೀಲಿಗೆ ಸಂಬಂಧಿಸಿದ HWCAP_* ಅನ್ನೂ ಸಹ ವಿವರಿಸುತ್ತದೆ.
  • ಒಂದು ಹೊಸದಾಗಿ ಅನುಸ್ಥಾಪಿಸಲಾದ ಹೆಡರ್ ಅನ್ನು ಕೆಳ-ಮಟ್ಟದ ಪ್ಲಾಟ್‌ಫಾರ್ಮ್ ನಿಶ್ಚಿತ ಕ್ರಿಯಾಶೀಲತೆಗಾಗಿ ಡಾಕ್ಯುಮೆಂಟ್ ಮಾಡಲಾಗಿದೆ. PowerPC ಯು ಸಮಯ ಆಧರಿತವಾದ ನೋಂದಣಿ ನಿಲುಕನ್ನು ಒದಗಿಸಲು ಒಂದು ಕಾರ್ಯಭಾರವನ್ನು ಹೊಂದಿರುವ ಮೊದಲ ಸನ್ನಿವೇಶವನ್ನು ಸೇರಿಸುತ್ತದೆ.

12.3. GDB

Red Hat Enterprise Linux 7.0 ನಲ್ಲಿ, GDB ಡಿಬಗ್ಗರ್ ಎನ್ನುವುದು gdb-7.6.1 ಬಿಡುಗಡೆ ಸರಣಿಯ ಮೇಲೆ ಆಧರಿತವಾಗಿರುತ್ತದೆ, ಇದು Red Hat Enterprise Linux 6 ಗೆ ಸಮನಾಗಿರುವುದಕ್ಕೆ ಸಂಬಂಧಿಸಿರುವ ಹಲವಾರು ಸುಧಾರಣೆಗಳು ಮತ್ತು ದೋಷ ಪರಿಹಾರಗಳನ್ನು ಹೊಂದಿರುತ್ತವೆ.
ಈ ಆವೃತ್ತಿಯು Red Hat Developer Toolset v2.0 ರಲ್ಲಿನ GDB ಗೆ ಸಂಬಂಧಿಸಿರುತ್ತದೆ; Red Hat Enterprise Linux 6 ಮತ್ತು Red Hat Enterprise Linux 7.0 GDB ಆವೃತ್ತಿಗಳ ನಡುವಿನ ಒಂದು ವಿವರವಾದ ವ್ಯತ್ಯಾಸವನ್ನು ಇಲ್ಲಿ ನೋಡಬಹುದು:
Red Hat Enterprise Linux 7.0 ನಲ್ಲಿ ಸೇರಿಸಲಾದ GDB ಯು ಈ ಕೆಳಗಿನ ಗಮನಾರ್ಹ ಮುಖ್ಯಾಂಶಗಳನ್ನು ಹೊಂದಿರುತ್ತದೆ:
  • ಹೊಸ .gdb_index ವಿಭಾಗವನ್ನು ಮತ್ತು ಹೊಸ gdb-add-index ಶೆಲ್‌ ಆದೇಶ ಬಳಸಿಕೊಂಡು ಚಿಹ್ನೆಗಳನ್ನು ವೇಗವಾಗಿ ಲೋಡ್‌ ಮಾಡಲು ಸಾಧ್ಯವಿರುತ್ತದೆ. ಈ ಸೌಲಭ್ಯವು Red Hat Enterprise Linux 6.1 ಮತ್ತು ನಂತರದ ಆವೃತ್ತಿಗಳಲ್ಲಿ ಈಗಾಗಲೆ ಲಭ್ಯವಿದೆ ಎಂಬುದನ್ನು ನೆನಪಿಡಿ.
  • gdbserver ಎನ್ನುವುದು ಈಗ ಶಿಷ್ಟ ಇನ್‌ಪುಟ್/ಔಟ್‌ಪುಟ್ (STDIO) ಸಂಪರ್ಕಗಳನ್ನು ಬೆಂಬಲಿಸುತ್ತದೆ, ಉದಾಹರಣೆಗೆ: (gdb) target remote | ssh myhost gdbserver - hello
  • -location ನಿಯತಾಂಕವನ್ನು ಬಳಸಿಕೊಂಡು watch ನ ಅತ್ಯಂತ ನಿರೀಕ್ಷಿತ ವರ್ತನೆ.
  • ವರ್ಚುವಲ್ ವಿಧಾನದ ಕೋಷ್ಟಕಗಳನ್ನು ಈಗ ಹೊಸ ಆದೇಶದಿಂದ ತೋರಿಸಲು ಸಾಧ್ಯವಿರುತ್ತದೆ, info vtbl.
  • ಕಡತಗಳನ್ನು ಸ್ವಯಂಚಾಲಿತವಾಗಿ ಲೋಡ್ ಮಾಡುವಿಕೆಯನ್ನು ಹೊಸ ಆದೇಶಗಳಾದ info auto-load, set auto-load ಮತ್ತು show auto-load ಇಂದ ನಿಯಂತ್ರಿಸಬಹುದಾಗಿರುತ್ತದೆ.
  • set filename-display absolute ಆದೇಶವನ್ನು ಬಳಸಿಕೊಂಡು ಆಕರ ಕಡತಕ್ಕೆ ಪರಿಪೂರ್ಣವಾದ ಮಾರ್ಗವನ್ನು ತೋರಿಸುವಿಕೆ.
  • ಯಂತ್ರಾಂಶ ಬೆಂಬಲದೊಂದಿಗೆ ಹೊಸ ಆದೇಶವಾದ record btrace ಇಂದ ನಿಯಂತ್ರಣ ಹರಿವಿನ ರೆಕಾರ್ಡಿಂಗ್.
Red Hat Enterprise Linux 7.0 ರಲ್ಲಿನ GDB ಯಲ್ಲಿ ಸೇರಿಸಲಾದ ಗಮನಾರ್ಹವಾದ ದೋಷ ಪರಿಹಾರಗಳು ಈ ಕೆಳಗಿನಂತಿವೆ:
  • info proc ಆದೇಶವನ್ನು ಕೋರ್ ಕಡತಗಳ ಮೇಲೆ ಕೆಲಸ ಮಾಡುವಂತೆ ಅಪ್‌ಡೇಟ್ ಮಾಡಲಾಗಿದೆ.
  • ತಡೆಬಿಂದುಗಳು ಈಗ ಎಲ್ಲಾ ಕೆಳದರ್ಜೆಗಳಲ್ಲಿ ಎಲ್ಲಾ ಹೊಂದಿಕೆಯಾಗುವ ಸ್ಥಳಗಳಲ್ಲಿ ಹೊಂದಿಸಲಾಗುತ್ತದೆ.
  • ತಡೆಬಿಂದುವಿನ ಸ್ಥಳದ ಕಡತದ ಹೆಸರಿನ ಭಾಗವು ಈಗ ಒಂದು ಆಕರ ಕಡತದ ಹೆಸರಿನ ಹಿಂದಿರುವ ಘಟಕಗಳಿಗೆ ಹೊಂದಿಕೆಯಾಗುತ್ತದೆ.
  • ತಡೆಬಿಂದುಗಳನ್ನು ಈಗ ಸಾಲಿನೊಳಗಿನ ಕಾರ್ಯಭಾರಗಳಲ್ಲಿ ಇರಿಸಬಹುದು.
  • ಮಾದರಿಯ ನಿಯತಾಂಕಗಳನ್ನು ಈಗ ಮಾದರಿಗಳನ್ನು ಆರಂಭಿಸಿದಾಗ ವಾಪ್ತಿಯಲ್ಲಿ ಇರುವಂತೆ ಇರಿಸಲಾಗಿದೆ.
ಇದರ ಜೊತೆಗೆ, Red Hat Enterprise Linux 7.0 ಒಂದು ಹೊಸ ಪ್ಯಾಕೇಜ್ ಆದಂತಹ, gdb-doc ಅನ್ನು ಒದಗಿಸುತ್ತದೆ, ಇದು GDB ಕೈಪಿಡಿಯನ್ನು PDF, HTML, ಮತ್ತು ಮಾಹಿತಿಯ ವಿನ್ಯಾಸವನ್ನು ಹೊಂದಿರುತ್ತದೆ. Red Hat Enterprise Linux ನ ಹಿಂದಿನ ಆವೃತ್ತಿಗಳಲ್ಲಿ GDB ಕೈಪಿಡಿಯು ಮುಖ್ಯ RPM ಪ್ಯಾಕೇಜಿನ ಮುಖ್ಯ ಭಾಗವಾಗಿತ್ತು.

12.4. ಕಾರ್ಯನಿರ್ವಹಣಾ ಉಪಕರಣಗಳು

Red Hat Enterprise Linux 7.0 ಹಲವಾರು ಕಾರ್ಯನಿರ್ವಹಣೆ ಉಪಕರಣಗಳ ಅತ್ಯಂತ ಇತ್ತೀಚಿನ ಆವೃತ್ತಿಗಳ ಅಪ್‌ಡೇಟ್‌ಗಳನ್ನು ಒಳಗೊಂಡಿದೆ, ಅವುಗಳೆಂದರೆ oprofile, papi ಮತ್ತು elfutils, ಇವುಗಳು ಕಾರ್ಯನಿರ್ವಹಣೆ, ಸುಲಭಸ್ಥಳಾಂತರ, ಮತ್ತು ಕಾರ್ಯಶೀಲತೆಯನ್ನು ಸುಧಾರಣೆಗಳನ್ನು ತರುತ್ತವೆ.
ಅಷ್ಟೆ ಅಲ್ಲದೆ, Red Hat Enterprise Linux 7.0 ಪ್ರೀಮಿಯರ್‌ಗಳು:
  • ಪರ್ಫಾಮೆನ್ಸ್ ಕೋ-ಪೈಲಟ್‌ಗಾಗಿ ಬೆಂಬಲ.
  • SystemTap (DynInst-ಆಧರಿತ) ಸಂಪೂರ್ಣವಾಗಿ ಅಧಿಕಾರವನ್ನು ಹೊಂದಿರದ ಬಳಕೆದಾರ ಸ್ಥಳದಲ್ಲಿ ಚಲಾಯಿತಗೊಳ್ಳುವ ಇನ್‌ಸ್ಟ್ರುಮೆಂಟೇಶನ್‌ಗಾಗಿ, ಹಾಗೂ ಜಾವಾ ಅನ್ವಯಗಳನ್ನು ಕಾರ್ಯಕ್ಷಮತೆಯಿಂದ (Byteman-ಆಧರಿತ) ನಿಖರ ತನಿಖೆ ಮಾಡುವಿಕೆಯನ್ನು ಬೆಂಬಲಿಸುತ್ತದೆ.
  • ಯಂತ್ರಾಂಶದ ಪರಸ್ಪರ ವ್ಯವಹಾರದ ಮೆಮೊರಿಗಾಗಿ Valgrind ಬೆಂಬಲ ಮತ್ತು ಮಾಡೆಲಿಂಗ್ ವೆಕ್ಟರ್ ಸೂಚನೆಗಳಲ್ಲಿ ಸುಧಾರಣೆಗಳು.

12.4.1. ಪರ್ಫಾಮೆನ್ಸ್ ಕೋ-ಪೈಲಟ್‌

Red Hat Enterprise Linux 7.0 ರಲ್ಲಿ ವ್ಯವಸ್ಥೆಯ-ಮಟ್ಟದ ಕಾರ್ಯನಿರ್ವಹಣೆಯ ಲೆಕ್ಕಾಚಾರಗಳ ಸ್ವಾಧೀನತೆ, ಆರ್ಕೈವ್‌ ಮಾಡುವಿಕೆ, ಮತ್ತು ವಿಶ್ಲೇಷಣೆಗಾಗಿ ಉಪಕರಣಗಳ, ಸೇವೆಗಳ, ಮತ್ತು ಲೈಬ್ರರಿಗಳ ಸಂಗ್ರಹವಾದಂತಹ ಪರ್ಫಾಮೆನ್ಸ್ ಕೊ-ಪೈಲಟ್‌ಗಾಗಿನ (PCP) ಬೆಂಬಲವನ್ನು ಪರಿಚಯಿಸಲಾಗುತ್ತದೆ. ಇದರ ಹಗುರ ತೂಕದ, ವಿತರಿಸಲಾದ ಆರ್ಕಿಟೆಕ್ಚರ್ ನಿರ್ದಿಷ್ಟವಾಗಿ ಸಂಕೀರ್ಣ ವ್ಯವಸ್ಥೆಗಳ ಕೇಂದ್ರೀಕೃತ ವಿಶ್ಲೇಷಣೆಗೆ ಉತ್ತಮವಾಗಿ ಹೊಂದಿಕೆಯಾಗುವಂತೆ ಮಾಡುತ್ತದೆ.
ಕಾರ್ಯನಿರ್ವಹಣಾ ಮೆಟ್ರಿಕ್‌ಗಳನ್ನು Python, Perl, C++ ಮತ್ತು C ಸಂಪರ್ಕಸಾಧನಗಳನ್ನು ಬಳಸಿಕೊಂಡು ಸೇರಿಸಲು ಸಾಧ್ಯವಿರುತ್ತದೆ. ವಿಶ್ಲೇಷಣಾ ಉಪಕರಣಗಳು ನೇರವಾಗಿ ಕ್ಲೈಂಟ್ APIಗಳನ್ನು (Python, C++, C) ಬಳಸುತ್ತವೆ, ಮತ್ತು ಸಮೃದ್ಧ ಜಾಲ ಅನ್ವಯಗಳು JSON ಸಂಪರ್ಕಸಾಧನವನ್ನು ಬಳಸಿಕೊಂಡು ಲಭ್ಯವಿರುವ ಎಲ್ಲಾ ಕಾರ್ಯನಿರ್ವಹಣಾ ದತ್ತಾಂಶದಲ್ಲಿ ಸಂಶೋಧಿಸಬಲ್ಲವು.
ಹೆಚ್ಚಿನ ಮಾಹಿತಿಗಾಗಿ, pcp ಮತ್ತು pcp-libs-devel ಪ್ಯಾಕೇಜುಗಳಲ್ಲಿನ ಸವಿಸ್ತಾರವಾದ ಮಾಹಿತಿ ಪುಟಗಳನ್ನು ನೋಡಿ. pcp-doc ಪ್ಯಾಕೇಜು ಅಪ್‌ಸ್ಟ್ರೀಮ್ ಪರಿಯೋಜನೆಯ ಎರಡು ಉಚಿತ ಮತ್ತು ಮುಕ್ತ ಪುಸ್ತಕಗಳನ್ನು ಹೊಂದಿವೆ:

12.4.2. SystemTap

Red Hat Enterprise Linux 7.0 ರಲ್ಲಿ systemtap ಆವೃತ್ತಿ 2.4 ಅನ್ನು ಹೊಂದಿರುತ್ತದೆ, ಇದು ಹಲವಾರು ಸಾಮರ್ಥ್ಯಗಳನ್ನು ಒದಗಿಸುತ್ತದೆ. ಇವುಗಳಲ್ಲಿ, ಐಚ್ಛಿಕ ಶುದ್ಧ-ಬಳಕೆದಾರಸ್ಥಳ ಸ್ಕ್ರಿಪ್ಟ್ ಚಲಾಯಿಸುವಿಕೆ, ಸಮೃದ್ಧ ಮತ್ತು ಹೆಚ್ಚು ಕಾರ್ಯಕ್ಷಮತೆಯ Java ತನಿಖೆ, ವರ್ಚುವಲ್ ಗಣಕ ತನಿಖೆ, ಉತ್ತಮ ದೋಷ ಸಂದೇಶಗಳು, ಮತ್ತು ಹಲವಾರು ದೋಷ ಸರಿಪಡಿಕೆಗಲು ಮತ್ತು ಹೊಸ ಸೌಲಭ್ಯಗಳು ಒಳಗೊಂಡಿರುತ್ತವೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ:
  • dyninst ಬೈನರಿ-ಎಡಿಟಿಂಗ್ ಲೈಬ್ರರಿಯನ್ನು ಬಳಸಿಕೊಂಡು, SystemTap ಈಗ ಬಳಕೆದಾರ-ಸ್ಥಳದಲ್ಲಿ ಕೆಲವು ಸ್ಕ್ರಿಪ್ಟ್‌ಗಳನ್ನು ಅಪ್ಪಟವಾಗಿ ಚಲಾಯಿಸಲು ಸಮರ್ಥವಾಗಿರುತ್ತದೆ; ಯಾವುದೆ ಕರ್ನಲ್ ಅಥವ ನಿರ್ವಾಹಕ ಸೌಲಭ್ಯಗಳನ್ನು ಬಳಸಲಾಗುವುದಿಲ್ಲ. ಈ ಕ್ರಮವನ್ನು stap --dyninst ಇಂದ ಆರಿಸಲಾಗುತ್ತದೆ, ಮತ್ತು ಬಳಕೆದಾರರ ಸ್ವಂತ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುವ ತನಿಖೆಗಳ ಅಥವ ಕಾರ್ಯಾಚರಣೆಯ ಬಗೆಗಳನ್ನು ಮಾತ್ರ ಸಕ್ರಿಯಗೊಳಿಸುತ್ತದೆ. ಈ ಕ್ರಮವು C++ ಆಕ್ಷೇಪಣೆಗಳನ್ನು ತೋರಿಸುವ ಪ್ರೊಗ್ರಾಮ್‌ಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂಬುದನ್ನು ನೆನಪಿಡಿ.
  • Java ಅನ್ವಯಗಳಿಗೆ ತನಿಖೆಗಳನ್ನು ಸೇರಿಸುವ ಒಂದು ಮಾರ್ಗವನ್ನು ಈಗ byteman ಉಪಕರಣದೊಂದಿಗೆ ಬೆಂಬಲಿಸಲಾಗುತ್ತದೆ. ಹೊಸ SystemTap ತನಿಖೆಯ ಬಗೆಗಳಾದ, java("com.app").class("class_name").method("name(signature)").*, ಒಂದು ಅನ್ವಯದಲ್ಲಿ ವ್ಯವಸ್ಥೆಯಾದ್ಯಂತದ ಜಾಡು ಇರಿಸುವಿಕೆಯ ಅಗತ್ಯವಿರದೆ ಪ್ರತ್ಯೇಕ ವಿಧಾನದ ಪ್ರವೇಶ ಮತ್ತು ನಿರ್ಗಮನ ಘಟನೆಗಳನ್ನು ತನಿಖೆ ಮಾಡುವುದನ್ನು ಸಕ್ರಿಯಗೊಳಿಸುತ್ತದೆ.
  • ಒಂದು ಪೂರೈಕೆಗಣಕದಲ್ಲಿ ಚಲಾಯಿತಗೊಳ್ಳುತ್ತಿರುವ libvirt-ನಿರ್ವಹಿತ KVM ಸನ್ನಿವೇಶದಲ್ಲಿ ದೂರಸ್ಥ ಕಾರ್ಯಗತಗೊಳಿಕೆಯನ್ನು ಸಕ್ರಿಯಗೊಳಿಸಲು SystemTap ಚಾಲಕ ಟೂಲಿಂಗ್‌ಗೆ ಒಂದು ಹೊಸ ಸೌಲಭ್ಯವನ್ನು ಸೇರಿಸಲಾಗಿದೆ. ಇದು ಮೀಸಲಿರಿಸಲಾದ ಸುರಕ್ಷಿತ virtio-serial ಕೊಂಡಿಯ ಮುಖಾಂತರ ಒಂದು ವರ್ಚುವಲ್ ಗಣಕ ಅತಿಥಿಗೆ ಕಂಪೈಲ್ ಮಾಡಲಾದ SystemTap ಸ್ಕ್ರಿಪ್ಟನ್ನು ಸ್ವಯಂಚಾಲಿತ ಮತ್ತು ಸುರಕ್ಷಿತವಾದ ವರ್ಗಾವಣೆಯನ್ನು ಸಕ್ರಿಯಗೊಳಿಸುತ್ತದೆ. ಒಂದು ಹೊಸ ಅತಿಥಿ-ಬದಿಯ ಡೀಮನ್ ಸ್ಕ್ರಿಪ್ಟುಗಳನ್ನು ಲೋಡ್ ಮಾಡುತ್ತದೆ ಮತ್ತು ಅವುಗಳ ಔಟ್‌ಪುಟ್ ಅನ್ನು ಆತಿಥೇಯಕ್ಕೆ ಮರಳಿಸುತ್ತದೆ. ಈ ರೀತಿಯಲ್ಲಿ ಇದು SSH ಗಿಂತ ವೇಗವಾಗಿ ಮತ್ತು ಸುರಕ್ಷಿತವಾಗಿರುತ್ತದೆ ಮತ್ತು ಆತಿಥೇಯ ಮತ್ತು ಅತಿಥಿಯ ನಡುವೆ IP-ಮಟ್ಟದ ಜಾಲಬಂಧ ಸಂಪರ್ಕದ ಅಗತ್ಯವಿರುವುದಿಲ್ಲ. ಈ ಕಾರ್ಯಭಾರವನ್ನು ಪರಿಶೀಲಿಸಲು, ಈ ಕೆಳಗಿನ ಆದೇಶವನ್ನು ಚಲಾಯಿಸಿ:
    stap --remote=libvirt://MyVirtualMachine
  • ಇದರ ಜೊತೆಗೆ, SystemTap ನ ದೋಷಪತ್ತೆ ಮಾಡುವ ಸಂದೇಶಗಳಿಗೆ ಹಲವಾರು ಸುಧಾರಣೆಗಳನ್ನು ಮಾಡಲಾಗಿದೆ:
    • ಹಲವು ದೋಷ ಸಂದೇಶಗಳು ಸಂಬಂಧಿತ ಮಾಹಿತಿ (ಮ್ಯಾನುವಲ್) ಪುಟಗಳಿಗೆ ಈಗ ಪ್ರತಿ-ಉಲ್ಲೇಖಗಳನ್ನು ಹೊಂದಿರುತ್ತವೆ. ಈ ಪುಟಗಳು ದೋಷಗಳನ್ನು ವಿವರಿಸುತ್ತವೆ ಮತ್ತು ಸರಿಪಡಿಕೆಗಳನ್ನು ಸಲಹೆ ಮಾಡುತ್ತದೆ.
    • ಸ್ಕ್ರಿಪ್ಟಿನ ಇನ್‌ಪುಟ್ ಕಾಗುಣಿತ ದೋಷಗಳನ್ನು ಹೊಂದಿದೆ ಎಂಬ ಸಂಶಯ ಬಂದಲ್ಲಿ, ಒಂದು ವಿಂಗಡಿಸಲಾದ ಸಲಹೆಯ ಪಟ್ಟಿಯನ್ನು ಬಳಕೆದಾರರಿಗೆ ನೀಡಲಾಗುತ್ತದೆ. ಈ ಸಲಹೆಯ ಸೌಲಭ್ಯವನ್ನು ತನಿಖೆ ಮಾಡಲಾದ ಕ್ರಿಯೆಯ ಹೆಸರುಗಳು, ಮಾರ್ಕರುಗಳು, ವೇರಿಯೇಬಲ್‌ಗಳು, ಕಡತಗಳು, ಅಲಿಯಾಸ್‌ಗಳು ಮತ್ತು ಇತರೆಯವುಗಳಂತಹ ಬಳಕೆದಾರ-ನಿಶ್ಚಿತ ಹೆಸರುಗಳು ಅಂಗೀಕರಿಸಲಾಗುವ ಹೆಸರುಗಳೊಂದಿಗೆ ಹೊಂದಿಕೆಯಾಗದೆ ಇದ್ದಂತಹ ಹಲವಾರು ಸನ್ನಿವೇಶಗಳಲ್ಲಿ ಬಳಸಲಾಗುತ್ತದೆ.
    • ನಕಲುಪ್ರತಿ-ನಿವಾರಿಸುವಿಕೆಯ ದೋಷಪತ್ತೆ ಮಾಡುವಿಕೆಯನ್ನು ಉತ್ತಮಗೊಳಿಸಲಾಗಿದೆ.
    • ಸಂದೇಶಗಳನ್ನು ಅರ್ಥೈಸಿಕೊಳ್ಳುವುದನ್ನು ಸುಲಭವಾಗಿಸಲು ANSI ಕಲರಿಂಗ್ ಅನ್ನು ಸೇರಿಸಲಾಗಿದೆ.

12.4.3. Valgrind

Red Hat Enterprise Linux 7.0 ರಲ್ಲಿ ಅನ್ವಯಗಳನ್ನು ಪ್ರೊಫೈಲ್ ಮಾಡಲು ಇರುವ ಹಲವಾರು ಉಪಕರಣಗಳೊಂದಿಗೆ ನೀಡಲಾಗುವ ಒಂದು ಇನ್‌ಸ್ಟ್ರುಮೆಂಟೇಶನ್ ಫ್ರೇಮ್‌ವರ್ಕ್ ಆಗಿರುವಂತಹ Valgrind ಅನ್ನು ಸೇರಿಸಲಾಗಿದೆ. ಈ ಆವೃತ್ತಿಯು Valgrind 3.9.0 ಬಿಡುಗಡೆಯ ಮೇಲೆ ಆಧರಿತವಾಗಿದೆ ಮತ್ತು Red Hat Enterprise Linux 6 ಹಾಗೂ Valgrind 3.8.1 ರ ಮೇಲೆ ಆಧರಿತವಾದ Red Hat Developer Toolset 2.0 ಕೌಂಟರ್‌ಪಾರ್ಟಿಗೆ ಸಂಬಂಧಿಸಿದಂತೆ ಹಲವಾರು ಸುಧಾರಣೆಗಳನ್ನು ಒಳಗೊಂಡಿದೆ.
Red Hat Enterprise Linux 7.0 ನಲ್ಲಿ ಸೇರಿಸಲಾದ Valgrind ಈ ಕೆಳಗಿನ ಗಮನಾರ್ಹ ಮುಖ್ಯಾಂಶಗಳನ್ನು ಹೊಂದಿರುತ್ತದೆ:
  • DFP ಸವಲತ್ತನ್ನು ಅನುಸ್ಥಾಪಿಸಲಾದ ಆತಿಥೇಯಗಳಲ್ಲಿ IBM System z ಡೆಸಿಮಲ್ ಫ್ಲೋಟಿಂಗ್ ಪಾಯಿಂಟ್ ಸೂಚನೆಗಳಿಗಾಗಿ ಬೆಂಬಲ.
  • IBM POWER8 (Power ISA 2.07) ಸೂಚನೆಗಳಿಗಾಗಿನ ಬೆಂಬಲ.
  • Intel AVX2 ಸೂಚನೆಗಳಿಗಾಗಿ ಬೆಂಬಲ. ಇದು ಕೇವಲ 64-ಬಿಟ್‌ ಆರ್ಕಿಟೆಕ್ಚರುಗಳಿಗಾಗಿ ಮಾತ್ರ ಲಭ್ಯವಿರುತ್ತದೆ ಎನ್ನುವುದನ್ನು ನೆನಪಿಡಿ.
  • Intel Transactional Synchronization Extensions ಆದಂತಹ, ರಿಸ್ಟ್ರಿಕ್ಟೆಡ್ ಟ್ರಾನ್‌ಸ್ಯಾಕ್ಶನ್ ಮೆಮೊರಿ (RTM) ಮತ್ತು ಹಾರ್ಡ್‌ವೇರ್ ಲಾಕ್ ಎಲಿಸನ್ (HLE) ಎರಡಕ್ಕೂ ಆರಂಭಿಕ ಬೆಂಬಲ.
  • IBM PowerPC ಯಲ್ಲಿ ಯಂತ್ರಾಂಶದ ಪರಸ್ಪರ ವ್ಯವಹಾರದ ಮೆಮೊರಿಗಾಗಿ ಆರಂಭಿಕ ಬೆಂಬಲ.
  • ಅನುವಾದ ಕ್ಯಾಶೆಯ ಪೂರ್ವನಿಯೋಜಿತ ಕ್ಯಾಶ್‌ನ ಗಾತ್ರವನ್ನು 16 ವಿಭಾಗಕ್ಕೆ ಹೆಚ್ಚಿಸಲಾಗಿದ್ದು, ಇದು ದೊಡ್ಡ ಅನ್ವಯಗಳಿಗೆ ಇನ್‌ಸ್ಟ್ರುಮೆಂಟೇಶನ್‌ ಮತ್ತು ದೊಡ್ಡ ಪ್ರಮಾಣದ ಕೋಡ್‌ಗಾಗಿ ಶೇಖರಣೆಯ ಅಗತ್ಯವಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಇದೇ ಕಾರಣಕ್ಕಾಗಿ, ಟ್ರ್ಯಾಕ್‌ ಮಾಡಬಹುದಾದ ಮೆಮೊರಿ ಮ್ಯಾಪ್ ಮಾಡಲಾದ ವಿಭಾಗಗಳನ್ನು 6 ಕ್ಕೆ ಹೆಚ್ಚಿಸಲಾಗಿದೆ. ಅನುವಾದದ ಕ್ಯಾಶ್‌ನಲ್ಲಿನ ಗರಿಷ್ಟ ಸಂಖ್ಯೆಯ ವಿಭಾಗಗಳನ್ನು --num-transtab-sectors ಎಂಬ ಹೊಸ ಫ್ಲ್ಯಾಗ್‌ ಮುಖಾಂತರ ನಿಯಂತ್ರಿಸಬಹುದಾಗಿದೆ.
  • Valgrind ಇನ್ನು ಮುಂದೆ ಓದುವ ಸಲುವಾಗಿ ಸಂಪೂರ್ಣ ವಸ್ತುವಿನ ಮ್ಯಾಪಿಂಗ್ ಅನ್ನು ರಚಿಸುವುದಿಲ್ಲ. ಬದಲಿಗೆ, ಓದುವಿಕೆಯನ್ನು ಸಣ್ಣದಾದ ನಿಶ್ಚಿತ ಅಗಲದ ಬಫರ್ ಮುಖಾಂತರ ಮಾಡಲಾಗುತ್ತದೆ. ಇದು ದೊಡ್ಡದಾದ ಹಂಚಲ್ಪಟ್ಟ ವಸ್ತುಗಳಿಂದ ಡೀಬಗ್ಗಿಂಗ ಮಾಹಿತಿಯನ್ನು Valgrind ಓದುವಾಗ ಮೆಮೊರಿ ಸ್ಪೈಕ್‌ಗಳು ಉಂಟಾಗದಂತೆ ತಪ್ಪಿಸುತ್ತದೆ.
  • ಬಳಸಲಾದ ಸಪ್ರೆಶನ್‌ಗಳ ಪಟ್ಟಿಯು (-v ಆಯ್ಕೆಯನ್ನು ಸೂಚಿಸಿದಾಗ ತೋರಿಸಲಾಗುತ್ತದೆ) ಈಗ ಪ್ರತಿಯೊಂದು ಬಳಸಲಾದ ಸಪ್ರೆಶನ್‌ಗಾಗಿ, ಕಡತದ ಹೆಸರು ಮತ್ತು ಸಪ್ರೆಶನ್ ಅನ್ನು ಸೂಚಿಸಿರುವಂತಹ ಸಾಲಿನ ಸಂಖ್ಯೆಯನ್ನು ತೋರಿಸುತ್ತದೆ.
  • --sigill-diagnostics ಎಂಬ ಹೊಸ ಫ್ಲ್ಯಾಗ್ ಅನ್ನು ಬಳಸಿಕೊಂಡು ಜಸ್ಟ್-ಇನ್-ಟೈಮ್ (JIT) ಕಂಪೈಲರ್‌ಗೆ ಅನುವಾದಿಸಲು ಸಾಧ್ಯವಾಗದೆ ಇರುವ ಸೂಚನೆಗಳು ಅದಕ್ಕೆ ಎದುರಾದಲ್ಲಿ ದೋಷನಿದಾನ ಸಂದೇಶನ್ನು ಮುದ್ರಿಸಬೇಕೆ ಎಂಬುದನ್ನು ನಿಯಂತ್ರಿಸಬಹುದು. ನಿಜವಾದ ವರ್ತನೆ — ಅನ್ವಯಕ್ಕೆ SIGILL ಸೂಚನೆಯನ್ನು ನೀಡುವಿಕೆ — ಬದಲಾಗುವುದಿಲ್ಲ.
  • Memcheck ಉಪಕರಣವನ್ನು ಈ ಕೆಳಗಿನ ಸೌಲಭ್ಯಗಳೊಂದಿಗೆ ಸುಧಾರಣೆ ಮಾಡಲಾಗಿದೆ:
    • ವೆಕ್ಟರ್ ಆದ ಕೋಡ್‌ ಅನ್ನು ನಿಭಾಯಿಸುವಲ್ಲಿ ಸುಧಾರಣೆಗಳು, ಇದರಿಂದಾಗಿ ಕಡಿಮೆ ಸಂಖ್ಯೆಯ ತಪ್ಪು ದೋಷ ವರದಿಗಳಿಗೆ ಕಾರಣವಾಗುತ್ತದೆ. ಈ ಬದಲಾವಣೆಗಳ ಪ್ರಯೋಜನವನ್ನು ಪಡೆದುಕೊಳ್ಳಲು --partial-loads-ok=yes ಫ್ಲ್ಯಾಗ್‌ ಅನ್ನು ಬಳಸಿ.
    • ಸೋರಿಕೆ ಪರೀಕ್ಷಕದಲ್ಲಿ ಉತ್ತಮ ನಿಯಂತ್ರಣ. ಯಾವ ಬಗೆಯ ಸೋರಿಕೆಗಳನ್ನು (definite/indirect/possible/reachable) ತೋರಿಸಬೇಕು, ಯಾವುದನ್ನು ದೋಷಗಳು ಎಂದು ಪರಿಗಣಿಸಬೇಕು, ಮತ್ತು ಯಾವುದನ್ನು ಒಂದು ನೀಡಲಾದ ಸೋರಿಕೆ ಸಪ್ರೆಶನ್ ಮುಖಾಂತರ ನಿಗ್ರಹಿಸಬೇಕು, ಎನ್ನುವುದನ್ನು ಸೂಚಿಸಲು ಸಾಧ್ಯವಿರುತ್ತದೆ. ಇದನ್ನು ಸಪ್ರೆಶನ್ ನಮೂದುಗಳಲ್ಲಿ ಅನುಕ್ರಮವಾಗಿ --show-leak-kinds=kind1,kind2,.., --errors-for-leak-kinds=kind1,kind2,.. ಮತ್ತು ಒಂದು ಐಚ್ಛಿಕ match-leak-kinds: ಸಾಲನ್ನು ಸೇರಿಸುವ ಮೂಲಕ ಮಾಡಬಹುದಾಗಿರುತ್ತದೆ.
      ಸೋರಿಕೆಯ ಸಪ್ರೆಶನ್‌ಗಳು ಈ ಹೊಸ ಸಾಲನ್ನು ಹೊಂದಿರುತ್ತವೆ ಮತ್ತು ಆದ್ದರಿಂದ ಅವುಗಳು ಹಿಂದಿನ ಬಿಡುಗಡೆಗಳಿಗಿಂತ ಹೆಚ್ಚು ನಿಶ್ಚಿತವಾಗಿರುತ್ತವೆ. ಹಿಂದಿನ ಬಿಡುಗಡೆಗಳಂತೆಯೆ ಇರುವ ವರ್ತನೆಯನ್ನು ಪಡೆಯಲು, ಉತ್ಪಾದಿಸಲಾದ ಸಪ್ರೆಶನ್‌ಗಳನ್ನು ಬಳಸುವ ಮೊದಲು ಅದರಿಂದ match-leak-kinds: ಸಾಲುಗಳನ್ನು ತೆಗೆದುಹಾಕಿ.
    • ಉತ್ತಮವಾದ ತಪ್ಪು ಕಂಡುಹಿಡಿಯುವ ವಿಧಾನವನ್ನು ಬಳಸಿಕೊಂಡು ಸೋರಿಕೆ ಪರಿಶೀಲನೆಗಾರನಿಂದ ಕಡಿಮೆ ಮಾಡಲಾದ possible leak ವರದಿಗಳು. ಲಭ್ಯವಿರುವ ತಪ್ಪು ಕಂಡುಹಿಡಿಯುವ ವಿಧಾನಗಳು ಅನೇಕ ಪರಂಪರೆಯನ್ನು ಬಳಸಿಕೊಂಡು std::stdstring ಗೆ, ಡಿಸ್ಟ್ರಕ್ಟರುಗಳನ್ನು ಹೊಂದಿರುವ ಘಟಕಗಳೊಂದಿಗೆ new[] ನಿಯೋಜಿತ ವ್ಯೂಹಗಳಿಗೆ (ಅರೆ), ಮತ್ತು ಒಂದು C++ ಆಬ್ಜೆಕ್ಟ್ ನ ಒಂದು ಆಂತರಿಕ ಭಾಗಕ್ಕೆ ಸೂಚಿಸುವ ಸೂಚಕಗಳಿಗೆ ಮಾನ್ಯವಾದ ಆಂತರಿಕ ಸೂಚಕಗಳನ್ನು ಪತ್ತೆ ಮಾಡುವಿಕೆಯನ್ನು ಒದಗಿಸುತ್ತದೆ. --leak-check-heuristics=heur1,heur2,... ಆಯ್ಕೆಯನ್ನು ಬಳಸಿಕೊಂಡು ಅವುಗಳನ್ನು ಪ್ರತ್ಯೇಕವಾಗಿ ಆರಿಸಬಹುದು.
    • ಹೀಪ್-ನಿಯೋಜಿತ ಬ್ಲಾಕ್‌ಗಳಿಗಾಗಿ ಸ್ಟಾಕ್‌ಟ್ರೇಸ್‌ ಸ್ವಾಧೀನದ ಉತ್ತಮ ನಿಯಂತ್ರಣ. --keep-stacktraces ಆಯ್ಕೆಯನ್ನು ಬಳಸಿಕೊಂಡು, ಪ್ರತಿ ನಿಯೋಜನೆ ಮತ್ತು ಡಿಅಲೋಕೇಶನ್‌ಗಾಗಿ ಸ್ಟಾಕ್‌ ಟ್ರೇಸ್‌ ಅನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎನ್ನುವುದನ್ನು ಸ್ವತಂತ್ರವಾಗಿ ನಿಯಂತ್ರಿಸಲು ಸಾಧ್ಯವಿರುತ್ತದೆ. ಇದನ್ನು ಉತ್ತಮವಾದ "use after free" ದೋಷಗಳನ್ನು ರಚಿಸಲು ಅಥವ ಕಡಿಮೆ ಮಾಹಿತಿಯನ್ನು ರೆಕಾರ್ಡ್ ಮಾಡುವ ಮೂಲಕ Valgrind ನ ಸಂಪನ್ಮೂಲ ಬಳಕೆಯನ್ನು ಕಡಿಮೆ ಮಾಡಲು ಬಳಸಬಹುದಾಗಿರುತ್ತದೆ.
    • ಸೋರಿಕೆ ಸಪ್ರೆಶನ್‌ ಬಳಕೆಯ ಉತ್ತಮ ವರದಿ ಮಾಡುವಿಕೆ. ಬಳಸಲಾದ ಸಪ್ರೆಶನ್‌ಗಳ ಪಟ್ಟಿಯು ಈಗ (-v ಆಯ್ಕೆಯನ್ನು ಸೂಚಿಸಿದಾಗ ತೋರಿಸಲಾಗುತ್ತದೆ) ಕೊನೆಯ ಸೋರಿಕೆ ಹುಡುಕಾಟದ ಸಮಯದಲ್ಲಿ ಪ್ರತಿ ಸಪ್ರೆಶನ್‌ಗಳಿಗಾಗಿ, ಎಷ್ಟು ಬ್ಲಾಕ್‌ಗಳು ಮತ್ತು ಬೈಟ್‌ಗಳನ್ನು ಅದು ನಿಗ್ರಹಿಸಿದೆ ಎನ್ನುವುದನ್ನು ತೋರಿಸುತ್ತದೆ.
  • Valgrind GDB ಪೂರೈಕೆಗಣಕ ಸಂಘಟಿಸುವಿಕೆಯನ್ನು ಈ ಕೆಳಗಿನ ಮೇಲ್ವಿಚಾರಣೆ ಆದೇಶಗಳೊಂದಿಗೆ ಸುಧಾರಣೆ ಮಾಡಲಾಗಿದೆ:
    • ಒಂದು ಹೊಸ ಮೇಲ್ವಿಚಾರಣಾ ಆದೇಶವಾದ v.info open_fds ತೆರೆದ ಕಡತ ವಿವರಣೆಗಾರಗಳನ್ನು ಮತ್ತು ಹೆಚ್ಚುವರಿ ವಿವರಗಳ ಪಟ್ಟಿಯನ್ನು ಒದಗಿಸುತ್ತದೆ.
    • ಒಂದು ಹೊಸ ಮೇಲ್ವಿಚಾರಣ ಆದೇಶವಾದ v.info execontext ಎನ್ನುವುದು, Valgrind ಇಂದ ರೆಕಾರ್ಡ್ ಮಾಡಲಾದ ಸ್ಟ್ಯಾಕ್‌ ಟ್ರೇಸ್‌ಗಳ ಕುರಿತು ಮಾಹಿತಿಯನ್ನು ತೋರಿಸುತ್ತದೆ.
    • ಒಂದು ಹೊಸ ಮೇಲ್ವಿಚಾರಣ ಆದೇಶವಾದ v.do expensive_sanity_check_general ಎನ್ನುವುದು, ಕೆಲವು ಆಂತರಿಕ ಸ್ಥಿರತೆಯ ಪರಿಶೀಲನೆಯನ್ನು ಮಾಡುತ್ತದೆ.

12.5. ಪ್ರೊಗ್ರಾಮಿಂಗ್ ಭಾಷೆಗಳು

Ruby 2.0.0

Red Hat Enterprise Linux 7.0 ರಲ್ಲಿ ಇತ್ತೀಚಿನ Ruby ಆವೃತ್ತಿಯಾದ 2.0.0 ಅನ್ನು ಒದಗಿಸುತ್ತದೆ. ಆವೃತ್ತಿ 2.0.0 ಮತ್ತು Red Hat Enterprise Linux 6 ರಲ್ಲಿನ 1.8.7 ರ ನಡುವಿನ ಅತ್ಯಂತ ಗಮನಾರ್ಹವಾದ ಬದಲಾವಣೆಗಳು ಈ ಕೆಳಗಿನಂತಿವೆ:
  • YARV (ಯೆಟ್ ಅನದರ್ Ruby VM) ಎನ್ನುವು ಹೊಸ ಇಂಟರ್‌ಪ್ರಿಟರ್, ಇದು ಲೋಡ್ ಆಗುವ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವಿಶೇಷವಾಗಿ ದೊಡ್ಡ ವೃಕ್ಷಗಳು ಅಥವ ಕಡತಗಳನ್ನು ಹೊಂದಿರುವ ಅನ್ವಯಗಳಿಗಾಗಿ.
  • ಹೊಸ ಮತ್ತ ವೇಗವಾದ "Lazy Sweep" ಕಸ ಸಂಗ್ರಾಹಕ.
  • Ruby ಈಗ ವಾಕ್ಯಾಂಶ ಎನ್ಕೋಡಿಂಗ್ ಅನ್ನು ಬೆಂಬಲಸುತ್ತದೆ.
  • Ruby ಈಗ ಗ್ರೀನ್‌ ತ್ರೆಡ್‌ಗಳ ಬದಲಿಗೆ ಸ್ಥಳೀಯ ತ್ರೆಡ್‌ಗಳನ್ನು ಬೆಂಬಲಿಸುತ್ತದೆ.
Ruby 2.0.0 ಕುರಿತಾದ ಹೆಚ್ಚಿನ ಮಾಹಿತಿಗಾಗಿ ಪರಿಯೋಜನೆಯ ಅಪ್‌ಸ್ಟ್ರೀಮ್ ಪುಟಗಳನ್ನು ನೋಡಿ: https://www.ruby-lang.org/en/.

Python 2.7.5

Red Hat Enterprise Linux 7.0 ರಲ್ಲಿ Python 2.7.5 ಅನ್ನು ಸೇರಿಸಲಾಗಿದ್ದು, ಇದು Python 2.7 ಸರಣಿಯ ಇತ್ತೀಚಿನ ಬಿಡುಗಡೆಯಾಗಿದೆ. ಈ ಆವೃತ್ತಿಯು ಕಾರ್ಯನಿರ್ವಹಣೆಯಲ್ಲಿನ ಹಲವಾರು ಸುಧಾರಣೆಗಳನ್ನು ಹೊಂದಿರುತ್ತದೆ ಮತ್ತು Python 3 ರೊಂದಿಗೆ ಫಾರ್ವಾರ್ಡ್ (ಮುಂದಿನ) ಹೊಂದಾಣಿಕೆಯನ್ನು ಒದಗಿಸುತ್ತದೆ. Python 2.7.5 ರಲ್ಲಿನ ಬದಲಾವಣೆಗಳಲ್ಲಿ ಅತ್ಯಂತ ಗಮನಾರ್ಹವಾದವುಗಳೆಂದರೆ:
  • ಒಂದು ಕ್ರಮವಾದ ಶಬ್ಧಕೋಶದ ಬಗೆ
  • ಒಂದು ವೇಗವಾದ I/O ಮಾಡ್ಯೂಲ್
  • ಸೆಟ್‌ ಮತ್ತು ಶಬ್ಧಕೋಶದ ಗ್ರಹಿಕೆಗಳು
  • sysconfig ಮಾಡ್ಯೂಲ್
ಬದಲಾವಣೆಗಳ ಸಂಪೂರ್ಣ ಪಟ್ಟಿಗಾಗಿ, http://docs.python.org/dev/whatsnew/2.7.html ಅನ್ನು ನೋಡಿ

Java 7 ಮತ್ತು ಅನೇಕ JDKಗಳು

Red Hat Enterprise Linux ರಲ್ಲಿ OpenJDK7 ಅನ್ನು ಪೂರ್ವನಿಯೋಜಿತ Java Development Kit (JDK) ಆಗಿ ಸೇರಿಸಲಾಗಿದೆ ಮತ್ತು Java 7 ಪೂರ್ವನಿಯೋಜಿತ Java ಆವೃತ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ Java 7 ಪ್ಯಾಕೇಜುಗಳು (java-1.7.0-openjdk, java-1.7.0-oracle, java-1.7.0-ibm) ಕರ್ನಲ್‌ನಂತೆಯೆ ಸಮಾನಾಂತರವಾಗಿ ಅನೇಕ ಆವೃತ್ತಿಗಳನ್ನು ಅನುಸ್ಥಾಪಿಸುವುದನ್ನು ಅನುಮತಿಸುತ್ತದೆ.
ಸಮಾನಾಂತರ ಅನುಸ್ಥಾಪನೆಗೆ ಅವಕಾಶ ನೀಡುವುದರಿಂದ ಬಳಕೆದಾರರು ಏಕಕಾಲಕ್ಕೆ ಒಂದೇ ರೀತಿಯ JDK ಯ ಅನೇಕ ಆವೃತ್ತಿಗಳನ್ನು ಪ್ರಯತ್ನಿಸಲು ಸಾಧ್ಯವಿರುತ್ತದೆ, ಇದರಿಂದ ಕಾರ್ಯನಿರ್ವಹಣೆಯನ್ನು ಸರಿಪಡಿಸಲು ಮತ್ತು ತೊಂದರೆಗಳನ್ನು ಡೀಬಗ್‌ ಮಾಡಲು ಸಾಧ್ಯವಿರುತ್ತದೆ. ನಿರ್ದಿಷ್ಟ JDK ಯನ್ನು ಪರ್ಯಾಯವಾದವುಗಳ ಮೂಲಕ ಈ ಹಿಂದಿನಂತೆ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿರುತ್ತದೆ.

ಅಧ್ಯಾಯ 13. ನೆಟ್‌ವರ್ಕಿಂಗ್

ಜಾಲಬಂಧ ಟೀಮಿಂಗ್

ಜಾಲಬಂಧ ಟೀಮಿಂಗ್ ಎನ್ನುವುದನ್ನು ಕೊಂಡಿ ಒಟ್ಟುಗೂಡಿಕೆಗಾಗಿನ ಬಾಂಡಿಂಗ್‌ಗೆ ಪರ್ಯಾಯವಾಗಿ ಪರಿಚಯಿಸಲಾಗಿದೆ. ಇದನ್ನು ನೋಡಿಕೊಳ್ಳಲು, ಡೀಬಗ್ ಮಾಡಲು ಮತ್ತು ವಿಸ್ತರಿಸಲು ಸುಲಭವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರಿಗಾಗಿ ಇದು ಕಾರ್ಯನಿರ್ವಹಣೆ ಮತ್ತು ಸುಲಭ ಹೊಂದಿಕೆಯಲ್ಲಿ ಸುಧಾರಣೆಗಳನ್ನು ಒದಗಿಸುತ್ತದೆ ಮತ್ತು ಎಲ್ಲಾ ಹೊಸ ಅನುಸ್ಥಾಪನೆಗಳಿಗಾಗಿ ಪರಿಶೀಲಿಸುವ ಅಗತ್ಯವಿರುತ್ತದೆ.

NetworkManager

NetworkManager ಅನ್ನು ಪೂರೈಕೆಗಣಕದ ಅನ್ವಯಗಳಲ್ಲಿ ಬಳಸಲು ಸೂಕ್ತವಾಗಲೆಂದು ಹಲವಾರು ಸುಧಾರಣೆಗಳನ್ನು ಮಾಡಲಾಗಿದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, NetworkManager ಪೂರ್ವನಿಯೋಜಿತವಾಗಿ ಸಂಪಾದಕಗಳಿಂದ ಅಥವ ನಿಯೋಜನಾ ಉಪಕರಣಗಳಿಂದ ರಚಿಸಲಾದಂತಹ ಯಾವುದೆ ಸಂರಚನಾ ಕಡತದ ಬದಲಾವಣೆಗಳನ್ನು ಗಮನಿಸುವುದಿಲ್ಲ. ಇದು nmcli connection reload ಆದೇಶದ ಮೂಲಕ ವ್ಯವಸ್ಥಾಪಕರು ಹೊರಗಿನ ಬದಲಾವಣೆಗಳನ್ನು ಇದಕ್ಕೆ ತಿಳಿಸಲು ಅವಕಾಶ ನೀಡುತ್ತದೆ. NetworkManager ನ D-Bus API ಅಥವ NetworkManager ಆದೇಶ-ಸಾಲಿನ ಉಪಕರಣವಾದ nmcli ಅನ್ನು ಬಳಸಿಕೊಂಡು ಮಾಡಲಾದ ಬದಲಾವಣೆಗಳು, ಇನ್ನೂ ಸಹ ತಕ್ಷಣವೆ ಕಾರ್ಯರೂಪಕ್ಕೆ ಬರುತ್ತವೆ.
NetworkManager ದೊಂದಿಗೆ ಸಂವಹಿಸಲು ಬಳಕೆದಾರರಿಗೆ ಅನುಮತಿಸಲು nmcli ಉಪಕರಣವನ್ನು ಪರಿಚಯಿಸಲಾಗಿದೆ.

chrony ಸೂಟ್

chrony ಎಂಬ ಸವಲತ್ತುಗಳ ಸೂಟ್ ಸಾಂಪ್ರದಾಯಿಕ ಶಾಶ್ವತವಾಗಿ ಜಾಲಬಂಧವನ್ನು ಹೊಂದಿರವವುಗಳಿಗೆ, ಯಾವಾಗಲೂ ಮೀಸಲಿರಿಸಲಾದ ಪೂರೈಕೆಗಣಕ ವರ್ಗಕ್ಕೆ ಸರಿಯಾಗಿ ಹೊಂದಿಕೆಯಾಗದ ವ್ಯವಸ್ಥೆಗಳಲ್ಲಿನ ಗಡಿಯಾರವನ್ನು ಅಪ್‌ಡೇಟ್ ಮಾಡಲು ಲಭ್ಯವಿರುತ್ತದೆ. chrony ಸೂಟ್ ಅನ್ನು ಪದೇ ಪದೆ ಅಮಾನತುಗೊಳಿಸುವ ಅಥವ ಇಲ್ಲದೆ ಹೋದಲ್ಲಿ ಆಗಾಗ ಒಂದು ಜಾಲಬಂಧದಿಂದ ಸಂಪರ್ಕತಪ್ಪಿಸಿ ಮತ್ತೆ ಸಂಪರ್ಕ ಜೋಡಿಸುವ ಎಲ್ಲಾ ವ್ಯವಸ್ಥೆಗಳಿಗಾಗಿ ಪರಿಗಣಿಸಬೇಕಿರುತ್ತದೆ. ಉದಾಹರಣೆಗೆ ಮೊಬೈಲ್ ಮತ್ತು ವರ್ಚುವಲ್ ವ್ಯವಸ್ಥೆಗಳು.

ಡೈನಮಿಕ್ ಫೈರ್ವಾಲ್ ಡೀಮನ್, firewalld ಸೂಟ್‌

Red Hat Enterprise Linux 7.0 ಅನ್ನು ಡೈನಮಿಕ್ ಫೈರ್ವಾಲ್ ಡೀಮನ್‌ ಆದ, firewalldನೊಂದಿಗೆ ಕಳುಹಿಸಲಾಗುತ್ತದೆ, ಇದು ಒಂದು ಜಾಲಬಂಧಕ್ಕೆ ಮತ್ತಯ ಅದಕ್ಕೆ ಸಂಬಂಧಿಸಿದ ಸಂಪರ್ಕಗಳು ಮತ್ತು ಸಂಪರ್ಕಸಾಧನಗಳಿಗಾಗಿ ನಂಬಿಕೆ ಮಟ್ಟವನ್ನು ನಿಯೋಜಿಸಲು ಜಾಲಬಂಧ "zones" ಗಾಗಿನ ಬೆಂಬಲದೊಂದಿಗೆ ಕ್ರಿಯಾತ್ಮಕವಾಗಿ ನಿರ್ವಹಿಸಲಾದ ಫೈರ್ವಾಲ್‌ ಅನ್ನು ಒದಗಿಸುತ್ತದೆ. ಇದು IPv4 ಮತ್ತು IPv6 ಫೈರ್ವಾಲ್‌ ಸಿದ್ಧತೆಗಳಿಗೆ ಬೆಂಬಲವನ್ನು ಹೊಂದಿರುತ್ತದೆ. ಇದು ಇತರ್ನೆಟ್ ಬ್ರಿಜ್‌ಗಳನ್ನು ಬೆಂಬಲಿಸುತ್ತದೆ ಮತ್ತು ಚಾಲನಾ ಸಮಯ ಹಾಗೂ ಶಾಶ್ವತ ಸಂರಚನಾ ಆಯ್ಕೆಗಳನ್ನು ಹೊಂದಿರುತ್ತದೆ. ಇದು ಫೈರ್ವಾಲ್ ನಿಯಮಗಳನ್ನು ನೇರವಾಗಿ ಸೇರಿಸಲು ಸೇವೆಗಳಿಗಾಗಿ ಒಂದು ಸಂಪರ್ಕಸಾಧನ ಅಥವ ಅನ್ವಯಗಳನ್ನು ಹೊಂದಿರುತ್ತದೆ.

DNSSEC

DNSSEC ಎನ್ನುವುದು ಒಂದು DNS ನೇಮ್‌ಸರ್ವರಿನ ಮೂಲವನ್ನು ಮತ್ತು ಅವುಗಳ ಸಾಗಣೆಯ ಸಮಯದಲ್ಲಿ ಮಧ್ಯಪ್ರವೇಶವು ಉಂಟಾಗಿದೆಯೆ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಅವುಗಳಿಂದ ಬಂದ ಪ್ರತಿಕ್ರಿಯೆಗಳನ್ನು ದೃಢೀಕರಿಸಲು ಮತ್ತು ಪರಿಶೀಲಿಸಲು DNS ಕ್ಲೈಂಟ್ ಅನ್ನು ಸಕ್ರಿಯಗೊಳಿಸುವ ಒಂದು ಡೊಮೇನ್ ನೇಮ್ ಸಿಸ್ಟಮ್ ಸೆಕ್ಯುರಿಟಿ ಎಕ್ಸ್‌ಟೆನ್ಶನ್ಸ್ (DNSSEC) ಆಗಿದೆ.

OpenLMI

Red Hat Enterprise Linux 7.0 ರಲ್ಲಿ OpenLMI ಪರಿಯೋಜನೆಯನ್ನು ಸೇರಿಸಲಾಗಿದೆ, ಇದು ಲಿನಕ್ಸ್ ವ್ಯವಸ್ಥೆಗಳಿಗಾಗಿ ಸಾಮಾನ್ಯ ರಚನಾ ವ್ಯವಸ್ಥೆಯನ್ನು ಒದಗಿಸುತ್ತದೆ. ಇದು ಬಳಕೆದಾರರಿಗೆ ಯಂತ್ರಾಂಶ, ಕಾರ್ಯಾಚರಣೆ ವ್ಯವಸ್ಥೆಗಳು, ಮತ್ತು ವ್ಯವಸ್ಥೆಯ ಸೇವೆಗಳನ್ನು ಸಂರಚಿಸಲು, ನಿರ್ವಹಿಸಲು ಮತ್ತು ಮೇಲ್ವಿಚಾರಣೆ ನಡೆಸಲು ಅವಕಾಶ ನೀಡುತ್ತದೆ. OpenLMI ಎನ್ನುವುದು ಉತ್ಪಾದನಾ ಪೂರೈಕೆಗಣಕಗಳನ್ನು ಸಂರಚಿಸುವುದನ್ನು ಮತ್ತು ನಿರ್ವಹಿಸುವುದನ್ನು ಸರಳಗೊಳಿಸುವ ಉದ್ಧೇಶವನ್ನು ಹೊಂದಿದೆ.
OpenLMI ಅನ್ನು Red Hat Enterprise Linux ನ ಅನೇಕ ಆವೃತ್ತಿಗಳಿಗೆ ಸಾಮಾನ್ಯ ನಿರ್ವಹಣಾ ಸಂಪರ್ಕಸಾಧನವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಈಗಿರುವ ಉಪಕರಣಗಳ ಮೇಲೆಯೆ ನಿರ್ಮಾಣಗೊಳ್ಳುತ್ತದೆ, ಹಾಗೂ ಒಳಗಿರುವ ವ್ಯವಸ್ಥೆಯ ಸಂಕೀರ್ಣತೆಯನ್ನು ಗಣಕ ವ್ಯವಸ್ಥಾಪಕರಿಗೆ ಕಾಣಿಸಿಕೊಳ್ಳದಂತೆ ಅಡಗಿಸುವ ಒಂದು ಸಾಂಕೇತಿಕ ಪದರವನ್ನು ಒದಗಿಸುತ್ತದೆ.
OpenLMI ನಲ್ಲಿ ನಿರ್ವಹಿಸಲಾಗುತ್ತಿರುವ ವ್ಯವಸ್ಥೆಯಲ್ಲಿ ಅನುಸ್ಥಾಪಿಸಲಾದ ವ್ಯವಸ್ಥೆಯಾದ ಒಂದು OpenLMI ನಲ್ಲಿ ನಿಯಂತ್ರಕ ನಿರ್ವಹಣಾ ಮಧ್ಯವರ್ತಿಗಳನ್ನು ಹೊಂದಿರುತ್ತದೆ, ಇದು ಮಧ್ಯವರ್ತಿಗಳನ್ನು ನಿರ್ವಹಿಸುತ್ತದೆ ಮತ್ತು ಅವುಗಳಿಗಾಗಿ ಒಂದು ಸಂಪರ್ಕಸಾಧನವನ್ನು, ಹಾಗೂ OpenLMI ನಿಯಂತ್ರಕಗಳ ಮೂಲಕ ವ್ಯವಸ್ಥೆಯ ನಿರ್ವಹಣಾ ಮಧ್ಯವರ್ತಿಗಳನ್ನು ಕಾಲ್ ಮಾಡುವ ಕ್ಲೈಂಟ್‌ ಅನ್ವಯಗಳು ಅಥವ ಸ್ಕ್ರಿಪ್ಟುಗಳನ್ನು ಒದಗಿಸುತ್ತದೆ.
OpenLMI ಬಳಕೆದಾರರಿಗೆ ಇವುಗಳನ್ನು ಅನುಮತಿಸುತ್ತದೆ:
  • ಬೇರ್-ಮೆಟಲ್ ಪೂರೈಕೆಗಣಕಗಳು ಮತ್ತು ವರ್ಚುವಲ್ ಗಣಕದ ಅತಿಥಿಗಳನ್ನು ಸಂರಚಿಸಲು, ನಿರ್ವಹಿಸಲು ಮತ್ತು ಮೇಲ್ವಿಚಾರಣೆ ನಡೆಸಲು;
  • ಸ್ಥಳೀಯ ಅಥವ ದೂರಸ್ಥ ವ್ಯವಸ್ಥೆಗಳನ್ನು ಸಂರಚಿಸಲು, ನಿರ್ವಹಿಸಲು ಮತ್ತು ನೋಡಿಕೊಳ್ಳಲು;
  • ಶೇಖರಣೆ ಮತ್ತು ಜಾಲಬಂಧಗಳನ್ನು ಸಂರಚಿಸಲು, ನಿರ್ವಹಿಸಲು ಮತ್ತು ನೋಡಿಕೊಳ್ಳಲು;
  • C/C++, Python, Java, ಅಥವ ಆದೇಶ-ಸಾಲಿನ ಸಂಪರ್ಕಸಾಧನದಿಂದ ವ್ಯವಸ್ಥೆಯ ನಿರ್ವಹಣಾ ಕಾರ್ಯಭಾರಗಳನ್ನು ಕಾಲ್ ಮಾಡಲು.
OenLMI ತಂತ್ರಾಂಶ ಪ್ರೊವೈಡರ್ ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ಬೆಂಬಲಿಸಲಾಗಿದೆ ಎಂಬುದನ್ನು ದಯವಿಟ್ಟು ನೆನಪಡಿ. ತಂತ್ರಾಂಶವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಕೆಲವು ಕಾರ್ಯಾಚರಣೆಗಳು ಅತ್ಯಂತ ಹೆಚ್ಚು ಸಂಪನ್ಮೂಲಗಳನ್ನು ಬಳಸಬಹುದು.
OpenLMI ಕುರಿತು ಹೆಚ್ಚಿನ ಮಾಹಿತಿಗಾಗಿ, http://www.openlmi.org ಅನ್ನು ನೋಡಿ.

qlcnic ಚಾಲಕದಲ್ಲಿನ SR-IOV ಕ್ರಿಯಾಶೀಲತೆ

qlcnic ಚಾಲಕಕ್ಕೆ ಸಿಂಗಲ್ ರೂಟ್ I/O ವರ್ಚುವಲೈಸೇಶನ್‌ಗಾಗಿನ (SR-IOV) ಬೆಂಬಲವನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಈ ಕ್ರಿಯಾಶೀಲತೆಗಾಗಿನ ಬೆಂಬಲವನ್ನು ನೇರವಾಗಿ QLogic ನಿಂದ ಒದಗಿಸಲಾಗುತ್ತದೆ, ಮತ್ತು ಬಳಕೆದಾರರು QLogic ಹಾಗೂ Red Hat ಗೆ ಅಭಿಪ್ರಾಯಗಳನ್ನು ತಿಳಿಸುವಂತೆ ಉತ್ತೇಜಿಸಲಾಗುತ್ತದೆ. qlcnic ಚಾಲಕದ ಇತರೆ ಕ್ರಿಯಾಶೀಲತೆಯನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

FreeRADIUS 3.0.1

Red Hat Enterprise Linux 7.0 ರಲ್ಲಿ FreeRADIUS ಆವೃತ್ತಿ 3.0.1 ಅನ್ನು ಹೊಂದಿರುತ್ತದೆ, ಇದು ಹಲವಾರು ಹೊಸ ಸೌಲಭ್ಯಗಳನ್ನು ಒದಗಿಸುತ್ತದೆ, ಅವುಗಳಲ್ಲಿ ಅತ್ಯಂತ ಗಮನಾರ್ಹವಾದವುಗಳನ್ನು ಈ ಕೆಳಗೆ ನೀಡಲಾಗಿದೆ:
  • RadSec, ಎನ್ನುವುದು TCP ಮತ್ತು TLS ಮುಖಾಂತರ RADIUS ಡೇಟಾಗ್ರಾಮ್‌ಗಳಿಗಾಗಿನ ಒಂದು ಪ್ರೊಟೊಕಾಲ್‌.
  • Yubikey ಬೆಂಬಲ.
  • ಸಂಪರ್ಕ ಪೂಲಿಂಗ್. radiusd ಪೂರೈಕೆಗಣಕವು ವಿವಿಧ ಬ್ಯಾಕೆಂಡ್‌ಗಳೊಂದಿಗೆ (SQL, LDAP, ಮತ್ತು ಇತರೆಯವುಗಳು) ಸಂಪರ್ಕಗಳನ್ನು ನೋಡಿಕೊಳ್ಳುತ್ತದೆ. ಸಂಪರ್ಕ ಪೂಲಿಂಗ್‌ ಕಡಿಮೆ ಸಂಪನ್ಮೂಲ ಬೇಡಿಕೆಗಳೊಂದಿಗೆ ಉತ್ತಮ ತ್ರೂಪುಟ್ ಅನ್ನು ನೀಡುತ್ತದೆ.
  • ಪೂರೈಕೆಗಣಕದ ಸಂರಚನಾ ಪ್ರೊಗ್ರಾಮಿಂಗ್ ಭಾಷೆಯ ಸಿಂಟ್ಯಾಕ್ಸ್ ಆದಂತಹ, unlang, ಅನ್ನು ವಿಸ್ತರಿಸಲಾಗಿದೆ.
  • ತಾಣ-ನಿಶ್ಚಿತ ಮತ್ತು ಮಾರಾಟಗಾರ-ನಿಶ್ಚಿತ ಗುಣವಿಶೇಷಗಳಿಗಾಗಿನ ಸುಧಾರಿತ ಬೆಂಬಲ.
  • ವರ್ಬೋಸ್ ಔಟ್‌ಪುಟ್‌ನ ತೊಂದರೆಗಳನ್ನು ಎತ್ತಿ ತೋರಿಸುವ ಸುಧಾರಿತ ಡೀಬಗ್ಗಿಂಗ್.
  • SNMP ಟ್ರ್ಯಾಪ್ ಉತ್ಪಾದನೆ.
  • ಸುಧಾರಿತ WIMAX ಬೆಂಬಲ.
  • EAP-PWD ಬೆಂಬಲ.

ಟ್ರಸ್ಟೆಡ್ ಜಾಲಬಂಧ ಜೋಡಣೆ

Red Hat Enterprise Linux 7.0 ರಲ್ಲಿ ಟ್ರಸ್ಟೆಡ್ ನೆಟ್‌ವರ್ಕ್ ಕ್ರಿಯಾಶೀಲತೆಯನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಟ್ರಸ್ಟೆಡ್ ನೆಟ್‌ವರ್ಕ್ ಕನೆಕ್ಟ್ ಅನ್ನು ಅಂತ್ಯಬಿಂದುವಿನ ಪರಿಸ್ಥಿತಿಯ ಮೌಲ್ಯಮಾಪನೆಗಾಗಿ TLS, 802.1x, ಅಥವ IPSec ನಂತಹ ಈಗಿರುವ ನೆಟ್‌ವರ್ಕ್ ಎಕ್ಸೆಸ್ ಕಂಟ್ರೋಲ್‌ (NAC) ಪರಿಹಾರಗಳೊಂದಿಗೆ ಬಳಸಲಾಗುತ್ತದೆ; ಅಂದರೆ, ಒಂದು ಅಂತ್ಯಬಿಂದುವಿನ ವ್ಯವಸ್ಥೆಯ ಮಾಹಿತಿಯನ್ನು ಸಂಗ್ರಹಿಸುವಿಕೆ (ಕಾರ್ಯಾಚರಣೆ ವ್ಯವಸ್ಥೆಯ ಸಂರಚನಾ ಸಿದ್ಧತೆಗಳು, ಅನುಸ್ಥಾಪಿಸಲಾದ ಪ್ಯಾಕೇಜುಗಳು, ಮತ್ತು ಇತರೆಯವುಗಳನ್ನು ಸಮಗ್ರತೆ ಅಳತೆಗಳು ಎಂದು ಕರೆಯಲಾಗುತ್ತದೆ). ಟ್ರಸ್ಟೆಡ್ ನೆಟ್‌ವರ್ಕ್ ಕನೆಕ್ಟ್ ಅನ್ನು ಜಾಲಬಂಧಕ್ಕೆ ಅಂತ್ಯಬಿಂದು ನಿಲುಕನ್ನು ಅನುಮತಿಸುವ ಮೊದಲು ಜಾಲಬಂಧ ನಿಲುಕು ನಿಯಮಗಳ ಅನುಸಾರವಾಗಿ ಈ ಅಳತೆಗಳನ್ನು ಪರಿಶೀಲಿಸಲು ಬಳಸಲಾಗುತ್ತದೆ.

ಅಧ್ಯಾಯ 14. ಸಂಪನ್ಮೂಲ ವ್ಯವಸ್ಥಾಪನೆ

ಕಂಟ್ರೋಲ್ ಗುಂಪುಗಳು

Red Hat Enterprise Linux 7.0 ರಲ್ಲಿ ಕಂಟ್ರೋಲ್‌ ಗುಂಪುಗಳನ್ನು ಸೇರಿಸಲಾಗಿದ್ದು, ಇದು ಸಂಪನ್ಮೂಲ ನಿರ್ವಹಣೆಯ ಉದ್ಧೇಶಕ್ಕಾಗಿ ಹೆಸರಿಸಲಾದ ಗುಂಪುಗಳ ಒಂದು ವೃಕ್ಷದಲ್ಲಿ ಪ್ರಕ್ರಿಯೆಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಒಂದು ಪರಿಕಲ್ಪನೆಯಾಗಿದೆ. ಇವುಗಳು ಒಂದು ಶ್ರೇಣೀಕೃತ ಗುಂಪು ಮತ್ತು ಲೇಬಲ್ ಪ್ರಕ್ರಿಯೆಗಳನ್ನು ಹಾಗೂ ಈ ಗುಂಪುಗಳಿಗೆ ಸಂಪನ್ಮೂಲ ಮಿತಿಗಳನ್ನು ಅನ್ವಯಿಸುವ ಮಾರ್ಗವನ್ನು ಒದಗಿಸುತ್ತವೆ. Red Hat Enterprise Linux 7.0 ರಲ್ಲಿ, ಕಂಟ್ರೋಲ್‌ ಗುಂಪುಗಳನ್ನು ವಿಶೇಷವಾಗಿ systemdಯ ಮೂಲಕ ನಿರ್ವಹಿಸಲಾಗುತ್ತದೆ. cgroups ಅನ್ನು systemd ಘಟಕ ಕಡತಗಳಲ್ಲಿ ಸಂರಚಿಸಲಾಗುತ್ತದೆ ಮತ್ತು systemd ಯ ಆದೇಶ ಸಾಲಿನ ಸಂಪರ್ಕಸಾಧನ (CLI) ಉಪಕರಣಗಳನ್ನು ಬಳಸಿಕೊಂಡು ನಿರ್ವಹಿಸಬಹುದಾಗಿದೆ.
ಕಂಟ್ರೋಲ್‌ ಗುಂಪುಗಳು ಮತ್ತು ಇತರೆ ಸಂಪನ್ಮೂಲ ನಿರ್ವಹಣೆಯ ಸೌಲಭ್ಯಗಳನ್ನು ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಅಧ್ಯಾಯ 15. ದೃಢೀಕರಣ ಹಾಗು ಇಂಟರ್‌ಆಪರೇಬಿಲಿಟಿ

ಹೊಸ ಟ್ರಸ್ಟ್ ಅಳವಡಿಕೆ

ಸೆಕ್ಯುರಿಟಿ ಐಡೆಂಟಿಫಯರ್‌ನಿಂದ ಉತ್ಪಾದಿಸಲಾದ ಒಂದು ಬಳಕೆದಾರ ID ಅಥವ ಗುಂಪಿನ ID ಯ ಬದಲಿಗೆ ಆಕ್ಟೀವ್ ಡಿರಕ್ಟರಿಯಲ್ಲಿ ಸೂಚಿಸಲಾದ ಒಂದು ಬಳಕೆದಾರ ID ಅಥವ ಗುಂಪಿನ ID ಯನ್ನು ಬಳಸುವುದನ್ನು ಈಗ Red Hat Enterprise Linux 5.9 ಕ್ಲೈಂಟ್‌ಗಳು ಮತ್ತು ನಂತರದವುಗಳಲ್ಲಿ ಹಾಗೂ Red Hat Enterprise Linux 6.3 ಕ್ಲೈಂಟ್‌ಗಳಿಗಾಗಿ ಬೆಂಬಲಿಸಲಾಗುತ್ತದೆ. POSIX ಗುಣವಿಶೇಷಗಳನ್ನು ಆಕ್ಟೀವ್ ಡಿರೆಕ್ಟರಿಯಲ್ಲಿ ಸೂಚಿಸಲಾಗಿದ್ದರೆ ಈ ಟ್ರಸ್ಟ್ ಅಳವಡಿಕೆಯನ್ನು ಬಳಸಬಹುದಾಗಿರುತ್ತದೆ.

slapi-nis ಪ್ಲಗ್‌-ಇನ್ ಅನ್ನು ಅಪ್‌ಡೇಟ್ ಮಾಡಲಾಗಿದೆ

Red Hat Enterprise Linux 7.0 ರಲ್ಲಿ slapi-nis ಎಂಬ ಒಂದು ಅಪ್‌ಡೇಟ್ ಮಾಡಲಾದ ಡಿರಕ್ಟರಿ ಸರ್ವರ್ ಪ್ಲಗ್-ಇನ್ ಅನ್ನು ಸೇರಿಸಲಾಗಿದ್ದು, ಇದು ಸಾಂಪ್ರದಾಯಿಕ ಕ್ಲೈಂಟ್‌ಗಳಲ್ಲಿ ದೃಢೀಕರಿಸಲು ಆಕ್ಟೀವ್ ಡಿರಕ್ಟರಿಯ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ ಎಂಬುದನ್ನು ನೆನಪಿಡಿ.

IPA ಗಾಗಿ ಬ್ಯಾಕ್ಅಪ್ ಹಾಗು ಮರುಸ್ಥಾಪನೆ ವ್ಯವಸ್ಥೆ

IPA ಸೂಟ್‌ಗಾಗಿನ ಬ್ಯಾಕ್ಅಪ್ ಹಾಗು ಮರುಸ್ಥಾಪನೆ ವ್ಯವಸ್ಥೆಯನ್ನು Red Hat Enterprise Linux 7.0 ರಲ್ಲಿ ತಂತ್ರಜ್ಞಾನ ಮುನ್ನೋಟವಾಗಿ ಸೇರಿಸಲಾಗಿದೆ.

Samba 4.1.0

Red Hat Enterprise Linux 7.0 ರಲ್ಲಿ samba ಪ್ಯಾಕೇಜುಗಳನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಹಲವಾರು ದೋಷ ಪರಿಹಾರಗಳನ್ನು ಮತ್ತು ಸುಧಾರಣೆಗಳನ್ನು ಪರಿಚಯಿಸುತ್ತದೆ, ಅದರಲ್ಲಿ ಗಮನಾರ್ಹವಾದವುಗಳೆಂದರೆ ಪೂರೈಕೆಗಣಕ ಮತ್ತು ಕ್ಲೈಂಟ್‌ ಉಪಕರಣಗಳಲ್ಲಿ SMB3 ಪ್ರೊಟೊಕಾಲ್‌ಗಾಗಿನ ಬೆಂಬಲ.
ಹೆಚ್ಚುವರಿಯಾಗಿ, SMB3 ವರ್ಗಾವಣೆಯು SMB3 ಯನ್ನು, ಮತ್ತು Samba ಪೂರೈಕೆಗಣಕಗಳನ್ನು ಬೆಂಬಲಿಸುವ Windows ಪೂರೈಕೆಗಣಕಗಳಿಗೆ ಗೂಢಲಿಪೀಕರಿಸಲಾದ ವರ್ಗಾವಣೆ ಸಂಪರ್ಕಗಳನ್ನು ಸಕ್ರಿಯಗೊಳಿಸುತ್ತದೆ. ಇದರೆ ಜೊತೆರೆ, Samba 4.1.0 ಪೂರೈಕೆಗಣಕ-ಬದಿಯ ಪ್ರತಿ ಮಾಡುವಿಕೆಗಳಿಗೆ ಬೆಂಬಲವನ್ನು ಸೇರಿಸುತ್ತದೆ.ಇತ್ತೀಚಿನ Windows ಬಿಡುಗಡೆಗಳಂತಹ ಪೂರೈಕೆಗಣಕ-ಬದಿಯ ಪ್ರತಿ ಮಾಡುವಿಕೆಯ ಬೆಂಬಲವನ್ನು ಬಳಸುವಂತಹ ಕ್ಲೈಂಟ್‌ಗಳಿಗೆ ಕಡತ ಪ್ರತಿ ಮಾಡುವ ಕಾರ್ಯಗಳಲ್ಲಿ ಇದರಿಂದ ಗಮನಾರ್ಹವಾದ ಕಾರ್ಯನಿರ್ವಹಣೆ ಸುಧಾರಣೆಗಳನ್ನು ಕಾಣಬಹುದು.

ಎಚ್ಚರಿಕೆ

ಅಪ್‌ಡೇಟ್ ಮಾಡಲಾದ samba ಪ್ಯಾಕೇಜುಗಳು ಈಗಾಗಲೆ ಅಪ್ರಚಲಿತಗೊಳಿಸಲಾದ ಸಂರಚನಾ ಆಯ್ಕೆಗಳನ್ನು ತೆಗೆದುಹಾಕುತ್ತದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ security = share ಮತ್ತು security = server ಪೂರೈಕೆಗಣಕ ಪಾತ್ರಗಳಾಗಿವೆ. ಜೊತೆಗೆ ಜಾಲ ಸಂರಚನಾ ಉಪಕರಣವಾದ SWAT ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಹೆಚ್ಚಿನ ವಿವರಗಳನ್ನು Samba 4.0 ಮತ್ತು 4.1 ಬಿಡುಗಡೆ ಟಿಪ್ಪಣಿಗಳಲ್ಲಿ ನೋಡಲು ಸಾಧ್ಯವಿದೆ:
ಹಲವಾರು tdb ಕಡತಗಳನ್ನು ಅಪ್‌ಡೇಟ್ ಮಾಡಲಾಗಿದೆ ಎಂಬುದನ್ನು ಗಮನಿಸಿ. ಇದರರ್ಥ ನೀವು smbd ಯ ಹೊಸ ಆವೃತ್ತಿಯನ್ನು ಪ್ರಾರಂಭಿಸಿದ ಕೂಡಲೇ ಎಲ್ಲಾ tdb ಕಡತಗಳನ್ನು ನವೀಕರಿಸಲಾಗುತ್ತದೆ. ನೀವು ಹಳೆಯ tdb ಕಡತಗಳ ಬ್ಯಾಕ್‌ಅಪ್‌ಗಳನ್ನು ಹೊಂದಿರದೆ ಇದ್ದಲ್ಲಿ ಹಳೆಯ Samba ಆವೃತ್ತಿಗೆ ಇಳಿಸಲು ಸಾಧ್ಯವಿರುವುದಿಲ್ಲ.
ಈ ಬದಲಾವಣೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಮೇಲೆ ತಿಳಿಸಲಾದ Samba 4.0 ಮತ್ತು 4.1 ಕ್ಕಾಗಿನ ಬಿಡುಗಡೆ ಟಿಪ್ಪಣಿಗಳನ್ನು ನೋಡಿ.

AD ಮತ್ತು LDAP sudo ಪ್ರೊವೈಡರಿನ ಬಳಕೆ

AD ಪ್ರೊವೈಡರ್ ಎನ್ನುವುದು ಒಂದು ಆಕ್ಟೀವ್ ಡಿರಕ್ಟಿರಿಗೆ ಸಂಪರ್ಕಸಾಧಿಸಲು ಬಳಸಲಾಗುವ ಒಂದು ಬ್ಯಾಕೆಂಡ್ ಆಗಿರುತ್ತದೆ. Red Hat Enterprise Linux 7.0 ರಲ್ಲಿ, provider together with the LDAP ಪ್ರೊವೈಡರಿನೊಂದಿಗೆ AD sudo ಅನ್ನು ಬಳಸುವುದನ್ನು ಒಂದು ತಂತ್ರಜ್ಷಾನ ಮುನ್ನೋಟವಾಗಿ ಬೆಂಬಲವನ್ನು ನೀಡಲಾಗಿದೆ. AD sudo ಪ್ರೊವೈಡರ್ನ್ನು ಸಕ್ರಿಯಗೊಳಿಸಲು, sssd.conf ಕಡತದ ಡೊಮೇನ್ ವಿಭಾಗದಲ್ಲಿ sudo_provider=ad ಸಿದ್ಧತೆಯನ್ನು ಸೇರಿಸಿ.

ಅಧ್ಯಾಯ 16. ಸುರಕ್ಷತೆ

OpenSSH chroot ಶೆಲ್ ಲಾಗಿನ್‌ಗಳು

ಸಾಮಾನ್ಯವಾಗಿ, ಪ್ರತಿಯೊಂದು ಲಿನಕ್ಸ್ ಬಳಕೆದಾರರನ್ನೂ ಸಹ SELinux ಪಾಲಿಸಿಯನ್ನು ಬಳಸಿಕೊಂಡು ಒಂದು SELinux ಬಳಕೆದಾರನಿಗೆ ಮ್ಯಾಪ್ ಮಾಡಲಾಗಿರುತ್ತದೆ, ಹಾಗೂ ಆ ಮೂಲಕ SELinux ಬಳಕೆದಾರರಲ್ಲಿ ಇರಿಸಲಾದ ನಿರ್ಬಂಧಗಳನ್ನು ಲಿನಕ್ಸ್ ಬಳಕೆದಾರರು ಪಡೆದುಕೊಳ್ಳುತ್ತಾರೆ. ಲಿನಕ್ಸ್ ಬಳಕೆದಾರರನ್ನು SELinux unconfined_u ಬಳಕೆದಾರರಿಗೆ ಮ್ಯಾಪ್‌ ಮಾಡಲಾದ ಪೂರ್ವನಿಯೋಜಿತ ಮ್ಯಾಪಿಂಗ್ ಇರುತ್ತದೆ.
Red Hat Enterprise Linux 7 ರಲ್ಲಿ, ChrootDirectory ಆಯ್ಕೆಯು for ಮಿತಿಗೊಳಪಡದ (ಅನ್‌ಕನ್‌ಫೈನ್ಡ್) ಬಳಕೆದಾರರನ್ನು ಯಾವುದೆ ಬದಲಾವಣೆ ಇಲ್ಲದೆ chroot ಮಾಡುವುದಕ್ಕಾಗಿ ಇರುತ್ತದೆ,ಆದರೆ as staff_u, user_u, ಅಥವ guest_u ನಂತಹ ಮಿತಿಗೊಳಪಟ್ಟ ಬಳಕೆದಾರರಿಗಾಗಿ SELinux ನ selinuxuser_use_ssh_chroot ವೇರಿಯೇಬಲ್ ಅನ್ನು ಹೊಂದಿಸಬೇಕಿರುತ್ತದೆ. ಎಲ್ಲಾ chroot ಮಾಡಲಾದ ಬಳಕೆದಾರರಿಗಾಗಿ guest_u ಅನ್ನು ಬಳಸುವಂತೆ ವ್ಯವಸ್ಥಾಪಕರಿಗೆ ಸಲಹೆ ಮಾಡಲಾಗುತ್ತದೆ ಹೆಚ್ಚಿನ ಸುರಕ್ಷತೆಯನ್ನು ಹೊಂದಲು ChrootDirectory ಆಯ್ಕೆಯನ್ನು ಬಳಸಬೇಕು.

ಅನೇಕ ಅಗತ್ಯವಿರುವ ದೃಢೀಕರಣಗಳು

Red Hat Enterprise Linux 7.0 AuthenticationMethods ಆಯ್ಕೆಯನ್ನು ಬಳಸುವ SSH ಪ್ರೊಟೊಕಾಲ್ ಆವೃತ್ತಿ 2 ರಲ್ಲಿ ಅಗತ್ಯವಿರುವ ಅನೇಕ ದೃಢೀಕರಣಗಳನ್ನು ಬೆಂಬಲಿಸುತ್ತದೆ. ಈ ಆಯ್ಕೆಯು ಒಂದು ಅಥವ ಹೆಚ್ಚಿನ ವಿರಾಮಚಿಹ್ನೆಯಿಂದ ಪ್ರತ್ಯೇಕಿಸಲಾದ ದೃಢೀಕರಣ ವಿಧಾನದ ಹೆಸರುಗಳನ್ನು ಪಟ್ಟಿ ಮಾಡುತ್ತದೆ. ದೃಢೀಕರಣವು ಪೂರ್ಣಗೊಳ್ಳಲು ಯಾವುದೆ ಪಟ್ಟಿಯಲ್ಲಿನ ಎಲ್ಲಾ ವಿಧಾನಗಳನ್ನು ಯಶಸ್ವಿಯಾಗಿ ಪೂರೈಸುವ ಅಗತ್ಯವಿರುತ್ತದೆ. ಇದು ಉದಾಹರಣೆಗೆ, ಒಬ್ಬ ಬಳಕೆದಾರನಿಗೆ ಗುಪ್ತಪದ ದೃಢೀಕರಣವನ್ನು ನೀಡುವ ಮೊದಲು ಸಾರ್ವಜನಿಕ ಕೀಲಿ ಅಥವ GSSAPI ಬಳಸಿಕೊಂಡು ದೃಢೀಕರಿಸುವ ಅಗತ್ಯವಿರುವುದನ್ನು ಸಕ್ರಿಯಗೊಳಿಸುತ್ತದೆ.

GSS ಪ್ರಾಕ್ಸಿ

GSS ಪ್ರಾಕ್ಸಿ ಎನ್ನುವುದು ಇತರೆ ಅನ್ವಯಗಳ ಪರವಾಗಿ GSS API ಕರ್ಬರೋಸ್ ಅನ್ನು ಸಾಧಿಸುವ ವ್ಯವಸ್ಥೆಯ ಸೇವೆಯಾಗಿರುತ್ತದೆ. ಇದು ಸುರಕ್ಷತಾ ಪ್ರಯೋಜನಗಳನ್ನು ನೀಡುತ್ತದೆ; ಉದಾಹರಣೆಗೆ, ವ್ಯವಸ್ಥೆಯ ಕೀಲಿಟ್ಯಾಬ್‌ನ ನಿಲುಕನ್ನು ವಿವಿಧ ಪ್ರಕ್ರಿಯೆಗಳೊಂದಿಗೆ ಹಂಚಲಾಗಿರುವಂತಹ ಒಂದು ಸಂದರ್ಭದಲ್ಲಿ, ಆ ಪ್ರಕ್ರಿಯೆಯ ವಿರುದ್ಧ ಒಂದು ಯಶಸ್ವಿ ಧಾಳಿಯು ಎಲ್ಲಾ ಪ್ರಕ್ರಿಯೆಗಳ ಕರ್ಬರೋಸ್ ಮೋಸಮಾಡುವಿಕೆಗೆ ಕಾರಣವಾಗಬಹುದು.

NSS ನಲ್ಲಿನ ಬದಲಾವಣೆಗಳು

nss ಪ್ಯಾಕೇಜುಗಳನ್ನು ಅಪ್‌ಸ್ಟ್ರೀಮ್ ಆವೃತ್ತಿ 3.15.2 ಕ್ಕೆ ನವೀಕರಿಸಲಾಗಿದೆ. ಮೆಸೇಜ್-ಡೈಜೆಸ್ಟ್ ಅಲ್ಗಾರಿತಮ್ 2 (MD2), MD4, ಮತ್ತು MD5 ಸಹಿಗಳು ಆನ್‌ಲೈನ್ ಸರ್ಟಿಫಿಕೇಟ್ ಸ್ಟೇಟಸ್ ಪ್ರೊಟೊಕಾಲ್‌ (OCSP) ಅಥವ ಸರ್ಟಿಫಿಕೇಟ್ ರಿವೋಕೇಶನ್ ಲಿಸ್ಟ್‌ಗಳಿಗಾಗಿ (CRLs) ಇನ್ನು ಮುಂದೆ ಅಂಗೀಕರಿಸಲಾಗುವುದಿಲ್ಲ, ಸಾಮಾನ್ಯ ಪ್ರಮಾಣಪತ್ರ ಸಹಿಗಳಿಗಾಗಿ ಅವುಗಳ ನಿಭಾಯಿಸುವಿಕೆಯೊಂದಿಗೆ ಸ್ಥಿರವಾಗಿರುತ್ತದೆ.
TLS 1.2 ಅನ್ನು ನೆಗೋಶಿಯೇಟ್ ಮಾಡಿದಾಗ ಬಳಸುವಂತೆ ಅಡ್ವಾನ್ಸಡ್ ಎನ್ಕ್ರಿಪ್ಶನ್ ಗೆಲಿಯೋಸ್ ಕೌಂಟರ್ ಮೋಡ್ (AES-GCM) ಸಿಫರ್ ಸೂಟ್ (RFC 5288 ಮತ್ತು RFC 5289) ಅನ್ನು ಸೇರಿಸಲಾಗಿದೆ. ವಿಶೇಷವಾಗಿ, ಈ ಕೆಳಗಿನ ಸಿಫರ್ ಸೂಟ್‌ಗಳನ್ನು ಈಗ ಬೆಂಬಲಿಸಲಾಗುತ್ತದೆ:
  • TLS_ECDHE_ECDSA_WITH_AES_128_GCM_SHA256
  • TLS_ECDHE_RSA_WITH_AES_128_GCM_SHA256
  • TLS_DHE_RSA_WITH_AES_128_GCM_SHA256
  • TLS_RSA_WITH_AES_128_GCM_SHA256

SCAP ವರ್ಕ್‌ಬೆಂಚ್

SCAP ವರ್ಕ್‌ಬೆಂಚ್ ಎನ್ನುವುದು SCAP ವಿಷಯಕ್ಕಾಗಿ ಸ್ಕ್ಯಾನಿಂಗ್ ಸೌಲಭ್ಯವನ್ನು ಒದಗಿಸುವ ಒಂದು GUI ಆಗಿರುತ್ತದೆ. SCAP ವರ್ಕ್‌ಬೆಂಚ್ ಅನ್ನು Red Hat Enterprise Linux 7.0 ನಲ್ಲಿ ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ.
ಅಪ್‌ಸ್ಟ್ರೀಮ್ ಪರಿಯೋಜನೆಯ ಜಾಲತಾಣದಲ್ಲಿ ಇದರ ವಿವರವಾದ ಮಾಹಿತಿಯನ್ನು ನೀವು ನೋಡಬಹುದು:

OSCAP Anaconda ಆಡ್-ಆನ್

Red Hat Enterprise Linux 7.0 ನಲ್ಲಿ OSCAP Anaconda ಆಡ್-ಆನ್ ಅನ್ನು ಒಂದು ತಂತ್ರಜ್ಞಾನ ಮುನ್ನೋಟವಾಗಿ ನೀಡಲಾಗಿದೆ. ಈ ಆಡ್‌-ಆನ್ OpenSCAP ಸೌಲಭ್ಯಗಳನ್ನು ಅನುಸ್ಥಾಪನಾ ಪ್ರಕ್ರಿಯೆಯೊಂದಿಗೆ ಸಂಘಟಿಸುತ್ತದೆ ಮತ್ತು ಒಂದು SCAP ಕಂಟೆಂಟ್‌ನಿಂದ ಒದಗಿಸಲಾಗಿರುವಂತೆ ಈ ಕೆಳಗಿನ ನಿರ್ಬಂಧಗಳೊಂದಿಗೆ ಅನುಸ್ಥಾಪಿಸುವುದನ್ನು ಸಕ್ರಿಯಗೊಳಿಸುತ್ತದೆ.

ಅಧ್ಯಾಯ 17. ಚಂದಾದಾರಿಕೆ ವ್ಯವಸ್ಥಾಪನೆ

Red Hat Subscription Management ಸೇವೆಗಳ ಮುಖಾಂತರ Red Hat Enterprise Linux 7.0 ಲಭ್ಯವಿರುತ್ತದೆ. ಈ ಕೆಳಗಿನ ನಾಲೆಜ್ ಬೇಸ್ ಲೇಖನವು Red Hat Subscription Management ಯೊಂದಿಗೆ ನಿಮ್ಮ Red Hat Enterprise Linux 7.0 ಅನ್ನು ಹೇಗೆ ನೋಂದಾಯಿಸುವುದು ಎನ್ನುವುದರ ಬಗೆಗಿನ ಸಂಕ್ಷಿಪ್ತ ಅವಲೋಕನ ಮತ್ತು ಸೂಚನೆಗಳನ್ನು ಒದಗಿಸುತ್ತದೆ .

ಪ್ರಮಾಣಪತ್ರ-ಆಧರಿತ ಎಂಟೈಟಲ್‌ಮೆಂಟ್‌ಗಳು

Red Hat Enterprise Linux 7.0 ರಲ್ಲಿ subscription-manager ಉಪಕರಣದ ಮುಖಾಂತರ ಹೊಸ ಪ್ರಮಾಣಪತ್ರ-ಆಧರಿತವಾದ ಎಂಟೈಟಲ್ಮೆಂಟ್‌ಗಳನ್ನು ಬೆಂಬಲಿಸಲಾಗುತ್ತದೆ. ಸಾಂಪ್ರದಾಯಿಕ ಎಂಟೈಟಲ್ಮೆಂಟ್‌ಗಳು Red Hat Enterprise Linux 5 ಮತ್ತು 6 ಅನ್ನು ಬಳಸುವ ಸ್ಯಾಟಲೈಟ್ ಬಳಕೆದಾರರು ವರ್ಗಾವಣೆ ಮಾಡಿಕೊಳ್ಳುವುದನ್ನೂ ಸಹ ಬೆಂಬಲಿಸುತ್ತವೆ. rhn_register ಅಥವ rhnreg_ks ಉಪಕರಣಗಳನ್ನು ಬಳಸಿಕೊಂಡು Red Hat ನೆಟ್‌ವರ್ಕ್‌ ಕ್ಲಾಸಿಕ್‌ಗೆ ನೋಂದಾಯಿಸುವುದು Red Hat Enterprise Linux 7.0 ನಲ್ಲಿ ಕೆಲಸ ಮಾಡುವುದಿಲ್ಲ ಎನ್ನುವುದನ್ನು ನೆನಪಿಡಿ. ಮೇಲೆ ತಿಳಿಸಲಾದ ಉಪಕರಣಗಳನ್ನು Red Hat Satellite ಅಥವ Proxy ಆವೃತ್ತಿಗಳಾದ 5.6 ಕ್ಕೆ ಮಾತ್ರ ನೋಂದಾಯಿಸಲು ನೀವು ಬಳಸಬಹುದಾಗಿದೆ.

ಅಧ್ಯಾಯ 18. ಗಣಕತೆರೆ

18.1. GNOME 3

Red Hat Enterprise Linux 7.0 ರಲ್ಲಿ GNOME ಡೆಸ್ಕ್‌ಟಾಪ್‌ನ ಮುಂದಿನ ಪ್ರಮುಖ ಆವೃತ್ತಿಯಾದಂತಹ, GNOME 3 ಯನ್ನು ಹೊಂದಿದೆ. GNOME 3 ಯ ಬಳಕೆದಾರ ಅನುಭವವನ್ನು GNOME 2 ಡೆಸ್ಕ್‌ಟಾಪ್‌ ಶೆಲ್‌ಗೆ ಬದಲಿಯಾದಂತಹ ಬಹುಪಾಲು GNOME ಶೆಲ್‌ನಿಂದ ನೀಡಲಾಗುತ್ತದೆ. ಕಿಟಕಿ ವ್ಯವಸ್ಥಾಪನೆಯ ಹೊರತಾಗಿ, GNOME ಶೆಲ್‌ ತೆರೆಯು ಮೇಲ್ಭಾಗದಲ್ಲಿ ಒಂದು ಪಟ್ಟಿಯನ್ನು ಒದಗಿಸುತ್ತದೆ, ಇದು ಮೇಲ್ಭಾಗದ ಬಲ ಮೂಲೆಯಲ್ಲಿ 'ವ್ಯವಸ್ಥೆಯ ಸ್ಥಿತಿ'ಸ್ಥಳವನ್ನು, ಒಂದು ಗಡಿಯಾರವನ್ನು, ಮತ್ತು ಅನ್ವಯಗಳು ಮತ್ತು ಕಿಟಕಿಗಳನ್ನು ನಿಲುಕಿಸಿಕೊಳ್ಳಲು ಸುಲಭವಾದ ಮಾರ್ಗವನ್ನು ಒದಗಿಸುವ ಚಟುವಟಿಕೆ ಅವಲೋಕನಕ್ಕೆ ಬದಲಾಯಿಸಲ್ಪಡುವ ಒಂದು ಸಕ್ರಿಯ ಮೂಲೆಯನ್ನು ಹೊಂದಿದೆ.
Red Hat Enterprise Linux 7.0 ರಲ್ಲಿನ ಪೂರ್ವನಿಯೋಜಿತ GNOME ಶೆಲ್ ಸಂಪರ್ಕಸಾಧನವು ತೆರೆಯ ಕೆಳಭಾಗದಲ್ಲಿ ಕಿಟಕಿಯ ಪಟ್ಟಿಯನ್ನು ಮತ್ತು ಸಾಂಪ್ರದಾಯಿಕ ಅನ್ವಯಗಳು ಮತ್ತು ಸ್ಥಳಗಳು ಪರಿವಿಡಿಯನ್ನು ಹೊಂದಿರುವ ಒಂದು GNOME ಕ್ಲಾಸಿಕ್ ಆಗಿದೆ.
GNOME 3 ಬಗೆಗಿನ ಹೆಚ್ಚಿನ ಮಾಹಿತಿಗಾಗಿ, GNOME ನೆರವನ್ನು ನೋಡಿ. ಅದನ್ನು ನೋಡಲು, Super (Windows) ಕೀಲಿಯನ್ನು ಒತ್ತಿ Activities Overview, type help, and then press Enter.
GNOME 3 ಡೆಸ್ಕ್‌ಟಾಪ್ ನಿಯೋಜನೆ, ಸಂರಚನೆ ಮತ್ತು ವ್ಯಸ್ಥಾಪನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಡೆಸ್ಕ್‌ಟಾಪ್ ವರ್ಗಾವಣೆ ಮತ್ತು ವ್ಯವಸ್ಥಾಪನೆ ಮಾರ್ಗದರ್ಶಿಯನ್ನು ನೋಡಿ.

GTK+ 3

GNOME 3 ಯು GTK+ 3 ಲೈಬ್ರರಿಯನ್ನು ಬಳಸುತ್ತದೆ, ಇದನ್ನು GTK+ 2 ಗೆ ಸಮಾನಾಂತರವಾಗಿ ಅನುಸ್ಥಾಪಿಸಲು ಸಾಧ್ಯವಿರುತ್ತದೆ. GTK+ ಮತ್ತು GTK+ 3 ಎರಡೂ ಸಹ Red Hat Enterprise Linux 7.0 ರಲ್ಲಿ ಲಭ್ಯವಿದೆ. ಈಗಿರುವ GTK+ 2 ಅನ್ವಯಗಳು GNOME 3 ಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸುತ್ತವೆ.

GNOME ಬಾಕ್ಸಸ್

Red Hat Enterprise Linux 7.0 ವರ್ಚುವಲ್ ಗಣಕಗಳನ್ನು ಹಾಗೂ ರಿಮೋಟ್ ವ್ಯವಸ್ಥೆಗಳನ್ನು ನೋಡಲು ಮತ್ತು ನಿಲುಕಿಸಿಕೊಳ್ಳಲು ಒಂದು ಹಗುರತೂಕದ ಚಿತ್ರಾತ್ಮಕ ಗಣಕತೆರೆ ವರ್ಚುವಲೈಸೇಶನ್ ಉಪಕರಣವನ್ನು ಪರಿಚಯಿಸುತ್ತದೆ. GNOME ಬಾಕ್ಸಸ್ ಕನಿಷ್ಟ ಸಂರಚನೆಯೊಂದಿಗೆ ಗಣಕತೆರೆಯಿಂದ ವಿವಿಧ ಕಾರ್ಯಾಚರಣೆ ವ್ಯವಸ್ಥೆಗಳು ಮತ್ತು ಅನ್ವಯಗಳನ್ನು ಪರೀಕ್ಷಿಸುವ ಒಂದು ಮಾರ್ಗವನ್ನು ಒದಗಿಸುತ್ತದೆ.

18.2. KDE

Red Hat Enterprise Linux 7.0 ಯಲ್ಲಿ KDE ಪ್ಲಾಸ್ಮಾ ವರ್ಕ್‌ಪ್ಲೇಸಸ್ ಆವೃತ್ತಿ 4.10 ಮತ್ತು KDE ಪ್ಲಾಟ್‌ಫಾರ್ಮ್ ಮತ್ತು ಅನ್ವಯಗಳ ಇತ್ತೀಚಿ ಆವೃತ್ತಿಗಳನ್ನು ಸೇರಿಸಲಾಗಿದೆ. ಬಿಡುಗಡೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ, http://www.kde.org/announcements/4.10/ ಅನ್ನು ನೋಡಿ

KScreen

ಅನೇಕ ಪ್ರದರ್ಶಕಗಳನ್ನು ಸಂರಚಿಸುವುದು ಈಗ KDE ಯಲ್ಲಿನ ಒಂದು ಹೊಸ ತೆರೆ ನಿರ್ವಹಣಾ ತಂತ್ರಾಂಶವಾದ KScreen ಇಂದಾಗಿ ಸುಧಾರಿಸಲ್ಪಟ್ಟಿದೆ. KScreen ಪರದೆಯ ಸಂರಚನೆ ಮತ್ತು ಸಂಪರ್ಕಿತಗೊಂಡ ಪರದೆಗಳಿಗಾಗಿ ಪ್ರೊಫೈಲ್‌ಗಳನ್ನು ಸ್ವಯಂಚಾಲಿತವಾಗಿ ಉಳಿಸುವುದನ್ನು ಮತ್ತು ಮರಳಿ ಸ್ಥಾಪಿಸುವುದಕ್ಕಾಗಿ ಒಂದು ಹೊಸ ಬಳಕೆದಾರ ಸಂಪರ್ಕಸಾಧನವನ್ನು ಒದಗಿಸುತ್ತದೆ. KScreen ಕುರಿತಾದ ವಿವರವಾದ ಮಾಹಿತಿಗಾಗಿ, http://community.kde.org/Solid/Projects/ScreenManagement ಅನ್ನು ನೋಡಿ

ಅಧ್ಯಾಯ 19. ಜಾಲ ಪರಿಚಾರಕಗಳು ಹಾಗು ಸೇವೆಗಳು

Apache HTTP Server 2.4

Apache HTTP Server (httpd) ನ ಆವೃತ್ತಿ 2.4 ಅನ್ನು Red Hat Enterprise Linux 7.0 ನಲ್ಲಿ ಸೇರಿಸಲಾಗಿದೆ, ಮತ್ತು ಹಲವಾರು ಹೊಸ ಸೌಲಭ್ಯಗಳನ್ನು ನೀಡುತ್ತದೆ:
  • "Event" ಸಂಸ್ಕರಿಸುವ ಮಾಡ್ಯೂಲ್‌ನ ಒಂದು ವರ್ಧಿತ ಆವೃತ್ತಿಯು ಹೊಂದಾಣಿಕೆಯಾಗದ (ಅಸಿಂಕ್ರೋನಸ್) ಮನವಿ ಮಾಡಲಾದ ಪ್ರಕ್ರಿಯೆ ಮತ್ತು ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ.
  • mod_proxy ಮಾಡ್ಯೂಲ್‌ನಲ್ಲಿ ಸ್ಥಳೀಯ FastCGI ಬೆಂಬಲ;
  • Lua ಭಾಷೆಯನ್ನು ಬಳಸಿಕೊಂಡು ಅಡಕಗೊಳಿಸಲಾದ ಸ್ಕ್ರಿಪ್ಟಿಂಗ್‌ಗಾಗಿನ ಬೆಂಬಲ.
httpd 2.4 ರಲ್ಲಿನ ಸೌಲಭ್ಯಗಳು ಮತ್ತು ಬದಲಾವಣೆಗಳ ಕುರಿತಾದ ಹೆಚ್ಚಿನ ಮಾಹಿತಿಯನ್ನು http://httpd.apache.org/docs/2.4/new_features_2_4.htmlನಲ್ಲಿ ಕಾಣಬಹುದು. ಸಂರಚನೆ ಕಡತಗಳನ್ನು ಅಳವಡಿಸಿಕೊಳ್ಳುವುದರ ಬಗೆಗಿನ ಮಾರ್ಗದರ್ಶಿಯೂ ಇಲ್ಲಿಯೂ ಸಹ ಲಭ್ಯವಿದೆ: http://httpd.apache.org/docs/2.4/upgrading.html.

MariaDB 5.5

MariaDB ಎನ್ನುವುದು Red Hat Enterprise Linux 7.0 ರಲ್ಲಿ MySQL ನ ಪೂರ್ವನಿಯೋಜಿತ ಅಳವಡಿಕೆಯಾಗಿರುತ್ತದೆ. MariaDB ಯು MySQL ದತ್ತಸಂಚಯ ಪರಿಯೋಜನೆಯ ಸಮುದಾಯ-ವಿಕಸಿತ ಪ್ರತ್ಯೇಕ ಯೋಜನೆಯಾಗಿದ್ದು ಇದು MySQL ಗೆ ಬದಲಿಯಾಗಿರುತ್ತದೆ. MariaDB ಯು MySQL ನೊಂದಿಗೆ API ಮತ್ತು ABI ಹೊಂದಾಣಿಕೆಯನ್ನು ಕಾದಿರುಸುತ್ತದೆ ಮತ್ತು ಹಲವಾರು ಸೌಲಭ್ಯಗಳನ್ನು ಸೇರಿಸುತ್ತದೆ; ಉದಾಹರಣೆಗೆ, ಒಂದು ಬ್ಲಾಕ್‌ ಮಾಡದ ಕ್ಲೈಂಟ್ API ಲೈಬ್ರರಿ, Aria ಮತ್ತು ಸುಧಾರಿತ ಕಾರ್ಯನಿರ್ವಹಣೆಯೊಂದಿಗೆ XtraDB ಶೇಖರಣಾ ಎಂಜಿನ್‌ಗಳು, ಉತ್ತಮ ಪೂರೈಕೆಗಣಕ ಸ್ಥಿತಿ ವೇರಿಯೇಬಲ್‌ಗಳು ಅಥವ ಉತ್ತಮಗೊಂಡ ತದ್ರೂಪುಗೊಳಿಕೆ.
MariaDB ಯ ಕುರಿತಾದ ವಿವರವಾದ ಮಾಹಿತಿಯನ್ನು https://mariadb.com/kb/en/what-is-mariadb-55/ ಎಂಬಲ್ಲಿ ಕಾಣಬಹುದು.

PostgreSQL 9.2

PostgreSQL ಎನ್ನುವುದು ಒಂದು ಸುಧಾರಿತ ಆಬ್ಜೆಕ್ಟ್-ರಿಲೇಶನ್ ದತ್ತಸಂಚಯ ನಿರ್ವಹಣಾ ವ್ಯವಸ್ಥೆಯಾಗಿದೆ (DBMS). postgresql ಪ್ಯಾಕೇಜುಗಳು PostgreSQL DBMS ಪೂರೈಕೆಗಣಕವನ್ನು ನಿಲುಕಿಸಿಕೊಳ್ಳಲು ಅಗತ್ಯವಿರುವ PostgreSQL ಪೂರೈಕೆಗಣಕ ಪ್ಯಾಕೇಜ್‌, ಕ್ಲೈಂಟ್‌ ಪ್ರೊಗ್ರಾಮ್‌ಗಳು, ಮತ್ತು ಲೈಬ್ರರಿಗಳು ಅನ್ನು ಒಳಗೊಂಡಿದೆ.
Red Hat Enterprise Linux 7.0 ರಲ್ಲಿ PostgreSQL ನ 9.2 ಆವೃತ್ತಿಯನ್ನು ಸೇರಿಸಲಾಗಿದೆ. ಹೊಸ ಸೌಲಭ್ಯಗಳು, ದೋಷ ಪರಿಹಾರಗಳು ಮತ್ತು Red Hat Enterprise Linux 6 ರಲ್ಲಿ ಪ್ಯಾಕೇಜ್‌ ಮಾಡಲಾದ ಆವೃತ್ತಿ 8.4 ರೊಂದಿಗೆ ಸಾಧ್ಯವಿರುವ ಹೊಂದಾಣಿಕೆಯಲ್ಲಿನ ಸಮಸ್ಯೆಗಳ ಕುರಿತಾದ ಮಾಹಿತಿಗಾಗಿ, ದಯವಿಟ್ಟು ಅಪ್‌ಸ್ಟ್ರೀಮ್ ಬಿಡುಗಡೆ ಟಿಪ್ಪಣಿಗಳನ್ನು ನೋಡಿ:
ಅಥವ PostgreSQL ವಿಕಿ ಪುಟಗಳು:

ಅಧ್ಯಾಯ 20. ಡಾಕ್ಯುಮೆಂಟೇಶನ್

Red Hat Enterprise Linux 7.0 ಕ್ಕಾಗಿ ದಸ್ತಾವೇಜು 18 ಪ್ರತ್ಯೇಕ ದಸ್ತಾವೇಜುಗಳನ್ನು ಹೊಂದಿದೆ. ಪ್ರತಿಯೊಂದು ದಸ್ತಾವೇಜುಗಳೂ ಈ ಕೆಳಗಿನ ತಿಳಿಸಲಾದ ಒಂದು ಅಥವ ಹೆಚ್ಚಿನ ವಿಷಯಗಳ ಸಂಬಂಧಪಟ್ಟಿದ್ದಾಗಿರುತ್ತದೆ:
  • ಬಿಡುಗಡೆ ದಸ್ತಾವೇಜು
  • ಅನುಸ್ಥಾಪನೆ ಹಾಗು ನಿಯೋಜನೆ
  • ಸುರಕ್ಷತೆ
  • ಉಪಕರಣಗಳು ಹಾಗು ಕಾರ್ಯಕ್ಷಮತೆ
  • ಕ್ಲಸ್ಟರಿಂಗ್
  • ವರ್ಚುವಲೈಸೇಶನ್

20.1. ಬಿಡುಗಡೆ ದಸ್ತಾವೇಜು

ಬಿಡುಗಡೆ ಟಿಪ್ಪಣಿಗಳು

ಬಿಡುಗಡೆ ಟಿಪ್ಪಣಿಗಳು Red Hat Enterprise Linux 7.0 ರಲ್ಲಿನ ಪ್ರಮುಖ ಹೊಸ ಸೌಲಭ್ಯಗಳನ್ನು ದಾಖಲಿಸುತ್ತದೆ.

ತಾಂತ್ರಿಕ ಟಿಪ್ಪಣಿಗಳು

Red Hat Enterprise Linux ತಾಂತ್ರಿಕ ಟಿಪ್ಪಣಿಗಳು ಈ ಬಿಡುಗಡೆಗೆ ಸಂಬಂಧಿಸಿದ ಗೊತ್ತಿರುವ ಸಮಸ್ಯೆಗಳ ಕುರಿತು ಮಾಹಿತಿಯನ್ನು ಹೊಂದಿರುತ್ತದೆ.

ವರ್ಗಾವಣೆ ಯೋಜನಾ ಮಾರ್ಗದರ್ಶಿ

Red Hat Enterprise Linux ವರ್ಗಾವಣೆ ಯೋಜನಾ ಮಾರ್ಗದರ್ಶಿ ದಸ್ತಾವೇಜು Red Hat Enterprise Linux 6 ರಿಂದ Red Hat Enterprise Linux 7 ಕ್ಕೆ ವರ್ಗಾಯಿಸುವುದರ ಕುರಿತಾದ ಮಾಹಿತಿಯನ್ನು ಹೊಂದಿರುತ್ತದೆ.

ಗಣಕತೆರೆ ವರ್ಗಾವಣೆ ಮತ್ತು ವ್ಯವಸ್ಥಾಪನಾ ಮಾರ್ಗದರ್ಶಿ

ಡೆಸ್ಕ್‌ಟಾಪ್ ವರ್ಗಾವಣೆ ಮತ್ತು ವ್ಯವಸ್ಥಾಪಕ ಮಾರ್ಗದರ್ಶಿ ಎನ್ನುವುದು GNOME 3 ಡೆಸ್ಕ್‌ಟಾಪ್ ವರ್ಗಾವಣೆ ಯೋಜನೆ, ನಿಯೋಜನೆ, ಸಂರಚನೆ, ಮತ್ತು Red Hat Enterprise Linux 7 ನ ವ್ಯವಸ್ಥಾಪನೆಯ ಮಾರ್ಗದರ್ಶಿಯಾಗಿರುತ್ತದೆ.

20.2. ಅನುಸ್ಥಾಪನೆ ಹಾಗು ನಿಯೋಜನೆ

ಅನುಸ್ಥಾಪನಾ ಮಾರ್ಗದರ್ಶಿ

ಅನುಸ್ಥಾಪನಾ ಮಾರ್ಗದರ್ಶಿ ಎನ್ನುವುದು Red Hat Enterprise Linux 7 ರ ಅನುಸ್ಥಾಪನೆಯ ಕುರಿತಾದ ಸೂಕ್ತವಾದ ಮಾಹಿತಿಯನ್ನು ಹೊಂದಿರುತ್ತದೆ. ಈ ಕೈಪಿಡಿಯು ಸುಧಾರಿತವ ಅನುಸ್ಥಾಪನಾ ವಿಧಾನಗಳಾದಂತಹ ಕಿಕ್‌ಸ್ಟಾರ್ಟ್ ಮತ್ತು PXE ಅನುಸ್ಥಾಪನೆಗಳು ಹಾಗೂ VNC ಮೂಲಕ ಅನುಸ್ಥಾಪಿಸುವುದರ ಕುರಿತಾದ ಮಾಹಿತಿಯನ್ನೂ ಸಹ ಹೊಂದಿರುತ್ತದೆ. ಇದರ ಜೊತೆಗೆ, ಇದು ಸಾಮಾನ್ಯವಾದ ಅನುಸ್ಥಾಪನೋತ್ತರ ಕಾರ್ಯಗಳ ಬಗೆಗೂ ಸಹ ಮಾಹಿತಿಯನ್ನು ಒಳಗೊಂಡಿರುತ್ತದೆ.

ಗಣಕ ವ್ಯವಸ್ಥಾಪಕರ ಮಾರ್ಗದರ್ಶಿ

ಗಣಕ ವ್ಯವಸ್ಥಾಪಕರ ಮಾರ್ಗದರ್ಶಿ ಎನ್ನುವುದು ನಿಯೋಜನೆ, ಸಂರಚನೆ, ಮತ್ತು Red Hat Enterprise Linux 7 ನ ವ್ಯವಸ್ಥಾಪನೆಯ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಗಣಕ ವ್ಯವಸ್ಥಾಪಕರ ಪರಾಮರ್ಶೆ ಮಾರ್ಗದರ್ಶಿ

ಗಣಕ ವ್ಯವಸ್ಥಾಪಕರ ಪರಾಮರ್ಶೆ ಮಾರ್ಗದರ್ಶಿ ಎನ್ನುವುದು Red Hat Enterprise Linux 7 ರ ವ್ಯವಸ್ಥಾಪಕರಿಗಾಗಿನ ಪರಾಮರ್ಶೆ ಮಾರ್ಗದರ್ಶಿಯಾಗಿರುತ್ತದೆ.

ಶೇಖರಣೆ ನಿರ್ವಹಣಾ ಮಾರ್ಗದರ್ಶಿ

ಶೇಖರಣೆ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 7 ರಲ್ಲಿ ಶೇಖರಣಾ ಸಾಧನಗಳನ್ನು ಹಾಗು ಕಡತ ವ್ಯವಸ್ಥೆಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂಬುದರ ಕುರಿತಾದ ಸೂಚನೆಗಳನ್ನು ಒದಗಿಸುತ್ತದೆ. Red Hat Enterprise Linux ಅಥವ ಲಿನಕ್ಸಿನ Fedora ವಿತರಣೆಗಳೊಂದಿಗೆ ಒಂದಿಷ್ಟು ಅನುಭವ ಇರುವ ಗಣಕ ವ್ಯವಸ್ಥಾಪಕರ ಬಳಕೆಗಾಗಿ ಉದ್ಧೇಶಿಸಲಾಗಿದೆ.

ಗ್ಲೋಬಲ್ ಫೈಲ್ ಸಿಸ್ಟಮ್ 2

ಗ್ಲೋಬಲ್ ಫೈಲ್ ಸಿಸ್ಟಮ್ 2 ಪುಸ್ತಕವು Red Hat Enterprise Linux 7 ರಲ್ಲಿರುವ Red Hat GFS2 (ಗ್ಲೋಬಲ್ ಫೈಲ್ ಸಿಸ್ಟಮ್ 2) ಅನ್ನು ಸಂರಚಿಸುವ ಹಾಗು ಮೇಲ್ವಿಚಾರಣೆ ನಡೆಸುವ ಮಾಹಿತಿಯನ್ನು ಹೊಂದಿದೆ.

ಲಾಜಿಕಲ್ ವಾಲ್ಯೂಮ್ ಮ್ಯಾನೇಜರ್ ನಿರ್ವಹಣೆ

ಶೇಖರಣೆ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 7 ರಲ್ಲಿ ಶೇಖರಣಾ ಸಾಧನಗಳನ್ನು ಹಾಗು ಕಡತ ವ್ಯವಸ್ಥೆಗಳನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಎಂಬುದರ ಕುರಿತಾದ ಸೂಚನೆಗಳನ್ನು ಒದಗಿಸುತ್ತದೆ. Red Hat Enterprise Linux ಅಥವ ಲಿನಕ್ಸಿನ Fedora ವಿತರಣೆಗಳೊಂದಿಗೆ ಒಂದಿಷ್ಟು ಅನುಭವ ಇರುವ ಗಣಕ ವ್ಯವಸ್ಥಾಪಕರ ಬಳಕೆಗಾಗಿ ಉದ್ಧೇಶಿಸಲಾಗಿದೆ.

ಕರ್ನಲ್ ಕ್ರಾಶ್ ಡಂಪ್‌ ಮಾರ್ಗದರ್ಶಿ

ಕರ್ನಲ್ ಕ್ರಾಶ್ ಡಂಪ್ ಮಾರ್ಗದರ್ಶಿ ಎನ್ನುವುದು Red Hat Enterprise Linux 7 ರಲ್ಲಿ ಲಭ್ಯವಿರುವ kdump ಕ್ರಾಶ್ ಚೇತರಿಸುವಿಕೆ ಸೇವೆಯನ್ನು ಸಂರಚಿಸಲು, ಪರೀಕ್ಷಿಸಲು, ಮತ್ತು ಬಳಸುವ ಕುರಿತಾದ ಮಾಹಿತಿಯನ್ನು ಹೊಂದಿರುತ್ತದೆ.

20.3. ಸುರಕ್ಷತೆ

ಸುರಕ್ಷತೆಯ ಮಾರ್ಗದರ್ಶಿ

ಸುರಕ್ಷತೆ ಮಾರ್ಗದರ್ಶಿಯನ್ನು ಸ್ಥಳೀಯ ಹಾಗು ದೂರಸ್ಥ ಒಳನುಸುಳುವಿಕೆ, ದುರ್ಬಳಕೆ ಹಾಗು ದುರ್ನಡತೆಯ ವಿರುದ್ಧ ಕಾರ್ಯಸ್ಥಳಗಳು ಹಾಗು ಪರಿಚಾರಕಗಳನ್ನು ಸುರಕ್ಷಿತಗೊಳಿಸುವ ಪ್ರಕ್ರಿಯೆಗಳು ಹಾಗು ಪದ್ಧತಿಗಳನ್ನು ಬಳಕೆದಾರರು ಹಾಗು ವ್ಯವಸ್ಥಾಪಕರು ತಿಳಿದುಕೊಳ್ಳಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ.

SELinux ಬಳಕೆದಾರರ ಮತ್ತು ಗಣಕ ವ್ಯವಸ್ಥಾಪಕರ ಮಾರ್ಗದರ್ಶಿ

SELinux ಬಳಕೆದಾರರ ಮತ್ತು ಗಣಕ ವ್ಯವಸ್ಥಾಪಕರ ಮಾರ್ಗದರ್ಶಿಯು ಸೆಕ್ಯುರಿಟಿ-ಎನ್‌ಹ್ಯಾನ್ಸಡ್ ಲಿನಕ್ಸ್‌ನ ನಿರ್ವಹಣೆ ಮತ್ತು ಬಳಕೆಯ ಕುರಿತಾದ ಮಾಹಿತಿಯನ್ನು ಹೊಂದಿರುತ್ತದೆ. Red Hat Enterprise Linux 6 ರಲ್ಲಿ ಒಂದು ಪ್ರತ್ಯೇಕ ಕೈಪಿಡಿಯಲ್ಲಿ ಮಿತಿಗೊಳಪಟ್ಟ ಸೇವೆಗಳನ್ನು ನಿರ್ವಹಿಸುವುದನ್ನು ವಿವರಿಸಲಾಗಿತ್ತು, ಅದು ಈಗ SELinux ಬಳಕೆದಾರರ ಮತ್ತು ಗಣಕ ವ್ಯವಸ್ಥಾಪಕರ ಮಾರ್ಗದರ್ಶಿಯ ಭಾಗವಾಗಿದೆ.

20.4. ಉಪಕರಣಗಳು ಹಾಗು ಕಾರ್ಯಕ್ಷಮತೆ

ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿ

ಸಂಪನ್ಮೂಲ ನಿರ್ವಹಣಾ ಮಾರ್ಗದರ್ಶಿ ದಸ್ತಾವೇಜು Red Hat Enterprise Linux 7 ರಲ್ಲಿನ ವ್ಯವಸ್ಥೆಯ ಸಂಪನ್ಮೂಲಗಳನ್ನು ನಿರ್ವಹಿಸುವ ತಂತ್ರಗಳನ್ನು ವಿವರಿಸುತ್ತದೆ.

ವಿದ್ಯುಚ್ಚಕ್ತಿಯ ನಿರ್ವಹಣಾ ಮಾರ್ಗದರ್ಶಿ

ವಿದ್ಯುಚ್ಛಕ್ತಿ ನಿರ್ವಹಣಾ ಮಾರ್ಗದರ್ಶಿಯು Red Hat Enterprise Linux 7 ರಲ್ಲಿ ಹೇಗೆ ವಿದ್ಯುಚ್ಛಕ್ತಿಯ ಬಳಕೆಯನ್ನು ನಿರ್ವಹಿಸಬಹುದು ಎನ್ನುವುದನ್ನು ವಿವರಿಸುತ್ತದೆ.

ಕಾರ್ಯನಿರ್ವಹಣೆ ಟ್ಯೂನಿಂಗ್ ಮಾರ್ಗದರ್ಶಿ

ಕಾರ್ಯನಿರ್ವಹಣೆ ಟ್ಯೂನಿಂಗ್ ಮಾರ್ಗದರ್ಶಿಯು Red Hat Enterprise Linux 7 ರಲ್ಲಿ ಉಪವ್ಯವಸ್ಥೆ ತ್ರೂಪುಟ್ ಅನ್ನು ಹೇಗೆ ಸೂಕ್ತವಾಗಿಸುವುದು ಎನ್ನುವುದರ ಬಗೆಗಿನ ಮಾಹಿತಿಯನ್ನು ಹೊಂದಿರುತ್ತದೆ.

ವಿಕಸನೆಗಾರರ ಮಾರ್ಗದರ್ಶಿ

ವಿಕಸನೆಗಾರರ ಮಾರ್ಗದರ್ಶಿಯು Red Hat Enterprise Linux 7 ರಲ್ಲಿನ ಸವಲತ್ತುಗಳು ಹಾಗು ಉಪಕರಣಗಳು ಅದನ್ನು ಅನ್ವಯ ವಿಕಸನೆಗೆ ಯೋಗ್ಯವಾದ ಎಂಟರ್ಪ್ರೈಸ್ ಪ್ಲಾಟ್‌ಫಾರ್ಮ್ ಆಗಿಸುತ್ತದೆ ಎನ್ನುವುದನ್ನು ವಿವರಿಸುತ್ತದೆ.

SystemTap ಆರಂಭಿಕರಿಗಾಗಿನ ಮಾರ್ಗದರ್ಶಿ

SystemTap ಆರಂಭಿಕರಿಗಾಗಿನ ಮಾರ್ಗದರ್ಶಿಯು Red Hat Enterprise Linux ನ ವಿವಿಧ ಉಪವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಲು SystemTap ಅನ್ನು ಹೇಗೆ ಬಳಸಬಹುದು ಎನ್ನುವುದರ ಕುರಿತಾದ ಮೂಲಭೂತ ಸೂಚನೆಗಳನ್ನು ಸೂಕ್ಷ್ಮವಾದ ವಿವರಗಳ ಸಹಿತ ಒದಗಿಸುತ್ತದೆ.

SystemTap ಪರಾಮರ್ಶೆ

SystemTap ಟ್ಯಾಪ್‌ಸೆಟ್‌ ಪರಾಮರ್ಶೆ ಮಾರ್ಗದರ್ಶಿಯು SystemTap ಸ್ಕ್ರಿಪ್ಟುಗಳಿಗೆ ಬಳಕೆದಾರರು ಅನ್ವಯಿಸಬಹುದಾದ ಹೆಚ್ಚು ಪ್ರಚಲಿತವಿರುವ ಟ್ಯಾಪ್‌ಸೆಟ್ ವಿವರಣೆಗಳನ್ನು ವಿವರಿಸುತ್ತದೆ.

20.5. ಕ್ಲಸ್ಟರಿಂಗ್ ಮತ್ತು ಹೈ ಅವೈಲೆಬಿಲಿಟಿ

ಹೈ ಅವೇಲಿಬಿಲಿಟಿ ಆಡ್-ಆನ್ ವ್ಯವಸ್ಥಾಪನೆ

ಹೈ ಅವೇಲಿಬಿಲಿಟಿ ಆಡ್-ಆನ್ ವ್ಯವಸ್ಥಾಪನೆ ಮಾರ್ಗದರ್ಶಿಯು Red Hat Enterprise Linux 7 ರಲ್ಲಿನ ಹೈ ಅವೆಲಿಬಿಲಿಟಿಯ ಆಡ್-ಆನ್‌ ಅನ್ನು ಹೇಗೆ ಸಂರಚಿಸುವುದು ಮತ್ತು ವ್ಯವಸ್ಥಾಪಿಸುವುದು ಎನ್ನುವುದರ ಕುರಿತಾದ ಮಾಹಿತಿಯನ್ನು ಒದಗಿಸುತ್ತದೆ.

ಹೈ ಅವೇಲಿಬಿಲಿಟಿ ಆಡ್-ಆನ್ ಅವಲೋಕನ

ಹೈ ಅವೇಲಿಬಿಲಿಟಿ ಆಡ್-ಆನ್ ಅವಲೋಕನ ದಸ್ತಾವೇಜು Red Hat Enterprise Linux 7 ಕ್ಕಾಗಿ ಹೈ ಅವೆಲಿಬಿಲಿಟಿಯ ಒಂದು ಅವಲೋಕನವನ್ನು ಒದಗಿಸುತ್ತದೆ.

ಹೈ ಅವೇಲಿಬಿಲಿಟಿ ಆಡ್-ಆನ್ ಪರಾಮರ್ಶೆ

ಹೈ ಅವೇಲಿಬಿಲಿಟಿ ಆಡ್-ಆನ್ ಪರಾಮರ್ಶೆಯು Red Hat Enterprise Linux 7 ಕ್ಕಾಗಿನ ಹೈ ಅವೇಲಿಬಿಲಿಟಿ ಆಡ್-ಆನ್‌ನ ಪರಾಮರ್ಶೆ ಮಾರ್ಗದರ್ಶಿಯಾಗಿದೆ.

ಹೊರೆ ಸಮತೋಲನ ವ್ಯವಸ್ಥಾಪನೆ

ಹೊರೆ ಸಮತೋಲನ ವ್ಯವಸ್ಥಾಪನೆಯು Red Hat Enterprise Linux 7 ರಲ್ಲಿ ಅತ್ಯಂತ ಹೆಚ್ಚಿನ ಕಾರ್ಯನಿರ್ವಹಣೆಯಲ್ಲಿನ ಹೊರೆ ಸಮತೋಲನವನ್ನು ಸಂರಚಿಸಲು ಮತ್ತು ವ್ಯವಸ್ಥಾಪಿಸಲು ನೆರವಾಗುವ ಮಾರ್ಗದರ್ಶಿಯಾಗಿದೆ.

DM ಮಲ್ಟಿಪಾತ್

DM ಮಲ್ಟಿಪಾತ್ ಕೈಪಿಡಿಯು Red Hat Enterprise Linux 7 ಕ್ಕಾಗಿ ಡಿವೈಸ್-ಮ್ಯಾಪರ್ ಮಲ್ಟಿಪಾತ್ ಸೌಲಭ್ಯವನ್ನು ಸಂರಚಿಸುವ ಮತ್ತು ವ್ಯವಸ್ಥಾಪಿಸುವ ಕುರಿತಾದ ಮಾಹಿತಿಯನ್ನು ಬಳಕೆದಾರರಿಗೆ ಒದಗಿಸುತ್ತದೆ.

20.6. ವರ್ಚುವಲೈಸೇಶನ್

ವರ್ಚುವಲೈಸೇಶನ್‌ ಅನ್ನು ಬಳಸಲು ಆರಂಭಿಸುವ ಮಾರ್ಗದರ್ಶಿ

ವರ್ಚುವಲೈಸೇಶನ್‌ ಅನ್ನು ಬಳಸಲು ಆರಂಭಿಸುವ ಮಾರ್ಗದರ್ಶಿಯು Red Hat Enterprise Linux 7 ರಲ್ಲಿ ವರ್ಚುವಲೈಸೇಶನ್‌ಗೆ ಪರಿಚಯವನ್ನು ಒದಗಿಸುತ್ತದೆ.

ಡೆಸ್ಕ್‌ಟಾಪ್ ನಿಯೋಜನೆ ಮತ್ತು ವ್ಯವಸ್ಥಾಪನಾ ಮಾರ್ಗದರ್ಶಿ

ಡೆಸ್ಕ್‌ಟಾಪ್ ನಿಯೋಜನೆ ಮತ್ತು ವ್ಯವಸ್ಥಾಪನಾ ಮಾರ್ಗದರ್ಶಿ ಎನ್ನುವುದು ನಿಯೋಜನೆ, ಸಂರಚನೆ, ಮತ್ತು Red Hat Enterprise Linux 7 ರಲ್ಲಿ ವರ್ಚುವಲೈಸೇಶನ್‌ ಅನ್ನು ಅನುಸ್ಥಾಪಿಸುವ, ಸಂರಚಿಸುವ, ಮತ್ತು ವ್ಯವಸ್ಥಾಪನೆಯ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ವರ್ಚುವಲೈಸೇಶನ್ ಸುರಕ್ಷತಾ ಮಾರ್ಗದರ್ಶಿ

ವರ್ಚುವಲೈಸೇಶನ್ ಸುರಕ್ಷತಾ ಮಾರ್ಗದರ್ಶಿಯು Red Hat ನಿಂದ ಒದಗಿಸಲಾಗುವ ವರ್ಚುವಲೈಸೇಶನ್ ಸುರಕ್ಷತಾ ತಂತ್ರಜ್ಞಾನಗಳ ಅವಲೋಕನವನ್ನು ಒದಗಿಸುತ್ತದೆ, ಮತ್ತು ವರ್ಚುವಲೈಸೇಶನ್ ಆತಿಥೇಯಗಳು, ಅತಿಥಿಗಳು ಮತ್ತು ವರಚುವಲೈಸೇಶನ್ ಪರಿಸರಗಳಲ್ಲಿ ಹಂಚಲಾದ ಮೂಲ ಸೌಕರ್ಯ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ.

ವರ್ಚುವಲೈಸೇಶನ್ ಟ್ಯೂನಿಂಗ್ ಮತ್ತು ಸೂಕ್ತಗೊಳಿಕೆ ಮಾರ್ಗದರ್ಶಿ

ವರ್ಚುವಲೈಸೇಶನ್ ಟ್ಯೂನಿಂಗ್ ಮತ್ತು ಸೂಕ್ತಗೊಳಿಕೆ ಮಾರ್ಗದರ್ಶಿಯು KVM ಮತ್ತು ವರ್ಚುವಲೈಸೇಶನ್ ಕಾರ್ಯನಿರ್ವಹಣೆಯ ಕುರಿತು ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಮಾರ್ಗದರ್ಶಿಯಲ್ಲಿ ನೀವು KVM ಕಾರ್ಯನಿರ್ವಹಣೆ ಸೌಲಭ್ಯಗಳು ಮತ್ತು ನಿಮ್ಮ ಆತಿಥೇಯ ವ್ಯವಸ್ಥೆಗಳು ಮತ್ತು ವರ್ಚುವಲೈಸ್ ಆದ ಅತಿಥಿಗಳಲ್ಲಿ ಕಾರ್ಯನಿರ್ವಹಣೆಯ ಸೌಲಭ್ಯಗಳ ಸಂಪೂರ್ಣವಾದ ಪ್ರಯೋಜನಗಳನ್ನು ಪಡೆಯುವ ಬಗೆಗಿನ ಸುಳಿವುಗಳು ಮತ್ತು ಸಲಹೆಗಳನ್ನು ಕಾಣಬಹುದು.

ಲಿನಕ್ಸ್ ಕಂಟೇನರ್ಸ್ ಮಾರ್ಗದರ್ಶಿ

ಲಿನಕ್ಸ್ ಕಂಟೇನರ್ಸ್ ಮಾರ್ಗದರ್ಶಿಯು Red Hat Enterprise Linux 7.0 ರಲ್ಲಿ ಲಿನಕ್ಸ್ ಕಂಟೇನರ್ಸ್ ಅನ್ನು ಸಂರಚಿಸುವ ಮತ್ತು ನಿರ್ವಹಿಸುವ ಮಾಹಿತಿಯನ್ನು ಹೊಂದಿರುತ್ತದೆ, ಮತ್ತು ಲಿನಕ್ಸ್ ಕಂಟೇನರ್ಸ್‌ಗಾಗಿನ ಅನ್ವಯ ಉದಾಹರಣೆಗಳನ್ನು ಒದಗಿಸುತ್ತದೆ.

ಅಧ್ಯಾಯ 21. ಅಂತರಾಷ್ಟ್ರೀಕರಣ(ಇಂಟರ್‌ನ್ಯಾಶನಲೈಸೇಶನ್)

21.1. Red Hat Enterprise Linux 7.0 ಅಂತರಾಷ್ಟ್ರೀಯ ಭಾಷೆಗಳು

ಅನೇಕ ಭಾಷೆಗಳಲ್ಲಿ Red Hat Enterprise Linux 7.0 ಅನುಸ್ಥಾಪಿಸುವುದನ್ನು ಮತ್ತು ನಿಮ್ಮ ಅಗತ್ಯಕ್ಕೆ ತಕ್ಕಂತೆ ಭಾಷೆಗಳನ್ನು ಬದಲಾಯಿಸುವುದನ್ನು ಬೆಂಬಲಿಸಲಾಗುತ್ತದೆ.
Red Hat Enterprise Linux 7.0 ರಲ್ಲಿ ಈ ಕೆಳಗಿನ ಭಾಷೆಗಳನ್ನು ಬೆಂಬಲಿಸಲಾಗುತ್ತದೆ:
  • ಪೂರ್ವ ಏಶಿಯಾದ ಭಾಷೆಗಳು - ಜಾಪನೀಸ್, ಕೊರಿಯನ್, ಸಿಂಪ್ಲಿಫೈಡ್ ಚೈನೀಸ್, ಮತ್ತು ಟ್ರೆಡೀಶನಲ್ ಚೈನೀಸ್.
  • ಯುರೋಪಿನ ಭಾಷೆಗಳು - ಇಂಗ್ಲೀಷ್, ಜರ್ಮನ್, ಸ್ಪ್ಪ್ಯಾನಿಶ್, ಫ್ರೆಂಚ್, ಇಟ್ಯಾಲಿಯನ್, ಪೋರ್ಚುಗೀಸ್ ಬ್ರಝಿಲಿಯನ್, ಮತ್ತು ರಶಿಯನ್.
  • ಭಾರತೀಯ ಭಾಷೆಗಳು - ಅಸ್ಸಾಮಿ, ಬೆಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲೆಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ಮತ್ತು ತೆಲುಗು.
ಈ ಕೆಳಗಿನ ಕೋಷ್ಟಕವು ಪ್ರಸಕ್ತ ಬೆಂಬಲಿಸಲಾಗುವ ಭಾಷೆಗಳನ್ನು, ಅವುಗಳ ಲೊಕ್ಯಾಲ್‌ಗಳನ್ನು, ಅನುಸ್ಥಾಪಿಸಲಾಗುವ ಪೂರ್ವನಿಯೋಜಿತ ಅಕ್ಷರಶೈಲಿಗಳನ್ನು, ಮತ್ತು ಕೆಲವು ಭಾಷೆಗಳಿಗಾಗಿ ಅಗತ್ಯವಿರುವ ಪ್ಯಾಕೇಜುಗಳ ಕುರಿತಾದ ಸಾರಾಂಶವನ್ನು ತೋರಿಸುತ್ತದೆ.
ಅಕ್ಷರಶೈಲಿಯ ಸಂರಚನೆ ಕುರಿತು ಹೆಚ್ಚಿನ ಮಾಹಿತಿಗಾಗಿ, ಡೆಸ್ಕ್‌ಟಾಪ್ ವರ್ಗಾವಣೆ ಮತ್ತು ವ್ಯವಸ್ಥಾಪನೆ ಮಾರ್ಗದರ್ಶಿಯನ್ನು ನೋಡಿ.

ಕೋಷ್ಟಕ 21.1. ಭಾಷಾ ಬೆಂಬಲದ ಮ್ಯಾಟ್ರಿಕ್ಸ್

ಪ್ರದೇಶ ಭಾಷೆ ಲೊಕ್ಯಾಲ್ ಪೂರ್ವನಿಯೋಜಿತ ಅಕ್ಷರಶೈಲಿ (ಲಿಪಿಶೈಲಿ ಪ್ಯಾಕೇಜ್) ಇನ್‌ಪುಟ್ ವಿಧಾನಗಳು
ಬ್ರಝಿಲ್ ಪೋರ್ಚುಗೀಸ್ pt_BR.UTF-8 DejaVu Sans (dejavu-sans-fonts)
ಫ್ರಾನ್ಸ್ ಫ್ರೆಂಚ್ fr_FR.UTF-8 DejaVu Sans (dejavu-sans-fonts)
ಜರ್ಮನಿ ಜರ್ಮನ್ de_DE.UTF-8 DejaVu Sans (dejavu-sans-fonts)
ಇಟಲಿ ಇಟಲಿ it_IT.UTF-8 DejaVu Sans (dejavu-sans-fonts)
ರಶಿಯ ರಶಿಯನ್ ru_RU.UTF-8 DejaVu Sans (dejavu-sans-fonts)  
ಸ್ಪೇನ್ ಸ್ಪ್ಯಾನಿಶ್ es_ES.UTF-8 DejaVu Sans (dejavu-sans-fonts)
ಯುಎಸ್‌ಎ ಇಂಗ್ಲಿಷ್ en_US.UTF-8 DejaVu Sans (dejavu-sans-fonts)
ಚೈನಾ ಸಿಂಪ್ಲಿಫೈಡ್ ಚೈನೀಸ್ zh_CN.UTF-8 WenQuanYi Zen Hei Sharp (wqy-zenhei-fonts) ibus-libpinyin, ibus-table-chinese
ಜಪಾನ್ ಜಾಪನೀಸ್ ja_JP.UTF-8 VL PGothic (vlgothic-p-fonts) ibus-kkc
ಕೊರಿಯ ಕೊರಿಯನ್ ko_KR.UTF-8 NanumGothic (nhn-nanum-gothic-fonts) ibus-hangul
ತೈವಾನ್ ಟ್ರೆಡೀಶನಲ್ ಚೈನೀಸ್ zh_TW.UTF-8 AR PL UMing TW (cjkuni-uming-fonts) ibus-chewing, ibus-table-chinese
ಭಾರತ ಅಸ್ಸಾಮಿ as_IN.UTF-8 ಲೋಹಿತ್ ಅಸ್ಸಾಮೀಸ್ (lohit-assamese-fonts) ibus-m17n, m17n-db, m17n-contrib
ಬೆಂಗಾಲಿ bn_IN.UTF-8 ಲೋಹಿತ್ ಬೆಂಗಾಲಿ (lohit-bengali-fonts) ibus-m17n, m17n-db, m17n-contrib
ಗುಜರಾತಿ gu_IN.UTF-8 ಲೋಹಿತ್ ಗುಜರಾತಿ (lohit-gujarati-fonts) ibus-m17n, m17n-db, m17n-contrib
ಹಿಂದಿ hi_IN.UTF-8 ಲೋಹಿತ್ ಹಿಂದಿ (lohit-devanagari-fonts) ibus-m17n, m17n-db, m17n-contrib
ಕನ್ನಡ kn_IN.UTF-8 ಲೋಹಿತ್ ಕನ್ನಡ (lohit-kannada-fonts) ibus-m17n, m17n-db, m17n-contrib
ಮಲೆಯಾಳಂ ml_IN.UTF-8 ಮೀರಾ (smc-meera-fonts) ibus-m17n, m17n-db, m17n-contrib
ಮರಾಠಿ mr_IN.UTF-8 ಲೋಹಿತ್ ಮರಾಠಿ (lohit-marathi-fonts) ibus-m17n, m17n-db, m17n-contrib
ಒಡಿಯಾ or_IN.UTF-8 ಲೋಹಿತ್ ಒರಿಯಾ(lohit-oriya-fonts) ibus-m17n, m17n-db, m17n-contrib
ಪಂಜಾಬಿ pa_IN.UTF-8 ಲೋಹಿತ್ ಪಂಜಾಬಿ (lohit-punjabi-fonts) ibus-m17n, m17n-db, m17n-contrib
ತಮಿಳು ta_IN.UTF-8 ಲೋಹಿತ್ ತಮಿಳ್ (lohit-tamil-fonts) ibus-m17n, m17n-db, m17n-contrib
ತೆಲುಗು te_IN.UTF-8 ಲೋಹಿತ್ ತೆಲುಗು (lohit-telugu-fonts) ibus-m17n, m17n-db, m17n-contrib

21.2. ಅಂತರಾಷ್ಟ್ರೀಕರಣದಲ್ಲಿ ಸಾಮಾನ್ಯ ಬದಲಾವಣೆಗಳು

ಹೊಸ yum-langpacks ಪ್ಲಗ್‌-ಇನ್

ಒಂದು ಹೊಸ YUM ಪ್ಲಗ್‌-ಇನ್ ಆದಂತಹ, yum-langpacks ಈಗ ಪ್ರಸಕ್ತ ಭಾಷೆಯ ಲೊಕ್ಯಾಲ್‌ಗಾಗಿನ ಹಲವಾರು ಪ್ಯಾಕೇಜುಗಳಿಗಾಗಿ ಅನುವಾದ ಉಪಪ್ಯಾಕೇಜುಗಳನ್ನು ಅನುಸ್ಥಾಪಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಲೊಕ್ಯಾಲ್ ಮತ್ತು ಕೀಲಿಮಣೆ ವಿನ್ಯಾಸದ ಸಿದ್ಧತೆಗಳನ್ನು ಬದಲಾಯಿಸುವಿಕೆ

localectl ಎನ್ನುವುದು ವ್ಯವಸ್ಥೆಯ ಲೊಕ್ಯಾಲ್ ಮತ್ತು ಕೀಲಿಮಣೆಯನ್ನು ಮನವಿ (ಕ್ವೈರಿ) ಮಾಡಲು ಮತ್ತು ಬದಲಾಯಿಸಲು ಬಳಸಲಾಗುವ ಒಂದು ಹೊಸ ಸೌಲಭ್ಯವಾಗಿದೆ; ಸಿದ್ಧತೆಗಳನ್ನು ಪಠ್ಯ ಕನ್ಸೋಲ್‌ಗಳಲ್ಲಿ ಬಳಸಲಾಗುತ್ತದೆ ಮತ್ತು ಡೆಸ್ಕ್‌ಟಾಪ್ ಪರಿಸರಗಳಿಂದ ಪಡೆದುಕೊಳ್ಳುತ್ತದೆ. localectl, SSH ಮುಖಾಂತರ ದೂರಸ್ಥ ವ್ಯವಸ್ಥೆಗಳನ್ನು ನಿರ್ವಹಿಸಲು ಆತಿಥೇಯ ಆರ್ಗ್ಯುಮೆಂಟ್‌ ಅನ್ನೂ ಸಹ ತೆಗೆದುಕೊಳ್ಳಲು ಶಕ್ತವಾಗಿರುತ್ತದೆ.

21.3. ಇನ್‌ಪುಟ್ ವಿಧಾನಗಳು

IBus ನಲ್ಲಿ ಬದಲಾವಣೆಗಳು

Red Hat Enterprise Linux 7.0 ರಲ್ಲಿ ಇಂಟೆಲಿಜೆಂಟ್ ಇನ್‌ಪುಟ್ ಬಸ್ (IBus) ಆವೃತ್ತಿ 1.5 ಕ್ಕಾಗಿನ ಬೆಂಬಲವನ್ನು ಒಳಗೊಂಡಿದೆ. IBus ಗಾಗಿನ ಬೆಂಬಲವನ್ನು ಈಗ GNOME ನೊಂದಿಗೆ ಸೇರಿಸಲಾಗಿದೆ.
  • gnome-control-center region ಆದೇಶವನ್ನು ಬಳಸಿಕೊಂಡು ಇನ್‌ಪುಟ್ ವಿಧಾನಗಳನ್ನು ಸೇರಿಸಲು ಸಾಧ್ಯವಿರುತ್ತದೆ, ಮತ್ತು gnome-control-center keyboard ಅನ್ನು ಬಳಸಿಕೊಂಡು ಇನ್‌ಪುಟ್ ಹಾಟ್‌ಕೀಲಿಗಳನ್ನು ಸೂಚಿಸಲು ಸಾಧ್ಯವಿರುತ್ತದೆ.
  • GNOME-ಅಲ್ಲದ ಅಧಿವೇಶನಗಳಿಗಾಗಿ, ibus-setup ಉಪಕರಣವನ್ನು ಬಳಸಿಕೊಂಡು XKB ವಿನ್ಯಾಸಗಳು ಮತ್ತು ಇನ್‌ಪುಟ್ ವಿಧಾನಗಳು ಎರಡನ್ನೂ ಸಹ ಸಂರಚಿಸಲು ibusಗೆ ಸಾಧ್ಯವಿರುತ್ತದೆ ಮತ್ತು ಒಂದು ಹಾಟ್‌ಕೀಲಿಯಿಂದ ಬದಲಾಯಿಸಲು ಅದನ್ನು ಬದಲಿ ಮಾಡಬಹುದಾಗಿರುತ್ತದೆ.
  • Red Hat Enterprise Linux 6 ರಲ್ಲಿ ಸೇರಿಸಲಾದ ibus ನಲ್ಲಿ ಇದ್ದಂತಹ ಪೂರ್ವನಿಯೋಜಿತ ಹಾಟ್‌ಕೀಲಿಯಾದ Control+space ಅನ್ನು Super+space ಆಗಿ ಬದಲಾಯಿಸಲಾಗಿದೆ. ಇದು ಬಳಕೆದಾರರು ಬಳಸುತ್ತಿದ್ದಂತಹ Alt+Tab ಸಂಯೋಜನೆಯು ಇರುವಂತಹುದೇ ರೀತಿಯ UI ಅನ್ನು ಒದಗಿಸುತ್ತದೆ. Alt+Tab ಸಂಯೋಜನೆಯನ್ನು ಬಳಸಿಕೊಂಡು ಅನೇಕ ಕೀಲಿಮಣೆಗಳ ನಡುವೆ ಬದಲಾಯಿಸಬಹುದು.

IBus ಗಾಗಿ ಊಹಿಸುವ ಇನ್‌ಪುಟ್ ವಿಧಾನ

ibus-typing-booster ಎನ್ನುವುದು ibus ಪ್ಲಾಟ್‌ಫಾರ್ಮಿಗಾಗಿನ ಒಂದು ಊಹಿಸುವ ಇನ್‌ಪುಟ್ ವಿಧಾನವಾಗಿದೆ. ಇದು ಭಾಗಶಃ ಇನ್‌ಪುಟ್‌ ಅನ್ನು ಆಧರಿಸಿ ಸಂಪೂರ್ಣ ಪದವನ್ನು ಊಹಿಸುತ್ತದೆ. ಬಳಕೆದಾರರು ಸಲಹೆ ಮಾಡಲಾದ ಪದಗಳ ಪಟ್ಟಿಯಿಂದ ಅವರು ಬಯಸುವ ಪದವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಇದರಿಂದ ಅವರ ಟೈಪ್ ಮಾಡುವ ವೇಗ ಮತ್ತು ಕಾಗುಣಿತವು ಉತ್ತಮಗೊಳ್ಳುತ್ತದೆ. ibus-typing-booster Hunspell ಶಬ್ಧಕೋಶಗಳೊಂದಿಗೆ ಕೂಡ ಕೆಲಸ ಮಾಡುತ್ತದೆ ಮತ್ತು ಒಂದು Hunspell ಶಬ್ಧಕೋಶವನ್ನು ಬಳಸಿಕೊಂಡು ಒಂದು ಭಾಷೆಗಾಗಿ ಸಲಹೆಗಳನ್ನು ನೀಡುತ್ತದೆ.
ibus-typing-booster ಪ್ಯಾಕೇಜ್ ಒಂದು ಐಚ್ಛಿಕ ಪ್ಯಾಕೇಜ್ ಆಗಿದ್ದು, ಮತ್ತು ಇದನ್ನು input-methods ಗುಂಪಿನೊಂದಿಗೆ ಪೂರ್ವನಿಯೋಜಿತವಾಗಿ ಅನುಸ್ಥಾಪಿಸಲಾಗುವುದಿಲ್ಲ.
ಇನ್‌ಪುಟ್‌ ವಿಧಾನಗಳಲ್ಲಿನ ಬದಲಾವಣೆಗಳ ವಿವರಗಳಿಗೆ, ಡೆಸ್ಕ್‌ಟಾಪ್ ವರ್ಗಾವಣೆ ಮತ್ತು ವ್ಯವಸ್ಥಾಪನೆ ಮಾರ್ಗದರ್ಶಿಯನ್ನು ನೋಡಿ.

21.4. ಅಕ್ಷರಶೈಲಿಗಳು

fonts-tweak-tool

fonts-tweak-tool ಎಂಬ ಹೊಸ ಉಪಕರಣವು, ಬಳಕೆದಾರ ಅಕ್ಷರಶೈಲಿ ಸಂರಚನೆಯನ್ನು ಬಳಸಿಕೊಂಡು ಪ್ರತಿ ಭಾಷೆಗಾಗಿ ಪೂರ್ವನಿಯೋಜಿತ ಅಕ್ಷರಶೈಲಿಗಳನ್ನು ಸಂರಚಿಸಲು ಅವಕಾಶ ಮಾಡಿಕೊಡುತ್ತದೆ.

21.5. ನಿಶ್ಚಿತ ಭಾಷೆಗೆ ಸಂಬಂಧಿಸಿದ ಬದಲಾವಣೆಗಳು

ಅರೇಬಿಕ್

Paktype ನಲ್ಲಿನ ಹೊಸ ಅರೇಬಿಕ್ ಅಕ್ಷರಶೈಲಿಗಳು Red Hat Enterprise Linux 7.0 ರಲ್ಲಿ ಲಭ್ಯವಿದೆ: paktype-ajrak, paktype-basic-naskh-farsi, paktype-basic-naskh-sindhi, paktype-basic-naskh-urdu, ಮತ್ತು paktype-basic-naskh-sa.

ಚೈನೀಸ್

  • WQY Zenhei ಅಕ್ಷರಶೈಲಿಯು ಈಗ ಸಿಂಪ್ಲಿಫೈಡ್ ಚೈನೀಸ್‌ಗಾಗಿ ಪೂರ್ವನಿಯೋಜಿತ ಅಕ್ಷರಶೈಲಿಯಾಗಿರುತ್ತದೆ.
  • Red Hat Enterprise Linux 6 ರಲ್ಲಿ ಸಿಂಪ್ಲಿಫೈಡ್ ಚೈನೀಸ್‌ಗಾಗಿನ ಪೂರ್ವನಿಯೋಜಿತ ಎಂಜಿನ್ ಆಗಿರುವಂತಹ ibus-pinyin ಅನ್ನು ibus-libpinyin ಗೆ ಬದಲಾಯಿಸಲಾಗಿದೆ.

ಭಾರತೀಯ

  • ಹೊಸದಾದ ಲೋಹಿತ್ ದೇವನಾಗರಿ ಅಕ್ಷರಶೈಲಿಯನ್ನು ಹಿಂದಿ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮರಾಠಿ, ಮತ್ತು ನೇಪಾಳಿಗಾಗಿನ ಪ್ರತ್ಯೇಕ ಲೋಹಿತ್ ಅಕ್ಷರಶೈಲಿಗಳ ಸ್ಥಾನದಲ್ಲಿ ಇರಿಸಲಾಗಿದೆ. ಈ ಭಾಷೆಗಳಿಗಾಗಿ ಅಗತ್ಯವಿರುವ ಯಾವುದೆ ಪ್ರತ್ಯೇಕ ಲಿಪಿಚಿತ್ರವನ್ನು ಲೋಹಿತ್ ದೇವನಾಗರಿಯಲ್ಲಿ Open Type Font locl ಟ್ಯಾಗ್‌ಗಳನ್ನು ಬಳಸಿಕೊಂಡು ಸೇರಿಸಬಹುದಾಗಿರುತ್ತದೆ.
  • ಕನ್ನಡ ಭಾಷೆಗಾಗಿ ಹೊಸ ಅಕ್ಷರಶೈಲಿ ಪ್ಯಾಕೇಜುಗಳಾದ gubbi-fonts ಮತ್ತು navilu-fonts ಅನ್ನು ಸೇರಿಸಲಾಗಿದೆ.

ಜಾಪನೀಸ್

  • IPA ಅಕ್ಷರಶೈಲಿಗಳನ್ನು ಇನ್ನು ಮುಂದೆ ಪೂರ್ವನಿಯೋಜಿತವಾಗಿ ಅನುಸ್ಥಾಪಿಸಲಾಗುವುದಿಲ್ಲ
  • Kana Kanji ರೂಪಾಂತರವಾದಂತಹ ibus-kkc ಯು, ಹೊಸ libkkc ಬ್ಯಾಕೆಂಡ್ ಅನ್ನು ಬಳಸುವ ಹೊಸ ಪೂರ್ವನಿಯೋಜಿತ ಜಾಪನೀಸ್ ಇನ್‌ಪುಟ್ ವಿಧಾನ ಎಂಜಿನ್ ಆಗಿದೆ. ಇದನ್ನು ibus-anthy, anthy, ಮತ್ತು kasumi ಬದಲಿಗೆ ಸೇರಿಸಲಾಗಿದೆ.

ಕೊರಿಯನ್

Nanum ಅಕ್ಷರಶೈಲಿಯು ಈಗ ಪೂರ್ವನಿಯೋಜಿತವಾಗಿ ಬಳಸಲಾಗುತ್ತದೆ.

ಹೊಸ ಲೊಕ್ಯಾಲ್‌ಗಳು

Red Hat Enterprise Linux 7.0 ಈಗ ಹೊಸ ಲೊಕ್ಯಾಕ್‌ಗಳಾದಂತಹ ಕೊಂಕಣಿ (kok_IN) ಮತ್ತು ಪುಶ್ತೋ (ps_AF) ಅನ್ನು ಬೆಂಬಲಿಸುತ್ತದೆ.

ಅಧ್ಯಾಯ 22. ಬೆಂಬಲಿಸುವ ಸಾಮರ್ಥ್ಯ ಹಾಗು ನಿರ್ವಹಣೆ

ABRT 2.1

Red Hat Enterprise Linux 7.0 ಆಟೋಮ್ಯಾಟಿಕ್ ಬಗ್ ರಿಪೋರ್ಟಿಂಗ್ ಟೂಲ್ (ABRT) 2.1 ಅನ್ನು ಸೇರಿಸಲಾಗಿದ್ದು, ಇದು ಒಂದು ಸುಧಾರಿತ ಬಳಕೆದಾರ ಸಂಪರ್ಕಸಾಧನವನ್ನು ಮತ್ತು uReports ಅನ್ನು, ಕುಸಿತ ಅಂಕಿಅಂಶಗಳನ್ನು ಸಂಗ್ರಹಿಸುವಂತಹ ಗಣಕ ಸಂಸ್ಕರಣೆಗಾಗಿ ಸೂಕ್ತವಾದಂತಹ ಹಗುರತೂಕದ ಅನಾಮಧೇಯ ತೊಂದರೆ ವರದಿಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಾಧ್ಯವಿರುವಷ್ಟು ತಂತ್ರಾಂಶ ದೋಷಗಳನ್ನು ಪತ್ತೆ ಮಾಡಲು ಸಾಧ್ಯವಾಗುವಂತೆ ABRT ಅನ್ನು ಪೂರ್ವನಿಯೋಜಿತವಾಗಿ Red Hat Enterprise Linux 7.0 ನಲ್ಲಿ ಸೇರಿಸಲಾಗಿರುತ್ತದೆ, ಮತ್ತು ಅನ್ವಯದ ಕುಸಿತದ ವರದಿಗಳನ್ನು Red Hat ಗೆ ಸ್ವಯಂಚಾಲಿತವಾಗಿ ಕಳುಹಿಸುವಂತೆ ಸಂರಚಿಸಲಾಗಿರುತ್ತದೆ.
ABRT 2.1 ಯಲ್ಲಿ ಬೆಂಬಲಿಸಲಾಗುವ ಭಾಷೆಗಳನ್ನು Java ಮತ್ತು Ruby ಗೆ ವಿಸ್ತರಿಸಲಾಗಿದೆ.

ಪರಿಷ್ಕರಣೆಯ ಇತಿಹಾಸ

ಪರಿಷ್ಕರಣೆಯ ಇತಿಹಾಸ
ಪರಿಷ್ಕರಣೆ 0.0-0.8.2Mon Mar 24 2014Shankar Prasad
Updated Kannada Translations
ಪರಿಷ್ಕರಣೆ 0.0-0.8.1Tue Mar 11 2014Chester Cheng
0.0-0.7 XML ಮೂಲಗಳಿಂದ ಅನುವಾದ ಕಡತಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗಿಲ್ಲ
ಪರಿಷ್ಕರಣೆ 0.0-0.8Thu Dec 11 2013Eliška Slobodová
Red Hat Enterprise Linux 7.0 Beta ದ ಬಿಡುಗಡೆ ಟಿಪ್ಪಣಿಗಳ ಬಿಡುಗಡೆ.